ಭಯ – ಭಕ್ತಿಯಿಂದ ಒಳ್ಳೆಯದನ್ನು ಬಯಸಿ ಪೂಜೆ ಮಾಡ್ತಿರುತ್ತೇವೆ. ಆದ್ರೆ ಈ ಸಂದರ್ಭದಲ್ಲಿ ಕೈನಲ್ಲಿದ್ದ ಪೂಜೆ ವಸ್ತು ಕೆಳಗೆ ಬೀಳುತ್ತದೆ. ಯಾವುತ್ತೂ ಆಗದೆ ಇರೋದು ಇಂದೇಕೆ ಹೀಗೆ ಆಯ್ತು ಎನ್ನುವ ಚಿಂತೆ ನಮ್ಮನ್ನು ಕಾಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಸನಾತನ ಧರ್ಮ (Sanatan Dharma) ದಲ್ಲಿ ಪೂಜೆ (Worship)ಗೆ ಹೆಚ್ಚಿನ ಮಹತ್ವವಿದೆ. ಯಾವುದೇ ಶುಭ ಕಾರ್ಯವನ್ನು ಮಾಡುವ ಮೊದಲು ಮುಹೂರ್ತ (Muhurta) ವನ್ನು ನೋಡಲಾಗುತ್ತದೆ. ಶುಭ ಕಾರ್ಯದ ವೇಳೆ ಏನಾದ್ರೂ ಅನಾಹುತ ನಡೆದ್ರೆ ಪೂಜೆಯನ್ನು ನಿಲ್ಲಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಏನಾದರೂ ಅನಾಹುತ ಎದುರಾಗಬಹುದು ಎಂಬ ಭಯ ವ್ಯಕ್ತಪಡಿಸುತ್ತಾರೆ. ಅನೇಕ ಬಾರಿ ಅವಸರದಲ್ಲಿ ಕೈಯಿಂದ ವಸ್ತುಗಳು ಬೀಳುತ್ತವೆ. ಕೈ ಜಾರಿ ವಸ್ತುಗಳು ಕೆಳಗೆ ಬೀಳುವುದು ಸಾಮಾನ್ಯ ಸಂಗತಿ. ಆದ್ರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪೂಜೆಗೆ ಸಂಬಂಧಿಸಿದ ಕೆಲವು ವಸ್ತುಗಳು ಕೈಯಿಂದ ಬೀಳುವುದು ಅಶುಭ (inauspicious) ವೆಂದು ಪರಿಗಣಿಸಲಾಗಿದೆ. ಅನೇಕ ಬಾರಿ ದೇವಾನು ದೇವತೆಗಳು, ವಸ್ತುಗಳನ್ನು ಕೈನಿಂದ ಕೆಳಗೆ ಬೀಳಿಸುವ ಮೂಲಕ ಶುಭ ಹಾಗೂ ಅಶುಭ ಸಂಕೇತವನ್ನು ನೀಡ್ತಾರೆ ಎಂದು ನಂಬಲಾಗಿದೆ. ಇಂದು ನಾವು ದೇವರ ಪೂಜೆಗೆ ಸಂಬಂಧಿಸಿದ ಯಾವ ವಸ್ತು ಕೈನಿಂದ ಕೆಳಗೆ ಬಿದ್ರೆ ಅಶುಭ ಎಂಬುದನ್ನು ನಿಮಗೆ ಹೇಳ್ತೇವೆ.
ಈ ವಸ್ತುಗಳು ಕೈಯಿಂದ ಬೀಳುವುದು ಅಶುಭ :
ದೀಪ : ಪೂಜೆ ಮಾಡುವಾಗ ದೀಪವು ಇದ್ದಕ್ಕಿದ್ದಂತೆ ಬಿದ್ದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೈಯಿಂದ ದೀಪ ಬಿದ್ದರೆ ಯಾವುದೋ ಒಂದು ಅಹಿತಕರ ಘಟನೆ ನಡೆಯಲಿದೆ ಎಂಬ ಸೂಚನೆಯಾಗಿದೆ. ಕೈನಿಂದ ದೀಪ ಕೆಳಗೆ ಬಿದ್ದರೆ, ದೇವರನ್ನು ಪ್ರಾರ್ಥಿಸಬೇಕು. ತಪ್ಪಿಗೆ ಕ್ಷಮೆಯಾಚಿಸಬೇಕು. ಮತ್ತೆ ದೀಪ ಹಚ್ಚಬೇಕು.
ಪ್ರಸಾದ : ದೀಪ ಮಾತ್ರವಲ್ಲ ಕೆಲವೊಮ್ಮೆ ಕೈನಲ್ಲಿ ಹಿಡಿದುಕೊಂಡಿರುವ ಪ್ರಸಾದ ಕೆಳಗೆ ಬೀಳುತ್ತದೆ. ಇದನ್ನು ಕೆಟ್ಟ ಶಕುನ ಎಂದೂ ಪರಿಗಣಿಸಲಾಗುತ್ತದೆ. ವ್ಯಕ್ತಿಯ ಕೆಲವು ಆಸೆಗಳು ಈಡೇರುವುದಿಲ್ಲ ಎಂಬುದು ಇದರ ಅರ್ಥವಾಗಿದೆ. ಕೆಲಸದಲ್ಲಿ ಸ್ವಲ್ಪ ಅಡೆತಡೆಗಳು ಉಂಟಾಗುವ ಸಾಧ್ಯತೆಯಿದೆ ಎಂಬುದನ್ನೂ ಇದು ಸೂಚಿಸುತ್ತದೆ. ಪ್ರಸಾದ ಕೈ ತಪ್ಪಿ ಕೆಳಗೆ ಬಿದ್ರೆ ಪ್ರಸಾದವನ್ನು ಎತ್ತಿಕೊಂಡು ಹಣೆಯ ಮೇಲೆ ಇಡಬೇಕು. ಇದರ ನಂತರ ಅದನ್ನು ತಿನ್ನಬೇಕು ಅಥವಾ ಪಾತ್ರೆಗೆ ಹಾಕಬೇಕು. ಪ್ರಸಾದಕ್ಕೆ ಎಂದಿಗೂ ಅಗೌರವ ತೋರಬಾರದು.
LEMON REMEDIES 2022: ವ್ಯಾಪಾರ ಗರಿಗೆದರುತ್ತಿಲ್ಲವೇ? ನಿಂಬೆ ಹಣ್ಣಿನ ಪರಿಹಾರ ಮಾಡಿ..
ಸಿಂಧೂರ : ಮಹಿಳೆಯ ಹದಿನಾರು ಅಲಂಕಾರಗಳಲ್ಲಿ ಒಂದು ಸಿಂಧೂರ. ಇದು ಕೆಳಗೆ ಬೀಳುವುದು ಅಶುಭ ಸಂಕೇತವಾಗಿದೆ. ಕುಂಕುಮವನ್ನು ದೇವರಿಗೆ ಅರ್ಪಿಸಲಾಗುತ್ತದೆ. ದೇವರ ಪೂಜೆಯಲ್ಲಿ ಸಿಂಧೂರವನ್ನು ಬಳಕೆ ಮಾಡಲಾಗುತ್ತದೆ. ದೇವತೆಗೆ ಸಿಂಧೂರ ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಪೂಜೆ ಮಾಡುವಾಗ ಸಿಂಧೂರದ ಪೆಟ್ಟಿಗೆ ಕೈಯಿಂದ ಬಿದ್ದರೆ, ಮುಂದಿನ ದಿನಗಳಲ್ಲಿ ಕುಟುಂಬ ಅಥವಾ ಪತಿಗೆ ಬಿಕ್ಕಟ್ಟು ಉಂಟಾಗುತ್ತದೆ ಎಂದು ಅರ್ಥಮಾಡಿಕೊಳ್ಳಿ. ಆದ್ದರಿಂದ ಅದು ಬಿದ್ದಾಗ ಅದನ್ನು ಎಂದಿಗೂ ಕಾಲಿನಿಂದ ಅಥವಾ ಪೊರಕೆಯಿಂದ ಮೇಲಕ್ಕೆತ್ತಬೇಡಿ. ಅದನ್ನು ಸ್ವಚ್ಛವಾದ ಬಟ್ಟೆಯಿಂದ ಎತ್ತಿ ಪೆಟ್ಟಿಗೆಯಲ್ಲಿ ಇರಿಸಿ. ಸಿಂಧೂರವು ಕೊಳಕಾಗಿದ್ದರೆ ಅದನ್ನು ಶುದ್ಧ ನೀರಿಗೆ ಹಾಕಿ.
ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್ ನಿಭಾಯಿಸೋದ್ರಲ್ಲಿ ಈ ರಾಶಿಗಳು ನಿಸ್ಸೀಮರು!
ವಿಗ್ರಹ ಅಥವಾ ಚಿತ್ರ : ದೇವರ ವಿಗ್ರಹ ಅಥವಾ ದೇವರ ಚಿತ್ರ ಬೀಳುವುದು ಕೂಡ ಮಂಗಳಕರ ಸೂಚನೆಯಲ್ಲ. ಅನೇಕ ಬಾರಿ ಇದ್ದಕ್ಕಿದ್ದಂತೆ ವಿಗ್ರಹ ಅಥವಾ ಚಿತ್ರ ಮುರಿದು ಹೋಗುತ್ತದೆ. ಕೆಳಗೆ ಬೀಳುತ್ತದೆ. ಇದನ್ನು ಅಶುಭ ಎಂದೂ ಪರಿಗಣಿಸಲಾಗುತ್ತದೆ. ವಿಗ್ರಹ ಮುರಿದ್ರೆ ಅಥವಾ ಕೆಳಗೆ ಬಿದ್ರೆ ಮನೆಯ ಹಿರಿಯ ಸದಸ್ಯರಿಗೆ ಬಿಕ್ಕಟ್ಟು ಉಂಟಾಗುತ್ತದೆ ಅಥವಾ ಕುಟುಂಬದ ಸದಸ್ಯರ ಜೀವನದಲ್ಲಿ ಸ್ವಲ್ಪ ಏರುಪೇರು ಉಂಟಾಗುತ್ತದೆ ಎಂದು ನಂಬಲಾಗಿದೆ. ಆದ್ದರಿಂದ, ವಿಗ್ರಹ ಮುರಿದು ಹೋದರೆ ದೇವರಲ್ಲಿ ಕ್ಷಮೆಯಾಚಿಸಬೇಕು. ನಂತರ ಈ ಮುರಿದ ಚಿತ್ರ ಅಥವಾ ವಿಗ್ರಹವನ್ನು ನೀರಿನಲ್ಲಿ ಹರಿಬಿಡಬೇಕು. ಇಲ್ಲವೆ ಅದನ್ನು ನೆಲದಲ್ಲಿ ಹೂಳಬೇಕು. ಯಾವುದೇ ಕಾರಣಕ್ಕೂ ಅದನ್ನು ಕೊಳಕಾದ ಜಾಗದಲ್ಲಿ ಎಸೆಯಬಾರದು.