ಈ ನಾಲ್ಕು ರಾಶಿಯವರು ತುಂಬಾ ಸೆಲ್ಫಿಶ್‌, ನಿಮ್ಮ ಜೊತೆಗಿದ್ದಾರಾ ಅಂಥವರು?

By Suvarna News  |  First Published Jun 8, 2021, 4:04 PM IST

ಕೆಲವರು ಎಲ್ಲವನ್ನೂ ತಮ್ಮ ಸ್ವಾರ್ಥದ ದೃಷ್ಟಿಕೋನದಲ್ಲಿಯೇ ನೋಡುತ್ತಾರೆ. ಅವರಿಗೆ ಸಂಬಂಧ, ಸ್ನೇಹ ಎಲ್ಲವೂ ತಮಗೆ ಅನುಕೂಲವಾಗುವಂತೆಯೇ ಇರಬೇಕು. ಆ ನಿಟ್ಟಿನಲ್ಲಿಯೇ ಅವರ ಯೋಚನಾ ಲಹರಿ ಹರಿದಿರುತ್ತದೆ. ಇವರ ಈ ಮನೋಭಾವಕ್ಕೆ ರಾಶಿ ಚಕ್ರವು ಸಹ ಒಂದು ಕಾರಣ. ರಾಶಿಚಕ್ರದಲ್ಲಿರುವ ಹನ್ನೆರಡು ರಾಶಿಗಳಲ್ಲಿ ಹೆಚ್ಚಿನ ಸ್ವಾರ್ಥ ಸ್ವಭಾವದ ನಾಲ್ಕು ರಾಶಿಗಳಿದ್ದು, ಅವುಗಳ ಬಗ್ಗೆ ತಿಳಿಯೋಣ...


ಜ್ಯೋತಿಷ್ಯ ಶಾಸ್ತ್ರದಲ್ಲಿ ಗುಣ ಸ್ವಭಾವಗಳನ್ನು ಮತ್ತು ಭವಿಷ್ಯದ ವಿಚಾರವನ್ನು ಹುಟ್ಟಿದ ಘಳಿಗೆ, ದಿನಾಂಕ, ವಾರ, ಮಾಸ ಇವುಗಳಿಂದ ಸಿದ್ಧಪಡಿಸಲಾದ ಜಾತಕದಿಂದ ವ್ಯಕ್ತಿಯ ಬಗ್ಗೆ ನಿಖರವಾಗಿ ಹೇಳಬಹುದು. ಅಷ್ಟೇ ಅಲ್ಲದೆ ಪ್ರತ್ಯೇಕ ರಾಶಿ ಮತ್ತು ನಕ್ಷತ್ರಗಳಿಗಿರುವ ವಿಶೇಷ ಗುಣಗಳಿಂದ ಸಹ ವ್ಯಕ್ತಿಯ ಸ್ವಭಾವದ ಬಗ್ಗೆ ತಿಳಿಯಬಹುದಾಗಿರುತ್ತದೆ. ಹಾಗಾಗಿ ಪ್ರತಿ ರಾಶಿಯವರು ಆಯಾ ರಾಶಿಯ ವಿಶೇಷ ಗುಣವನ್ನು ಹೊಂದಿರುತ್ತಾರೆ. ಹಾಗಾಗಿ ಕೆಲವು ರಾಶಿಯವರು ದಯಾ ಗುಣದವರಾದರೆ, ಮತ್ತೆ ಕೆಲವು ರಾಶಿಯವರು ಸ್ವಾರ್ಥ ಬುದ್ಧಿಯನ್ನು ಹೊಂದಿರುತ್ತಾರೆ. ಅಂತಹ ರಾಶಿಯವರ ಬಗ್ಗೆ ತಿಳಿಯೋಣ...

ಕೆಲವು ರಾಶಿಯ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಇತರರನ್ನು ಬಳಸಿಕೊಳ್ಳುತ್ತಾರೆ. ಸ್ನೇಹವನ್ನು ಸಹ ತಮ್ಮ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಳ್ಳುತ್ತಾರೆ. ಈ ರಾಶಿಯ ವ್ಯಕ್ತಿಗಳು ಮೊದಲು ತಮ್ಮ ಬಗ್ಗೆ ಯೋಚಿಸಿ ನಂತರ ಇತರರ ಬಗ್ಗೆ ಯೋಚಿಸುವ ಸ್ವಭಾದವರಾಗಿರುತ್ತಾರೆ. ಸ್ನೇಹಿತರು, ಬಂಧುಗಳು, ಮನಸ್ಸಿಗೆ ಹತ್ತಿರವಾದವರು ಎಂಬ ಭೇದವಿಲ್ಲದೆ ಎಲ್ಲರೊಂದಿಗೂ ತಮ್ಮ ಸ್ವಾರ್ಥಗುಣವನ್ನೇ ಬಳಸಿಕೊಳ್ಳುವ ವ್ಯಕ್ತಿಗಳು ಹಲವರಿರುತ್ತಾರೆ. ರಾಶಿಚಕ್ರದಲ್ಲಿರುವ ಹನ್ನೆರಡು ರಾಶಿಗಳಲ್ಲಿ ಅತ್ಯಂತ ಹೆಚ್ಚಿನ ಸ್ವಾರ್ಥಗುಣವನ್ನು ಈ ನಾಲ್ಕು ರಾಶಿಯವರು ಹೊಂದಿರುತ್ತಾರೆಂದು ಹೇಳಲಾಗುತ್ತದೆ. ಕೆಲವು ಕೆಲಸವನ್ನು ಸಾಧಿಸಿಕೊಳ್ಳಲು, ಮತ್ತೆ ಕೆಲವರು ಬಾಂಧವ್ಯವನ್ನು ಗಟ್ಟಿಗೊಳಿಸಿಕೊಳ್ಳಲು ಹೀಗೆ ಹಲವು ಬಗೆಯ ಸ್ವಾರ್ಥಗುಣವನ್ನು ಹೊಂದಿರುವ ರಾಶಿಗಳ ಬಗ್ಗೆ ಅರಿಯೋಣ..

ಇದನ್ನು ಓದಿ: ಈ ತಾರೀಖಿನಲ್ಲಿ ಜನಿಸಿದವರಿಗೆ ಶುಕ್ರ ದೆಸೆ, ಐಷಾರಾಮಿ ಜೀವನ ನಡೆಸ್ತಾರೆ! 

ಮಿಥುನ ರಾಶಿ
ಉತ್ತಮ ವಾಗ್ಮಿಗಳಾಗಿರುವ ಈ ರಾಶಿಯವರು, ತಮ್ಮ ಮಾತಿನಿಂದಲೇ ಎಲ್ಲರನ್ನು ಮರುಳುಮಾಡಿ ತಮಗೆ ಬೇಕಾದ್ದನ್ನು ಮಾಡಿಸಿಕೊಳ್ಳುವ ಚಾಕಚಕ್ಯತೆ ಹೊಂದಿರುತ್ತಾರೆ. ಇವರನ್ನು ಹೆಚ್ಚು ನಂಬುವವರೊಂದಿಗೆ ಸ್ವಾರ್ಥಿಗಳಾಗಿ ವರ್ತಿಸುವ ಗುಣ ಇವರದ್ದಾಗಿರುತ್ತದೆ. ಈ ರಾಶಿಯ ಸ್ನೇಹಿತರು ಅಥವಾ ಬಂಧುಗಳು ಇದ್ದಲ್ಲಿ ಇತರರು ಇವರ ಮಾತನ್ನೇ ಕೇಳುವಂಥ ಪರಿಸ್ಥಿತಿ ಎದುರಾಗುತ್ತದೆ. ಅಷ್ಟೇ ಅಲ್ಲದೆ ಈ ರಾಶಿಯವರೊಂದಿಗೆ ವಾದ-ವಿವಾದಕ್ಕಿಳಿದರೆ ಇವರು ಸ್ನೇಹವನ್ನೇ ಬಿಟ್ಟು ಬಿಡಲು ಕೊಂಚ ಕೂಡ ಯೋಚಿಸದೆಯೇ, ಗೆಳೆತನವನ್ನು ಮುರಿದು ಹೋಗುವಂಥ ಗುಣದವರಾಗಿರುತ್ತಾರೆ.

Tap to resize

Latest Videos

ಸಿಂಹ ರಾಶಿ
ಎಲ್ಲರಿಗಿಂತ ಹೆಚ್ಚು ಮತ್ತು ಎಲ್ಲರೂ ತಮ್ಮನ್ನೇ ಗುರುತಿಸಬೇಕೆಂಬ ಭಾವನೆಯನ್ನು ಹೊಂದಿರುವ ರಾಶಿ ಸಿಂಹರಾಶಿಯವರು. ಇವರು ಹೆಚ್ಚಾಗಿ ಪ್ರಸಿದ್ಧಿ ಪಡೆಯಲು ಇಚ್ಚಿಸುವವರಾಗಿರುತ್ತಾರೆ. ಸ್ವಲ್ಪ ಮಟ್ಟಿನ ಅಸುರಕ್ಷತೆ ಮನೋಭಾವವನ್ನು ಹೊಂದಿರುವ ಈ ರಾಶಿಯವರು ಮಹತ್ವಾಕಾಂಕ್ಷಿಗಳಾಗಿರುತ್ತಾರೆ. ಈ ರಾಶಿಯವರು ಮುನ್ನುಗ್ಗುವುದನ್ನು ತಡೆಯಲು ಯಾರಾದರೂ ಪ್ರಯತ್ನಿಸಿದರೆ ಅವರನ್ನು ತುಳಿಯುವ ಸತತ ಪ್ರಯತ್ನವನ್ನು ಇವರು ಮಾಡುತ್ತಾರೆ. ಇಂಥ ಸಂದರ್ಭದಲ್ಲಿ ಅವರ ಸ್ನೇಹಿತರನ್ನು ಬಿಡದೇ ಸೇಡು ತೀರಿಸಿಕೊಳ್ಳುವ ವ್ಯಕ್ತಿತ್ವ ಇವರದ್ದಾಗಿರುತ್ತದೆ. ಅಷ್ಟೇ ಅಲ್ಲದೆ ಅಂಥವರನ್ನು ಕ್ಷಮಿಸುವ ಬಗ್ಗೆ ಈ ರಾಶಿಯವರು ಯೋಚಿಸುವುದೂ ಇಲ್ಲ. ಸಿಂಹ ರಾಶಿಯವರ ಅಧಿಕಾರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರೆ ಅಂಥ ಸಂದರ್ಭದಲ್ಲಿ ಇವರು ಹೆಚ್ಚು ಸ್ವಾರ್ಥಿಗಳಾಗುತ್ತಾರೆ.

ಇದನ್ನು ಓದಿ: ಸಾವಿನ ಮುನ್ಸೂಚನೆ ಕೊಡುತ್ತಂತೆ ಈ ಕನಸುಗಳು! 

ಕನ್ಯಾ ರಾಶಿ
ಹಣವನ್ನು ಕೊಟ್ಟು-ತೆಗೆತುಕೊಳ್ಳುವ ವಿಚಾರದಲ್ಲಿ ಈ ರಾಶಿಯವರು ಹೆಚ್ಚು ಸ್ವಾರ್ಥಿಗಳಾಗಿರುತ್ತಾರೆ. ಹಣವನ್ನು ಕೊಡುವ ವಿಚಾರದ ಬಂದರೆ ಆ ಜಾಗದಿಂದ ಪರಾರಿಯಾಗುವ ಸ್ವಭಾವ ಈ ರಾಶಿಯವರದ್ದು. ಈ ರಾಶಿಯವರ ಮನಸ್ಸನ್ನು ತಿಳಿದೊ ಅಥವಾ ತಿಳಿಯದೆಯೋ ಯಾರಾದರೂ ನೋಯಿಸಿದ್ದರೆ ಅಂಥವರನ್ನು ಸಾರ್ವಜನಿಕವಾಗಿ ಅಪಮಾನಗೊಳಿಸುವ ಗುಣ ಇವರದ್ದಾಗಿರುತ್ತದೆ. ಕನ್ಯಾ ರಾಶಿಯವರು ಕೆಲವು ಸಂಬಂಧಗಳನ್ನು ಕೇವಲ ಸ್ವಾರ್ಥಕ್ಕಾಗಿ ಮಾಡಿಕೊಳ್ಳುತ್ತಾರೆಂದು ಸಹ ಹೇಳಲಾಗುತ್ತದೆ.

ಇದನ್ನು ಓದಿ: ಕೆಲಸದಲ್ಲಿ ಪ್ರಗತಿ, ಪ್ರಮೋಶನ್ ಬೇಕಂದ್ರೆ ಹೀಗ್ ಮಾಡಿ ನೋಡಿ. 

ಧನು ರಾಶಿ
ಈ ರಾಶಿಯವರು ಹೆಚ್ಚು ಸ್ವಾರ್ಥಗುಣವನ್ನು ಹೊಂದಿರುತ್ತಾರೆ. ಧನು ರಾಶಿಯವರ ಜೀವನದಲ್ಲಿ ಮತ್ತೊಬ್ಬರು ಮೂಗು ತೂರಿಸುವುದು ಇವರಿಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ತಮ್ಮ ಕೆಲಸ ಆಗಬೇಕೆಂಬ ಸ್ವಾರ್ಥಕ್ಕಾಗಿ ಹತ್ತಿರದ ಸಂಬಂಧಿಗಳನ್ನು ಸಹ ಉಪಯೋಗಿಸಿಕೊಳ್ಳುವ ಮಟ್ಟಕ್ಕೆ ಹೋಗುವವರಾಗಿರುತ್ತಾರೆ. ಹನ್ನೆರಡು ರಾಶಿಗಳಲ್ಲಿ ಧನು ರಾಶಿಯವರು ಅತ್ಯಂತ ಹೆಚ್ಚು ಸ್ವಾರ್ಥಗುಣವನ್ನು ಹೊಂದಿದವರೆಂದು ಹೇಳಲಾಗುತ್ತದೆ.

click me!