Astrology Tips: ವೀಳ್ಯದೆಲೆಯಲ್ಲಿದೆ ಮನೆ ಸಮಸ್ಯೆ ಪರಿಹರಿಸುವ ಶಕ್ತಿ

By Roopa HegdeFirst Published Jun 16, 2022, 12:40 PM IST
Highlights

ಮನೆ ಅಂದ್ಮೇಲೆ ಒಂದಿಷ್ಟು ಸಮಸ್ಯೆ ಬರ್ಲೇಬೇಕು. ಆದ್ರೆ ಸಮಸ್ಯೆಗಳು ಬರಬಾರದು, ಸದಾ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರ್ಬೇಕೆಂದ್ರೆ ಕೆಲವೊಂದು ಉಪಾಯ ಮಾಡ್ಬೇಕು.  ಪೂಜೆಗೆ ಬಳಸುವ ವೀಳ್ಯದೆಲೆ ನಿಮ್ಮ ನೆರವಿಗೆ ಬರುತ್ತೆ. 
 

ಹಿಂದೂ ಧರ್ಮದ ( Hindu Religion) ಲ್ಲಿ ವೀಳ್ಯದೆಲೆ (Betel Leaves) ಗೆ ಮಹತ್ವದ ಸ್ಥಾನವಿದೆ. ಪ್ರತಿಯೊಂದು ಶುಭ ಕಾರ್ಯದಲ್ಲೂ ವೀಳ್ಯದೆಲೆ ಸ್ಥಾನ ಪಡೆಯುತ್ತದೆ. ಸ್ಕಂದ ಪುರಾಣದ ಪ್ರಕಾರ, ಸಮುದ್ರ ಮಂಥನದ ವೇಳೆ ವೀಳ್ಯದೆಲೆಯನ್ನು ಬಳಕೆ ಮಾಡಲಾಗಿತ್ತು. ಇದೇ ಕಾರಣಕ್ಕೆ ಪೂಜೆ ವೇಳೆ ವೀಳ್ಯದೆಲೆ ಬಳಕೆ ಮಾಡಲಾಗುತ್ತದೆ. ಶುಭ ಕಾರ್ಯದಲ್ಲಿ ಬಳಕೆಯಾಗುವ ಈ ವೀಳ್ಯದೆಲೆಯಿಂದ ನಾವು ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಹಣಕಾಸಿ (Finance) ನ ತೊಂದರೆಗಳಿಂದ ಬಳಲುತ್ತಿದ್ದರೆ, ಸದಾ ನಿಮ್ಮ ಕೆಲಸ ಸ್ಥಗಿತಗೊಳ್ಳುತ್ತಿದೆ, ನಿಮ್ಮ ಮನೆಯಲ್ಲಿ ಅಶಾಂತಿ ಮತ್ತು ಸಂಕಟದ ವಾತಾವರಣವಿದ್ದರೆ ಅಥವಾ ರೋಗ ಮನೆಯವರನ್ನು ಕಾಡ್ತಿದ್ದರೆ ವೀಳ್ಯದೆಲೆ ಬಳಕೆ ಮೂಲಕ ನೀವು ಈ ಎಲ್ಲ ಸಮಸ್ಯಯಿಂದ ಪರಿಹಾರ ಕಂಡುಕೊಳ್ಳಬಹುದು.  ಹಗಲಿರುಳು ದುಡಿದ್ರೂ ಅನೇಕ ಬಾರಿ ನಮಗೆ ಯಶಸ್ಸು ಸಿಗುವುದಿಲ್ಲ. ಆಗ ನಾವು ವೀಳ್ಯದೆಲೆ ಸಹಾಯ ಪಡೆಯಬಹುದು. ಇಂದು ನಾವು ವೀಳ್ಯದೆಲೆಯಿಂದ ಯಾವೆಲ್ಲ ಸಮಸ್ಯೆ ಬಗಹರಿಸಿಕೊಳ್ಳಬಹುದು ಎಂಬುದನ್ನು ಹೇಳ್ತೇವೆ.   

ಕೆಲಸದಲ್ಲಿ ಅಡೆತಡೆ : ಕೆಲಸದಲ್ಲಿ ನಿಮಗೆ ಅಡೆತಡೆಯಾಗ್ತಿದ್ದರೆ ನೀವು ವೀಳ್ಯದೆಲೆಯಿಂದ ಪರಿಹಾರ ಕಂಡುಕೊಳ್ಳಬಹುದು. ಭಾನುವಾರದ ದಿನ ಮನೆಯಿಂದ ಹೊರಗೆ ಹೋಗುವ ಸಮಯದಲ್ಲಿ ವೀಳ್ಯದೆಲೆಯನ್ನು ತೆಗೆದು ನಿಮ್ಮ ಪರ್ಸ್ ನಲ್ಲಿ ಹಾಕಿಕೊಳ್ಳಿ. ಹೀಗೆ ಮಾಡಿದ್ರೆ ನಿಂತ ಎಲ್ಲ ಕೆಲಸ ಪೂರ್ಣಗೊಳ್ಳುತ್ತದೆ. ನಿಮ್ಮಿಷ್ಟದ ಕೆಲಸ ನಿಮಗೆ ಸಿಗುತ್ತದೆ.

ಈ 3 ರಾಶಿಗಳಿಗೆ ಜುಲೈನಲ್ಲಿ ಕುಬೇರನ ಕೃಪೆ - ಧನಲಾಭ

ಬಜರಂಗ ಬಲಿಗೆ ವೀಳ್ಯದೆಲೆ :  ಮಂಗಳವಾರ ಮತ್ತು ಶನಿವಾರದಂದು ಬಜರಂಗ ಬಲಿಗೆ ವೀಳ್ಯದೆಲೆಯನ್ನು ಅರ್ಪಿಸಿದರೆ  ಸ್ಥಗಿತಗೊಂಡ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ ಎಂದು ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ. ಇದರೊಂದಿಗೆ  ತೊಂದರೆಗಳು ಮತ್ತು ರೋಗಗಳು ಸಹ ಮನೆಯಲ್ಲಿ ಓಡಿಹೋಗುತ್ತವೆ.

ಬುಧವಾರ ವೀಳ್ಯದೆಲೆ ಸೇವನೆ :  ಬುಧವಾರದಂದು ವೀಳ್ಯದೆಲೆ ಸೇವಿಸಬೇಕು ಎಂದು ಹೇಳಲಾಗಿದೆ. ಬುಧವಾರ ವೀಳ್ಯದೆಲೆ ಸೇವನೆ ಮಾಡಿದ್ರೆ ವ್ಯಕ್ತಿಯಲ್ಲಿ ಸ್ನಾಯು ಶಕ್ತಿ ಮತ್ತು ಮಾನಸಿಕ ಶಕ್ತಿ ಹೆಚ್ಚುತ್ತದೆ.

ತಾಯಿ ಲಕ್ಷ್ಮಿಯನ್ನು ಪ್ರಸನ್ನಗೊಳಿಸಿ : ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗ್ತಿದೆ ಅಂದ್ರೆ ಲಕ್ಷ್ಮಿ ಮುನಿಸಿಕೊಂಡಿದ್ದಾಳೆ ಎಂದರ್ಥ. ಆಕೆಯ ಮನ ಒಲಿಸಲು ಪೂಜೆ ಬಟ್ಟಲಿನಲ್ಲಿ ವೀಳ್ಯದೆಲೆಯನ್ನು ಹಾಕಿ, ತಾಯಿ ಪಾದದ ಬಳಿ ಇಡಿ. ಕುಂಕುಮವನ್ನು ಅದರಲ್ಲಿ ಹಾಕಿ, ಹಣೆಗೆ ಹಚ್ಚಿಕೊಳ್ಳಿ. ಮನೆಯಿಂದ ಹೊರಗೆ ಹೋಗುವ ಮೊದಲು ಇದನ್ನು ಅವಶ್ಯವಾಗಿ ಮಾಡ್ಬೇಕು.

ದುಷ್ಟ ಶಕ್ತಿ ನಿಗ್ರಹ (Removal of Negative Energy) : ದುಷ್ಟ ಶಕ್ತಿಯ ಕಣ್ಣು ನಿಮ್ಮ ಮೇಲೆ ಬಿದ್ದಿದ್ದರೆ ನೀವು ವೀಳ್ಯದೆಲೆಯ ಮೇಲೆ ಕೆಲವು ಗುಲಾಬಿ ದಳಗಳನ್ನು ಇರಿಸಿ ಅದನ್ನು ಸೇವನೆ ಮಾಡ್ಬೇಕು. ಹೀಗೆ ಮಾಡಿದ್ರೆ ಎಲ್ಲಾ ದುಷ್ಟ ಶಕ್ತಿಗಳು ಆ ವ್ಯಕ್ತಿಯಿಂದ ದೂರವಾಗುತ್ತವೆ. 

ಗಣೇಶನಿಗೆ ಅರ್ಪಣೆ : ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸಲು ಬಯಸಿದರೆ, ವೀಳ್ಯದೆಲೆಯ ಮೇಲೆ ಕುಂಕುಮವನ್ನು ಇಟ್ಟು ಗಣೇಶನಿಗೆ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಗಜಾನನನು ಪ್ರಸನ್ನನಾಗುತ್ತಾನೆ ಮತ್ತು ಜೀವನದ ಎಲ್ಲಾ ತೊಂದರೆಗಳನ್ನು ತೊಡೆದುಹಾಕುತ್ತಾನೆ.

Vastu Tips: ದಿನ ನೋಡಿ ಶಾಪಿಂಗ್ ಮಾಡಿ, ಇಲ್ಲಿವೆ ಸಿಂಪಲ್ ಟಿಪ್ಸ್

ಮನೆಯಲ್ಲಿ ಸಕಾರಾತ್ಮಕತೆ :  ಮನೆಯಲ್ಲಿ ನಕಾರಾತ್ಮಕತೆ ಹರಡಿದರೆ ಮತ್ತು ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯದ ವಾತಾವರಣವಿದ್ದರೆ, ಮನೆಯ ಮುಖ್ಯ ಗೇಟ್‌ನಲ್ಲಿ ಪ್ರತಿದಿನ ವೀಳ್ಯದೆಲೆಯನ್ನು ನೇತು ಹಾಕಿ.  ಹೀಗೆ ಮಾಡುವುದರಿಂದ ಮನೆಯ ನಕಾರಾತ್ಮಕ ಶಕ್ತಿ ಕೊನೆಗೊಳ್ಳುತ್ತದೆ ಮತ್ತು ಧನಾತ್ಮಕ ಶಕ್ತಿ ನೆಲೆಸುತ್ತದೆ. 

ತುಂಡಾದ ವೀಳ್ಯದೆಲೆ : ಮನೆಯ ಪೂಜೆ ಕಾರ್ಯಕ್ಕೆ ವೀಳ್ಯದೆಲೆ ಬಳಕೆ ಮಾಡ್ತಿದ್ದರೆ ಸರಿಯಾದ ವೀಳ್ಯದೆಲೆ ಆಯ್ಕೆ ಮಾಡಿ. ಅದು ಮಧ್ಯದಲ್ಲಿ ಅಥವಾ ಎಲ್ಲೂ ಹರಿದಿರಬಾರದು. ಹಾಗೆಯೇ ಪೂಜೆ ಬಟ್ಟಲಿನಲ್ಲಿ ಅದು ಒಣಗಲು ಬಿಡಬಾರದು. ಸರಿಯದ ಎಲೆ ಬಳಕೆ ಮಾಡಿದ್ರೆ ಮಾತ್ರ ಪೂಜೆಯ ಫಲ ಸಿಗಲು ಸಾಧ್ಯ.

 

 

click me!