ಮಿತಿ ಮೀರೋಷ್ಟು Romantic ಈ ರಾಶಿಯ ಹುಡುಗೀರು, ಕಟ್ಟಿಕೊಳ್ಳೋನೇ ಪುಣ್ಯವಂತ!

By Suvarna News  |  First Published Mar 28, 2022, 1:32 PM IST

ಮನಷ್ಯನ ಪ್ರತಿಯೊಂದು ವರ್ತನೆ ಆತನ ರಾಶಿಯನ್ನೂ ಅವಲಂಭಿಸಿರುತ್ತದೆ. ಕೆಲವರು ರೋಮ್ಯಾಂಟಿಕ್ ಹುಡುಗಿ ಬೇಕೆಂದು ಬಯಸ್ತಾರೆ. ಆದ್ರೆ ಎಲ್ಲರಿಗೂ ಆ ಅದೃಷ್ಟವಿರುವುದಿಲ್ಲ. ಕೆಲವರ ಬಾಳಲ್ಲಿ ಅತಿಹೆಚ್ಚು ರೋಮ್ಯಾನ್ಸ್ ಇರುತ್ತದೆ. ಇದಕ್ಕೆ ಹುಡುಗಿಯ ರಾಶಿ ಕೂಡ ಕಾರಣ. 
 


ಕೆಲವರು ರೋಮ್ಯಾನ್ಸ್ (Romance) ವಿಷಯದಲ್ಲಿ ಮೌನ (Silence) ವಾಗಿರಲು ಬಯಸುತ್ತಾರೆ. ಆದರೆ ಕೆಲವರು ಪ್ರಣಯದಲ್ಲಿ ಉತ್ಸುಕರಾಗುತ್ತಾರೆ. ಸಂಗಾತಿ (Partner) ಯೊಂದಿಗೆ ರೊಮ್ಯಾನ್ಸ್ ಮಾಡುವುದು ಅಥವಾ ರೊಮ್ಯಾಂಟಿಕ್ ಆಗಿರುವುದರಲ್ಲಿ ಯಾವುದೇ ತಪ್ಪಿಲ್ಲ. ಪ್ರಣಯವು ಪ್ರೀತಿಯನ್ನು ಹೆಚ್ಚಿಸುತ್ತದೆ ಮತ್ತು ಇಬ್ಬರನ್ನು ಹತ್ತಿರಕ್ಕೆ ತರುತ್ತದೆ. ಪ್ರತಿಯೊಬ್ಬರೂ ಪ್ರಣಯದ ಬಗ್ಗೆ ವಿಭಿನ್ನ ವ್ಯಾಖ್ಯಾನವನ್ನು ಹೊಂದಿರುತ್ತಾರೆ. ಇದರಲ್ಲಿ ಅಚ್ಚರಿಯೇನಿಲ್ಲ. ಕೆಲವರು ರೋಮ್ಯಾಂಟಿಕ್ ಡಿನ್ನರ್ ಬಯಸಿದ್ರೆ ಮತ್ತೆ ಕೆಲವರು ತಮ್ಮ ಕೋಣೆಯನ್ನು ಸುಂದರವಾಗಿ ಅಲಂಕರಿಸಲು ಬಯಸ್ತಾರೆ. ಮತ್ತೆ ಕೆಲವರು ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು ಅಥವಾ ಸಂಗಾತಿಗೆ ವಿಶೇಷ ಉಡುಗೊರೆ ನೀಡುವುದನ್ನು ಇಷ್ಟಪಡ್ತಾರೆ.  ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ರೋಮ್ಯಾನ್ಸ್ ಬಯಸ್ತಾರೆ.

ಪ್ರೀತಿ, ಪ್ರೀತಿಸುವ ವ್ಯಕ್ತಿ ಬಗ್ಗೆ ವಿಜ್ಞಾನಿಗಳು ಹಾಗೂ ಜ್ಯೋತಿಷ್ಯಿಗಳು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ.  ರಾಶಿ ಹಾಗೂ ಮನುಷ್ಯನ ಗುಣಕ್ಕೆ ಸಂಬಂಧವಿದೆ. ಮನುಷ್ಯನ ನಡವಳಿಕೆ ಆತನ ಜಾತಕ, ರಾಶಿ, ರಾಶಿಯ ಮೇಲೆ ಗ್ರಹಗಳ ಪ್ರಭಾವವನ್ನು ಅವಲಂಭಿಸಿರುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಕೆಲವರು ಮಿತಿಗಿಂತ ಹೆಚ್ಚು ರೋಮ್ಯಾಂಟಿಕ್ ಆಗಿರ್ತಾರೆ. ಅತಿ ಹೆಚ್ಚು ರೋಮ್ಯಾನ್ಸ್ ಮಾಡುವ ಹುಡುಗಿರುವ ಸಿಕ್ಕಿದ್ರೆ ಹುಡುಗರಿಗೆ ಲಾಟರಿ ಹೊಡೆದಂತೆ. ಜ್ಯೋತಿಷ್ಯದ ಪ್ರಕಾರ ಯಾವ ರಾಶಿಯ ಹುಡುಗಿಯರು ಹೆಚ್ಚು ರೋಮ್ಯಾಂಟಿಕ್ ಎಂದು ಇಂದು ತಿಳಿಯೋಣ.

Tap to resize

Latest Videos

ಮೇಷ ರಾಶಿ : ಜ್ಯೋತಿಷ್ಯದ ಪ್ರಕಾರ, ಮೇಷ ರಾಶಿಯ ಹುಡುಗಿಯರು ಈ ವಿಷ್ಯದಲ್ಲಿ ಮುಂದಿದ್ದಾರೆ. ಈ ರಾಶಿಯ ಹುಡುಗಿಯರು ರೋಮ್ಯಾಂಟಿಕ್ ವಿಷಯಗಳನ್ನು ಇಷ್ಟಪಡ್ತಾರೆ ಮತ್ತು ಅವರ ಅತ್ಯಂತ ರೋಮ್ಯಾಂಟಿಕ್ ಸಂಗಾತಿಯನ್ನು ಪ್ರೀತಿಸಲು ಬಯಸುತ್ತಾರೆ. ಇದಲ್ಲದೆ, ಅವರು ಪ್ರೀತಿ ಮತ್ತು ಪ್ರಣಯದಿಂದ ತುಂಬಿರುವ ತಮ್ಮದೇ ಆದ ಕಾಲ್ಪನಿಕ ಜಗತ್ತಿನಲ್ಲಿ ವಾಸಿಸಲು ಇಷ್ಟಪಡುತ್ತಾರೆ. ರೋಮ್ಯಾಂಟಿಕ್ ಜೀವನ ಅವರಿಗೆ ಬಲು ಪ್ರೀತಿಯಾಗಿರುತ್ತದೆ.

ಸಿಂಹ ರಾಶಿ : ಸಿಂಹ ರಾಶಿಯ ಹುಡುಗಿಯರು ತುಂಬಾ ಪ್ರೀತಿಯಿಂದ ಇರುತ್ತಾರೆ. ಅವರು ತಮ್ಮ ಜೀವನದಲ್ಲಿ ರೋಮ್ಯಾಂಟಿಕ್ ಜೊತೆ ಪ್ರೀತಿ ಬೆರೆಸಲು ಇಷ್ಟಪಡ್ತಾರೆ. ಆದ್ರೆ ಅವರಿಗೇ ಅನೇಕ ಬಾರಿ ತಾವೆಷ್ಟು ರೋಮ್ಯಾಂಟಿಕ್ ಎಂಬುದು ತಿಳಿದಿರುವುದಿಲ್ಲ. 

ತುಲಾ ರಾಶಿ : ತುಲಾ ರಾಶಿಯ ಹುಡುಗಿಯರು ತಮ್ಮ ಸಂಗಾತಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಎಂದಿಗೂ ಹಿಂಜರಿಯುವುದಿಲ್ಲ. ಅವರು ಗುಲಾಬಿ ಹೂವನ್ನು ತುಂಬಾ ಪ್ರೀತಿಸುತ್ತಾರೆ. ಅವರು ತಮ್ಮ ಸಂಗಾತಿಯೊಂದಿಗೆ ಇರಲಿ ಅಥವಾ ಇಲ್ಲದಿರಲಿ, ಅವರು ಯಾವಾಗಲೂ ರೊಮ್ಯಾಂಟಿಕ್ ಆಗಿರುತ್ತಾರೆ. ಸಂಗಾತಿ ಜೊತೆ ರೋಮ್ಯಾಂಟಿಕ್ ಆಗಿ ಸಮಯ ಕಳೆಯಲು ಸದಾ ಬಯಸ್ತಾರೆ.

ಈ ಐದು ರಾಶಿಗಿದೆ ಈ ವರ್ಷ ಕನಸಿನ ಮನೆ ಕೊಳ್ಳೋ ಯೋಗ

ಕರ್ಕ ರಾಶಿ : ಕರ್ಕ ರಾಶಿಯವರು ಎಲ್ಲಾ ರಾಶಿಯ ಹುಡುಗಿಯರಿಗಿಂತ ಹೆಚ್ಚು ಸೂಕ್ಷ್ಮವಾಗಿರ್ತಾರೆ. ಕರ್ಕ ರಾಶಿಯವರು ತನ್ನ ಸಂಗಾತಿ ಎಂದೂ  ರೋಮ್ಯಾಂಟಿಕ್ ಆಗಿರಬೇಕೆಂದು ಬಯಸುತ್ತಾಳೆ. ಒಂದು ವೇಳೆ ಅವರು ಬಯಸಿದ ಸಂಗಾತಿ ಸಿಕ್ಕರೆ ಅವರು ಮತ್ತಷ್ಟು ರೋಮ್ಯಾಂಟಿಕ್ ಆಗ್ತಾರೆ. ಸಂಗಾತಿ ಜೊತೆ ಸದಾ ರೋಮ್ಯಾಂಟಿಕ್ ಕ್ಷಣ ಕಳೆಯುತ್ತಾರೆ.

ವೃಷಭ ರಾಶಿ : ವೃಷಭ ರಾಶಿಯ ಹುಡುಗಿಯರು ತಮ್ಮ ಸಂಗಾತಿಯನ್ನು ಭಾವನಾತ್ಮಕವಾಗಿ ಸಂತೋಷವಾಗಿಡಲು ಮತ್ತು ಆರಾಮದಾಯಕವಾಗಿಡಲು ಬಯಸ್ತಾರೆ. ವೃಷಭ ರಾಶಿಯವರು ಇದನ್ನು ಬಿಟ್ಟು ಸಂಗಾತಿಯಿಂದ ಹೆಚ್ಚೇನೂ ಬಯಸುವುದಿಲ್ಲ. ಭಾವನಾತ್ಮಕ ವಿಷ್ಯಕ್ಕೆ ಅವರು ಹೆಚ್ಚು ಆದ್ಯತೆ ನೀಡ್ತಾರೆ. ಇದೇ ಕಾರಣಕ್ಕೆ ಇವರು ಬೇರೆಯವರನ್ನು ಆಕರ್ಷಿಸುತ್ತಾರೆ.

ನಿಮ್ಮ ಹೆಸರು A ಅಕ್ಷರದಿಂದ ಶುರುವಾಗುತ್ತಾ? ಅದು ನಿಮ್ಮ ಬಗ್ಗೆ ಏನು ಹೇಳ್ತಿದೆ ಗೊತ್ತಾ?

ಮಕರ ರಾಶಿ : ಮಕರ ರಾಶಿ ಹುಡುಗಿಯರು ಯಾವಾಗ್ಲೂ ಸಂತೋಷದಿಂದ ಕಾಲ ಕಳೆಯುತ್ತಾರೆ. ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ, ಅವಳು ತನ್ನ ಸಂಗಾತಿಯೊಂದಿಗೆ ಸಮಯ ಕಳೆಯಲು ಬಯಸ್ತಾಳೆ. ಸಣ್ಣ ಸಣ್ಣ ಕ್ಷಣಗಳನ್ನೂ ರೋಮ್ಯಾಂಟಿಕ್ ಗೊಳಿಸಲು ಇಚ್ಛಿಸುತ್ತಾಳೆ. 

click me!