ದಾನಕ್ಕೆ ದಿನ, ತಿಥಿ ನೋಡಬೇಕಿಲ್ಲ, ದಾನ ಕಾರ್ಯ ಯಾವತ್ತಿಗೂ ಒಳ್ಳೆಯದೇ. ಆದರೆ, ವಿಶೇಷ ದಿನಗಳಂದು ಮಾಡುವ ದಾನಕ್ಕೆ ದೇವರ ವಿಶೇಷ ಅನುಗ್ರಹ ಇರುತ್ತದೆ. ಅಂದ ಹಾಗೆ ಅಕ್ಷಯ ತೃತೀಯದ ದಿನ ನೀವು ಏನೆಲ್ಲ ದಾನ ಮಾಡಿದರೆ ಒಳ್ಳೆಯದು ಗೊತ್ತಾ?
ದಾನಕ್ಕೆ ಎಲ್ಲ ಧರ್ಮದಲ್ಲೂ ವಿಶೇಷ ಮಹತ್ವವಿದೆ. ಎಲ್ಲ ಧರ್ಮಗಳ ಹಬ್ಬಗಳಲ್ಲೂ ದಾನ ಮಾಡುವುದು ಅತ್ಯಂತ ಪವಿತ್ರ ಕಾರ್ಯವಾಗಿ ಗುರುತಿಸಿಕೊಂಡಿದೆ. ಸಾಮಾನ್ಯ ದಿನಗಳ ದಾನ ಕೂಡಾ ಪುಣ್ಯ ಪ್ರಾಪ್ತಿ ಮಾಡುತ್ತದೆ. ಗ್ರಹದೋಷಗಳನ್ನು ಓಡಿಸಲು ಸಬಲವಾಗಿರುತ್ತದೆ, ಎಲ್ಲಕ್ಕಿಂತ ಹೆಚ್ಚಾಗಿ ಹಸಿದವರ ಹೊಟ್ಟೆ ತುಂಬಿಸುತ್ತದೆ, ಅಸಹಾಯಕರ ಪಾಲಿನ ನೋವನ್ನು ಕೊಂಚ ಕಡಿಮೆ ಮಾಡುತ್ತದೆ, ಅಗತ್ಯ ಇರುವವರಿಗೆ ದೊಡ್ಡ ಉಡುಗೊರೆಯಾಗುತ್ತದೆ. ಅವರ ಆಶೀರ್ವಾದ ಫಲವೂ ದಾನಿಯ ಅದೃಷ್ಟದ ಜೊತೆ ಸೇರಿಕೊಳ್ಳುತ್ತದೆ.
ಇದೀಗ ಅಕ್ಷಯ ತೃತೀಯ(Akshaya Tritiya) ಸಮೀಪಿಸುತ್ತಿದೆ. ಹಿಂದೂಗಳ ಪಾಲಿನ ಅತಿ ಶುಭವಾದ ಹಬ್ಬವಾಗಿರುವ ಅಕ್ಷಯ ತೃತೀಯವು ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ಬರುತ್ತದೆ. ಅಂದರೆ ಈ ಬಾರಿ ಮೇ 3ರಂದು ಅಕ್ಷಯ ತೃತೀಯ. ಅಕ್ಷಯ ತೃತೀಯ ಪೂಜೆ ಮುಹೂರ್ತವು ಮೇ 3 ರಂದು ಬೆಳಿಗ್ಗೆ 5:18ರಿಂದ ಮೇ 4ರಂದು ಬೆಳಿಗ್ಗೆ 7:30ರವರೆಗೆ ಇರುತ್ತದೆ.
ಅಕ್ಷಯ ತೃತೀಯದಂದು ಎಲ್ಲರೂ ಚಿನ್ನ ಖರೀದಿಸಲು ಮುಗಿ ಬೀಳುತ್ತಾರೆ. ಈ ದಿನ ಬೆಲೆ ಬಾಳುವುದನ್ನು ಖರೀದಿಸಿದರೆ ಅದು ಅಕ್ಷಯವಾಗಿ ಜೊತೆಗಿರುತ್ತದೆ ಎಂಬ ನಂಬಿಕೆ ಇದೆ. ಆದರೆ, ಹಣವಿಲ್ಲದವರು, ಬಡವರು, ಅಸಹಾಯಕರು ಏನನ್ನು ತಾನೇ ಖರೀದಿಸಲು ಸಾಧ್ಯ? ಅವರಿಗೆ ಉಳ್ಳವರು ಕೊಟ್ಟರೇ ವಸ್ತ್ರ, ಒಡವೆ, ಆಹಾರ. ಈ ದಿನದ ದುಬಾರಿ ಖರೀದಿ ಮಾಡುವವರು ಕೊಂಚ ದಾನವನ್ನೂ ಮಾಡಿದರೆ ಕಂಡಿತವಾಗಿ ಅವರ ಪುಣ್ಯ ಫಲ ಪ್ರಾಪ್ತಿ ದುಪ್ಪಟ್ಟಾಗುವುದು. ಅದೃಷ್ಟ ಮತ್ತು ಸಮೃದ್ಧಿ ಹೆಚ್ಚಾಗುವುದು ಎಂಬ ಮಾತು ತಲೆತಲಾಂತರದಿಂದ ಬಂದಿದೆ. ಅಂದ ಹಾಗೆ ಅಕ್ಷಯ ತೃತೀಯದಂದು ಏನೆಲ್ಲ ದಾನ ಮಾಡಿದರೆ ಒಳ್ಳೆಯದು ಗೊತ್ತಾ?
2022ರ ಮೊದಲ ರಾಹುಗ್ರಸ್ತ ಸೂರ್ಯಗ್ರಹಣ: ಯಾವ ರಾಶಿ ಮೇಲೆ ಏನು ಪರಿಣಾಮ?
ನೀರು ತುಂಬಿದ ಪಾತ್ರೆ(Urn full of water)
ಅಕ್ಷಯ ತೃತೀಯ ಸಂದರ್ಭದಲ್ಲಿ, ನೀವು ನೀರು ತುಂಬಿದ ಕಲಶವನ್ನು ದಾನ ಮಾಡಬಹುದು. ಇದನ್ನು ಮಾಡುವುದರಿಂದ, ಧಾರ್ಮಿಕ ನಂಬಿಕೆಯಂತೆ, ಒಬ್ಬರು ತಮ್ಮ ಜೀವನದಲ್ಲಿ ಸಂಪತ್ತು, ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ.
ಬಾರ್ಲಿ(Barley)
ಬಾರ್ಲಿಯನ್ನು ಅತ್ಯಂತ ಹಳೆಯ ಧಾನ್ಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದು ಚಿನ್ನದಷ್ಟೇ ಮೌಲ್ಯಯುತವಾಗಿದೆ ಎಂದೂ ಹೇಳಲಾಗುತ್ತದೆ. ವಿವಿಧ ಪೂಜಾ ವಿಧಿಗಳ ಸಮಯದಲ್ಲಿ, ಹವನ ಸಮಾರಂಭಗಳಲ್ಲಿ ಬಾರ್ಲಿಯನ್ನು ಬಳಸಲಾಗುತ್ತದೆ. ಅಕ್ಷಯ ತೃತೀಯ ದಿನದಂದು ಬಾರ್ಲಿ ದಾನ ಮಾಡಿ.
ಚಿನ್ನ ಮತ್ತು ಬೆಳ್ಳಿ(Gold and Silver)
ಅಕ್ಷಯ ತೃತೀಯ ದಿನದಂದು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದು ಹೇಗೆ ಮಂಗಳಕರವೋ, ಅದೇ ರೀತಿಯಲ್ಲಿ, ಅದರ ದಾನವು ಅಮೂಲ್ಯವಾದ ಪುಣ್ಯವನ್ನು ನೀಡುತ್ತದೆ.
ಅಕ್ಷಯ ತೃತೀಯದಂದು, ಚಿನ್ನ ಮಾತ್ರವಲ್ಲ ಇವುಗಳನ್ನು ಖರೀದಿಸಿದರೆ ಲಕ್ಷ್ಮೀ ಕೃಪೆ ಇರುತ್ತೆ
ಬೆಲ್ಲ, ತುಪ್ಪ ಮತ್ತು ಉಪ್ಪು(Jaggery, Ghee and Salt)
ಬೆಲ್ಲ, ತುಪ್ಪ ಮತ್ತು ಉಪ್ಪು ನೀವು ಅಗತ್ಯವಿರುವವರಿಗೆ ಸಹಾಯ ಮಾಡುವ ವಸ್ತುಗಳಲ್ಲಿ ಒಂದಾಗಿದೆ. ಈ ಎಲ್ಲಾ ವಸ್ತುಗಳು ವ್ಯಕ್ತಿಯ ಜೀವನದಲ್ಲಿ ಸಮಾನ ಪ್ರಾಮುಖ್ಯತೆಯನ್ನು ಹೊಂದಿವೆ. ಹಾಗಾಗಿ, ಈ ಆಹಾರ ಪದಾರ್ಥಗಳ ದಾನವು ವಿಶೇಷ ಫಲ ನೀಡಲಿದೆ.
ಎಳ್ಳು ಮತ್ತು ಬಟ್ಟೆ(Sesame seeds and clothes)
ಎಳ್ಳನ್ನು ಹೆಚ್ಚಾಗಿ ಪೂಜೆ ವಿಧಿಯಲ್ಲಿ ಬಳಸಲಾಗುತ್ತದೆ. ಮಂಗಳಕರ ದಿನವನ್ನು ಗುರುತಿಸಲು ಜನರು ಎಳ್ಳಿನ ಎಣ್ಣೆ ಅಥವಾ ಬೀಜಗಳನ್ನು ಸಹ ಬಳಸುತ್ತಾರೆ. ಅಕ್ಷಯ ತೃತೀಯದಂದು ಎಳ್ಳು ಮತ್ತು ಬಟ್ಟೆಯನ್ನು ದಾನ ಮಾಡಿ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.