ಗಣೇಶ ಚತುರ್ಥಿಯಲ್ಲೂ ಚಂದ್ರಯಾನಕ್ಕೆ ಗೌರವ; ರಾಕೆಟ್‌ನಲ್ಲಿ ಕುಳಿತು ಹೊರಟಂತಿರುವ ಗಣಪ ಪ್ರತಿಷ್ಠಾಪನೆ!

By Ravi JanekalFirst Published Sep 19, 2023, 3:22 PM IST
Highlights

ಕೊಪ್ಪಳ ಜಿಲ್ಲೆಯ ಕುಕನೂರಿನ ಬನ್ನಿಕೊಪ್ಪ ಗ್ರಾಮದಲ್ಲಿ ರಾಕೆಟ್ ಮಾದರಿಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಇದೀಗ ಎಲ್ಲೆಡೆ ವೈರಲ್ ಆಗಿದೆ.

ಕುಕನೂರು (ಸೆ.19): ಕೊಪ್ಪಳ ಜಿಲ್ಲೆಯ ಕುಕನೂರಿನ ಬನ್ನಿಕೊಪ್ಪ ಗ್ರಾಮದಲ್ಲಿ ರಾಕೆಟ್ ಮಾದರಿಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಇದೀಗ ಎಲ್ಲೆಡೆ ವೈರಲ್ ಆಗಿದೆ.

ಚಂದ್ರಯಾನ 3 ಉಡಾವಣೆ ಮಾದರಿಯಲ್ಲಿರುವ ಗಣೇಶಮೂರ್ತಿ. ರಾಕೆಟ್‌ನಲ್ಲಿ ಕುಳಿತು ಚಂದ್ರಯಾನದತ್ತ ಹೊರಟಿರುವಂತೆ ನಿರ್ಮಿಸಲಾಗಿದೆ. ಚಂದ್ರಯಾನ-3 ಯಶಸ್ವಿಯಾಗಿರುವ ಹಿನ್ನೆಲೆ ಇದೇ ಮಾದರಿ ರೀತಿಯ ಗಣೇಶ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿರುವ ಬನ್ನಿಕೊಪ್ಪ ಗ್ರಾಮಸ್ಥರು. ತೊಂಟದಾರ್ಯ ಪ್ರಗತಿ ಶೀಲ ಯುವಕ ಮಂಡಲದಿಂದ ಪ್ರತಿಷ್ಠಾಪಿಸಿರುವ ಗಣಪತಿ ಮೂರ್ತಿ.

ಗ್ರಾಮದ ವಿಜ್ಞಾನ ಶಿಕ್ಷಕರಾದ ಶಾಂತವೀರ ಎಂಬ ಯುವಕ ಯುವಕ ಮಂಡಲದ ಮಿತ್ರರೊಡನೆ ಸೇರಿ ವೈಜ್ಞಾನಿಕ ಮನೋಭಾವನೆ ನಿಟ್ಟಿನಲ್ಲಿ, ಕಾಗದ, ರಟ್ಟು ಮತ್ತು ತಟ್ಟುಗಳನ್ನು ಬಳಸಿ ಕೊಂಡು ಸುಂದರ ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆ ಮಾಡಿದ್ದಾರೆ.

click me!