Siddeshwara Sri Quotes: 'ಅಕ್ಷರ ಕಲಿತವ ಭ್ರಷ್ಟನಾಗಬಹುದು, ಸಂಸ್ಕಾರವಂತ ಭ್ರಷ್ಟನಾಗಲಾರ'

By Suvarna NewsFirst Published Jan 4, 2023, 10:07 AM IST
Highlights

ಸಿದ್ಧೇಶ್ವರ ಶ್ರೀಗಳ ನುಡಿಗಳಲ್ಲಿ ಹೆಕ್ಕಿ ತೆಗೆದಷ್ಟೂ ಮುಗಿಯದ ಮುತ್ತುಗಳಿವೆ. ಕಷ್ಟ ಕಾಲಕ್ಕೆ ಕೈ ಹಿಡಿಯಬಲ್ಲಂತ ಸಂತೈಕೆಯಿದೆ. ಬದುಕಿನ ಕುರಿತ ಎಲ್ಲರ ಪ್ರಶ್ನೆಗಳಿಗೆ ಉತ್ತರವಿದೆ.. ಅವರ ಮತ್ತಷ್ಟು ನುಡಿಮುತ್ತುಗಳು ಓದುಗರಿಗಾಗಿ..

ಮ್ಮ ಪ್ರಭಾವಿ ಪ್ರವಚನಗಳಿಗೆ ಸಿದ್ದೇಶ್ವರ ಶ್ರೀಗಳು ಪ್ರಖ್ಯಾತರಾಗಿದ್ದರು. ಇವರ ಪ್ರವಚನ ಕೇಳಲು ಸಾವಿರಾರು ಜನ ಕಾದು ಕುಳಿತಿರುತ್ತಿದ್ದರು. ಅಂಥ ಮಾಂತ್ರಿಕ ಶಕ್ತಿ ಇವರ ಮಾತುಗಳಿಗಿತ್ತು. ಸಿದ್ದೇಶ್ವರ ಶ್ರೀಗಳ ಕೆಲವು ನುಡಿಮುತ್ತುಗಳು ಇಲ್ಲಿವೆ.

ದೇಹ ಸುಂದರವಾಗಿದ್ದ ಮಾತ್ರಕ್ಕೆ ಬದುಕು ಸುಂದರವಾಗಿರುತ್ತದೆ ಎಂದು ಹೇಳಲಾಗದು. ದೇಹ ಕುರೂಪವಾಗಿದ್ದರೂ ಬದುಕು ಸುಂದರವಾಗಿಸಿಕೊಂಡವರು ಸಾಕಷ್ಟು ಜನರಿದ್ದಾರೆ.
*****
ಒಂದು ಕಾಲು ಮುಂದೆ, ಇನ್ನೊಂದು ಕಾಲು ಹಿಂದೆ
ಮುಂದಿನ ಕಾಲಿಗೆ ಗರ್ವವಿಲ್ಲ. ಹಿಂದಿನ ಕಾಲಿಗೆ ಬೇಸರವಿಲ್ಲ.
ಏಕೆಂದರೆ ಅವುಗಳಿಗೆ ತಿಳಿದಿದೆ ಕ್ಷಣಾರ್ಧದಲ್ಲಿ ಬದಲಾಗುವುದೆಂದು
ಜೀವನವೂ ಹೀಗೆ ಯಾವಾಗಲೂ ಸ್ಥಿರವಾಗಿರುವುದಿಲ್ಲ.
*****

ತಾಯಿ ಜೋಗುಳ ಹಾಡುತ್ತಾಳೆ, ಮಗು ಮಲಗುತ್ತದೆ
ಹಾಡಬೇಕು ಅಂತಾ ಹಾಡಲ್ಲ, ಮಗು ಮಲಗಬೇಕು ಅಂತಾ ಹಾಡ್ತಾಳೆ
ಇಲ್ಲಿ ಹಾಡುವುದು ಮುಖ್ಯ ಅಲ್ಲ, ಮಗು ಮಲಗುವುದು ಮುಖ್ಯ
ಮಗು ಪಲ್ಲವಿಗೇ ಮಲಗುತ್ತದೆ, ಹಾಡೂ ಪಲ್ಲವಿಗೇ ಮುಗಿಯುತ್ತದೆ
ಹಾಗೆಯೇ ಪ್ರವಚನ ಮುಖ್ಯ ಅಲ್ಲ, ಮನಸ್ಸು ಶಾಂತವಾಗುವುದು ಮುಖ್ಯ
ಮನುಷ್ಯ ಪಡೆಯಬೇಕಾದ ಜಗತ್ತಿನ ಅಪ್ರತಿಮ ವಸ್ತು ಶಾಂತಿ
*****

ಇಲ್ಲಿವೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಹತ್ತು ನುಡಿ ಮುತ್ತು..
 

ನಾನು ಬದುಕಿರುವುದು
ಎದೆ ಬಡಿತದಿಂದಲೇ ಹೊರತು ಬಟ್ಟೆಯಿಂದಲ್ಲ
ಬಟ್ಟೆ ಬೇಡ ಎಂದಲ್ಲ
ಆದರೆ ಅದರಿಂದಾಗಿಯೇ ನಾನಿಲ್ಲ
ಇಷ್ಟು ತಿಳಿದು ಬಟ್ಟೆ ಧರಿಸಿದರೆ ಅದೇ ಜಾಣತನ
*****

ನಾವೀ ಜಗತ್ತಿನಲ್ಲಿ ಸ್ವಲ್ಪ ನಿರ್ಭಯರಾಗಿರಬೇಕು. ಯಾವುದಕ್ಕೂ ಬಹಳ ಹೆದರಬಾರದು. ಇಲ್ಲಿ ಪ್ರಿಯ, ಅಪ್ರಿಯ, ಬೇಕಾದ, ಬೇಡದ ಸಂಗತಿ ಎಲ್ಲ ಇದೆ. ನಾವೇ ಈ ಜಗತ್ತಿನ ಕೇಂದ್ರಬಿಂದುವಲ್ಲ. ನಮ್ಮಂಥ ಅಸಂಖ್ಯ ಜೀವರಾಶಿಗಳಿಲ್ಲಿವೆ. ಕಾರಣ ನಮಗಾಗಿ ಈ ಜಗತ್ತಲ್ಲ. ಈ ಜಗತ್ತಿನಲ್ಲಿ ನಾವು ನಮ್ಮ ಬದುಕನ್ನು ಕಟ್ಟಿಕೊಂಡಿದ್ದೇವೆ. ಆದ್ದರಿಂದ ನಾವೀ ಜಗತ್ತಿನೊಂದಿಗೆ ಹೊಂದಿಕೊಂಡು ಬಾಳಬೇಕು. ಕತ್ತಲೆ ಬಂದಾಗ ಕತ್ತಲನ್ನೇ ಸ್ವೀಕರಿಸಬೇಕು. ಬೆಳಕು ಬಂದಾಗ ಬೆಳಕನ್ನೇ ಸ್ವೀಕರಿಸಬೇಕು. ಹಾಗೆಯೇ ಜೀವನದಲ್ಲಿ ಸುಖ-ದುಃಖ, ಮಾನಾಪಮಾನ ಏನೇ ಬರಲಿ ಅದನ್ನು ಸ್ವೀಕರಿಸುವ ಮನಸ್ಥಿತಿ ನಮಗಿರಬೇಕು.
*****

ಅಕ್ಷರ ಕಲಿತ ವ್ಯಕ್ತಿ ಭ್ರಷ್ಟನಾದರೂ ಆಗಬಹುದು.
ಸಂಸ್ಕಾರ ಕಲಿತ ವ್ಯಕ್ತಿ ಭ್ರಷ್ಟನಾಗಲಾರ.
ಯಾಕೆಂದರೆ ಸಂಸ್ಕಾರದ ಶಕ್ತಿ ಅಂಥದ್ದು
*****

ಸತ್ಯದ ಶೋಧಕನಾದ ಸಾಧಕನು ಮೊಟ್ಟಮೊದಲು ಮಾಡಬೇಕಾದ ಮಹತ್ತರ ಕಾರ್ಯವೆಂದರೆ ತನ್ನ ಹೃದಯದಲ್ಲಿ ಪ್ರೇಮದ ಜ್ಯೋತಿ ಹೊತ್ತಿಸುವುದು.
*****

ಈ ಪ್ರಪಂಚದಲ್ಲಿ ಒಳ್ಳೆಯದನ್ನೆಲ್ಲ ಹೇಳಿಯಾಗಿದೆ, ಉಳಿದಿರುವುದು ಆಚರಣೆಯಷ್ಟೇ.
*****

ಕಷ್ಟಗಳನ್ನು ಮೌನವಾಗಿ ದಾಟಬೇಕು. ಪರಿಶ್ರಮ ಸದ್ದಿಲ್ಲದೆ ಸಾಗಬೇಕು. ಸಿಗುವ ಯಶಸ್ವಿನ ಶಬ್ದ ಜಗತ್ತಿಗೆ ಕೇಳಿಸುವಷ್ಟು ಜೋರಾಗಿರಬೇಕು.
*****

Grah Gochar January 2023; 4 ರಾಶಿಗಳಿಗೆ ಅದೃಷ್ಟ ತರುವ ಜನವರಿ
 

ಸಕಲ ಜೀವರಾಶಿಗಳಲ್ಲಿರುವ ಪರಮಸತ್ಯ ಪರಮಾತ್ಮನು. ನಮ್ಮ ಬುದ್ಧಿಗೆ ತರ್ಕ-ವಿತರ್ಕಕ್ಕೆ ಶಬ್ದ ಜಾಲಕ್ಕೆ ಸಿಲುಕುವನಲ್ಲ. ಅವನು ಕೇವಲ ಅನುಭವಗಮ್ಯ.
ಈ ವಿಶ್ವಸಿರಿಯತ್ತ ನೋಡಿದಾಗ ಯಾರೂ ಬಡವರಲ್ಲ, ಸಿರಿವಂತರಲ್ಲ. ನಾವೆಲ್ಲರೂ ಸಮಾನರು, ಸಂತೋಷಿಗಳು.
*****

ಆಶೆ ನೀಗಿದವನು ಈಶನನ್ನು ಜಯಿಸುತ್ತಾನೆ.
*****

ಮನಸು ಮಲಿನವಾದರೆ ಮಾತಿನಲ್ಲಿ ಕಲ್ಮಶವಿರುತ್ತದೆ.
*****

ನೆರೆಹೊರೆಯವರನ್ನು ಕಂಡು ನಾನು ಉರಿದೇಳುತ್ತಿದ್ದರೆ ನನ್ನ ಪೂಜೆ, ಪುನಸ್ಕಾರಗಳಿಗೇನು ಬೆಲೆ?
*****

ಸ್ವಾರ್ಥ ತ್ಯಜಿಸಿದರೆ ಆದರ್ಶ ಸಾಧಿಸುತ್ತದೆ.
*****

ಹೃದಯ ಪರಿಮಳವಾದರೆ ಮಾತು ಮಕರಂದವಾಗುತ್ತದೆ.
ಮನಸು ರಸಪಾಕವಾದರೇ ಮನುಷ್ಯ ಮಹಾನುಭಾವನಾಗುತ್ತಾನೆ.
*****

ಮಹಾತ್ಮರ ಬದುಕೊಂದು ಮಹಾವೃಕ್ಷ, ನಿಸರ್ಗದಲ್ಲಿರುವ ಗಿಡಮರಗಳು ತಾಪ ಕಳೆದರೆ ಸಂತರ ಸಮಾಗಮವು ನಮ್ಮ ಅಂತರಂಗದ ತಾಪ ಕಳೆಯುತ್ತದೆ.
*****

ಏನೆಲ್ಲವನ್ನು ನಿಸರ್ಗವು ನಮಗೆ ಕರುಣಿಸಿದೆ. ಅವುಗಳನ್ನು ಬಳಸಿಕೊಂಡು ಸುಂದರ ಬದುಕನ್ನು ಕಟ್ಟಿಕೊಳ್ಳುವುದು.
*****

click me!