ಊಟ ಮಾಡೋವಾಗ ಇವನ್ನೆಲ್ಲಾ ಯೋಚಿಸ್ಬೇಡಿ, ಒಳ್ಳೇದಲ್ಲ

By Roopa Hegde  |  First Published Jun 18, 2022, 3:33 PM IST

ನಾವು ಸೇವಿಸುವ ಆಹಾರ ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಸಾತ್ವಿಕ ಆಹಾರ ಸೇವನೆ ಜೊತೆಗೆ ಸಕಾರಾತ್ಮಕ ಆಲೋಚನೆ ಕೂಡ ಮುಖ್ಯ. ಆಹಾರ ತಿನ್ನುವಾಗ ನಾವೆಲ್ಲ ಮಾಡುವ ತಪ್ಪುಗಳೇನು ಗೊತ್ತಾ?
 


ಆಹಾರ (Food) ಕೇವಲ ನಮ್ಮ ಹೊಟ್ಟೆ (Stomach) ತುಂಬಿಸುವ ಕೆಲಸ ಮಾಡುವುದಿಲ್ಲ. ಆಹಾರ ಸೇವನೆ ನಮ್ಮ ದೇಹದ ಆರೋಗ್ಯದ ಜೊತೆ ಮಾನಸಿಕ ಆರೋಗ್ಯ (Mental Health)ದ ಮೇಲೂ ಪರಿಣಾಮ ಬೀರುತ್ತದೆ. ಸನಾತನ ಧರ್ಮದಲ್ಲಿ ಪ್ರತಿಯೊಂದು ಕೆಲಸದ ಬಗ್ಗೆಯೂ ಹೇಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಹಸಿವಾಗಿದೆ ಎನ್ನುವ ಕಾರಣಕ್ಕೆ ಆಹಾರ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹಾಗೆಯೇ ಕೆಲಸದ ಒತ್ತಡದಲ್ಲಿ ಜನರು ತರಾತುರಿಯಲ್ಲಿ ಆಹಾರ ಸೇವನೆ ಮಾಡ್ತಾರೆ. ಬಹುತೇಕರು ಟಿವಿ, ಮೊಬೈಲ್ ನೋಡ್ತಾ ಆಹಾರ ತಿನ್ನುತ್ತಾರೆ. ಇದೆಲ್ಲವೂ ತಪ್ಪು. ಧರ್ಮದಲ್ಲಿ ಆಹಾರ ಸೇವನೆ ಹೇಗೆ ಮಾಡ್ಬೇಕೆಂದು ಹೇಳಲಾಗಿದೆ. ಹಾಗೆಯೇ ಆಹಾರ ನಮ್ಮ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನೂ ಹೇಳಲಾಗಿದೆ. ಆಹಾರ ಸೇವನೆ ವಿಧಾನ ಹಾಗೂ ಪದ್ಧತಿಯನ್ನು ಪ್ರತಿಯೊಬ್ಬ ತಿಳಿದ್ರೆ ಮಾತ್ರ ಸಂತೋಷದ ಜೀವನ ನಡೆಸಲು ಆತನಿಗೆ ಸಾಧ್ಯವಾಗುತ್ತೆ. ವ್ಯಕ್ತಿ ಆಹಾರ ಸೇವನೆ ಹೇಗಿರಬೇಕೆಂದು ನಾವು ಹೇಳ್ತೇವೆ.

ಆಹಾರ (Food) ಸೇವನೆ ವೇಳೆ ಮನಸ್ಸು : ಆಹಾರ ಸೇವಿಸುವಾಗ ಮನಸ್ಸು ಶುದ್ಧವಾಗಿರಬೇಕು. ಯಾವುದೇ ಕಾರಣಕ್ಕೂ ಈ ಸಂದರ್ಭದಲ್ಲಿ ನಕಾರಾತ್ಮಕ ಆಲೋಚನೆಗಳು ಬರಬಾರದು. ಇದ್ರಲ್ಲಿ ಎಣ್ಣೆ ಹೆಚ್ಚಿದೆ, ಇದು ಅತಿ ಖಾರವಾಗಿದೆ, ಇದು ಹೆಚ್ಚು ಸಿಹಿಯಾಗಿದೆ..ಹೀಗೆ ಆಹಾರ ನೋಡ್ತಿದ್ದಂತೆ ಅದ್ರ ಬಗ್ಗೆ ಜನರು ಕಮೆಂಟ್ ಮಾಡಲು ಶುರು ಮಾಡ್ತಾರೆ. ಇಷ್ಟವಿಲ್ಲದೆ ಆಹಾರ ಸೇವನೆ ಮಾಡ್ತಾರೆ. ಇದೆಲ್ಲವೂ ನಕಾರಾತ್ಮಕ ಭಾವನೆಯೇ ಆಗಿದೆ. ಇದು ಅನ್ನವನ್ನು ಅವಮಾನಿಸಿದಂತೆ. ದುಃಖದ ಮನಸ್ಸು ಮತ್ತು ಅತೃಪ್ತ ಮನಸ್ಸಿನಿಂದ ಆಹಾರ ತಿನ್ನುವುದು ತಪ್ಪು. ನೀವು ಹೀಗೆ ಮಾಡಿದ್ರೆ  ಆಹಾರವನ್ನು ಆನಂದಿಸಲು ಸಾಧ್ಯವಾಗುವುದಿಲ್ಲ. ಇದು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. 

Tap to resize

Latest Videos

ಹರಿದ ಲಕ್ಕಿ ಪರ್ಸನ್ನು ಈ ರೀತಿ ಬಳಸಿದ್ರೆ, ಹಣ ಎಂದಿಗೂ ಖಾಲಿಯಾಗೋದಿಲ್ಲ!!

ಸಾತ್ವಿಕ ಆಹಾರ : ಮೊದಲೇ ಹೇಳಿದಂತೆ ನೀವು ಯಾವ ಆಹಾರ ಸೇವನೆ ಮಾಡ್ತೀರೋ ನಿಮ್ಮ ಮನಸ್ಸು ಕೂಡ ಅದೇ ರೀತಿ ಬದಲಾಗುತ್ತದೆ. ಅದೇ ಕಾರಣಕ್ಕೆ ಸಾತ್ವಿಕ ಆಹಾರ ಸೇವನೆ ಮಾಡಲು ಸಲಹೆ ನೀಡಲಾಗುತ್ತದೆ. ಸಾತ್ವಿಕ ಆಹಾರ ಸೇವನೆಯಿಂದ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆ ಮೂಡುತ್ತದೆ. ಮನಸ್ಸು ಶಾಂತವಾಗುತ್ತದೆ. ಇದ್ರಿಂದ ವ್ಯಕ್ತಿ ನಿರೋಗಿಯಾಗ್ತಾನೆ.  

ಈ ದಿಕ್ಕಿನಲ್ಲಿ ಕುಳಿತು ಆಹಾರ ಸೇವಿಸಬೇಡಿ : ದಕ್ಷಿಣಾಭಿಮುಖವಾಗಿ ಆಹಾರ ಸೇವಿಸಬಾರದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಯಾವಾಗಲೂ ಉತ್ತರ ಅಥವಾ ಪೂರ್ವ ದಿಕ್ಕಿಗೆ ಮುಖಮಾಡಿ ಆಹಾರವನ್ನು ಸೇವಿಸಿ. ಊಟವನ್ನು ಪ್ರಾರಂಭಿಸುವ ಮೊದಲು ನಿಮ್ಮ ಕೈ ಮತ್ತು ಪಾದಗಳನ್ನು ಚೆನ್ನಾಗಿ ತೊಳೆಯಿರಿ. 

ಈ ನಾಲ್ಕು ರಾಶಿಯ ಗಂಡೈಕ್ಳಿಗೆ ಹೆಣ್ಮಕ್ಳು ಬೇಗ ಆಕರ್ಷಿತರಾಗ್ತಾರೆ!

ಇಂಥವರ ಜೊತೆ ಊಟ ಬೇಡ : ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಸ್ನಾನ ಮಾಡದ, ದೇವರ ಪೂಜೆ ಮಾಡದ, ದೇವರಿಗೆ ಅನ್ನವನ್ನು ಅರ್ಪಿಸದವರ ಜೊತೆ ಊಟವನ್ನು ಮಾಡಬಾರದು. ಹಾಗೆಯೇ ನಿಮ್ಮನ್ನು ಪ್ರೀತಿಸದ ವ್ಯಕ್ತಿಯ ಕೈಯಿಂದ ಬಡಿಸುವ ಆಹಾರವನ್ನು ಎಂದಿಗೂ ಸೇವನೆ ಮಾಡ್ಬೇಡಿ. ಕುಟುಂಬದ ಎಲ್ಲ ಸದಸ್ಯರು ಒಟ್ಟಿಗೆ ಕುಳಿತು ಆಹಾರವನ್ನು ಸೇವನೆ ಮಾಡಿ. ಭೋಜನದ ಸಮಯವನ್ನು ನಿರ್ಧಾರ ಮಾಡಿ. ದಿನದಲ್ಲಿ ಎರಡು ಬಾರಿ ಮಾತ್ರ ಆಹಾರ ಸೇವನೆ ಮಾಡುವವರು ಪ್ರತಿ ದಿನ ಒಂದೇ ಸಮಯದಲ್ಲಿ ಆಹಾರ ಸೇವನೆ ಮಾಡ್ಬೇಕು. ಯೋಗಿ ಒಂದು ಬಾರಿ ಹಾಗೂ ಭೋಗಿ ಎರಡು ಬಾರಿ ಆಹಾರ ಸೇವನೆ ಮಾಡ್ತಾನೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. 

ಯಾವ ದಿನ ಆಹಾರ ಬೇಡ? : ಏಕಾದಶಿ (Ekadashi) ಹಾಗೂ ದ್ವಾದಶಿಯಂದು ಬದನೆಕಾಯಿಯನ್ನು ಸೇವನೆ ಮಾಡ್ಬೇಡಿ. ಇದು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹಾಗೆಯೇ ಅಮವಾಸ್ಯೆ, ಹುಣ್ಣಿಮೆ,ಸಂಕ್ರಾಂತಿ,ಚತುರ್ದಶಿ,ಅಷ್ಠಮಿ,ಭಾನುವಾರ ಎಳ್ಳಿನ ಎಣ್ಣೆಯನ್ನು ಸೇವನೆ ಮಾಡಬಾರದು. ಭಾನುವಾರ ಶುಂಠಿ ಸೇವನೆ ಮಾಡಬಾರದು. 

 

 

click me!