ಎಷ್ಟು ದುಡಿದರೂ ಸಂಪತ್ತಿನ ಸೃಷ್ಟಿ ಸಾಧ್ಯವಾಗುತ್ತಿಲ್ಲ ಎಂದರೆ ಮಹಾಲಕ್ಷ್ಮೀಯ ಕೃಪಾಕಟಾಕ್ಷ ನೀವು ಪಡೆಯಬೇಕು. ಅದಕ್ಕಾಗಿ ಶುಕ್ರವಾರದ ದಿನ ನೀವು ಏನೆಲ್ಲ ಮಾಡಬೇಕೆಂದು ತಿಳಿಯಿರಿ.
ಹಣ ಸಂಪಾದಿಸಲು ಎಲ್ಲರೂ ದೇಹ ದಂಡಿಸಿ ಬುದ್ಧಿಗೆ ಕೆಲಸ ಕೊಟ್ಟು ದುಡಿಯುತ್ತಾರೆ. ಜೀವನ ಪರ್ಯಂತ ದುಡಿಮೆ ಮಾಡುತ್ತಲೇ ಇರುತ್ತೇವೆ. ಆದರೆ, ಕೆಲವೊಮ್ಮೆ ಎಷ್ಟೇ ಒದ್ದಾಡಿದರೂ ಸಂಪತ್ತು ಸಂಗ್ರಹವಾಗದೆ ಹೋಗಬಹುದು. ಪರಿಶ್ರಮಕ್ಕೆ ತಕ್ಕ ಫಲ ಸಿಗದೆ ಕಂಗಾಲಾಗುವಂತಾಗಬಹುದು. ಮನೆ ಮಂದಿಯೆಲ್ಲ ದುಡಿದರೂ ಹಣದ ಅಡಚಣೆ ತಪ್ಪುತ್ತಿಲ್ಲ ಎನಿಸಬಹುದು.. ಅಥವಾ ಕೂಡಿಟ್ಟ ಹಣ ಅನಾಯಾಸವಾಗಿ ಕಳೆದುಕೊಳ್ಳುವ ಸನ್ನಿವೇಶಗಳು ಎದುರಾಗಬಹುದು. ಏಕೆಂದರೆ ಹಣ(Money) ಕೈಲಿ ನಿಲ್ಲಲು ಕೇವಲ ಕಷ್ಟ ಪಟ್ಟು ದುಡಿದರೆ ಸಾಲದು, ತಾಯಿ ಲಕ್ಷ್ಮಿ(Goddess Lakshmi)ಯ ಅನುಗ್ರಹವೂ ಬೇಕು.
ಲಕ್ಷ್ಮೀದೇವಿಯು ಸಂಪತ್ತಿನ ಒಡತಿಯಾಗಿದ್ದಾಳೆ. ಆಕೆ ನೆಲೆಸಿದ್ದಲ್ಲಿ ಸಂಪತ್ತು ಒಗ್ಗೂಡುತ್ತದೆ. ಅವಳ ಕೃಪಾಕಟಾಕ್ಷ ಇದ್ದರೆ ಕೈಗೊಂಡ ಉದ್ಯಮ, ವ್ಯಾಪಾರ ಎಲ್ಲವೂ ಕೈ ಹಿಡಿಯುತ್ತವೆ. ಹಾಗಾಗಿ, ಪರಿಶ್ರಮದ ಜೊತೆಗೆ ತಾಯಿಯ ಅನುಗ್ರಹ ಪಡೆಯಲೂ ಕೆಲವೊಂದು ಪರಿಹಾರಗಳನ್ನು ಮಾಡಬೇಕಾಗುತ್ತದೆ. ಮೊದಲೇ ಚಂಚಲಳಾದ ಆಕೆಯನ್ನು ಧೀರ್ಘಕಾಲ ಒಂದೇ ಕಡೆ ಉಳಿಸಿಕೊಳ್ಳುವುದೆಂದರೆ ಸುಲಭದ ಮಾತಲ್ಲ.
ಶುಕ್ರವಾರ ಲಕ್ಷ್ಮೀದೇವಿಯ ದಿನ. ಹೀಗಾಗಿ, ಶುಕ್ರವಾರ(Friday)ದ ದಿನ ನೀವು ಮಾಡುವ ಈ ಕೆಲವೊಂದು ಕಾರ್ಯಗಳಿಂದ ಮಹಾಲಕ್ಷ್ಮೀಯನ್ನು ಒಲಿಸಿಕೊಳ್ಳಬಹುದು. ಪೂರ್ಣ ಭಕ್ತಿ, ನಂಬಿಕೆಯಿಂದ ಶುಕ್ರವಾರ ಹೀಗೆ ಅವಳನ್ನು ಪೂಜಿಸುವ ಜೊತೆಗೆ ಈ ಕ್ರಮಗಳನ್ನು ತೆಗೆದುಕೊಂಡರೆ ಆಕೆ ನಿಮ್ಮೊಂದಿಗೆ ಸದಾ ಕಾಲ ಇರುತ್ತಾಳೆ. ನಿಮ್ಮೆಲ್ಲ ಆರ್ಥಿಕ ಸಮಸ್ಯೆಗಳು ದೂರಾಗುತ್ತವೆ. ಅಂದು ನೀವೇನೇನು ಮಾಡಬೇಕು ನಾವು ಹೇಳುತ್ತೇವೆ.
ದೇವಾಲಯದಲ್ಲಿ ದಾನ
ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಮತ್ತು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು, ಶುಕ್ರವಾರದಂದು ಕೆಂಪು(red) ದಿರಿಸು ಧರಿಸಿ ಮಹಾಲಕ್ಷ್ಮಿಯ ದೇವಸ್ಥಾನಕ್ಕೆ ಹೋಗಿ. ಕೆಂಪು ಬಣ್ಣದ ಬಟ್ಟೆ, ಕೆಂಪು ಬಳೆ ಇತ್ಯಾದಿಗಳನ್ನು ಅರ್ಪಿಸಿ (ಕೆಂಪು ಬಣ್ಣದ ವಸ್ತುಗಳನ್ನು ದಾನ ಮಾಡಿ). ಈ ದಿನದಂದು, ಪೂಜೆಯ ಸಮಯದಲ್ಲಿ ಲಕ್ಷ್ಮಿ ದೇವಿಗೆ ಕೆಂಪು ಹೂವುಗಳ(Flowers)ನ್ನು ಅರ್ಪಿಸಿ ಮತ್ತು ಪೂಜೆಯನ್ನು ಮಾಡಿದ ನಂತರ, ಈ ಹೂವುಗಳನ್ನು ನಿಮ್ಮ ಬೀರು ಅಥವಾ ಕಪಾಟಿನಲ್ಲಿ ಇರಿಸಿ. ಲಕ್ಷ್ಮಿಯ ಆಶೀರ್ವಾದ ಪಡೆಯಲು ಇದು ಸುಲಭವಾದ ಮಾರ್ಗವಾಗಿದೆ.
Holi 2022: ಈ ನಗರದಲ್ಲಿ 12 ದಿನ ನಡೆಯುತ್ತೆ ಬಣ್ಣದೋಕುಳಿ, ಇಲ್ಲಾಗಲೇ ಶುರುವಾಗಿದೆ ಹೋಳಿ!
ಮನೆಯಲ್ಲಿ ಪೂಜೆ
ಶುಕ್ರವಾರದ ದಿನ ಮನೆಯ ಈಶಾನ್ಯ(North east) ದಿಕ್ಕಿನಲ್ಲಿ ಲಕ್ಷ್ಮಿಯನ್ನಿರಿಸಿ ಪೂಜಿಸಿದ ನಂತರ, ಅದೇ ಸಂಜೆ, ಶುದ್ಧ ಹಸುವಿನ ತುಪ್ಪ(ghee)ದ ದೀಪವನ್ನು ಆಕೆಗಾಗಿ ಬೆಳಗಿಸಿ. ಈ ದೀಪದಲ್ಲಿ ಹತ್ತಿಯ ಬದಲು ಕೆಂಪು ದಾರವನ್ನು ಬಳಸಿ ದೀಪವನ್ನು ಮಾಡಿ. ಮತ್ತು ಈ ದೀಪದಲ್ಲಿ ಒಂದು ಚಿಟಿಕೆ ಕುಂಕುಮವನ್ನೂ ಹಾಕಿ. ಇದರಿಂದ ಸಂಪತ್ತಿನ ಕ್ರೋಢೀಕರಣ ಹೆಚ್ಚುತ್ತದೆ.
ವಿಷ್ಣುಪೂಜೆ
ಶುಕ್ರವಾರದಂದು ಲಕ್ಷ್ಮಿ ದೇವಿಯ ಜೊತೆಗೆ ಭಗವಾನ್ ವಿಷ್ಣು(Lord Vishnu)ವನ್ನು ಪೂಜಿಸುವುದು ಕೂಡಾ ಮಂಗಳಕರವಾಗಿದೆ. ಇದಕ್ಕಾಗಿ ಶುಕ್ರವಾರದಂದು ದಕ್ಷಿಣಾವರ್ತಿ ಶಂಖದಲ್ಲಿ ನೀರು ತುಂಬಿ ವಿಷ್ಣುವಿಗೆ ಅಭಿಷೇಕ ಮಾಡಿ. ಇದು ಆರ್ಥಿಕ ಬಿಕ್ಕಟ್ಟನ್ನು ಕೊನೆಗೊಳಿಸುತ್ತದೆ. ಇದಲ್ಲದೇ ಶುಕ್ರವಾರ ಶ್ರೀ ಯಂತ್ರಕ್ಕೆ ಹಾಲಿನ ಅಭಿಷೇಕ ಮಾಡುವುದರಿಂದಲೂ ಸಾಕಷ್ಟು ಧನಲಾಭಗಳನ್ನು ಪಡೆಯಬಹುದಾಗಿದೆ.
Vastu Tips : ಹೀಗೆ ಮಾಡಿದ್ರೆ ವ್ಯವಹಾರದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ
ಶ್ರೀ ಸೂಕ್ತ(Shree sookta)
ಶುಕ್ರವಾರದಂದು ಲಕ್ಷ್ಮಿ ದೇವಿಯನ್ನು ಪೂಜಿಸುವಾಗ, ಶ್ರೀಸೂಕ್ತ ಪಠಿಸಿ. ಇದರಿಂದ ಲಕ್ಷ್ಮಿ ದೇವಿಯು ಸಹ ಪ್ರಸನ್ನಳಾಗುತ್ತಾಳೆ. ಪಠಣದ ನಂತರ, ಭಗವಾನ್ ನಾರಾಯಣ ಮತ್ತು ಲಕ್ಷ್ಮಿ ದೇವಿಗೆ ಖೀರ್ ಅರ್ಪಿಸಿ. ಇದರಿಂದ ಜೀವನದಲ್ಲಿ ಆರ್ಥಿಕ ಸಮೃದ್ಧಿ ಹೆಚ್ಚುವುದು.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.