ಜೂನ್‌ 21ರ ಸೂರ್ಯಗ್ರಹಣದಿಂದ ಈ ರಾಶಿಗಳಿಗೆ ಗಜಕೇಸರಿ ಯೋಗ

By Suvarna News  |  First Published Jun 8, 2020, 4:34 PM IST

ಜೂನ್ 21ರಂದು ಈ ವರ್ಷದ ಮೊದಲ ಸೂರ್ಯಗ್ರಹಣ ಇದೆ. ಸೂರ್ಯಗ್ರಹಣ ಎಂದರೆ ಕೆಡುಕಾಗುತ್ತದೆ ಎಂದು ಭಾವಿಸುವವರು ಹೆಚ್ಚು. ಆದರೆ ಇದರಿಂದ ಕೆಲವು ರಾಶಿಯವರಿಗೆ ಗಜಕೇಸರಿ ಯೋಗ ಪ್ರಾಪ್ತವಾಗಲಿದೆ. ಅವು ಯಾವುವೆಂದು ತಿಳಿಯೋಣ ಬನ್ನಿ...


ಜೂನ್‌ 21ರಂದು ಕಟಕ ರಾಶಿ, ಪುನರ್ವಸು ನಕ್ಷತ್ರದಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ. ಇದು ಖಂಡಗ್ರಾಸ ಸೂರ್ಯಗ್ರಹಣವಾದರೂ, ಕೆಲವು ರಾಶಿಗಳವರಿಗೆ ಇದರಿಂದ ಲಾಭ, ಹಾನಿ ಎರಡೂ ಇದೆ. ಹಾನಿ ಅಲ್ಪ ಮಟ್ಟದ್ದು. ಆದರೆ ಗಜಕೇಸರಿ ಯೋಗ ಇರುವವರು ಈ ಸೂರ್ಯಗ್ರಹಣದ ಬಳಿಕ ತಮ್ಮ ಕೆಲಸಗಳಲ್ಲಿ ಹೆಚ್ಚಿನ ಅದೃಷ್ಟವನ್ನು ಪಡೆಯುತ್ತಾರೆ. ಗಜಕೇಸರಿ ಯೋಗ ಎಂದರೆ, ಜಾತಕದಲ್ಲಿ ಗುರು ಹಾಗೂ ಚಂದ್ರ ಒಟ್ಟಿಗೇ ಇದ್ದರೆ ಉಂಟಾಗುವ ಯೋಗ ಅಥವಾ ಗುರು ಇರುವ ಮನೆಯಿಂದ ನಾಲ್ಕು, ಏಳು ಅಥವಾ ಹತ್ತನೇ ಮನೆಯಲ್ಲಿ ಚಂದ್ರನಿದ್ದರೆ ಉಂಟಾಗುವ ಯೋಗ. ಅಂಥ ಯೋಗ ಯಾರ್ಯಾರಿಗೆ ಇದೆ ಎಂದು ತಿಳಿಯೋಣ.

ಮೇಷ ರಾಶಿ
ನಿಮ್ಮ ಹಣ ನಿಮ್ಮ ಬಳಿಯೇ ಉಳಿಯುತ್ತದೆ. ಅನವಶ್ಯಕ ಖರ್ಚು ವೆಚ್ಚಗಳು ಇಲ್ಲದಾಗುತ್ತವೆ. ಆದಾಯದಲ್ಲಿ ಹೆಚ್ಚನ್ನು ಉಳಿಸಲು ಸಾಧ್ಯವಾಗುತ್ತದೆ. ಕುಟುಂಬದಲ್ಲಿ ಆನಂದದ ದಿನಗಳು ತಲೆದೋರುತ್ತವೆ. ಮಕ್ಕಳಿಂದ ಆನಂದ ಉಂಟಾದೀತು. ಮಕ್ಕಳಿಲ್ಲದವರಿಗೆ ಸಂತಾನಭಾಗ್ಯದ ಸೂಚನೆ ಕಾಣಿಸಬಹುದು. ಖರ್ಚಿಗೆ ತಕ್ಕ ಆದಾಯದ ದಾರಿಗಳೂ ಕಾಣಿಸಬಹುದು.

Tap to resize

Latest Videos

undefined


ಕಟಕ ರಾಶಿ
ಸಂಗಾತಿಯೊಡನೆ ಸಂತೋಷ, ಆನಂದದ ಸಂಸಾರ ನಡೆಸುತ್ತೀರಿ. ಕಚೇರಿಯಲ್ಲೂ ಖುಷಿಯ ಅನುಭವ ನಿಮ್ಮದಾಗುತ್ತದೆ. ನಿಮ್ಮ ಕೆಲಸ ಮಾಡುವ ಸ್ಥಳದಲ್ಲಿ ಪರಿಸರ ತುಂಬಾ ಚೆನ್ನಾಗಿರುತ್ತದೆ. ಸಹೋದ್ಯೋಗಿಗಳ ಜೊತೆ ಒಳ್ಳೆಯ ಅನುಬಂಧ ಸಾಧ್ಯವಾಗುತ್ತದೆ. ಬಡ್ತಿ ದೊರೆಯಬಹುದು. ಕೆಲಸದಲ್ಲಿ ಹೆಚ್ಚಿನ ಹೊಣೆಗಳೂ ಸಿಗಬಹುದು. ದೂರದೃಷ್ಟಿಯನ್ನಿಟ್ಟುಕೊಂಡು ನಡೆಯುವುದು ತುಂಬಾ ಉತ್ತಮ. 

ಮಕರ ರಾಶಿ
ನಿಮ್ಮ ಸುತ್ತಮುತ್ತ ಆನಂದದ ವಾತಾವರಣ ಇರುತ್ತದೆ. ಬದುಕಿನ ಹೊಸ ದಾರಿಗಳನ್ನು ಕಂಡುಕೊಳ್ಳುತ್ತೀರಿ. ನಿಮ್ಮ ಸುತ್ತಮುತ್ತಲೂ ಪೊಸಿಟಿವ್‌ ವಾತಾವರಣ ನಿರ್ಮಿಸಿಕೊಳ್ಳುತ್ತೀರಿ. ಇದರಿಂದ ಕಚೇರಿ ಕೆಲಸಗಳಲ್ಲೂ ಆಸಕ್ತಿ ಹುಟ್ಟಿಸಿಕೊಳ್ಳುತ್ತೀರಿ. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಕುಟುಂಬದಿಂದ ಶುಭ ಸುದ್ದಿಗಳು ಕೇಳಿಬರುತ್ತವೆ. ಸಹೋದರ ಸಹೋದರಿಗೆ ಕಂಕಣಭಾಗ್ಯ ಉಂಟಾಗಬಹುದು. ಸಂಗಾತಿಯಿಂದ ಸುಖ. 

ಈ ರಾಶಿಯವರಿಗೆ ಈಗ ಪ್ರೀತಿ ಪ್ರೇಮ ಪ್ರಣಯದ ಸಮಯ!
ಕುಂಭ ರಾಶಿ
ನೀವು ಛಲಗಾರರು. ಎಲ್ಲಿ ಹೋದರೂ ಹಿಡಿದ ಕೆಲಸವನ್ನು ಛಲ ಬಿಡದೆ ಮುಗಿಸಿಕೊಂಡೇ ಬರುತ್ತೀರಿ. ಆರ್ಥಿಕ ಸಂಕಷ್ಟಗಳನ್ನೂ ಸುಲಭವಾಗಿ ದಾಟಿಸಿಕೊಳ್ಳುತ್ತೀರಿ. ಆರೋಗ್ಯದಲ್ಲಿ ತುಸು ಏರುಪೇರು ಉಂಟಾಗಬಹುದಾದರೂ ಅದು ತಾತ್ಕಾಲಿಕ ಮಾತ್ರ. ಉಳಿದಂತೆ ಉತ್ತಮ ಆರೋಗ್ಯವೇ ನಿಮ್ಮನ್ನು ಕಾಪಾಡುವುದು. ಸೂರ್ಯನ ಬೆಳಗಿನ ಕಿರಣಗಳು ನಿಮ್ಮನ್ನು ತಲುಪುವಂತೆ ನೋಡಿಕೊಳ್ಳಿ.

ಪತಿಗೆ ಅಂಟಿ ಕೊಂಡಿರುವ ದಾರಿದ್ರ್ಯ ದೂರ ಮಾಡುವ ಶಕ್ತಿಯಿದೆ ಪತ್ನಿಗೆ
ಧನು ರಾಶಿ
ಮುಟ್ಟಿದ್ದೆಲ್ಲ ಚಿನ್ನವಾಗುವ ಸಮಯ. ಯಾವ ಕೆಲಸ ಹಿಡಿದರೂ ಸಕ್ಸಸ್ ಆಗುತ್ತದೆ. ಆದರೆ ಕೆಲಸ ಮುಟ್ಟುವ ಮುನ್ನ ಹತ್ತಾರು ಬಾರಿ ಯೋಚಿಸಿ. ನಿಮ್ಮ ಜೊತೆಗೆ ಇರುವವರ ಯೋಗ ಕೂಡ ನಿಮ್ಮ ಯೋಗದ ಸಹವಾಸದಿಂದ ಉತ್ತಮ ಫಲಗಳನ್ನೇ ಪಡೆಯುತ್ತದೆ. ನೀವು ಪ್ರಾರ್ಥಿಸಿದ್ದೆಲ್ಲ ಕೈಗೂಡುವುದರಿಂದ, ನಿಮಗೂ ಸಮಾಜಕ್ಕೂ ಒಳ್ಳೆಯದನ್ನೇ ಯಾವಾಗಲೂ ಪ್ರಾರ್ಥಿಸಿ.

ಈ ರಾಶಿಗಳ ಹುಡುಗಿಯರಿಗೆ ಇಂತಹ ಹುಡುಗರೇ ಬೇಕಂತೆ!

click me!