Lucky zodiac signs: ಈ ನಾಲ್ಕು ರಾಶಿಯ ಹುಡುಗಿಯರು ಹೆಚ್ಚು ಸೌಭಾಗ್ಯವಂತರು....

Adarsha Anche   | Asianet News
Published : Nov 30, 2021, 06:12 PM ISTUpdated : Nov 30, 2021, 06:51 PM IST
Lucky zodiac signs: ಈ ನಾಲ್ಕು ರಾಶಿಯ ಹುಡುಗಿಯರು ಹೆಚ್ಚು ಸೌಭಾಗ್ಯವಂತರು....

ಸಾರಾಂಶ

ರಾಶಿಗೆ ಅನುಗುಣವಾಗಿ ವ್ಯಕ್ತಿಯ ಗುಣ ಸ್ವಭಾವಗಳು ಇರುತ್ತವೆ. ಅಷ್ಟೇ ಅಲ್ಲದೆ ಉತ್ತಮ ಯೋಗ ಮತ್ತು ಅದೃಷ್ಟಗಳು ರಾಶಿಯ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ಕರ್ಕಾಟಕ ಸಿಂಹ ಮತ್ತು ಮಕರ ರಾಶಿಯ ಹುಡುಗಿಯರು ಹೆಚ್ಚು ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಹಾಗಾದರೆ ಈ ಬಗ್ಗೆ ಇನ್ನಷ್ಟು ತಿಳಿಯೋಣ...

ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಈ 4 ರಾಶಿಯ ಹುಡುಗಿಯರು (Girls) ಹೆಚ್ಚು ಭಾಗ್ಯವಂತರು (Lucky) ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹನ್ನೆರಡು ರಾಶಿಗಳಿವೆ ಪ್ರತಿ ರಾಶಿಗೆ ಅದರದ್ದೇ ಆದ ವಿಶೇಷ (Special) ಗುಣಗಳಿರುತ್ತವೆ (Nature). ಆಯಾ ರಾಶಿಯ ಅಧಿಪತಿ ಗ್ರಹದ (Planet) ಪ್ರಭಾವ (Effect) ಮತ್ತು ರಾಶಿಯ ಸ್ವಗುಣ - ಸ್ವಭಾವಗಳು ವ್ಯಕ್ತಿಯ ಮೇಲೆ ಪ್ರಭಾವವನ್ನು ಬೀರುತ್ತವೆ. ಹಾಗಾಗಿ ಮೇಷ (Aries), ಕರ್ಕಾಟಕ (Cancer), ಸಿಂಹ (Leo) ಮತ್ತು ಮಕರ (Capricorn) ರಾಶಿಯ ಹುಡುಗಿಯರು ಹೆಚ್ಚು ಅದೃಷ್ಟವಂತರು ಮತ್ತು ಜೀವನದಲ್ಲಿ (Life) ಎಲ್ಲ ರೀತಿಯ ಸುಖಗಳನ್ನು (Happiness) ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ರಾಶಿಗಳ ಹುಡುಗಿಯರ ಅದೃಷ್ಟದ ಬಗ್ಗೆ ತಿಳಿಯೋಣ.

ಇದನ್ನು ಓದಿ: Nature and December Born: ಸ್ವಭಾವ ಹೇಗಿರುತ್ತೆ?

ಮೇಷ ರಾಶಿ (Aries)   
ಈ ರಾಶಿಯ ಹುಡುಗಿಯರು ಎಲ್ಲರಿಗಿಂತ ಹೆಚ್ಚು ಭಾಗ್ಯಶಾಲಿಗಳೆಂದು ಹೇಳಲಾಗುತ್ತದೆ. ಈ ರಾಶಿಯ ಹುಡುಗಿಯರಿಗೆ ಹಣ (Money) ಮತ್ತು ಸಂಪತ್ತಿಗೆ (Wealth) ಯಾವುದೇ ಕೊರತೆ ಇರುವುದಿಲ್ಲ. ಈ ರಾಶಿಯ ಹುಡುಗಿಯರಿಗೆ ಜೀವನದ ಎಲ್ಲ ಸುಖ - ಸಂತೋಷಗಳು ಪ್ರಾಪ್ತವಾಗುತ್ತದೆ. ಈ ಹುಡುಗಿಯರು ಯಾವುದೇ ಕೆಲಸವನ್ನು (Work) ಮಾಡಲು ಇಚ್ಛಿಸಿದರು (Desire) ಅದರಲ್ಲಿ ಸಫಲತೆಯನ್ನು  (Success) ಕಾಣುತ್ತಾರೆ. ಅಷ್ಟೇ ಅಲ್ಲದೆ ಇವರು ಪರಿಶ್ರಮಿಗಳು (Effort) ಮತ್ತು ಬುದ್ಧಿವಂತರು (Clever) ಆಗಿರುತ್ತಾರೆ. ಬುದ್ಧಿವಂತಿಕೆ ಮತ್ತು ಶ್ರಮದಿಂದ ಯಶಸ್ಸನ್ನು ಗಳಿಸುತ್ತಾರೆ. ಇವರಿಗೆ ಅದೃಷ್ಟವು ಜೊತೆಗಿರುತ್ತದೆ. ಕಡಿಮೆ ಪ್ರಯತ್ನದಲ್ಲಿಯೇ ಯಶಸ್ಸನ್ನು ಪಡೆಯುವ ಇವರು ವೃತ್ತಿ ಕ್ಷೇತ್ರದಲ್ಲಿಯೂ (Carrer) ಉತ್ತಮ ಸಾಧನೆ ಮಾಡುತ್ತಾರೆ.

ಕರ್ಕಾಟಕ ರಾಶಿ (Cancer)
ಈ ರಾಶಿಯ ಹುಡುಗಿಯರು ಸಹ ಅತ್ಯಂತ ಭಾಗ್ಯಶಾಲಿಗಳೆಂದು ಹೇಳಲಾಗುತ್ತದೆ. ಈ ರಾಶಿಯ ಹುಡುಗಿಯರು ಇದ್ದ ಮನೆಯಲ್ಲಿ ಧನ (Money) ಮತ್ತು ಧಾನ್ಯಗಳಿಗೆ (Grains) ಯಾವುದೇ ಕೊರತೆ ಇರುವುದಿಲ್ಲ. ಈ ರಾಶಿಯ ಹುಡುಗಿಯರು ಜೀವನದಲ್ಲಿ ಇಷ್ಟಪಟ್ಟ ಎಲ್ಲವನ್ನು ಸುಲಭದಲ್ಲಿ (Easy)  ಪಡೆದುಕೊಳ್ಳುತ್ತಾರೆ. ಇವರು ಚುರುಕುತನದಿಂದ (Brave) ಜೀವನದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಇವರಿಗೆ ಮನೆ (Home) ಮತ್ತು ಕುಟುಂಬದಲ್ಲಿ (Family) ಅಷ್ಟೆ ಅಲ್ಲದೆ ಸಮಾಜದಲ್ಲೂ (Society) ಗೌರವ ಪ್ರತಿಷ್ಠೆಗಳು ದೊರಕುತ್ತವೆ. ಈ ವ್ಯಕ್ತಿಗಳು ಎಲ್ಲರ ಮನಸ್ಸಿನಲ್ಲೂ ಉತ್ತಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಅಷ್ಟೆ ಅಲ್ಲದೆ ಸದಾ ಇತರರ  ಸಹಾಯಕ್ಕೆ (Help) ಸಿದ್ಧರಿರುತ್ತಾರೆ. 

ಇದನ್ನು ಓದಿ: Palmistry Lines: ಸಂತಾನ ಭವಿಷ್ಯ ತಿಳಿಸುವ ರೇಖೆ ಯಾವುದು ನಿಮ್ಮ ಕೈಯಲ್ಲಿ!

ಸಿಂಹ ರಾಶಿ (Leo) 
ಈ ರಾಶಿಯ ಹುಡುಗಿಯರು ಅತ್ಯಂತ ಪ್ರಾಮಾಣಿಕರು (Honest), ಪರಿಶ್ರಮಿಗಳು ಮತ್ತು ಬುದ್ಧಿವಂತರು ಆಗಿರುತ್ತಾರೆ. ಈ ರಾಶಿಯ ಹುಡುಗಿಯರು ಮಾಡುವ ಕೆಲಸದಲ್ಲಿ ಇವರಿಗೆ ಅದೃಷ್ಟ ಪ್ರಾಮಾಣಿಕ (Honest) ಸಾಥ್ ನೀಡುತ್ತದೆ. ಜೀವನದಲ್ಲಿ ಎಲ್ಲವೂ ಇವರಿಗೆ ಸುಲಭದಲ್ಲಿ ಸಿಗುತ್ತದೆ. ಇವರ ವ್ಯಕ್ತಿತ್ವ ಅತ್ಯಂತ ಆಕರ್ಷಕವಾಗಿರುತ್ತದೆ (Atractive). ಹಾಗಾಗಿ ಎಲ್ಲರನ್ನೂ ಸೆಳೆಯುವ ಕಲೆ ಇವರಲ್ಲಿರುತ್ತದೆ. ಗೌರವ (Respect) ಪ್ರತಿಷ್ಠೆಗಳು ಇವರಿಗೆ ಎಲ್ಲ ಕಡೆ ಸಿಗುತ್ತವೆ.

ಇದನ್ನು ಓದಿ: Interpretation of Dreams: ಸ್ವಪ್ನಕ್ಕೇನು ಅರ್ಥ?

ಮಕರ ರಾಶಿ (Capricorn) 
ಈ ರಾಶಿಯ ಹುಡುಗಿಯರು ಸಾಹಸಿಗಳು (Adventurer), ಪ್ರಾಮಾಣಿಕರು, ಪರಿಶ್ರಮಿಗಳು ಮತ್ತು ಬುದ್ಧಿವಂತರು ಆಗಿರುತ್ತಾರೆ. ಉತ್ತಮ ಮತ್ತು ಸ್ವಚ್ಛ ಹೃದಯದವರು (Heart) ಇವರಾಗಿರುತ್ತಾರೆ. ಇತರರಿಗೆ ಸಹಾಯ ಮಾಡಲು ಸದಾ ಸಿದ್ಧರಿರುತ್ತಾರೆ. ಎಲ್ಲ ಕಡೆಗಳಲ್ಲೂ ಇವರಿಗೆ ಗೌರವ ದೊರಕುತ್ತದೆ. ಯಾವುದೇ ಕೆಲಸವನ್ನು ಮಾಡಬೇಕೆಂದು ಕೊಂಡರೆ ಅದನ್ನು ಮಾಡಿಯೇ ತೀರುತ್ತಾರೆ. ಯಶಸ್ಸನ್ನು ಪಡೆಯಲು ಹೆಚ್ಚಿನ ಪರಿಶ್ರಮವನ್ನು ಪಡುವ ಇವರಿಗೆ ಅದೃಷ್ಟವು ಸಾಥ್ ನೀಡುತ್ತದೆ. 

PREV
Read more Articles on
click me!

Recommended Stories

ನಾಳೆ ಡಿಸೆಂಬರ್ 9 ಸರ್ವಾರ್ಥ ಸಿದ್ಧಿ ಯೋಗ, 5 ರಾಶಿಗೆ ಅದೃಷ್ಟ, ಸಂಪತ್ತು
ಅದೃಷ್ಟ ಬಾಗಿಲು ತಟ್ಟುತ್ತಿದೆ, ಈ 6 ರಾಶಿ ಆದಾಯ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತದೆ