ಪ್ರತಿ ವರ್ಷ Eid al-Fitr ದಿನಾಂಕ ಬದಲಾಗುವುದೇಕೆ?

Published : Apr 30, 2022, 12:11 PM ISTUpdated : Apr 30, 2022, 12:22 PM IST
ಪ್ರತಿ ವರ್ಷ Eid al-Fitr ದಿನಾಂಕ ಬದಲಾಗುವುದೇಕೆ?

ಸಾರಾಂಶ

ರಂಜಾನ್ ಉಪವಾಸ ಮುಗಿಸಿ ಆಚರಿಸುವ ಈದ್ ಉಲ್ ಫಿತರ್ ಹಬ್ಬ ಹತ್ತಿರದಲ್ಲೇ ಇದೆ. ಅಂದ ಹಾಗೆ ಈ ಹಬ್ಬದ ದಿನಾಂಕವು ಪ್ರತಿ ವರ್ಷ ಬದಲಾಗಲು ಕಾರಣವೇನು ಗೊತ್ತಾ? 

ಇನ್ನೆರಡು ದಿನಗಳಲ್ಲಿ ರಂಜಾನ್(Ramzan) ಮಾಸ ಮುಗಿಯಲಿದೆ. ಜಗತ್ತಿನಾದ್ಯಂತ ಮುಸ್ಲಿಮರು ಈದ್ ಉಲ್ ಫಿತರ್(Eid-al-Fitr) ಆಚರಣೆಗೆ ಸಂಭ್ರಮದಲ್ಲಿ ಸಜ್ಜಾಗುತ್ತಿದ್ದಾರೆ. ಜೊತೆ ಜೊತೆಯಲ್ಲೇ ರಂಜಾನ್‌ನ ಕಡೆಯ ಎರಡು ದಿನಗಳನ್ನು ಇನ್ನಷ್ಟು ಅಲ್ಲಾಹ್ ಸ್ಮರಣೆಗೆ ಮೀಸಲಿಟ್ಟು, ಆತನ ಕೃಪೆಗೆ ಪಾತ್ರವಾಗುವ ಹುರುಪಿನಲ್ಲಿದ್ದಾರೆ. ಉಪವಾಸ ತಿಂಗಳಿನ ಅಂತ್ಯದ ಆಚರಣೆ ಇದಾಗಿದೆ.

ಮುಸ್ಲಿಮರು ಹಬ್ಬದ ತಯಾರಿಯಲ್ಲಿರುವುದು ನಿಜವೇ,  ಆದರೂ ಭಾರತದಲ್ಲಿ ಈದ್ ಮೇ 2ಕ್ಕೆ ಬರುವುದೋ ಅಥವಾ 3ಕ್ಕೆ ಬರುವುದೋ ಎಂಬುದಿನ್ನೂ ಎಲ್ಲೆಡೆ ಖಚಿತ ನಿರ್ಧಾರ ಪಡೆದಿಲ್ಲ. ಈ ವರ್ಷ ನಿಗದಿಯಾದ ದಿನಾಂಕದಂತೆ ಮೇ 2ರ ಸಂಜೆ ಈದ್ ಉಲ್ ಫಿತರ್ ಹಬ್ಬ ಆರಂಭವಾಗಿ ಮೇ 3ರ ಸಂಜೆವರೆಗೆ ಇರುತ್ತದೆ ಎನ್ನಲಾಗುತ್ತಿದೆಯಾದರೂ ಇದು ಖಚಿತವಾಗಲು ಚಂದ್ರ ಗೋಚರವಾಗಬೇಕು. ಅರೆ, ಇಷ್ಟೊಂದು ಹತ್ತಿರ ಬಂದಾಗಲೂ ಹಬ್ಬದ ದಿನಾಂಕ ಖಚಿತವಾಗಿಲ್ಲವೇ ಎಂದು ನಿಮಗೆ ಆಶ್ಚರ್ಯವಾಗಬಹುದು. ಅಷ್ಟೇ ಅಲ್ಲ, ಈ ಹಬ್ಬದ ದಿನಾಂಕವು ಹಿಂದೂಗಳ ಹಬ್ಬದಂತೆ ಪ್ರತಿ ವರ್ಷ ಬದಲಾಗುತ್ತಲೇ ಇರುತ್ತದೆ. ಆದರೆ, ಇದರ ಹಿಂದೆ ಕಾರಣವಿದೆ. 

ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಈದ್-ಉಲ್-ಫಿತರ್ ದಿನಾಂಕ ಬದಲಾಗಲು ಕಾರಣ ಇಲ್ಲಿದೆ. ಹಿಂದೂಗಳು ಹಿಂದೂ ಕ್ಯಾಲೆಂಡರ್ ಬಳಸಿ  ತಿಥಿ, ಮಾಸ, ಪಕ್ಷದ ಲೆಕ್ಕದಲ್ಲಿ ಹಬ್ಬದ ದಿನಾಂಕ ಕಂಡುಕೊಳ್ಳುವಂತೆಯೇ ಇಸ್ಲಾಂ ಧರ್ಮೀಯರು ಕೂಡಾ ಚಂದ್ರನ ಚಲನೆ ಆಧರಿಸಿದ ಇಸ್ಲಾಮಿಕ್ ಕ್ಯಾಲೆಂಡರ್(Islamic calendar) ಫಾಲೋ ಮಾಡುತ್ತಾರೆ. ಈ ಇಸ್ಲಾಮಿಕ್ ಕ್ಯಾಲೆಂಡರನ್ನು ಹಿಜ್ರಿ(Hijri) ಎಂದು ಕರೆಯಲಾಗುತ್ತದೆ. ಹಿಜ್ರಿ ಕ್ಯಾಲೆಂಡರ್ ಚಂದ್ರನು ತನ್ನ ಪ್ರತಿಯೊಂದು ಹಂತವನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ದಿನಗಳ ಸಂಖ್ಯೆಯನ್ನು ಲೆಕ್ಕ ಹಾಕುತ್ತದೆ.  ಈ ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ 12 ತಿಂಗಳನ್ನೊಳಗೊಂಡ 354 ದಿನಗಳಿವೆ. ಅಂದರೆ ಸೌರಮಾನ ಕ್ಯಾಲೆಂಡರ್‌ಗಿಂತ, ಅಂದರೆ ಸೂರ್ಯನ ಚಲನೆ ಆಧರಿಸಿದ ಕ್ಯಾಲೆಂಡರ್‌ಗಿಂತ 11 ದಿನಗಳು ಕಡಿಮೆ ಇರುತ್ತವೆ. 

Solar Eclipse 2022 Live : ಇಂದಿನ ಗ್ರಹಣ ನೋಡುವುದು ಹೇಗೆ? ಎಲ್ಲೆಲ್ಲಿ ಕಾಣಿಸುತ್ತದೆ?

ಈ ಇಸ್ಲಾಮಿಕ್ ಕ್ಯಾಲೆಂಡರಿನ 9ನೇ ತಿಂಗಳಲ್ಲಿ ರಂಜಾನ್ ಆಚರಿಸಲಾಗುತ್ತದೆ. ಈ ಒಂದು ತಿಂಗಳು ಪೂರ್ತಿ ಮುಸ್ಲಿಮರು ಬೆಳಗಿನಿಂದ ಸಂಜೆವರೆಗೆ ಉಪವಾಸ ಆಚರಿಸುತ್ತಾರೆ. 10ನೇ ತಿಂಗಳು ಶವ್ವಾಲ್(Shawwal) ಆರಂಭದ ಮೊದಲನೇ ದಿನವನ್ನು ಈದ್- ಉಲ್-ಫಿತರ್ ಎಂದು ಆಚರಿಸಲಾಗುತ್ತದೆ. ಅರ್ಧ ಚಂದ್ರ ಕಾಣಿಸುವುದರ ಆಧಾರದ ಮೇಲೆ ಈದ್‌ನ ದಿನಾಂಕ ನಿಗದಿ ಪಡಿಸಲಾಗುತ್ತದೆ. ಒಂದು ವೇಳೆ ರಂಜಾನ್‌ನ 29ನೇ ದಿನವೇ ಸೂರ್ಯಾಸ್ತದ ವೇಳೆಯಲ್ಲಿ ಅರ್ಧ ಚಂದ್ರ(crescent moon) ಕಾಣಿಸಿದರೆ ಮರುದಿನವನ್ನು ಶವ್ವಾಲ್ ಆರಂಭ ಅಥವಾ ಈದ್ ಉಲ್ ಫಿತರ್ ಎಂದು ಪರಿಗಣಿಸಲಾಗುತ್ತದೆ. ಇಲ್ಲದಿದ್ದಲ್ಲಿ ರಂಜಾನ್‌ನ 30ನೇ ದಿನದ ನಂತರದ ದಿನವನ್ನು ಈದ್ ದಿನವಾಗಿ ಆಚರಿಸಲಾಗುತ್ತದೆ. 

ಕೆಟ್ಟ ದೃಷ್ಟಿ ಬಿದ್ದರೆ ಹೀಗೆ ಪರಿಹಾರ ಮಾಡಿಕೊಳ್ಳಿ..!

ಹಿಜ್ರಿ ಕ್ಯಾಲೆಂಡರ್ ಸೌರಮಾನ ಕ್ಯಾಲೆಂಡರ್‌ಗಿಂತ ಭಿನ್ನವಾಗಿದೆ. ಅದು ಅಧಿಕ ವರ್ಷಗಳನ್ನು ಒಳಗೊಂಡಿಲ್ಲ. ಅಧಿಕ ವರ್ಷದಲ್ಲಿ, ಸೌರ ಕ್ಯಾಲೆಂಡರ್‌ಗಳು ಹೆಚ್ಚುವರಿ ದಿನವನ್ನು ಸೇರಿಸುತ್ತವೆ. ಇನ್ನು ಲೂನಿಸೋಲಾರ್ ಕ್ಯಾಲೆಂಡರ್‌ಗಳು ಹದಿಮೂರನೇ ತಿಂಗಳನ್ನು ಹೊಂದಿದ್ದು, ಈ ಅಧಿಕ ದಿನಗಳನ್ನು ಸರಿ ಹೊಂದಿಸುತ್ತವೆ. ಆದರೆ, ಹಿಜ್ರಿ ಕ್ಯಾಲೆಂಡರ್ ಹೀಗಲ್ಲ. ಈದ್ ಉಲ್ ಫಿತರ್ ದಿನಾಂಕವು ಹಿಜ್ರಿ ಕ್ಯಾಲೆಂಡರಿನಲ್ಲಿ ಪ್ರತಿ ವರ್ಷ ಒಂದೇ ಇರುತ್ತದೆ. ಆದರೆ ಇದು ಗ್ರೆಗೋರಿಯನ್ ಕ್ಯಾಲೆಂಡರ್ ಲೆಕ್ಕದಲ್ಲಿ ನೋಡಿದಾಗ ಬದಲಾಗುತ್ತಲೇ ಇರುತ್ತದೆ. 
 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

ಜೆನ್‌ ಜೀ ಮನಗೆದ್ದ ಭಗವದ್ಗೀತೆ: ಏನಿದರ ಗುಟ್ಟು?
ನಾಳೆ ಡಿಸೆಂಬರ್ 8 ರವಿ ಪುಷ್ಯ ಯೋಗ, 5 ರಾಶಿಗೆ ಅದೃಷ್ಟ ಮತ್ತು ಪ್ರಗತಿ