ಖ್ಯಾತ ವೀಣಾವಾದಕಿ ವಿದುಷಿ ಪವನ ಆಚಾರ್ಯ ಅವರು ಕೋಡಿಬೆಂಗ್ರೆಯಲ್ಲಿ ಹರಿಯುವ ನದಿಯ ನಡುವೆಯೇ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ವರದಿ: ಶಶಿಧರ ಮಾಸ್ತಿಬೈಲು ಏಷಿಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಎ.30): ಹರಿಯುವ ನದಿಯಲ್ಲಿ ನೀರಿನ ಅಲೆಗಳು ಸುಮಧುರ ಸಂಗೀತದಂತೆ ಕೇಳುತ್ತದೆ ಎಂದು ಕವಿಗಳು ವರ್ಣಿಸುವ ಸಾಲುಗಳನ್ನು ಓದಿದ್ದೇವೆ. ನಿಜಕ್ಕೂ ನದಿಯಿಂದ ಸಂಗೀತ ಸ್ವರಗಳು ಕೇಳಿದರೆ ಹೇಗಿರುತ್ತೆ? ಎನ್ನುವ ಅಪರೂಪದ ಅನುಭವ ಉಡುಪಿಯ (Udupi) ಜನರಿಗೆ ಉಂಟಾಗಿದೆ.
undefined
ಹೌದು, ಉಡುಪಿಯಲ್ಲೊಂದು ಅಪರೂಪದ ಸಂಗೀತ ಕಾರ್ಯಕ್ರಮ ನಡೆಯಿತು. ಖ್ಯಾತ ವೀಣಾವಾದಕಿ ವಿದುಷಿ ಪವನ ಆಚಾರ್ಯ (veena Concert pavana acharya) ಅವರು ಕೋಡಿಬೆಂಗ್ರೆಯಲ್ಲಿ ನದಿಯ (kodi bengre river) ನಡುವೆಯೇ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಇಲ್ಲಿನ ದುರ್ಗಾದೇವಿ ಮಹಾಕಾಳಿ ಅಮ್ಮನವರ ದೇವಸ್ಥಾನವು ತನ್ನ 15ನೇ ವರ್ಷದ ಪ್ರತಿಷ್ಠಾ ವರ್ಧಂತಿ ಉತ್ಸವ ಆಚರಿಸುತ್ತಿದೆ. ದೇವಸ್ಥಾನದ ಎದುರು ಭಾಗದಲ್ಲಿರುವ ಯಜ್ಞಕುಂಡದಲ್ಲಿ ವೇದ ಘೋಷಗಳ ನಡುವೆ ಚಂಡಿಕಾಯಾಗ ನಡೆಯುತ್ತಿದ್ದರೆ, ಹರಿಯುವ ನದಿಯಲ್ಲಿ ಅಪರೂಪದ ಸಂಗೀತ ಸೇವೆ ನಡೆಯಿತು. ವೇದಮೂರ್ತಿ ವಾಗೀಶ ಶಾಸ್ತ್ರಿಗಳು ಮಂತ್ರ ಘೋಷದೊಂದಿಗೆ ಚಂಡಿಕಾಯಾಗ ಪೂರ್ಣಾಹುತಿ ನಡೆಸಿದರು. ಇದೇ ವೇಳೆ ಪವನ ಆಚಾರ್ಯರು ವೀಣೆಯ ಝೇಂಕಾರದೊಂದಿಗೆ ದೇವರ ಸೇವೆ ನಡೆಸಿದರು.
Assembly Election 2023ಚುನಾವಣೆಗೆ ಮುನ್ನವೇ ಸುರಪುರದಲ್ಲಿ ಹೊಡಿ ಬಡಿ ಕಡಿ
ಶ್ರೀ ಶಕ್ತಿ ಸ್ವರೂಪಿಣಿ ದೇವಿಯ ಪ್ರೀತ್ಯರ್ಥವಾಗಿ ಈ ಎಲ್ಲಾ ಕಾರ್ಯಕ್ರಮಗಳು ನಡೆದವು. ಉಡುಪಿಯ ಜೀವನದಿಗಳೆಂದೇ ಕರೆಯಲ್ಪಡುವ ಸೀತಾನದಿ, ಸ್ವರ್ಣ ನದಿ ಮತ್ತು ಮಡಿಸಾಲು ನದಿಯ ಅಪರೂಪದ ಸಂಗಮ ಸ್ಥಾನವಾದ ಕೋಡಿ ನದಿ ತೀರದಲ್ಲಿ ಈ ಚಲಿಸುವ ಸಂಗೀತವನ್ನು ಕೇಳುವುದೇ ಒಂದು ವಿಶಿಷ್ಟ ಅನುಭವವಾಗಿತ್ತು. ದೋಣಿಯನ್ನು ವೇದಿಕೆ ಮಾಡಿಕೊಂಡು ಪ್ರದಕ್ಷಿಣಾಕಾರದಲ್ಲಿ ಸುತ್ತು ಬರುತ್ತಾ ಪವನ ಆಚಾರ್ಯರು ವೀಣಾವಾದನ ನಡೆಸಿದರು. ಕಲಾವಿದರ ಭದ್ರತೆಗೆ ಸಂಘಟಕರು ದೋಣಿಯಲ್ಲಿ ಸೂಕ್ತ ಭದ್ರತಾ ಏರ್ಪಾಟು ಮಾಡಿದ್ದರು. ಪಕ್ಕ ವಾದ್ಯ ನುಡಿಸುವ ಕಲಾವಿದರಿಗೂ ಅವಕಾಶ ಕಲ್ಪಿಸಲಾಗಿತ್ತು.
ಹಲವಾರು ಶಾಸ್ತ್ರೀಯ ರಾಗಗಳ ಪ್ರಸ್ತುತಿಯ ಜೊತೆಗೆ ಅನೇಕ ಗೀತೆಗಳನ್ನು ಕೂಡ ಪವನ ಆಚಾರ್ಯರು ವೀಣಾ ನಾದದ ಮೂಲಕ ಹೊರಹೊಮ್ಮಿಸಿದ ರು. ಕಲಾವಿದೆ ಭಾವಪರವಶರಾಗಿ ವೀಣೆ ನುಡಿಸುತ್ತಿದ್ದರೆ, ದೇವಳದ ಆವರಣದಲ್ಲಿದ್ದ ಭಕ್ತರು ಸಂಗೀತ ಕೇಳಿದರು.
ಅಪ್ಪು ಫೋಟೋದ ಮುಂದೆ ಮದುವೆಯಾದ Chikkamagaluru ಜೋಡಿ
ಕರಾವಳಿಯ ಭಾಗದಲ್ಲಿ ಭಜನೆ ಹಾಗೂ ಸಂಗೀತಕ್ಕೆ ವಿಶೇಷ ಮಾನ್ಯತೆ ಇದೆ. ಇಲ್ಲಿ ಪ್ರತಿದಿನವೂ ಸಾವಿರಾರು ಮಂದಿ ಭಜನೆಯ ಮೂಲಕ ತಮ್ಮ ಭಕ್ತಿಯನ್ನು ನಿವೇದಿಸುತ್ತಾರೆ. ಕಡಲಿ ನೊಂದಿಗೆ ಹೋರಾಟ ನಡೆಸುತ್ತಾ ಜೀವನ ನಡೆಸುತ್ತಿರುವ ಇಲ್ಲಿನ ಮೀನುಗಾರ ಸಮುದಾಯದವರಿಗೆ, ತಮ್ಮ ಭಯವನ್ನು ನಿವಾರಿಸಿಕೊಂಡು ಭಕ್ತಿಯನ್ನು ನಿವೇದಿಸಲು ಇರುವ ಒಂದೇ ಅವಕಾಶ ಭಜನೆ ಮತ್ತು ಸಂಗೀತ. ಭಜನಾ ಸಂಗೀತದಿಂದಲೇ ಸಮುದ್ರರಾಜ ಶಾಂತನಾಗುತ್ತಾನೆ ಎನ್ನುವುದು ಇವರ ನಂಬಿಕೆ.
ಇದೀಗ ವೀಣಾವಾದನದ ಮೂಲಕ ಸಮುದ್ರವನ್ನು ಶಾಂತಗೊಳಿಸಿ, ರಾಷ್ಟ್ರಕ್ಕೆ ಸುಭಿಕ್ಷ ಉಂಟಾಗಲಿ ಎಂದು, ಹೋಮಹವನಗಳ ಮೂಲಕ ದೇವಿಯ ಭಕ್ತರು ಪ್ರಾರ್ಥಿಸಿದ್ದಾರೆ.
CBSE Fake Notice ಟರ್ಮ್ 2 ಪರೀಕ್ಷೆ ನಿಯಮಗಳ ಕುರಿತ ನಕಲಿ ಪೋಸ್ಟ್ ವೈರಲ್!
ಸಂಗೀತಕ್ಕೆ ಅದರದ್ದೇ ಆದ ನಿಯಮಗಳಿವೆ ಎನ್ನುತ್ತಾರೆ. ಇದೀಗ ಹೊಸ ನಿಯಮಗಳೊಂದಿಗೆ, ಹೊಸ ವೇದಿಕೆಯಲ್ಲಿ ಅಪರೂಪದ ಕಾರ್ಯಕ್ರಮ ನೀಡಿರುವ ಪವನ ಆಚಾರ್ಯ ಅವರ ವೀಣಾ ವಾದನ ಎಲ್ಲೆಡೆ ಜನಪ್ರಿಯವಾಗಿದೆ.