ಕಂಕಣ ಸೂರ್ಯಗ್ರಹಣದಿಂದ ಯಾವ ರಾಶಿಗೆ ಏನು ಲಾಭ ?

By Suvarna NewsFirst Published Dec 21, 2019, 2:10 PM IST
Highlights

ಡಿ.26ರಂದು ನಡೆಯುವ ಸೂರ್ಯಗ್ರಹಣದ ಬಗ್ಗೆ ವಿನಾಕಾರಣ ಭಯ ಬೇಡ. ಯಾರಿಗ್ಗೊತ್ತು, ಇದರಿಂದ ನಿಮಗೆ ಲಾಭವೂ ಇರಬಹುದು. ನಿಮ್ಮ ರಾಶಿಗೆ ಗ್ರಹಣ ಲಾಭಕರವಾ ಇಲ್ಲಿ ನೋಡಿಕೊಳ್ಳಿ.

ಈ ಸಲ ಕಂಕಣ ಸೂರ್ಯ ಗ್ರಹಣ ಡಿ.26ರಂದು ನಡೆಯಲಿದೆ. ಭಾರತದಲ್ಲಿ ಇದು ಮುಂಜಾನೆ 8.06ರಿಂದ 11.33ರವರೆಗೆ ನೋಡಲು ಲಭ್ಯ. ಸೂರ್ಯಗ್ರಹಣವೇ ಒಂದು ಬಗೆಯ ಸಂಕ್ರಮಣ ಕಾಲ.  ಪ್ರಕೃತಿಯಲ್ಲೇ ಈ ಬದಲಾವಣೆಯನ್ನು ಕಾಣಬಹುದು. ಹಕ್ಕಿಗಳು ಗೂಡು ಸೇರಿಕೊಳ್ಳುತ್ತವೆ.

ಸಾಕುಪ್ರಾಣಿಗಳು ಮುದುಡಿ ಮೂಲೆ ಸೇರುತ್ತವೆ. ಇನ್ನು ಮನುಷ್ಯನ ಮೇಲೆ ಇದರ ಪರಿಣಾಮ ಆಗದೆ ಇರುತ್ತದೆಯೇ? ನಾನಾ ಬಗೆಯ ರಾಶಿ ಚಕ್ರದವರಿಗೆ ಇದರಿಂದ ಹಲವು ಬಗೆಯ ಫಲಗಳಿವೆ. ಸೂರ್ಯಗ್ರಹಣ ಅಂದರೆ ಕೆಡುಕೇ ಆಗುತ್ತದೆ ಎಂದು ತುಂಬ ಬೇನ ನಂಬುತ್ತಾರೆ. ಆದರೆ ಹಾಗೇನೂ ಆಗಬೇಕಿಲ್ಲ. ಗ್ರಹಣದಿಂದ ಲಾಭ ಪಡೆಯುವ ರಾಶಿಗಳೂ ಇವೆ. ಹೀಗೆ ಅದೃಷ್ಟ ಖುಲಾಯಿಸಿದ ರಾಶಿಗಳಲ್ಲಿ ನೀವೂ ಇದೀರಾ ಚೆಕ್‌ ಮಾಡ್ಕೊಳಿ.

ರಾತ್ರಿ ಉಗುರು ಕತ್ತರಿಸಿದ್ರೆ ಏನು ಪ್ರಾಬ್ಲಂ ಅನ್ನೋರು ಇದನ್ನೊಮ್ಮೆ ಓದಿ!

ಮೇಷ ರಾಶಿ

ಸೂರ್ಯ ಈ ರಾಶಿಯವರಲ್ಲಿ ನಾಲ್ಕನೇ ಮನೆಯ ಅಧಿಪತಿ. ಒಂಬತ್ತನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತದೆ. ಆದ್ದರಿಂದ ನಿಮಗೆ ಗ್ರಹಣದ ಪ್ರಖರ ಪರಿಣಾಮವಿಲ್ಲ. ವೃತ್ತಿಜೀವನದಲ್ಲಿ ಬಹಳ ಬೇಗನೆ ಮೇಲೆ ಬರುವ ಅವಕಾಶಗಳಿವೆ. ಬಾಸ್‌ನ ಮನ ನಿಮ್ಮ ಕಡೆ ಒಲಿಯಬಹುದು. ಈ ಹಂತದಲ್ಲಿ ನೀವು ಪಡುವ ಕಷ್ಟದ ಒಂದೊಂದು ಬೆವರಿನ ಹನಿಯೂ ನಿಮಗೆ ಲಾಭ ತಂದು ಕೊಡಲಿದೆ, ಮರೆಯಬೇಡಿ.

ಮಿಥುನ ರಾಶಿ

ನಿಮ್ಮ ಜಾತಕದಲ್ಲಿ ಸೂರ್ಯ ಮೂರನೇ ಮನೆಯ ಅಧಿಪತಿ. ಸೂರ್ಯ ನಿಮ್ಮ ಜಾತಕದ ಏಳನೇ ಮನೆಯಲ್ಲಿ ಗ್ರಹಣಕ್ಕೆ ಒಳಗಾಗುತ್ತಾನೆ. ಇದು ದಾಂಪತ್ಯದ, ಸಂಬಂಧದ ಮನೆ. ಹೀಗಾಗಿ ನಿಮ್ಮ ದಾಂಪತ್ಯ ಇನ್ನಷ್ಟು ಮಧುರವಾಗಲಿದೆ. ಸಂಗಾತಿಯ ಜೊತೆಗೆ ದೂರ ಪ್ರಯಾಣದ ಅವಕಾಶ ಒದಗಬಹುದು. ಮುರಿದುಹೋದ ಸಂಬಂಧಗಳನ್ನು ಸರಿಪಡಿಸಲು ಇದು ಸಕಾಲ. ಅವಿವಾಹಿತರಿಗೆ ವೃತ್ತಿ ಅಥವಾ ಪ್ರವೃತ್ತಿಯ ಜಾಗದಲ್ಲಿ ಹೊಸ ಪ್ರೇಮ ಚಿಗುರುವುದಕ್ಕೆ ಆಸ್ಪದ ಇದೆ.

ಸೂರ್ಯ ಧನು ರಾಶಿಗೆ ಬಂದರೆ ಈ ನಾಲ್ಕು ರಾಶಿಗಳಿಗೆ ಲಾಭ!

ವೃಶ್ಚಿಕ ರಾಶಿ

ರವಿಯು ನಿಮ್ಮ ಜಾತಕದಲ್ಲಿ ಹತ್ತನೇ ಮನೆಯ ಅಧಿಪತಿಯಾಗಿದ್ದು, ಎರಡನೇ ಮನೆಯಲ್ಲಿ ಗ್ರಹಣಕ್ಕೆ ಒಳಗಾಗುತ್ತಿದ್ದಾನೆ. ಇದು ನೇರವಾಗಿ ಧನ ಮತ್ತು ಕುಟುಂಬಕ್ಕೆ ಸಂಬಂಧಿಸಿದ ಮನೆ. ಇದರಿಂದ ಎರಡೂ ಕ್ಷೇತ್ರಗಳಲ್ಲಿ ನಿಮಗೆ ಪ್ರಯೋಜನವಿದೆ. ಬ್ಯುಸಿನೆಸ್‌ನಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗಬಹುದು. ಆಕಸ್ಮಿಕ ಧನಲಾಭಗಳೂ ಆಗುವ ಸೂಚನೆ ಇದೆ. ಇದರ ಪರಿಣಾಮ ಫ್ಯಾಮಿಲಿಯ ಮೇಲೂ ಆಗುವುದರಿಂದ ಮನೆಯಲ್ಲಿ ಒಂದು ಬಗೆಯ ಸಂತೋಷ ನೆಲೆಸುತ್ತದೆ. ಬಂಧುಗಳೊಡನೆ ಹೆಚ್ಚಿನ ಸಮಯ ಕಳೆಯುವ ಅವಕಾಶ ಸಿಗಬಹುದು.

ಕರ್ಕಾಟಕ ರಾಶಿ

ನಿಮಗೆ ಈಗ ಸುಸಮಯ. ರವಿಯ ನಿಮ್ಮ ಜಾತಕದಲ್ಲಿ ಎರಡನೇ ಮನೆಯ ಒಡೆಯ. ಆರನೇ ಮನೆಯಲ್ಲಿ ಗ್ರಹಣ ನಡೆಯುತ್ತಿದೆ. ಈ ಮನೆಯು ವೃತ್ತಿ ಮತ್ತು ಕುಟುಂಬಗಳಿಗೆ ಸಂಬಂಧಿಸಿದೆ. ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಬಹುದು; ಸಿಇಒ ನಿಮ್ಮ ಬೆನ್ನು ತಟ್ಟಬಹುದು. ಬಡ್ತ್ತಿಯ ಸಾಧ್ಯತೆ ಇದೆ. ಕೆಲವು ಹಿತಶತ್ರುಗಳನ್ನು ಹಿಂದೆ ಹಾಕಿ ಮುಂದೆ ಹೋಗುತ್ತೀರಿ. ಕುಟುಂಬ ಮತ್ತು ಕೆಲಸವನ್ನು ಬ್ಯಾಲೆನ್ಸ್‌ ಮಾಡಲು ಸಾಧ್ಯವಾಗಲಿದೆ. ಮಕ್ಕಳ ಸಾಧನೆ ಮನಸ್ಸಿಗೆ ತುಂಬಾ ಮುದವನ್ನು ಕೊಡಲಿದೆ. ನಿಮ್ಮಿಂದ ಅವರು ಅಪೇಕ್ಷಿಸಿದಷ್ಟು ಪ್ರೀತಿಯನ್ನು ಕೊಡಲು ಸಾಧ್ಯವಾಗಲಿದೆ.

ಸಿಂಹ ರಾಶಿ

ನಿಮ್ಮ ರಾಶಿಯನ್ನು ಅಕ್ಷ ರಶಃ ರವಿಯೇ ಆಳುತ್ತಾನೆ. ಜಾತಕದ ಐದನೇ ಮನೆಯಲ್ಲಿ ಗ್ರಹಣವಿದೆ. ಇದು ನಿಮ್ಮ ಬುದ್ಧಿಶಕ್ತಿ, ಕೈಚಳಕ, ಧನಲಾಭಗಳಿಗೆ ಪೂರಕವಾಗಿ ಇದೆ. ಈಗ ನೀವು ಆಡಿದ್ದೇ ಮಾತು, ಚಿಂತಿಸಿದ್ದೇ ವೇದವಾಕ್ಯ. ಎಲ್ಲರೂ ನಿಮ್ಮ ಮಾತಿಗೆ ಬೆಕೆ ಕೊಡಲಿದ್ದಾರೆ. ನಿಮ್ಮ ಕೌಶಲ್ಯದ ಪ್ರದರ್ಶನದಿಂದ ಎಲ್ಲರನ್ನು ಚಕಿತಗೊಳಿಸಲಿದ್ದೀರಿ. ಇದರಿಂದ ಹಣ ಮಾಡುವ ದಾರಿಗಳೂ ತೆರೆದುಕೊಳ್ಳಲಿವೆ.

ವ್ಯಭಿಚಾರ ಭಾವನೆಗೆ ಕಾರಣವಾಗೋ ಶುಕ್ರನ ಸ್ಥಾನಪಲ್ಲಟ, ಯಾರಿಗೆ, ಏನು ಫಲ?

ಮಕರ ರಾಶಿ

ಮಕರ ರಾಶಿಯವರಿಗೆ ಸೂರ್ಯನು ಎಂಟನೇ ಮನೆಯಲ್ಲಿ ಇರುತ್ತಾನೆ. ಹನ್ನೆರಡನೇ ಮನೆಯಲ್ಲಿ ಗ್ರಹಣ ಸಂಭವಿಸಲಿದೆ. ಇದು ನಿಮ್ಮ ಮನಸ್ಸಿನ, ಬುದ್ಧಿಯ ಮಾತನ್ನು ಕೇಳುವ ಸಮಯ. ನಿಮ್ಮ ಭಕ್ತಿ ಮತ್ತು ಆಧ್ಯಾತ್ಮಗಳು ಈಗ ಉತ್ತಮ ಫಲವನ್ನು ಕೊಡಲಿವೆ. ಇದರಿಂದ ನೀವು ಹಿಡಿದ ಯಾವುದೇ ಕೆಲಸದಲ್ಲಿ ಏಕಾಗ್ರತೆಯನ್ನು ಸಾಧಿಸಿ ಹೆಚ್ಚಿನ ಸ್ಥಾನಲಾಭ, ಧನಲಾಭ ಪಡೆಯಲು ಸಾಧ್ಯವಾಗಲಿದೆ. ಮನೆಯಲ್ಲಿ ಶಾಂತಿ ಸಮಾಧಾನ ಇರುತ್ತದೆ.

click me!