2023 ವರ್ಷ ಪ್ರಾರಂಭವಾಗಿದೆ. ಪ್ರತಿಯೊಬ್ಬರೂ ಹೊಸ ವರ್ಷದ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ. ಈ ಹೊಸ ವರ್ಷ ಜ್ಯೋತಿಷ್ಯದ ದೃಷ್ಟಿಕೋನದಿಂದ ಬಹಳ ವಿಶೇಷವಾಗಿದೆ. ಆ ವಿಶೇಷಗಳೇನೇನು ನೋಡೋಣ.
ಹೊಸ ವರ್ಷ ಬಂತೆಂದರೆ ಜನರ ಮನದಲ್ಲಿ ಸಂತಸ, ಉತ್ಸಾಹ ಮೂಡುತ್ತದೆ. ಹೊಸ ವರ್ಷದಲ್ಲಿ ಕೆಲವರು ತಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಮತ್ತೆ ಕೆಲವರು ವರ್ಷದ ವಿಶೇಷತೆಗಳ ಕಡೆ ಗಮನ ಹಾಯಿಸುತ್ತಾರೆ. 2023 ರ ವರ್ಷವು ಧಾರ್ಮಿಕ ಮತ್ತು ಜ್ಯೋತಿಷ್ಯದ ದೃಷ್ಟಿಕೋನದಿಂದ ಬಹಳ ವಿಶೇಷವಾಗಿರುತ್ತದೆ. ಏಕೆಂದರೆ, ಈ ವರ್ಷ ಜ್ಯೋತಿಷ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಬದಲಾವಣೆಗಳಾಗಲಿವೆ. 2023ರ ವರ್ಷಕ್ಕೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳನ್ನು ತಿಳಿಸುತ್ತೇವೆ.
ಭಾನುವಾರದಿಂದ ಪ್ರಾರಂಭ ಮತ್ತು ಭಾನುವಾರದಂದೇ ಕೊನೆ
ಭಾನುವಾರದಿಂದಲೇ 2023ನೇ ಇಸವಿ ಆರಂಭವಾಗಿದ್ದು, ಭಾನುವಾರವೇ ಅಂತ್ಯಗೊಳ್ಳುವುದು ವಿಶೇಷ. 2023ರಲ್ಲಿ, ದೀಪಾವಳಿ, ಛತ್ ಪೂಜೆ ಮುಂತಾದ ಅನೇಕ ಹಬ್ಬಗಳು ಕೂಡಾ ಭಾನುವಾರ ಬರುತ್ತಿವೆ.
ಶನಿ ರಾಶಿ ಪರಿವರ್ತನೆ(Saturn transit)
ಗ್ರಹಗಳ ತೀರ್ಪುಗಾರ ಎಂದು ಕರೆಯಲ್ಪಡುವ ಶನಿ ಗ್ರಹವು 2023ರ ಮೊದಲ ತಿಂಗಳಲ್ಲಿ ಅಂದರೆ ಜನವರಿ 17ರಂದು ತನ್ನ ರಾಶಿಚಕ್ರವನ್ನು ಬದಲಾಯಿಸುತ್ತದೆ. ಈ ಗ್ರಹವು ಮಕರ ರಾಶಿಯನ್ನು ಬಿಟ್ಟು ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಶನಿಯು ಒಂದು ರಾಶಿಯಿಂದ ಮತ್ತೊಂದಕ್ಕೆ ಚಲಿಸಲು ಎರಡೂವರೆ ವರ್ಷ ಬೇಕಾಗುವ ಕಾರಣದಿಂದ, ಹಾಗೂ ಅದರ ಪರಿಣಾಮ ಅಗಾಧವಾಗಿರುವುದರಿಂದ ಶನಿಯ ರಾಶಿ ಪರಿವರ್ತನೆ ಪ್ರಮುಖವಾದುದಾಗಿದೆ. ಶನಿಯು ವರ್ಷಪೂರ್ತಿ ಈ ರಾಶಿಯಲ್ಲಿ ಇರುತ್ತಾನೆ.
ಯುಗಾದಿ(Ugadi)
ಪಂಚಾಂಗದ ಪ್ರಕಾರ, ಹಿಂದೂ ಹೊಸ ವರ್ಷವು ಚೈತ್ರ ಶುಕ್ಲ ಪ್ರತಿಪದ ತಿಥಿಯಂದು ಪ್ರಾರಂಭವಾಗುತ್ತದೆ. ಈ ಬಾರಿ ಈ ದಿನಾಂಕ ಮಾರ್ಚ್ 22ರಂದು. ಈ ದಿನದಂದು ಚೈತ್ರ ನವರಾತ್ರಿಯೂ ಪ್ರಾರಂಭವಾಗುತ್ತದೆ. ನಂಬಿಕೆಯ ಪ್ರಕಾರ, ಬ್ರಹ್ಮದೇವನು ಈ ದಿನಾಂಕದಿಂದ ಬ್ರಹ್ಮಾಂಡವನ್ನು ರಚಿಸುವ ಕೆಲಸವನ್ನು ಪ್ರಾರಂಭಿಸಿದನು. ರಾಜ ಯುಧಿಷ್ಠಿರನ ಪಟ್ಟಾಭಿಷೇಕವೂ ಇದೇ ದಿನಾಂಕದಂದು ನಡೆಯಿತು.
Makar Sankranti 2023: ರುಚಿರುಚಿಯಾದ ಎಳ್ಳುಬೆಲ್ಲ, ಎಳ್ಳುಂಡೆ ರೆಸಿಪಿ ಇಲ್ಲಿದೆ..
ಏಪ್ರಿಲ್ ನಲ್ಲಿ ಗುರುವು ರಾಶಿ ಪರಿವರ್ತನೆ(Jupiter Transit)
ನವಗ್ರಹಗಳಲ್ಲಿ ಗುರುವಿಗೆ ವಿಶೇಷ ಮಹತ್ವವಿದೆ. ಪ್ರಸ್ತುತ ಈ ಗ್ರಹವು ಮೀನ ರಾಶಿಯಲ್ಲಿದೆ, ಇದು ಅದರ ಮಾಲೀಕತ್ವದ ಚಿಹ್ನೆಯಾಗಿದೆ. ಈ ಗ್ರಹವು ಏಪ್ರಿಲ್ 22ರಂದು ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಯನ್ನು ಪ್ರವೇಶಿಸಲಿದೆ. ಸೆಪ್ಟೆಂಬರ್ 4ರಂದು, ಈ ಗ್ರಹವು ಹಿಮ್ಮುಖವಾಗುತ್ತದೆ, ಅಂದರೆ ಅದು ವಕ್ರ ರೀತಿಯಲ್ಲಿ ಚಲಿಸಲು ಪ್ರಾರಂಭಿಸುತ್ತದೆ.
ಶ್ರಾವಣ ಮಾಸವು 59 ದಿನಗಳವರೆಗೆ ಇರುತ್ತದೆ
ಈ ಬಾರಿಯ ಶ್ರಾವಣ ಮಾಸವು 59 ದಿನಗಳ ಕಾಲ ಇರುತ್ತದೆ. ಹೆಚ್ಚುವರಿ ತಿಂಗಳಿನಿಂದ ಇದು ಸಂಭವಿಸುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಅಧಿಕ ಮಾಸ ಪ್ರತಿ 3 ವರ್ಷಗಳ ನಂತರ ಬರುತ್ತದೆ. ಈ ಬಾರಿ ಅಧಿಕ ಮಾಸ ಜುಲೈ 18ರಿಂದ ಆಗಸ್ಟ್ 16ರವರೆಗೆ ಇರುತ್ತದೆ. ಇದನ್ನು ಪುರುಷೋತ್ತಮ ಮಾಸ ಎಂದೂ ಕರೆಯುತ್ತಾರೆ.
13 ತಿಂಗಳು(13 months)
ಹಿಂದೂ ಹೊಸ ವರ್ಷವು ಸಾಮಾನ್ಯವಾಗಿ 12 ತಿಂಗಳುಗಳವರೆಗೆ ಇರುತ್ತದೆ. ಆದರೆ ಅಧಿಕ ಮಾಸದ ಕಾರಣ, ಈ ಬಾರಿ 13 ತಿಂಗಳುಗಳಾಗಿರುತ್ತದೆ. ಈ ಕಾರಣದಿಂದ ಈ ವರ್ಷದಲ್ಲಿ 26 ಏಕಾದಶಿ ಮತ್ತು 13-13 ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಾಂಕಗಳು ಇರುತ್ತವೆ. ಇಂತಹ ಕಾಕತಾಳೀಯ ಪ್ರತಿ ಮೂರು ವರ್ಷಗಳಿಗೊಮ್ಮೆ ಸಂಭವಿಸುತ್ತದೆ.
ರಾಹು-ಕೇತು ರಾಶಿಯನ್ನು ಬದಲಾವಣೆ(Rahu ketu transit)
ಜ್ಯೋತಿಷ್ಯದಲ್ಲಿ ರಾಹು-ಕೇತುಗಳನ್ನು ಕ್ರೂರ ಗ್ರಹಗಳೆಂದು ಪರಿಗಣಿಸಲಾಗಿದೆ. ಇವುಗಳನ್ನು ನೆರಳು ಗ್ರಹಗಳು ಎಂದೂ ಕರೆಯುತ್ತಾರೆ. ಈ ಎರಡೂ ಗ್ರಹಗಳು ಯಾವಾಗಲೂ ಹಿಮ್ಮುಖವಾಗಿ ಉಳಿಯುತ್ತವೆ, ಅಂದರೆ ಅವು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ. ಈ ಗ್ರಹಗಳು 18 ತಿಂಗಳಿಗೊಮ್ಮೆ ಚಿಹ್ನೆಯನ್ನು ಬದಲಾಯಿಸುತ್ತವೆ. ಈ ಬಾರಿ ಈ ಎರಡೂ ಗ್ರಹಗಳು ಅಕ್ಟೋಬರ್ 30ರಂದು ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸಲಿವೆ. ರಾಹುವು ಮೇಷದಿಂದ ಮೀನ ರಾಶಿಗೆ ಮತ್ತು ಕೇತು ತುಲಾ ರಾಶಿಯಿಂದ ಕನ್ಯಾರಾಶಿಗೆ ತೆರಳಲಿದ್ದಾರೆ.
Siddeshwara Sri Quotes: 'ಅಕ್ಷರ ಕಲಿತವ ಭ್ರಷ್ಟನಾಗಬಹುದು, ಸಂಸ್ಕಾರವಂತ ಭ್ರಷ್ಟನಾಗಲಾರ'
ಸೂರ್ಯಗ್ರಹಣ(Solar eclipse)
ಜ್ಯೋತಿಷಿಗಳ ಪ್ರಕಾರ, 2023ರಲ್ಲಿ ಎರಡು ಸೂರ್ಯಗ್ರಹಣಗಳು ಸಂಭವಿಸುತ್ತವೆ, ಆದರೆ ಇವೆರಡೂ ಭಾರತದಲ್ಲಿ ಗೋಚರಿಸುವುದಿಲ್ಲ. ಮೊದಲ ಸೂರ್ಯಗ್ರಹಣ ಏಪ್ರಿಲ್ 20ರಂದು ಮತ್ತು ಎರಡನೆಯದು ಅಕ್ಟೋಬರ್ 14ರಂದು ಸಂಭವಿಸುತ್ತದೆ. ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲವಾದ್ದರಿಂದ ಧಾರ್ಮಿಕವಾಗಿ ಅದಕ್ಕೆ ಯಾವುದೇ ಮನ್ನಣೆ ಇರುವುದಿಲ್ಲ.
ಚಂದ್ರಗ್ರಹಣ(Lunar Eclipse)
2023ರಲ್ಲಿ ಎರಡು ಚಂದ್ರಗ್ರಹಣಗಳು ಸಂಭವಿಸಲಿವೆ. ಮೊದಲ ಚಂದ್ರಗ್ರಹಣ ಮೇ 5ರಂದು ಸಂಭವಿಸುತ್ತದೆ, ಆದರೆ ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಎರಡನೇ ಚಂದ್ರಗ್ರಹಣ ಅಕ್ಟೋಬರ್ 28ರಂದು ಸಂಭವಿಸಲಿದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುತ್ತದೆ, ಆದ್ದರಿಂದ ಇದು ಧಾರ್ಮಿಕ ಮಾನ್ಯತೆಯನ್ನು ಹೊಂದಿರುತ್ತದೆ. ಶರದ್ ಪೂರ್ಣಿಮೆಯಂದು ಈ ಗ್ರಹಣ ಸಂಭವಿಸಲಿದೆ.
Shani Gochar 2023: ಕುಂಭಕ್ಕೆ ಶನಿ, 5 ರಾಶಿಗಳಿಗೆ ಕಷ್ಟಕೋಟಲೆ ಹೆಚ್ಚಳ! ಇರಲಿ ಎಚ್ಚರ!
5 ತಿಂಗಳ ಚಾತುರ್ಮಾಸ
ಹಿಂದೂ ಧರ್ಮದಲ್ಲಿ ಚಾತುರ್ಮಾಸಕ್ಕೆ ವಿಶೇಷ ಮಹತ್ವವಿದೆ. ಈ ಸಮಯದಲ್ಲಿ ವಿಷ್ಣುವು ನಿದ್ರಿಸುತ್ತಾನೆ ಮತ್ತು ಮಹಾದೇವನು ವಿಶ್ವವನ್ನು ನಿರ್ವಹಿಸುತ್ತಾನೆ ಎಂದು ನಂಬಲಾಗಿದೆ. ಚಾತುರ್ಮಾಸವು 4 ತಿಂಗಳುಗಳು, ಆದರೆ ಈ ಬಾರಿ ಅದು 5 ತಿಂಗಳುಗಳು. ಅಧಿಕ ಮಾಸ ಇರುವುದರಿಂದ ಇದು ಸಂಭವಿಸುತ್ತದೆ.