ಸ್ವಪ್ನಶಾಸ್ತ್ರದಲ್ಲಿ ಕನಸಿನ ಮಹತ್ವವನ್ನು ತಿಳಿಸಲಾಗಿದೆ. ಬೀಳುವ ಕನಸಿಗೆ ಅದರದ್ದೇ ಆದ ಅರ್ಥವಿದೆ ಮತ್ತು ಜೀವನ ಮತ್ತು ಮೃತ್ಯುವಿಗೆ ಸಂಬಂಧಿಸಿದ ಭವಿಷ್ಯದ ಘಟನೆಗಳನ್ನು ಮೊದಲೇ ತಿಳಿಸುವ ಸಂಕೇತ ಎಂದು ಹೇಳಲಾಗುತ್ತದೆ. ಧರ್ಮಶಾಸ್ತ್ರದ ಅನುಸಾರ ಸ್ವಪ್ನಶಾಸ್ತ್ರದಲ್ಲಿ ಮೃತ್ಯುವಿನ ಸಂಕೇತವನ್ನು ಸೂಚಿಸುವಂತ ಕನಸುಗಳ ಬಗ್ಗೆ ಉಲ್ಲೇಖಿಸಲಾಗಿದ್ದು ಅಂತಹ ಕನಸುಗಳ ಬಗ್ಗೆ ತಿಳಿಯೋಣ..
ಲಯ ಕರ್ತನಾದ ಶಿವನು ಬೇಡಿದ್ದನ್ನು ನೀಡುವಾತ. ಹಾಗೆ ಹೆಸರೇ ಹೇಳುವಂತೆ ನಾಶ ಮಾಡುವಾತ, ಅಂದರೆ ಮೃತ್ಯುವನ್ನು ನೀಡುವ ದೇವರು ಆತನೇ ಆಗಿದ್ದಾನೆ. ಹಾಗಾಗಿ ಶಿವ ಪುರಾಣದಲ್ಲಿ ಮೃತ್ಯವಿನ ಸಂಕೇತಗಳ ಬಗ್ಗೆ ವಿವರಿಸಿದ್ದಾರೆ. ಅಷ್ಟೇ ಅಲ್ಲದೆ, ಸ್ವಪ್ನಶಾಸ್ತ್ರದಲ್ಲಿ ಸಹ ಕೆಲವು ಕನಸುಗಳು ಮೃತ್ಯುವಿನ ಸಂಕೇತವನ್ನು ಸೂಚಿಸುತ್ತವೆಂದು ಹೇಳಲಾಗುತ್ತದೆ.
ಕನಸು ಸರ್ವೇ ಸಾಮಾನ್ಯವಾಗಿ ಬೀಳುತ್ತಿರುತ್ತದೆ. ಕೆಲವು ನೆನಪಿನಲ್ಲಿ ಉಳಿದರೆ ಇನ್ನು ಕೆಲವು ಕನಸು ಮಸುಕಾಗಿ ಕಾಡುತ್ತದೆ. ಕೆಲವು ರೀತಿಯ ಕನಸುಗಳು ಖುಷಿ ಕೊಟ್ಟರೆ, ಮತ್ತೆ ಕೆಲವು ಗಾಬರಿಗೊಳಿಸುತ್ತವೆ. ಅರ್ಥವಾಗದೆ ಕಾಡುವ ಕನಸು ಹಲವಾರು, ಕೊಂಬು, ಬಾಲವಿಲ್ಲದ ಆ ಕನಸಿನ ಬಗ್ಗೆ ಎಷ್ಟೇ ಚಿಂತಿಸಿದರೂ ಅದರ ಸಂಕೇತವನ್ನು ಮಾತ್ರ ಬಿಡಿಸಲಾಗದು.
ಧಾರ್ಮಿಕ ಶಾಸ್ತ್ರ ಮತ್ತು ಜ್ಯೋತಿಷ್ಯದಲ್ಲಿ ಕನಸುಗಳಿಗೂ ಅರ್ಥವನ್ನು ಕೊಡಲಾಗಿದೆ. ಯಾವ ರೀತಿಯ ಕನಸು ಬಿದ್ದರೆ ಯಾವುದರ ಸಂಕೇತ ಎಂಬ ಬಗ್ಗೆ ತಿಳಿಸಲಾಗಿದೆ. ಅಷ್ಟೇ ಅಲ್ಲದೆ ಸ್ವಪ್ನಶಾಸ್ತ್ರದಲ್ಲಿ ಉಲ್ಲೇಖಿಸಿರುವ ಪ್ರಕಾರ, ಸಾವಿನ ಮುನ್ಸೂಚನೆ. ಸಂಕೇತ ಲಭಿಸಲಿದೆಯಂತೆ, ಅದು ಕನಸುಗಳ ಮೂಲಕ ಎಂದು ಹೇಳಲಾಗುತ್ತದೆ.
ಇದನ್ನು ಓದಿ: ಕೆಲಸದಲ್ಲಿ ಪ್ರಗತಿ, ಪ್ರಮೋಶನ್ ಬೇಕಂದ್ರೆ ಹೀಗ್ ಮಾಡಿ ನೋಡಿ..
ಹಲವಾರು ತರದ ಕನಸು ಅರ್ಥವೇ ಆಗುವುದಿಲ್ಲ, ಎಲ್ಲ ಕನಸುಗಳಿಗೆ ಅರ್ಥವನ್ನು ಹುಡುಕುತ್ತಾ ಕೂರುವುದು ಮೂರ್ಖತನ ಅನ್ನಿಸಿದರೂ, ಬೀಳುವ ಕನಸಿಗೆ ಅರ್ಥವಿದೆ ಅದು ಭವಿಷ್ಯದಲ್ಲಿ ನಡೆಯುವ ವಿಚಾರವನ್ನು ತಿಳಿಸುವ ಸೂಚಕವಾಗಿರುತ್ತವೆ ಎಂದು ಶಿವ ಪುರಾಣದಲ್ಲಿ ಸಹ ಉಲ್ಲೇಖಿಸಲಾಗಿದೆ. ಇಲ್ಲಿ ನಾವು ಸ್ವಪ್ನಶಾಸ್ತ್ರದ ಪ್ರಕಾರ ಯಾವ ರೀತಿಯ ಕನಸು ಬಿದ್ದರೆ ಅದು ಮೃತ್ಯುವಿನ ಸಂಕೇತ ಎಂಬುದರ ಬಗ್ಗೆ ತಿಳಿಯೋಣ...
- ಸ್ವಪ್ನಶಾಸ್ತ್ರದಲ್ಲಿ ಹೇಳುವಂತೆ ಇಷ್ಟ ದೇವರ ಫೋಟೋ ಅಥವಾ ಪ್ರತಿಮೆ ಒಡೆದು ಹೋಗುವಂತೆ ಇಲ್ಲವೆ ಸುಟ್ಟು ಹೋಗುತ್ತಿರುವಂತೆ ಕನಸು ಬಿದ್ದರೆ, ಆ ವ್ಯಕ್ತಿಯ ಮೃತ್ಯುವಿನ ಸಂಕೇತವೆಂದು ಹೇಳಲಾಗುತ್ತದೆ.
- ಕನಸಿನಲ್ಲಿ ಅಪರಿಚಿತ ವ್ಯಕ್ತಿ ನಗಾರಿಯನ್ನು ಬಾರಿಸುತ್ತಾ, ಕ್ಷೌರ ಮಾಡಿಕೊಳ್ಳುತ್ತಿರುವ ದೃಶ್ಯ ಕಂಡರೆ, ಅಂಥ ವ್ಯಕ್ತಿಯ ಮನೆಯಲ್ಲಿರುವ ಹಿರಿಯರ ಮೃತ್ಯುವಿನ ಸಂಕೇತ ಅದಾಗಿರುತ್ತದೆ ಎಂದು ಹೇಳಲಾಗುತ್ತದೆ.
- ಯಾತ್ರೆಗೆ ಹೊರಡುತ್ತಿರುವಂತೆ ಕನಸು ಕಂಡರೆ ಅದು ಮೃತ್ಯುವಿನ ಸಂಕೇತವಾಗಿರುತ್ತದೆ. ಹಾಗಾಗಿ ಯಾತ್ರೆಗೆ ಹೋಗುವ ಸಮಯದಲ್ಲಿ ಅಂತಹ ಕನಸು ಬಿದ್ದರೆ ಆ ಯಾತ್ರೆಯನ್ನು ನಿಲ್ಲಿಸುವುದು ಉತ್ತಮ.
- ಪದೇ ಪದೆ ಭಯಾನಕ ದೃಶ್ಯಗಳು ಕನಸಿನಲ್ಲಿ ಕಾಣುತ್ತಿದ್ದರೆಂದರೆ ಅದು ಮೃತ್ಯುವಿನ ಸಂಕೇತವೆಂದು ಹೇಳಲಾಗುತ್ತದೆ.
- ವ್ಯಕ್ತಿಯು ಸ್ವತಃ ನಗುತ್ತಿರುವಂತೆ, ನೃತ್ಯ ಮಾಡುತ್ತಿರುವಂತೆ ಕನಸು ಕಂಡರೆ ಅದು ಮೃತ್ಯುವಿನ ಸೂಚನೆಯಾಗಿರುತ್ತದೆ.
ಇದನ್ನು ಓದಿ: ಮಿಥುನ ರಾಶಿಗೆ ಸೂರ್ಯನ ಪ್ರವೇಶ, ಈ ರಾಶಿಗೆ ಉದ್ಯೋಗ ಬಡ್ತಿ ಗ್ಯಾರಂಟಿ!
- ಕನಸಿನಲ್ಲಿ ಕಾಗೆಯನ್ನು ಕಂಡರೆ ಆ ವ್ಯಕ್ತಿ ಯಾರದ್ದಾದರೂ ಮೃತ್ಯುವಿನ ಸುದ್ದಿಯನ್ನು ಕೇಳುವ ಸಂಕೇತವನ್ನು ಸೂಚಿಸುತ್ತದೆ.
- ಕನಸಿನಲ್ಲಿ ಮಹಿಳೆಯು ಕೆಂಪು ಬಣ್ಣದ ಸೀರೆಯುಟ್ಟು ಅಪ್ಪಿಕೊಳ್ಳುತ್ತಿರುವಂತೆ ಅಥವಾ ಬಾಡಿದ ಹೂವಿನ ಮಾಲೆಯನ್ನು ಹಾಕುತ್ತಿರುವಂತೆ ಕಂಡರೆ ಅದು ಮೃತ್ಯುವಿನ ಸಂಕೇತವಾಗಿರುತ್ತದೆ.
- ಉದ್ದದ ಉಗುರು, ಹಳದಿ ಕಣ್ಣುಗಳನ್ನು ಹೊಂದಿರುವ ಸ್ತ್ರೀ ನಿರ್ವಸ್ತ್ರಳಾಗಿ ಅಪ್ಪಿಕೊಳ್ಳುತ್ತಿರುವಂತೆ ಕನಸು ಕಂಡರೆ ಅದು ಮೃತ್ಯುವಿನ ಸಂಕೇತವೆಂದು ಹೇಳಲಾಗುತ್ತದೆ.
- ವ್ಯಕ್ತಿಯು ಸ್ಮಶಾನದಲ್ಲಿ ಅಥವಾ ಪರ್ವತದ ತುದಿಯಲ್ಲಿ ಕುಳಿತು ಮದ್ಯಪಾನ ಮಾಡುತ್ತಿರುವಂತೆ ಕನಸು ಕಂಡರೆ ಅದು ಸಾವಿನ ಸಂಕೇತವೆಂದು ಹೇಳಲಾಗುತ್ತದೆ.
- ಮಹಿಳೆಗೆ ಕನಸಿನಲ್ಲಿ ಸ್ವತಃ ತನ್ನ ಕೂದಲು ಬೆಳ್ಳಗಾದಂತೆ ಕಂಡರೆ ಇದರಿಂದ ಪತಿಯಿಂದ ಬೇರೆಯಾಗಬಹುದು ಅಥವಾ ಪತಿಯ ಮೃತ್ಯುವಾಗಬಹುದೆಂಬ ಸಂಕೇತವನ್ನು ಸೂಚಿಸುತ್ತದೆ.
- ಕನಸಿನಲ್ಲಿ ಕಪ್ಪು ಬಟ್ಟೆಯನ್ನು ಹಾಕಿಕೊಂಡು, ಕಪ್ಪು ಕುದುರೆಯ ಮೇಲೆ ಸವಾರಿ ಮಾಡುತ್ತಿರುವಂತೆ ಕನಸು ಕಂಡರೆ ಅದು ಮೃತ್ಯುವಿನ ಸಂಕೇತವಾಗಿರುತ್ತದೆ.
- ಮರದಿಂದ ಬೀಳುತ್ತಿರುವಂತೆ ಕನಸು ಕಂಡರೆ ಅದು ಸಾವಿನ ಸೂಚನೆ ಎಂದು ಹೇಳಲಾಗುತ್ತದೆ.
ಇದನ್ನು ಓದಿ: ಈ ನಕ್ಷತ್ರದವರು ಆಗುತ್ತಾರೆ ಸಂಪತ್ತಿಗೆ ಒಡೆಯರು, ನಿಮ್ಮ ನಕ್ಷತ್ರ ಯಾವುದು..?
- ಕನಸಿನಲ್ಲಿ ಶರೀರದ ಯಾವುದಾದರೂ ಅಂಗ ಕತ್ತರಿಸುತ್ತಿರುವಂತೆ ಕಂಡರೆ ಅದು ಹತ್ತಿರದವರ ಮೃತ್ಯುವಿನ ಸಂಕೇತವಾಗಿರುತ್ತದೆ.
ಈ ರೀತಿಯ ಕನಸುಗಳು ಶಾಸ್ತ್ರದಲ್ಲಿ ತಿಳಿಸಿರುವಂತೆಯೇ ಬಿದ್ದರೆ ಮಾತ್ರ ಅದು ಮೃತ್ಯುವಿನ ಸಂಕೇತವೆಂದು ಹೇಳಬಹುದಾಗಿದ್ದು, ಅಷ್ಟೇ ಅಲ್ಲದೆ ಕನಸು ಬೀಳುವ ಸಮಯ ಮತ್ತು ಘಳಿಗೆ ಸಹ ಈ ವಿಷಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇವು ಕೇವಲ ಸಂಕೇತವಷ್ಟೇ ಆಗಿದೆ. ಎಲ್ಲವೂ ಎಲ್ಲ ಸಮಯದಲ್ಲಿ ನಿಜವಾಗುತ್ತದೆಂದು ಹೇಳಲಾಗುವುದಿಲ್ಲ. ಆ ಘಳಿಗೆ ಕಳೆದರೆ ಮೃತ್ಯು ಗಂಡಾಂತರ ತಪ್ಪುವ ಸಾಧ್ಯತೆ ಸಹ ಇರುತ್ತದೆ.