ಶುದ್ಧ ಪ್ರೀತಿ, ಪ್ರಬುದ್ಧತೆ, ತಾಳ್ಮೆ, ಅರ್ಥ ಮಾಡಿಕೊಳ್ಳುವ ಗುಣ, ಹೊಂದಿಕೊಳ್ಳುವ ಗಣಗಳೇ ಅಪರೂಪವೆನಿಸಿರುವ ಈ ದಿನಗಳಲ್ಲಿ ಈ ನಾಲ್ಕು ರಾಶಿಯವರು ಮಾತ್ರ ಹುಟ್ಟಾ ಈ ಸ್ವಭಾವವನ್ನು ಹೊಂದಿ ಆರೋಗ್ಯಕರ ಸಂಬಂಧಕ್ಕೆ ಬುನಾದಿ ಹಾಕುತ್ತಾರೆ.
ಯಾವ ಸಂಬಂಧದಲ್ಲಿ ಇಬ್ಬರೂ ಪರಸ್ಪರ ಗೌರವ, ಪ್ರೀತಿ, ಕಾಳಜಿ ವಹಿಸುತ್ತಾರೋ- ಅದೇ ಆರೋಗ್ಯಕರ ಸಂಬಂಧವಾಗಿರುತ್ತದೆ. ಸ್ವಾರ್ಥದಿಂದ ತುಂಬಿರುವ ಈಗಿನ ಜಗತ್ತಿನಲ್ಲಿ ಇಂಥ ಆರೋಗ್ಯಕಾರಿ ಸಂಬಂಧಗಳೇ ಅಪರೂಪ ಎನ್ನುವಂತಾಗಿದೆ. ಎಲ್ಲರೂ ಸಂಬಂಧ ಬೆಳೆಸುವಾಗ ಅದರಿಂದ ತಮಗೇನು ಲಾಭ ಎಂದು ಯೋಚಿಸುತ್ತಾರೆಯೇ ಹೊರತು, ತಮ್ಮಿಂದ ಏನು ಕೊಡಬಹುದು, ಸಂತೋಷವಾಗಿರಲು ಏನು ಬೇಕು ಎಂಬುದನ್ನು ಯೋಚಿಸಲಾರರು. ಆಸ್ತಿ, ಅಂತಸ್ತು, ಮನೆತನ, ಜಾತಿ, ವಿದ್ಯೆ ಎಲ್ಲವನ್ನೂ ವಿವಾಹಕ್ಕೆ ವಧು- ವರರನ್ನು ಹುಡುಕುವಾಗ ನೋಡಲಾಗುತ್ತದೆ. ಆದರೆ, ಗುಣವನ್ನು ನೋಡುವುದು ಹೇಗೆ?
ಶುದ್ಧ ಪ್ರೀತಿಯಷ್ಟೇ ಆರೋಗ್ಯಕರ ಸಂಬಂಧವೊಂದಕ್ಕೆ ಬೇಕಾಗಿರುವುದು. ನಿಸ್ವಾರ್ಥ ಪ್ರೀತಿ, ಹೊಂದಿಕೊಂಡು ಹೋಗುವ ಗುಣ, ತಪ್ಪನ್ನು ಕ್ಷಮಿಸುವ ದೊಡ್ಡತನ, ಸಣ್ಣ ವಿಷಯಗಳನ್ನು ದೊಡ್ಡದು ಮಾಡದ ಪ್ರಬುದ್ಧತೆ, ತನ್ನ ಮನೆಯವರಂತೆಯೇ ಸಂಗಾತಿಯ ಕುಟುಂಬವೂ ಎಂಬ ಭಾವನೆ.. ಇವಿಷ್ಟಿದ್ದರೆ ಅಂಥವರು ಅತ್ಯಂತ ಸಂತೋಷದಾಯಕ ಜೀವನ ನಡೆಸಬಲ್ಲರು. ಈ ರೀತಿಯ ಸ್ವಭಾವ ಇರುವವರನ್ನು ರಾಶಿಗನುಗುಣವಾಗಿ ಗುರುತಿಸಬಹುದು. ಈ ಕೆಳಗಿನ ರಾಶಿಯವರು ಸಂಬಂಧವೊಂದನ್ನು ಸರಿಯಾದ ಪಥದಲ್ಲಿ ತೆಗೆದುಕೊಂಡು ಹೋಗುತ್ತಾರೆ.
ಮಿಥುನ ರಾಶಿ(gemini)
ಅವರು ತುಂಬಾ ಸಾಮಾಜಿಕ ಜನ. ಜನರೊಂದಿಗೆ ಸುಲಭವಾಗಿ ಬೆರೆಯಬಲ್ಲರು. ಅತ್ಯುತ್ತಮ ಸಂವಹನ ಕಲೆಯೂ ಇವರಲ್ಲಿರುವುದರಿಂದ ಕಲ್ಲನ್ನೂ ಮಾತಾಡಿಸಬಲ್ಲರು. ಮುಕ್ತ ಮಾತುಕತೆಯೇ ಸಂಬಂಧವನ್ನು ಬೆಳೆಸುತ್ತದೆ ಎಂದು ನಂಬಿದವರಿವರು. ಇವರು ಎಲ್ಲ ಸಂಬಂಧಗಳನ್ನೂ ಗೌರವಿಸುತ್ತಾರೆ. ಸಂಗಾತಿಯಾದವರು ಸದಾ ಆರಾಮಾಗಿದ್ದಾರೆಯೇ ಇಲ್ಲವೇ ವಿಚಾರಿಸಿಕೊಳ್ಳುತ್ತಾರೆ. ತಮ್ಮ ಜೊತೆ ಜೀವನ ಕಳೆಯಲು ಬಂದವರನ್ನು ಸುಖವಾಗಿ, ಸಂತೋಷದಲ್ಲಿರಿಸಬೇಕೆಂಬ ಬಯಕೆ ಇವರದು. ಮಿಥುನ ರಾಶಿಯವರು ಯಾರನ್ನೂ ನೋಯಿಸಲು, ಯಾರಿಗಾದರೂ ದ್ರೋಹ ಮಾಡಲು ಬಯಸುವವರಲ್ಲ. ಸಂಗಾತಿಯ ಮುಖದಲ್ಲಿ ನಗು ತರಲು ತಮ್ಮಿಂದ ಸಾಧ್ಯವಾದುದನ್ನು ಮಾಡುತ್ತಾರೆ.
ಕಟಕ(Cancer)
ಪ್ರೀತಿ ಮತ್ತು ಭಾವನೆಗಳ ಬಗ್ಗೆ ಮಾತ್ರ ಕಾಳಜಿ ವಹಿಸುವ ಅತಿ ಸೂಕ್ಷ್ಮ ಜನರು ಇವರು. ಸಂಬಂಧದಲ್ಲಿರುವಾಗ ಇವರಲ್ಲಿ ಭಾವನೆಗಳು ಹೆಚ್ಚುತ್ತವೆ. ತಮ್ಮದಕ್ಕಿಂತ ಮೊದಲು ತಮ್ಮ ಸಂಗಾತಿಯ ಭಾವನೆಗಳಿಗೆ ಆದ್ಯತೆ ನೀಡುತ್ತಾರೆ. ಇದರಿಂದ ಇವರ ಸಂಗಾತಿ ಹೆಚ್ಚು ಆರಾಮದಾಯಕವಾಗಿದ್ದು ಇವರನ್ನು ಕಳೆದುಕೊಳ್ಳಬಾರದೆಂಬ ಹಪಹಪಿಗೆ ಬೀಳುತ್ತಾರೆ. ಸಂಗಾತಿಯನ್ನು ಪೂರ್ತಿ ಪ್ರೀತಿಯ ಮಳೆಯಲ್ಲಿ ಮಿಂದೇಳಿಸುತ್ತಾರೆ. ಅವರ ಭಾವನೆಗಳಿಗ ಬೆಲೆ ನೀಡುತ್ತಾರೆ.
Vastu Tips: ಮನೆಯನ್ನು ಸದಾ ಸಂತೋಷವಾಗಿರಿಸುವುದು ಹೇಗೆ?
ತುಲಾ(Libra)
ಇವರು ಅತ್ಯಂತ ಸಮತೋಲಿತ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇದರಿಂದ ಕಷ್ಟಕರ ಸಂದರ್ಭಗಳಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಹೇಳಬೇಕಾದ ವಿಷಯಗಳನ್ನು ಸರಿಯಾದ ಸಮಯದಲ್ಲಿ ಹೇಳುತ್ತಾರೆ. ಇವರು ತುಂಬಾ ಶಾಂತ ಮತ್ತು ಪ್ರಬುದ್ಧ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇದು ಬಹಳ ಅಪರೂಪದ ಗುಣವಾಗಿದೆ. ಈ ತಾಳ್ಮೆ, ಶಾಂತತೆ, ಸಮತೋಲಿತತೆಯೇ ಇವರು ಸಂಬಂಧವನ್ನು ಚೆನ್ನಾಗಿ ನಿಭಾಯಿಸಿಕೊಂಡು ಆರೋಗ್ಯಕರ ಪಥದಲ್ಲಿ ನಡೆಸಲು ಸಾಧ್ಯವಾಗುವಂತೆ ಮಾಡುತ್ತವೆ.
ಈ ರಾಶಿಯವರ ಬಗ್ಗೆ ತಪ್ಪು ತಿಳಿಯೋದೇ ಹೆಚ್ಚು!
ಧನು(Sagittarius)
ಇವರು ಯಾವಾಗಲೂ ತಮ್ಮ ಜೀವನವನ್ನು ಜೊತೆಯಾಗಿ ಕಳೆಯಬಹುದಾದ, ತಮಗೆ ಸರಿಯಾದವರ ಅನ್ವೇಷಣೆಯಲ್ಲಿರುತ್ತಾರೆ. ಧನು ರಾಶಿಯವರು ಸಾಹಸ, ಪ್ರಯಾಣ ಮತ್ತು ಸ್ವಾತಂತ್ರ್ಯವನ್ನು ಪ್ರೀತಿಸುತ್ತಾರೆ. ಅವರ ಜೀವನದಲ್ಲಿ ಏನೇ ಏರುಪೇರುಗಳು ಎದುರಾದರೂ ನಿರಂತರವಾಗಿ ಸಂಬಂಧವನ್ನು ಕಾಯ್ದುಕೊಳ್ಳಲು ಬಯಸುತ್ತಾರೆ. ತಮ್ಮ ಸಂಗಾತಿಗೆ ಸಾಧ್ಯವಾದ ಎಲ್ಲವನ್ನೂ ನೀಡುತ್ತಾರೆ ಮತ್ತು ಅರ್ಥಪೂರ್ಣ ಮತ್ತು ಸಂತೋಷದ ಸಂಬಂಧವನ್ನು ಹೊಂದಲು ಪ್ರತಿಜ್ಞೆ ಮಾಡುತ್ತಾರೆ. ಇವರು ಸಂಗಾತಿಗೆ ಬೇಕಾದ ವೈಯಕ್ತಿಕ ಅವಕಾಶ, ಸ್ವಾತಂತ್ರ್ಯ ಎಲ್ಲವನ್ನೂ ನೀಡುತ್ತಾರೆ. ಮತ್ತು ಅವರಿಂದ ಅದನ್ನೇ ಬಯಸುತ್ತಾರೆ. ಇವರ ಸ್ವತಂತ್ರ ವ್ಯಕ್ತಿತ್ವವೇ ಇವರನ್ನು ಉತ್ತಮ ಸಂಗಾತಿಯಾಗಿಸುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.