ಚುನಾವಣೆ ಹೊತ್ತಲ್ಲಿ ದೈವದ ಮೊರೆ: ಅಧಿಕಾರ, ಆರೋಗ್ಯ ವೃದ್ಧಿಗೆ ಎಚ್‌ಡಿಕೆ ಕುಟುಂಬ ಮಹಾಯಾಗ

Published : Mar 03, 2023, 02:48 PM ISTUpdated : Mar 03, 2023, 03:02 PM IST
ಚುನಾವಣೆ ಹೊತ್ತಲ್ಲಿ ದೈವದ ಮೊರೆ:  ಅಧಿಕಾರ, ಆರೋಗ್ಯ ವೃದ್ಧಿಗೆ ಎಚ್‌ಡಿಕೆ ಕುಟುಂಬ ಮಹಾಯಾಗ

ಸಾರಾಂಶ

ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗಲೇ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ರಾಜಕೀಯ ಭವಿಷ್ಯ,  ದೇವೇಗೌಡರ ಆರೋಗ್ಯ ವೃದ್ಧಿಗೆ   ದೈವದ ಮೊರೆ ಹೋಗಿದ್ದಾರೆ. ಬಿಡದಿ ಬಳಿ ಇರುವ ಕ್ಯಾತಗನಹಳ್ಳಿ ಫಾರ್ಮ್‌ಹೌಸ್‌ನಲ್ಲಿ ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ ಕೈಂಕರ್ಯ ನಡೆಸಲಿದ್ದಾರೆ.

ರಾಮನಗರ (ಮಾ.3) ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗಲೇ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ರಾಜಕೀಯ ಭವಿಷ್ಯ,  ದೇವೇಗೌಡರ ಆರೋಗ್ಯ ವೃದ್ಧಿಗೆ   ದೈವದ ಮೊರೆ ಹೋಗಿದ್ದಾರೆ. ಬಿಡದಿ ಬಳಿ ಇರುವ ಕ್ಯಾತಗನಹಳ್ಳಿ ಫಾರ್ಮ್‌ಹೌಸ್‌ನಲ್ಲಿ ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ ಕೈಂಕರ್ಯ ನಡೆಸಲಿದ್ದಾರೆ.

ಹಲವು ದಿನಗಳಿಂದ  ದೇವೆಗೌಡರು ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆ ಅವರ ಆರೋಗ್ಯ ವೃದ್ಧಿ, ಆಯುಷ್ಯ ವೃದ್ಧಿಗೆ ಮಹಾಯಾಗ ನಡೆಸಲಿರುವ ಕುಟುಂಬ. ಅಷ್ಟೆ ಅಲ್ಲದೆ ರಾಜಕೀಯದಲ್ಲಿಎಚ್‌ಡಿ ಕುಮಾರಸ್ವಾಮಿಯವರಿಗೆ ಹಲವು ಅಡ್ಡಿ ಆತಂಕಗಳು ಎದುರಾಗುತ್ತಲೇ ಇವೆ. ಆದರಲ್ಲೂ ಹಾಸನ ಟಿಕೆಟ್ ವಿಚಾರವಾಗಿ ಹೈರಾಣಾಗಿರುವ ಎಚ್‌ಡಿಕೆ. ಇವೆಲ್ಲ ತೊಂದರೆಗಳಿಂದ ಮುಕ್ತಿ ಸಿಗಲು ಮತ್ತು ಮುಂಬರುವ ಚುನಾವಣೆಯಲ್ಲಿ ರಾಜಕೀಯ ಭವಿಷ್ಯ ಉತ್ತಮವಾಗಲು ವಿಶೇಷ ಪೂಜೆ, ಮಹಾಯಾಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  

ಎಚ್‌ಡಿಕೆಯವರನ್ನು ಮುಖ್ಯಮಂತ್ರಿ ಮಾಡುವುದೇ ದೇವೇಗೌಡರ ಕೊನೆಯ ಆಸೆ: ಶಾಸಕ ಜಿ.ಟಿ.ದೇವೇಗೌಡ

ಇಂದಿನಿಂದ 9 ದಿನಗಳ ಕಾಲ ಬಿಡದಿಯ ತೋಟದ ಮನೆಯಲ್ಲಿ ನಡೆಯಲಿರುವ ಪೂಜೆ ಕೈಂಕರ್ಯದಲ್ಲಿ ಶತಚಂಡಿಕಾ ಯಾಗ ಮತ್ತು ಮಹಾರುದ್ರ ದಶಾಂಶ ಹೋಮ ಮಾಡಲಿರುವ ಆಗಮಿಕರು. ಮೃತ್ಯುಂಜಯ ಕೋಟಿ ಜಪದ ಮೂಲಕ ಆರೋಗ್ಯ ವೃದ್ದಿ,ಮೃತ್ಯು ರಕ್ಷಕ ಸಂಕಲ್ಪ ಕೈಗೊಳ್ಳಲಿರುವ ಎಚ್‌ಡಿಕೆ ಕುಟುಂಬ

ನಾಳೆ ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಯಾಗಕ್ಕೆ ಚಾಲನೆ. ಶತಚಂಡಿಕಾ ಯಾಗದ 10,100 ಸ್ವಾಹ ಅರ್ಪಣೆ. ಬಳಿಕ ಮಾರ್ಕಂಡೇಯ ಪುರಾಣದ ದುರ್ಗಾಸಪ್ತಶತಿಯ 700 ಶ್ಲೋಕಗಳನ್ನು ದಿನಕ್ಕೆ ಮೂರು ಋತ್ವಿಕರಿಂದ ಬಾರಿ ಪಾರಯಣ.

11 ಯಜ್ಞಕುಂಡದಲ್ಲಿ ನಡೆಯಲಿರುವ ಮಹಾಯಾಗ. ಪ್ರತ್ಯೇಕ ತರ್ಪಣ, ಮಾರ್ಜನ ಕ್ರಿಯೆಗಳ ಮೂಲಕ ನಡೆಯಲಿರುವ ಶತಚಂಡಿಕಾಯಾಗ  ಅಲ್ಲದೇ ಮಹಾರುದ್ರ ಸ್ವಾಹಾಕಾರ ಕೃಷ್ಣ ಯಜುರ್ವೇದ ತೈತ್ತರೀಯ ಸಂಹೀತಾ ರುದ್ರಪ್ರಶ್ನದ ಹೋಮ ಮೃತ್ಯುಂಜಯ ಮಂತ್ರ ಕೋಟಿ ಜಪ ಮಾಡಲಿರುವ ಆಗಮಿಕರು

ಜೆಡಿಎಸ್‌ ಬಗ್ಗೆ ಚರ್ಚೆ ಮಾಡಬೇಡಿ: ಸಿದ್ಧರಾಮಯ್ಯಗೆ ಎಚ್‌ಡಿಕೆ ಟಾಂಗ್‌

ಶತಚಂಡಿಕಾಯಾಗದ ಫಲವೇನು:

  •  ಶತ್ರುಪರಾಜಯ
  •  ಅಧಿಕಾರವೃದ್ದಿ
  • ಸಾಮ್ರಾಜ್ಯ ಸ್ಥಾಪನಾ ಶಕ್ತಿ
  • ರಾಜಕೀಯ ದಿಗ್ವಿಜಯ ಸಾಧಿಸಲು ಹೆಚ್ ಡಿ ಕೆ ಮಹಾಯಾಗ
  • ನಕಾರಾತ್ಮಕ ಶಕ್ತಿಗಳ ದೃಷ್ಟಿ ನಿವಾರಣೆ
  •  ಮಾಟ,ಮಂತ್ರ,ಯಂತ್ರ,ತಂತ್ರ ಪ್ರಯೋಗಗಳ ಉಚ್ಚಾಟನೆ

ಮೃತ್ಯುಂಜಯ ಕೋಟಿ ಜಪದ ಫಲವೇನು:

  • ಅಪಮೃತ್ಯು ನಿವಾರಣೆ
  • ಮೃತ್ಯುದೋಷ ನಿವಾರಣೆ
  •  ಆರೋಗ ವೃದ್ದಿ
  •  ಮೃತ್ಯುಕಂಟಕ ನಿವಾರಣೆ
  • ಆಯುಷ್ಯ ವೃದ್ದಿ
  • ಎರಡು ಮಹಾಸಂಕಲ್ಪಗಳನ್ನಿಟ್ಟುಕೊಂಡು ಹೆಚ್ ಡಿ ಕೆ ಮಹಾಯಾಗ

PREV
Read more Articles on
click me!

Recommended Stories

ಜೆನ್‌ ಜೀ ಮನಗೆದ್ದ ಭಗವದ್ಗೀತೆ: ಏನಿದರ ಗುಟ್ಟು?
ನಾಳೆ ಡಿಸೆಂಬರ್ 8 ರವಿ ಪುಷ್ಯ ಯೋಗ, 5 ರಾಶಿಗೆ ಅದೃಷ್ಟ ಮತ್ತು ಪ್ರಗತಿ