ಗ್ರಹಗಳ ಗೋಚಾರದಿಂದ ವ್ಯಕ್ತಿಯ ಜೀವನದ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳು ಉಂಟಾಗಲಿವೆ. ಇದೇ ಮಾರ್ಚ್ 15ರಂದು ಸೂರ್ಯ ಗ್ರಹವು ಮೀನ ರಾಶಿಗೆ ಪ್ರವೇಶಿಸುವುದರಿಂದ ವೃಷಭ, ಮಿಥುನ, ಕರ್ಕಾಟಕ ಮತ್ತು ಧನು ರಾಶಿಯವರಿಗೆ ಹೆಚ್ಚಿನ ಲಾಭ ಉಂಟಾಗಲಿದೆ. ಈ ರಾಶಿಗಳಿಗೆ ಆಗುವ ಪ್ರಯೋಜನಗಳ ಬಗ್ಗೆ ಮತ್ತಷ್ಟು ತಿಳಿಯೋಣ.
ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಗ್ರಹ (Planet), ರಾಶಿ (Zodiac) ಮತ್ತು ನಕ್ಷತ್ರಗಳು (Star) ವ್ಯಕ್ತಿಯ ಜೀವನದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಯಾವುದೇ ಗ್ರಹ ಅಥವಾ ರಾಶಿಯು ಪರಿವರ್ತನೆಗೊಂಡಾಗ ಜಾತಕದಲ್ಲಿ (Horoscope) ಬದಲಾವಣೆ ಉಂಟಾಗುತ್ತದೆ. ಈ ಬದಲಾವಣೆಯು ವ್ಯಕ್ತಿಯ ಬದುಕಿನ ಮೇಲೆ ಶುಭ ಅಥವಾ ಅಶುಭ ಪರಿಣಾಮಗಳನ್ನು ಬೀರುತ್ತದೆ. ಪ್ರತಿ ಗ್ರಹಗಳ ಗೋಚಾರವು ಮಹತ್ವದ್ದಾಗಿದೆ, ಅದರಲ್ಲೂ ಸೂರ್ಯ (Sun) ಗ್ರಹದ ಗೋಚಾರವು ಅತ್ಯಂತ ವಿಶೇಷವಾಗಿದೆ. ಸೂರ್ಯ ಗ್ರಹವು ಮೀನ ರಾಶಿಗೆ ಪ್ರವೇಶಿಸುವುದರಿಂದ ಕೆಲವು ರಾಶಿಯವರಿಗೆ (Zodiac) ಅತ್ಯಂತ ಶುಭ ಪರಿಣಾಮಗಳು ಉಂಟಾಗುತ್ತವೆ.
ಇದೇ ಮಾರ್ಚ್ 15ರಂದು ಸೂರ್ಯ ಗ್ರಹವು ಮೀನ (Pisces) ರಾಶಿಯನ್ನು ಪ್ರವೇಶಿಸಲಿದೆ. ಗೌರವ -ಪ್ರತಿಷ್ಠೆ, ತೇಜಸ್ಸು, ಉದ್ಯೋಗ, ಯಶಸ್ಸು (Success)ಮತ್ತು ಆತ್ಮ ವಿಶ್ವಾಸದ (Confidence) ಕಾರಕ ಗ್ರಹವಾಗಿರುವ ಸೂರ್ಯನ ಶುಭ ಪರಿಣಾಮ ರಾಶಿಗಳ ಮೇಲೆ ಉಂಟಾದಾಗ ಆಯಾ ರಾಶಿಯವರ ಜೀವನದಲ್ಲಿ ಸುಖ, ಸಂತೋಷ, ನೆಮ್ಮದಿ ನೆಲೆಸುವುದರ ಜೊತೆಗೆ ಯಶಸ್ಸು ಜೊತೆಯಾಗುತ್ತದೆ. ಹಾಗಾಗಿ ಈ ಬಾರಿಯ ಸೂರ್ಯ ಗ್ರಹದ ಗೋಚಾರದಿಂದ (Transit) ವೃಷಭ, ಮಿಥುನ, ಕರ್ಕಾಟಕ ಮತ್ತು ಧನು ರಾಶಿಯವರಿಗೆ ವಿಶೇಷ ಫಲ ಪ್ರಾಪ್ತವಾಗಲಿದೆ . ಅಷ್ಟೇ ಅಲ್ಲದೇ ಧನಲಾಭ ಉಂಟಾಗುವ ಸಾಧ್ಯತೆ ಕೂಡಾ ಹೆಚ್ಚಿದೆ. ಈ ರಾಶಿಗಳ ಮೇಲಾಗುವ ಶುಭ ಪರಿಣಾಮದ (Good effects) ಬಗ್ಗೆ ತಿಳಿಯೋಣ....
ವೃಷಭ ರಾಶಿ (Taurus)
ಜ್ಯೋತಿಷ್ಯ ಶಾಸ್ತ್ರದ ಅನುಸಾರ ಮಾರ್ಚ್ 15ರಂದು ಸೂರ್ಯ ಗ್ರಹವು ಮೀನ ರಾಶಿ ಪ್ರವೇಶಿಸುವುದರಿಂದ ಈ ರಾಶಿಯವರ ಆರ್ಥಿಕ ಸ್ಥಿತಿ (Fianance) ಅತ್ಯಂತ ಉತ್ತಮವಾಗಲಿದೆ. ಕಾರಣ ಸೂರ್ಯ ಗ್ರಹವು ಈ ರಾಶಿಯವರ ಆದಾಯ (Income) ಸ್ಥಾನಕ್ಕೆ ಪ್ರವೇಶಿಸಲಿದೆ. ಈ ರಾಶಿಯವರ ಆದಾಯ ಹೆಚ್ಚಲಿದೆ. ಅಷ್ಟೇ ಅಲ್ಲದೆ ಆದಾಯದ ಮೂಲಗಳು (Source) ಹೆಚ್ಚಲಿವೆ. ಆದಾಯ ತರುವ ಹೊಸ ಹೊಸ ಅವಕಾಶಗಳು (Opportunities) ತೆರೆದುಕೊಳ್ಳಲಿವೆ. ವ್ಯಾಪಾರ (Business) ವಹಿವಾಟಿನಲ್ಲಿ ತೊಡಗಿಕೊಂಡವರಿಗೆ ಈ ಬಾರಿ ವಿಶೇಷ ಲಾಭ (Profit) ಸಿಗಲಿದೆ. ವಿಶೇಷವಾಗಿ ಈ ಸಮಯದಲ್ಲಿ ಮನೆ (House) ಕೊಳ್ಳುವುದರಿಂದ ಲಾಭ ಉಂಟಾಗಲಿದೆ. ಹಾಗಾಗಿ ಸೂರ್ಯನ ರಾಶಿ ಪರಿವರ್ತನೆಯು ವೃಷಭದವರಿಗೆ ಅನೇಕ ಲಾಭಗಳನ್ನು ತಂದುಕೊಡಲಿದೆ.
ಮಿಥುನ ರಾಶಿ (Gemini)
ಮಿಥುನ ರಾಶಿಯವರ ಉದ್ಯೋಗ (Job) ಸ್ಥಾನದಲ್ಲಿ ಸೂರ್ಯ ಗ್ರಹದ ಪ್ರವೇಶವಾಗುವುದರಿಂದ ಈ ರಾಶಿಯವರಿಗೆ ಕೆಲಸದ (Work) ವಿಷಯದಲ್ಲಿ ಅನೇಕ ಲಾಭಗಳು ಉಂಟಾಗುತ್ತವೆ. ಈ ಸಮಯದಲ್ಲಿ ಹೊಸ ಉದ್ಯೋಗ ದೊರಕುವ ಸಾಧ್ಯತೆ ಹೆಚ್ಚಿದೆ. ಅಷ್ಟೇ ಅಲ್ಲದೆ ಈಗಿರುವ ಉದ್ಯೋಗದಲ್ಲಿ ಸಹ ಬಡ್ತಿ (Promotion) ದೊರಕುವ ಸಂಭವ ಹೆಚ್ಚಿರುತ್ತದೆ. ಈ ಅವಧಿಯಲ್ಲಿ ಕಾರ್ಯ ಕ್ಷೇತ್ರದಲ್ಲಿ ಈ ರಾಶಿಯವರ ಕೆಲಸಕ್ಕೆ ಪ್ರಶಂಸೆ (Appreciation) ವ್ಯಕ್ತವಾಗಲಿದೆ. ವ್ಯಾಪಾರಿಗಳಿಗೆ (Business) ಹೆಚ್ಚಿನ ಧನಲಾಭ ಉಂಟಾಗಲಿದೆ. ರಾಜಕಾರಣದಲ್ಲಿರುವವರು (Politics) ದೊಡ್ಡ ಹುದ್ದೆಯನ್ನು ಅಲಂಕರಿಸುವ ಸಾಧ್ಯತೆ ಸಹ ಹೆಚ್ಚಿದೆ.
ಇದನ್ನು ಓದಿ : Gemology: ರಾಹು ಗ್ರಹದ ಕೆಟ್ಟ ಪ್ರಭಾವದಿಂದ ಪಾರಾಗಲು ಧರಿಸಿ ಈ ರತ್ನ
ಕರ್ಕಾಟಕ ರಾಶಿ (Cancer)
ಈ ರಾಶಿಯ ವ್ಯಕ್ತಿಗಳಿಗೆ ಸಹ ಸೂರ್ಯ ಗ್ರಹದ ಗೋಚಾರವು ಉತ್ತಮ ಲಾಭವನ್ನು ತಂದುಕೊಡಲಿದೆ. ಈ ರಾಶಿಯವರ ಅದೃಷ್ಟದ (Luck) ಮನೆಯಲ್ಲಿ ಗೋಚಾರವಾಗುವುದರಿಂದ ಕರ್ಕಾಟಕ ರಾಶಿಯವರ ಭಾಗ್ಯೋದಯವಾಗಲಿದೆ. ಪ್ರತಿ ಕ್ಷೇತ್ರದಲ್ಲೂ ಯಶಸ್ಸು ಲಭಿಸಲಿದೆ. ಅದು ವ್ಯಾಪಾರವಾಗಲಿ ಅಥವಾ ಉದ್ಯೋಗವಾಗಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ಗೋಚಾರದ ಅವಧಿಯಲ್ಲಿ ದೊಡ್ಡ ಪದವಿ (Position) ಪ್ರಾಪ್ತವಾಗುವ ಸಂಭವವಿದೆ. ಒಟ್ಟಾರೆ ಹೇಳಬೇಕೆಂದರೆ ಈ ಬಾರಿಯ ಗೋಚಾರ ಕರ್ಕಾಟಕ ರಾಶಿಯವರಿಗೆ ಅದೃಷ್ಟ ಒಲಿದುಬರಲಿದೆ. ಅಷ್ಟೇ ಅಲ್ಲದೆ ಸೂರ್ಯ ದೇವನ ಸಂಪೂರ್ಣ ಕೃಪೆ (Blessings) ಈ ರಾಶಿಯವರಿಗೆ ಪ್ರಾಪ್ತವಾಗಲಿದೆ.
ಇದನ್ನು ಓದಿ : Vastu Tips: ಮನೆಯ ಈ ದಿಕ್ಕಿನಲ್ಲಿ ಔಷಧಗಳನ್ನಿಟ್ಟರೆ ಹೆಚ್ಚಲಿದೆ ಅನಾರೋಗ್ಯ!
ಧನು ರಾಶಿ (Sagittarus)
ಸೂರ್ಯ ಗ್ರಹದ ರಾಶಿ ಪರಿವರ್ತನೆಯಿಂದ (Transit) ಈ ರಾಶಿಯವರಿಗೆ ಧರ್ಮದ ವಿಷಯದಲ್ಲಿ ಹೆಚ್ಚಿನ ಆಸಕ್ತಿ (Interest) ದೊರೆಯಲಿದೆ. ಅಷ್ಟೇ ಅಲ್ಲದೆ ಸುಖ - ಸಂಪತ್ತು (Prosperity), ಸಮೃದ್ಧಿ ನೆಲೆಸಲಿದೆ. ಧನು ರಾಶಿಯವರಿಗೆ ಈ ಗೋಚಾರದಿಂದ ಅದೃಷ್ಟ ಒಲಿಯಲಿದೆ. ಹೊಸ ವಾಹನ (Vehicle) ಅಥವಾ ಮನೆಯನ್ನು (House) ಖರೀದಿಸಬಹುದಾಗಿದೆ (Purchase). ವ್ಯಾಪಾರ ವಹಿವಾಟಿನಲ್ಲಿ ಲಾಭವಾಗಲಿದೆ. ಈ ಸಮಯ ಶುಭ ಮತ್ತು ಲಾಭವಾಗಲಿದೆ. ಸೂರ್ಯ ಗ್ರಹವು ಮೀನ ರಾಶಿಗೆ ಪ್ರವೇಶಿಸುವುದರಿಂದ ಹೆಚ್ಚಿನ ಲಾಭ ಉಂಟಾಗಲಿದೆ.