ಈ 4 ನಕ್ಷತ್ರದವರಲ್ಲಿ ಯಾರು ರಿಚ್, ಸೆಲ್ಫಿಶ್, ಲಕ್ಕಿ ಮತ್ತು ಅಟ್ರ್ಯಾಕ್ಟಿವ್?

By Suvarna News  |  First Published Jun 16, 2022, 4:01 PM IST

ಯಾವುದೇ ವ್ಯಕ್ತಿಗಳ ಜನ್ಮ ನಕ್ಷತ್ರಗಳ ಆಧಾರದ ಮೇಲೆ ಅವರ ಗುಣ, ಸ್ವಭಾವಗಳ ಬಗ್ಗೆ ತಿಳಿದುಕೊಳ್ಳಬಹುದು. ಅಲ್ಲದೆ, ಅವರು ಭವಿಷ್ಯದಲ್ಲಿ ಹೇಗಿರುತ್ತಾರೆ. ಅದೃಷ್ಟ ಅವರಿಗಿದೆಯೇ..? ಅವರ ಮನಸ್ಥಿತಿ ಎಂಥದ್ದು ಹೀಗೆ ಇನ್ನಿತರ ವಿಷಯಗಳನ್ನು ನಕ್ಷತ್ರದ ಮೂಲಕವೇ ತಿಳಿದುಕೊಳ್ಳಬಹುದಾಗಿದ್ದು, ಈಗ ಮೃಗಶಿರಾ, ಆರ್ದ್ರಾ, ಪುನರ್ವಸು, ಪುಷ್ಯ ನಕ್ಷತ್ರಗಳ ಬಗ್ಗೆ ತಿಳಿಯೋಣ... 


ಯಾವುದೇ ವ್ಯಕ್ತಿ ಹುಟ್ಟಿದ ದಿನ (Birth Day), ಘಳಿಗೆ ಆಧಾರದಲ್ಲಿ ಅವರ ರಾಶಿ (Zodiac sign), ನಕ್ಷತ್ರಗಳನ್ನು (Star) ಕಂಡುಕೊಳ್ಳಲಾಗುತ್ತದೆ. ಅದರ ಅನುಸಾರ ಜಾತಕವನ್ನು (Horoscope) ಸಿದ್ಧಪಡಿಸಲಾಗುತ್ತದೆ. ಈ ಜಾತಕಲದಲ್ಲಿನ ಕೆಲವು ಅಂಶಗಳ ಆಧಾರದ ಮೇಲೆ ಆಯಾ ವ್ಯಕ್ತಿಗಳ ಗುಣ, ಸ್ವಭಾವಗಳನ್ನು ತಿಳಿದುಕೊಳ್ಳಬಹುದು. ಹೇಗೆ ರಾಶಿಗಳ ಅನುಸಾರವಾಗಿ ಇವುಗಳನ್ನು ತಿಳಿದುಕೊಳ್ಳಬಹುದೋ ಹಾಗೆಯೇ ಆ ವ್ಯಕ್ತಿಯ ಜನ್ಮ ನಕ್ಷತ್ರದ ಆಧಾರದ ಮೇಲೆಯೂ ಸಮಸ್ತವನ್ನು ತಿಳಿಯಬಹುದಾಗಿದೆ. ಹೀಗಾಗಿ ಈ ಬಾರಿ ಮೃಗಶಿರಾ, ಆರ್ದ್ರಾ, ಪುನರ್ವಸು ಹಾಗೂ ಪುಷ್ಯ (Mrigashira, Ardra, Punarvasu and Pushya) ನಕ್ಷತ್ರಗಳಲ್ಲಿ ಜನಿಸಿದವರ ಗುಣ ಸ್ವಭಾವಗಳ ಬಗ್ಗೆ ತಿಳಿಯೋಣ...

ಮೃಗಶಿರಾ ನಕ್ಷತ್ರದವರು ಅಟ್ರ್ಯಾಕ್ಟಿವ್
27 ನಕ್ಷತ್ರ ಕೂಟದಲ್ಲಿ ಮೃಗಶಿರಾ ನಕ್ಷತ್ರವು 5ನೇ ನಕ್ಷತ್ರವಾಗಿದೆ. ಮಂಗಳ ಗ್ರಹವು (Mars) ಮೃಗಶಿರಾ ನಕ್ಷತ್ರದ ಅಧಿಪತಿ ದೇವರಾಗಿದೆ. ಈ ನಕ್ಷತ್ರದವರು ಸಾಹಸ ಪ್ರವೃತ್ತಿ ಉಳ್ಳವರು. ಜೊತಗೆ ಯಾವುದೇ ವಿಷಯವಾದರೂ ಸರಿ ಇವರು ದೃಢವಾದ ನಿಶ್ಚಯವನ್ನು ಹೊಂದಿರುತ್ತಾರೆ. ಇವರದ್ದು ಚಂಚಲ (Fickle) ಸ್ವಭಾವವಲ್ಲ. ಪ್ರತಿ ಕೆಲಸದಲ್ಲೂ ಇವರ ಶ್ರದ್ಧಾ ಮನೋಭಾವ ಕಾಣುವುದಲ್ಲದೆ, ಪರಿಶ್ರಮದಿಂದ ಕೆಲಸ ಮಾಡುವ ಸ್ವಭಾವವುಳ್ಳವರಾಗಿದ್ದಾರೆ. ಇವರದ್ದು ಆಕರ್ಷಕ (Attractive) ವ್ಯಕ್ತಿತ್ವವಾಗಿದ್ದು, ಯಾವಾಗಲೂ ಸಕ್ರಿಯರಾಗಿರುತ್ತಾರೆ. ಇವರಿಗೆ ವಂಚಕರನ್ನು ಕಂಡರೆ ಆಗದು. ಯಾರಾದರೂ ಇವರಿಗೆ ಮೋಸ ಮಾಡಿದ್ದರೆ ಅವರ ತಪ್ಪಿಗೆ ಶಿಕ್ಷೆ ಕೊಡಿಸುವವರೆಗೆ ಬಿಡುವವರಲ್ಲ. ಜೊತೆಗೆ ಇವರು ಅತ್ಯಂತ ಬುದ್ಧಿವಂತರೂ ಸಮತೋಲಿತ ಮಾನಸಿಕ ಮನಸ್ಥಿತಿಯುಳ್ಳವರಾಗಿದ್ದಾರೆ. ಅಲ್ಲದೆ, ಸಂಗೀತದ (Music) ಮೇಲೆ ಹೆಚ್ಚಿನ ಆಸಕ್ತಿ ಇದ್ದು, ಕೌಟುಂಬಿಕ ಜೀವನವನ್ನು ಸರಾಗವಾಗಿ ನಿಭಾಯಿಸಿಕೊಂಡು ಹೋಗುತ್ತಾರೆ. 

ಆರ್ದ್ರಾ ನಕ್ಷತ್ರದವರು ಸ್ವಾರ್ಥಿಗಳು 
ಆರ್ದ್ರಾ ನಕ್ಷತ್ರವು 6ನೇ ನಕ್ಷತ್ರವಾಗಿದೆ. ರಾಹು ಈ ನಕ್ಷತ್ರದ ಅಧಿಪತಿ ಗ್ರಹವಾಗಿದೆ. ಆರ್ದ್ರಾ ನಕ್ಷತ್ರದಲ್ಲಿ ಜನಿಸಿದವರಿಗೆ ಬುಧ ಮತ್ತು ರಾಹು ಗ್ರಹದ (Rahu Planet) ಪ್ರಭಾವವು ಜೀವನಪರ್ಯಂತ ಇರುತ್ತದೆ. ಅಲ್ಲದೆ ರಾಹುವಿನ ಪ್ರಭಾವವು ಇವರ ಮೇಲೆ ಬಹಳವೇ ಆಗಲಿದ್ದು, ರಾಜಕಾರಣದತ್ತ (Political) ಹೆಚ್ಚಿನ ಒಲವು ತೋರುವಂತೆ ಮಾಡುತ್ತದೆ. ಇತರರು ತಮ್ಮತ್ತ ಸೆಳೆಯಲು ರಾಹು ಗ್ರಹದ ಪ್ರಭಾವವೂ ಕಾರಣವಾಗಿರುತ್ತದೆ. ಇವರಿಗೆ ಇನ್ನೊಬ್ಬರ ಮನಸ್ಸಿನ ಮಾತುಗಳು ಬೇಗ ತಿಳಿದುಬಿಡುತ್ತದೆ. ಈ ಕಾರಣವಾಗಿಯೇ ಇವರು ಅಷ್ಟು ಸುಲಭವಾಗಿ ಮೋಸ ಹೋಗುವವರಲ್ಲ. ಆದರೆ, ಇವರು ಪರಮ ಸ್ವಾರ್ಥಿಗಳಾಗಿದ್ದು (Selfish), ತಮ್ಮ ಕೆಲಸವನ್ನು ಸಾಧಿಸಲು ನೈತಿಕ ವಿಚಾರಗಳನ್ನೂ ಲೆಕ್ಕಿಸುವವರಲ್ಲ. 

ಇದನ್ನು ಓದಿ: ಈ 4 ರಾಶಿಯವರಿಗೆ ಶಿವನ ಕೃಪೆ ಸದಾ ಇರಲಿದೆ!

ಪುನರ್ವಸು ನಕ್ಷತ್ರದವರು ರಿಚ್ (Rich)
ಪುನರ್ವಸು ನಕ್ಷತ್ರವು 7ನೇ ನಕ್ಷತ್ರವಾಗಿದೆ. ಗುರು ಗ್ರಹವು ಪುನರ್ವಸು ನಕ್ಷತ್ರದ ಅಧಿಪತಿ ದೇವರಾಗಿದೆ. ಈ ನಕ್ಷತ್ರದಲ್ಲಿ ಜನಿಸಿದವರಲ್ಲಿ ದೈವ ಶಕ್ತಿ ಇರುತ್ತದೆ. ಅಲ್ಲದೆ, ಇವರ ಬುದ್ಧಿಶಕ್ತಿ, ಜ್ಞಾಪಕ ಶಕ್ತಿ (Memory power) ಸಹ ಚುರುಕಾಗಿರುತ್ತದೆ. ಇವರು ಹೆಚ್ಚು ಸ್ನೇಹಪರರು, ಇತರರನ್ನು ಪ್ರೇಮ ಭಾವನೆಯಿಂದ ಕಾಣುವವರೂ ಆಗಿದ್ದಾರೆ. ಇವರಿಗೆ ಕಷ್ಟ ಬಂದಾಗಲೆಲ್ಲ ಇವರನ್ನು ಒಂದು ಅದೃಶ್ಯ ಶಕ್ತಿ ಕಾಪಾಡುತ್ತದೆ. ಅಲ್ಲದೆ, ಇವರು ಧನವಂತರು ಸಹ ಆಗಿರುತ್ತಾರೆ.

ಇದನ್ನು ಓದಿ: ಈ 3 ರಾಶಿಗಳಿಗೆ ಜುಲೈನಲ್ಲಿ ಕುಬೇರನ ಕೃಪೆ - ಧನಲಾಭ

ಪುಷ್ಯ ನಕ್ಷತ್ರ ಅದೃಷ್ಟವಂತರು (Lucky)
ಪುಷ್ಯ ನಕ್ಷತ್ರವು 8ನೇ ನಕ್ಷತ್ರವಾಗಿದೆ. ಶನಿ ಗ್ರಹವು ಈ ನಕ್ಷತ್ರದ ಅಧಿಪತಿ ದೇವರಾಗಿದೆ. ಶನಿ ಗ್ರಹದ (Saturn) ಪ್ರಭಾವ ಹೊಂದಿರುವ ಪುಷ್ಯ ನಕ್ಷತ್ರವನ್ನು ಎಲ್ಲಕ್ಕಿಂತ ಶುಭ ನಕ್ಷತ್ರನ್ನಲಾಗುತ್ತದೆ. ಅಲ್ಲದೆ, ಇವರು ಸದಾ ಇತರರ ಸಹಾಯಕ್ಕೆ ಸಿದ್ಧರಿರುತ್ತಾರೆ. ಸೇವಾ ಮನೋಭಾವನೆ ಇವರಿಗೆ ಹೆಚ್ಚು. ಇವರು ಪರಿಶ್ರಮಿಗಳಾಗಿದ್ದು, ಇದರಿಂದಲೇ ಯಶಸ್ಸನ್ನು (Success) ಪಡೆಯುತ್ತಾರೆ. ಅಲ್ಲದೆ, ಇವರು ಅದೃಷ್ಟವಂತರಾಗಿದ್ದು, ವ್ಯವಸ್ಥಿತ ಜೀವನ ನಡೆಸಲು ಇಚ್ಛಿಸುತ್ತಾರೆ. 

 

Tap to resize

Latest Videos

 

click me!