ಮೈಸೂರು: ಹಿಂದೂ- ಮುಸ್ಲಿಂ ಒಟ್ಟಾಗಿ ಗೌರಿ- ಗಣೇಶ ಹಬ್ಬ ಆಚರಣೆ..!

Published : Sep 20, 2023, 01:30 AM IST
ಮೈಸೂರು: ಹಿಂದೂ- ಮುಸ್ಲಿಂ ಒಟ್ಟಾಗಿ ಗೌರಿ- ಗಣೇಶ ಹಬ್ಬ ಆಚರಣೆ..!

ಸಾರಾಂಶ

ಹಿಂದೂ- ಮುಸ್ಲಿಂ ಯುವಕರು ಪರಸ್ಪರ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಿಹಿ ತಿನಿಸಿ ಸೌಹಾರ್ದತೆ ಸಾರಿದರು.

ಮೈಸೂರು(ಸೆ.20): ಹಿಂದೂ, ಮುಸ್ಲಿಂ ಯುವಕರು ಒಟ್ಟಾಗಿ ಗೌರಿ ಗಣೇಶನ ಹಬ್ಬವನ್ನು ಆಚರಿಸುವ ಮೂಲಕ ಮೈಸೂರಿನಲ್ಲಿ ಗಮನ ಸೆಳೆದರು. ನಗರದ ಅಗ್ರಹಾರದ ಕುಂದೂರು ಮಠದ ರಸ್ತೆಯಲ್ಲಿ ಶ್ರೀ ಗಣಪತಿ ಯುವಕರ ಸಂಘದವರು ಗಣೇಶನ ಮೂರ್ತಿಯನ್ನ ಪ್ರತಿಷ್ಠಾಪಿಸಿ ಹಬ್ಬ ಆಚರಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.

ಹಿಂದೂ- ಮುಸ್ಲಿಂ ಯುವಕರು ಪರಸ್ಪರ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಿಹಿ ತಿನಿಸಿ ಸೌಹಾರ್ದತೆ ಸಾರಿದರು.

ವಿಘ್ನ ವಿನಾಶಕನ ಹಲವು ರೂಪಗಳು.. ಮೂರ್ತಿಯ ಹಿಂದಿದೆ ಒಂದೊಂದು ಅಚ್ಚರಿಯ ಕಥೆ

ಶ್ರೀ ಗಣಪತಿ ಯುವಕರ ಸಂಘದ ಮುಖ್ಯ ಸಂಚಾಲಕ ಮೋಹನ್ ಕುಮಾರ್ ಗೌಡ ಮಾತನಾಡಿ, ಇತಿಹಾಸದಲ್ಲಿ ಎರಡು ಸಮುದಾಯಗಳ ಹಬ್ಬಗಳು ಬಂದರೆ ಸೌಹಾರ್ದವಾಗಿ ಆಚರಣೆ ಮಾಡುವ ಪದ್ಧತಿ ನಮ್ಮ ನಾಡಿನಲ್ಲಿದೆ. ಆದರೆ ಕೆಲವು ಕಿಡಿಗೇಡಿಗಳಿಂದ ಎರಡು ಸಮಾಜದಲ್ಲಿ ಶಾಂತಿಯನ್ನು ಕದಡವ ಯತ್ನಗಳು ನಡೆಯುತ್ತಿದೆ. ಹೀಗಾಗಿ, ಎರಡು ಸಮುದಾಯದ ಮುಖಂಡರು ಈ ಬಗ್ಗೆ ಲಕ್ಷ್ಯ ವಹಿಸಿ ಹಬ್ಬಗಳನ್ನು ಆಚರಿಸಬೇಕು ಎಂದರು.

ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್, ಸ್ಥಳೀಯ ಮುಖಂಡರಾದ ಸಗೀರ್ ಅಹಮದ್, ಅಪ್ರೋಜ್ ಖಾನ್, ಸಾಹೇದ್ ಮುಗುದುಮ್, ನೂರ್ ಶರೀಫ್, ಸೈಯದ್ ಫಾಸಿಲ್, ಖಾಲಿದ್ ಅಹಮದ್, ನಾಗೇಂದ್ರ, ನಿಹಾಲ್, ಭುವನ್, ವಿಶೃತ್ ಎಸ್. ಗೌಡ, ರಕ್ಷಿತ್, ಯಶಸ್ ಎಸ್. ಗೌಡ ಮೊದಲಾದವರು ಇದ್ದರು.

PREV
Read more Articles on
click me!

Recommended Stories

ನಾಳೆ ಡಿಸೆಂಬರ್ 9 ಸರ್ವಾರ್ಥ ಸಿದ್ಧಿ ಯೋಗ, 5 ರಾಶಿಗೆ ಅದೃಷ್ಟ, ಸಂಪತ್ತು
ಅದೃಷ್ಟ ಬಾಗಿಲು ತಟ್ಟುತ್ತಿದೆ, ಈ 6 ರಾಶಿ ಆದಾಯ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತದೆ