ಮೀನ ರಾಶಿಚಕ್ರದ ಕೆಲವು ಗುಣಲಕ್ಷಣಗಳು ಇಲ್ಲಿವೆ, ಇದು ಹೆಚ್ಚು ಸೃಜನಶೀಲತೆಯೆನಿಸಿಕೊಂಡಿರುವ ಹೊತ್ತಿಗೇ ಪಲಾಯನವಾದಿ ಎಂಬ ಖ್ಯಾತಿಯನ್ನು ಹೊಂದಿದೆ.
ರಾಶಿಚಕ್ರದ ಕೊನೆಯ ರಾಶಿಯಾಗಿರುವ ಮೀನವು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಮೀನಿನ ಚಿಹ್ನೆಯಡಿಯಲ್ಲಿ ಜನಿಸಿರುವುದರಿಂದ ಮೀನ ರಾಶಿಯವರು ಭಾವನಾತ್ಮಕ, ಸೂಕ್ಷ್ಮ, ದಯೆ, ಸಹಾನುಭೂತಿ ಮತ್ತು ಕೊಡುಗೈಯವರಾಗಿದ್ದಾರೆ. ಮೀನ ರಾಶಿಯವರು ಬುದ್ಧಿವಂತ, ಸೃಜನಶೀಲ ಮತ್ತು ನಿಸ್ವಾರ್ಥ ಜನರು. ಕಲೆ ಮತ್ತು ಅಮೂರ್ತ ಸೌಂದರ್ಯಕ್ಕೆ ಆಕರ್ಷಿತರಾಗುತ್ತಾರೆ. ಮೀನ ರಾಶಿಯವರ ಕುರಿತ ಕೆಲ ವಿಶೇಷ ಗುಣಲಕ್ಷಣಗಳನ್ನು ನೋಡೋಣ.
ಕಲಾತ್ಮಕ ಮತ್ತು ಕಾಲ್ಪನಿಕ(Artistic and imaginative)
ಕಲೆಯ ವಿಷಯದಲ್ಲಿ ಮೀನ ರಾಶಿಯವರು ಒಂದು ಹೆಜ್ಜೆ ಮುಂದೆ. ಏಕೆಂದರೆ ಅವರಲ್ಲಿ ಕಲ್ಪನೆಗಳು ಹೆಚ್ಚು. ಅವರು ತಮ್ಮ ಸೃಜನಶೀಲ ಮತ್ತು ಕಾಲ್ಪನಿಕ ಸ್ವಭಾವದಿಂದಾಗಿ ಅಮೂರ್ತ ಮತ್ತು ಕಲಾತ್ಮಕ ಸೌಂದರ್ಯವನ್ನು ಕಂಡುಕೊಳ್ಳುತ್ತಾರೆ. ಹೀಗಾಗಿ ಇವರು ಹೆಚ್ಚು ಕಲಾವಿದರು ಇಲ್ಲವೇ ಸಂಗೀತಗಾರರೋ ಅಥವಾ ಮತ್ತಾವುದೇ ಸೃಜನಾತ್ಮಕ ಕಲೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.
ಕರುಣಾಮಯಿ(Compassionate)
ಮೀನ ರಾಶಿಯವರಲ್ಲಿ ದಯೆ ಮತ್ತು ಸಹಾನುಭೂತಿ ಹೆಚ್ಚು. ಅವರು ನಿರಂತರವಾಗಿ ಸಹಾಯ ಮಾಡಲು ಸಿದ್ಧರಿರುತ್ತಾರೆ ಮತ್ತು ಸುತ್ತಮುತ್ತಲಿನವರಿಗೆ ಸಹಾನುಭೂತಿ ತೋರಿಸುತ್ತಾರೆ. ನಿಮ್ಮ ಸಂತೋಷದಲ್ಲಿ ಆನಂದಿಸಲು ಅಥವಾ ನಿಮ್ಮ ದುಃಖದಲ್ಲಿ ದುಃಖಿಸಲು ಅವರು ಜೊತೆಯಾಗುತ್ತಾರೆ. ಮೀನ ರಾಶಿಯವರು ಸಭ್ಯ ಮತ್ತು ಮೃದು ಹೃದಯದ ಜನರು, ಅವರು ತಮ್ಮನ್ನು ಇತರರು ಅವರು ಹೇಗೆ ನಡೆಸಿಕೊಳ್ಳಬೇಕೆಂದು ಬಯಸುತ್ತಾರೋ ಹಾಗೆಯೇ ಇತರರ ವಿಷಯವಾಗಿ ನಡೆದುಕೊಳ್ಳುತ್ತಾರೆ.
ಅಂತಃಪ್ರಜ್ಞೆ(Intuitive)
ಮೀನ ರಾಶಿಯವರು, ಪ್ರಾಯೋಗಿಕ ತಾರ್ಕಿಕತೆಯ ಬದಲು ಅಂತಃಪ್ರಜ್ಞೆಯ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಹೌದು, ಅವರು ಸತ್ಯಾಸತ್ಯತೆ ಪರಿಶೀಲಿಸುವ ಬದಲು ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರ ಅಂತಃಪ್ರಜ್ಞೆಯ ಮೇಲೆ ಮಾತ್ರ ಅವಲಂಬಿತರಾಗಿರುತ್ತಾರೆ. ತಮ್ಮ ಆರನೇ ಇಂದ್ರಿಯ ಹೇಳಿದ್ದೇ ಸರಿ ಎಂಬ ಹುಂಬತನ ಇವರದು.
Lemon Remedies 2022: ವ್ಯಾಪಾರ ಗರಿಗೆದರುತ್ತಿಲ್ಲವೇ? ನಿಂಬೆ ಹಣ್ಣಿನ ಪರಿಹಾರ ಮಾಡಿ..
ಸಂವೇದನಾಶೀಲರು(Sensitive)
ವೃಶ್ಚಿಕ ಮತ್ತು ಕರ್ಕಾಟಕ ರಾಶಿಯವರಂತೆ ಮೀನವು ನೀರಿನ ಚಿಹ್ನೆಯಾಗಿರುವುದರಿಂದ ಭಾವನಾತ್ಮಕ ಜೀವಿಗಳು. ಪರಿಣಾಮವಾಗಿ, ಇವರು ಸೂಕ್ಷ್ಮವಾಗಿರುತ್ತಾರೆ.ಬಲವಾದ ಭಾವನೆಗಳನ್ನು ಹೊಂದಿರುವುದರಿಂದ, ಸಂತೋಷ ಮತ್ತು ನೋವು ಎಲ್ಲವೂ ಹೆಚ್ಚು. ಎಲ್ಲ ಭಾವನೆಗಳನ್ನೂ ಅವರು ಬಲವಾಗಿ ಅನುಭವಿಸುತ್ತಾರೆ. ಹೀಗಾಗಿ ಇವರನ್ನು ಮೂಡಿಗಳು ಎಂದು ಹೇಳಬಹುದು.
ಪಲಾಯನವಾದಿ(Escapist)
ಮೀನ ರಾಶಿಯವರು ತಮ್ಮದೇ ಆದ ಕಲ್ಪನಾತ್ಮಕ ಜಗತ್ತಿನಲ್ಲಿ ವಾಸಿಸುತ್ತಾರೆ. ಪರಿಣಾಮವಾಗಿ, ಜೀವನವು ನೀಡುವ ಎಲ್ಲದರ ಬಗ್ಗೆ ಅವರು ನಂಬಲಾಗದಷ್ಟು ಆದರ್ಶಪ್ರಾಯವಾಗಿರುತ್ತಾರೆ. ವಿಷಯಗಳು ತಮ್ಮ ರೀತಿಯಲ್ಲಿ ನಡೆಯದಿದ್ದರೂ ಸಹ, ಅವರು ತಮ್ಮ ದುರಾದೃಷ್ಟಕ್ಕೆ ಕಾರಣವಾದ ವಿವಿಧ ಅಂಶಗಳನ್ನು ದೂಷಿಸುತ್ತಾರೆ. ಅವರು ಪರಿಸ್ಥಿತಿಯ ಸತ್ಯ ಮತ್ತು ವಾಸ್ತವದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಾರೆ. ಏಕೆಂದರೆ ಅವರು ಕಷ್ಟದ ಮತ್ತು ನಕಾರಾತ್ಮಕ ಪರಿಣಾಮಗಳನ್ನು ಎದುರಿಸಲು ಬಯಸುವುದಿಲ್ಲ. ಒಂದು ಹಿನ್ನಡೆಯಿಂದ ಇವರು ಕೆಲಸ ಮಾಡುವ ಉತ್ಸಾಹವನ್ನು ಕಳೆದುಕೊಳ್ಳುತ್ತಾರೆ.
ಊಟ ಮಾಡೋವಾಗ ಇವನ್ನೆಲ್ಲಾ ಯೋಚಸ್ಬೇಡಿ, ಒಳ್ಳೇದಲ್ಲ
ಸೋಮಾರಿ(Lazy)
ಮೀನ ರಾಶಿಯವರು ಆಲಸ್ಯದ ಪರಿಣಾಮವಾಗಿ, ಅವರು ತಮ್ಮ ಉತ್ಸಾಹ ಮತ್ತು ಚೈತನ್ಯವನ್ನು ತ್ವರಿತವಾಗಿ ಕಳೆದುಕೊಳ್ಳುತ್ತಾರೆ. ಧೀರ್ಘ ಕಾಲದವರೆಗೆ ಏನಾದರೂ ಪ್ರಭಾವ ಬೀರದಿದ್ದರೆ ಸೋಮಾರಿತನ ಹೆಚ್ಚುತ್ತದೆ. ತಮಗೆ ಮನಸ್ಸು ಬರದೆ ಯಾವುದೇ ಕೆಲಸ ಮಾಡುವುದಿಲ್ಲ ಎನ್ನುವಂಥವರು ಇವರು. ಮನಸ್ಸಾದಾಗ ಸಿಕ್ಕಾಪಟ್ಟೆ ಕೆಲಸ ಮಾಡುವ ಇವರು, ಉದಾಸೀನವಾದರೆ ಏನನ್ನೂ ಮಾಡದೆ ಕುಳಿತುಕೊಳ್ಳಬಲ್ಲರು.
ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.