ನೀವು ಗಮನಿಸಿದ್ದೀರಾ, ಕೆಲವು ಭಾಗದ ಜನರು ಎಷ್ಟೇ ದುಡ್ಡಿನ ಸಮಸ್ಯೆ ಇರಲಿ, ಬಂಗಾರಕ್ಕೆ ಇನ್ವೆಸ್ಟ್ ಮಾಡಿಯೇ ಮಾಡುತ್ತಾರೆ. ಮನೆ, ಆಸ್ತಿ ಅಂತ ಸುಲಭವಾಗಿ ಮಾಡಿಕೊಳ್ಳುತ್ತಾರೆ. ಹೇಗೆ? ಸೇವಿಂಗ್ಸ್ ಅನ್ನೋದು ಒಂದು ಕಲೆ. ಆದರೆ ಹುಟ್ಟುವ ರಾಶಿ ಮೇಲೂ ದುಡ್ಡು ಉಳಿಸುವ ಗುಣ ಬಂದಿರುತ್ತಾ?
ಲಕ್ಷ್ಮಿ (Lakshmi) ಕೆಲವರಿಗೆ ಅದು ಹೇಗೆ ಒಲಿಯುತ್ತಾಳೋ ಗೊತ್ತಾಗೋಲ್ಲ. ಮತ್ತೆ ಹಲವರಿಗೆ ಆ ಕಲೆ ರಕ್ತಗತವಾಗಿಯೇ ಒಲಿದಿರುತ್ತೆ. ಕೆಲವರ ಮನೆಯಲ್ಲಿ ಕಾಲು ಮುರಿದುಕೊಂಡು ಬೀಳುವ ಲಕ್ಷ್ಮಿ, ಮತ್ತೆ ಕೆಲವರಿಗೆ ಮರುಭೂಮಿಯ ಮರಿಚೀಕೆಯಾಗೋದು ಏಕೆ? ಮನುಷ್ಯ ಹುಟ್ಟುವ ರಾಶಿ ಮೇಲೆ ಕೈಯಲ್ಲಿ ದುಡ್ಡು ನಿಲ್ಲುತ್ತಾ? ಯಾವ ರಾಶಿಯವರಿಗೆ ಈ ದುಡ್ಡು ಉಳಿಸುವ ಗುಣ ಒಲಿದು ಬಂದಿರುತ್ತೆ?
ಧನಸ್ಸು (Sagittarius):
ಈ ರಾಶಿಯವರಿಗೆ ಹಣ (Money) ಉಳಿಸುವುದು ಅಷ್ಟು ಸುಲಭವಲ್ಲ ಬಿಡಿ. ಉಳಿಸಿದರೂ ವೇಸ್ಟ್ ಅಂತ ಯೋಚಿಸೋ ಜಾಯಮಾನ ಇವರದ್ದು. ಹಣ ಬಂದ ಕೂಡಲೇ ಹೇಗೆ ಖರ್ಚು ಮಾಡಬೇಕೆಂಬುವುದೇ ಇವರ ಚಿಂತೆ. ಹಣ ಕೂಡಿಡಬೇಕು, ಕಷ್ಟ ಬಂದಾಗ ಕೈಯಲ್ಲಿ ದುಡ್ಡಿರಬೇಕು ಎನ್ನೋ ಭಯ ಇವರಿಂದ ಬಹಳ ದೂರ. ಸೇವಿಂಗ್ಸ್ (Savings) ಅನ್ನೋದು ಇವರ ಡಿಕ್ಷನರಿಯಲ್ಲಿಯೇ ಇರೋಲ್ಲ ಬಿಡಿ. ಇದೇ ಮೆಂಟಾಲಿಟಿಯಿಂದ ಇವರಿಗೂ ಖರ್ಚೂ ಬರೋದು ಹೆಚ್ಚು. ಹಲವೆಡೆ ಹಣ ಹೂಡುತ್ತಾರೆ. ದುಡ್ಡೂ ಕೈ ಸೇರುತ್ತೆ. ಹಾಗಂಥ ಅಷ್ಟೇ ಬಗ ಖಾಲಿಯೂ ಆಗುತ್ತೆ. ಕೈಯಲ್ಲಿ ದುಡ್ಡಿರೋದು ಕಡಿಮೆ. ಕೂಡಿಡೋದು ಅಂದ್ರೆ ಅಲರ್ಜಿ ಇವರಿಗೆ. ಗಣೇಶನನನ್ನು ಸ್ತುತಿಸಿದರೆ ಇವರ ಕೈಯಲ್ಲಿ ಸ್ವಲ್ಪ ಹಣ ಉಳಿಯುವಂತಾಗಬಹುದು.
ಮೀನ (Pisces)
ಉದಾರಿಗಳಿವರು. ವಿಶಾಲ ಹೃದಯಿಗಳು (Broad Hearted). ಅದರಿಂದಲೇ ದಾನ (Donation) ಮಾಡೋ ಬುದ್ಧಿಯೂ ತುಸು ಹೆಚ್ಚು. ಇನ್ನು ಕೂಡಿಡುವ ಮನಸ್ಸು ಎಲ್ಲಿಂದ ಬರುತ್ತೆ ಹೇಳಿ? 'ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ' ಎನ್ನುವ ಚಿಂತನೆ ಇವರದ್ದು. ಆದರೆ, ಇವೆಲ್ಲ ಕಷ್ಟ ಕಾಲದಲ್ಲಿ ಹೇಗೆ ನೆರವಿಗೆ ಬರುತ್ತೆ ಹೇಳಿ? ತಮಗೆ ಉಳಿಸಿಕೊಂಡು, ಕಷ್ಟ ಕಾಲದಲ್ಲಿ ನೆರವಿಗೆ ಬರುವಂತೆ ಒಂದಿಷ್ಟು ನಿಧಿಯನ್ನು ಇಟ್ಟು, ಇನ್ನೊಬ್ಬರಿಗೆ ದಾನ ಮಾಡಿದರೆ ಅರ್ಥವಿರುತ್ತೆ. ಅದು ಬಿಟ್ಟು, ಉಟ್ಟ ಬಟ್ಟೆ, ತೊಟ್ಟ ಚಪ್ಪಲ್ಲಿಯನ್ನೂ ದಾನ ಮಾಡಿದರೆ ಹೇಗೆ? ಕಷ್ಟ ಎಂದಾಗ ನಿಮ್ಮ ಕೈ ಹಿಡಿಯೋರು ಯಾರು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆದರೆ, ಇವರ ಅದೃಷ್ಟ (Luck) ಅಥವಾ ಕಷ್ಟದಲ್ಲಿ ಇರೋರಿಗೆ ದಾನ ಮಾಡುವ ಬುದ್ಧಿಯಿಂದಾನೋ ಏನೋ ಇವರಿಗೂ ಹಾಗೆಯೇ ಕೈ ಹಿಡಿಯಲು ಮುಂದಾಗುತ್ತಾರೆ.
ಸುಲಭವಾಗಿ ಪ್ರೀತಿಯಲ್ಲಿ ಬೀಳುವ ರಾಶಿಗಳಿವು
ಈ ರಾಶಿಯವರನ್ನು ಸುಲಭವಾಗಿ ನಂಬಬಹುದು. ಆದರೆ, ಕಷ್ಟ ಬಂದಾಗ ಇನ್ನೊಬ್ಬರ ಸಹಾಯ ಪಡೆಯೋ ಬದಲು ನಿಮ್ಮ ಹಣವನ್ನೇ ಕಷ್ಟಕ್ಕೂ ಉಳಿಸಿಕೊಂಡರೆ ಒಳ್ಳೆಯದು ಅಲ್ವಾ? ದುರ್ಗಾ ದೇವಿ ಆರಾಧನೆಯಿಂದ ನಿಮ್ಮ ಹಣವನ್ನು ನಿಮಗಾಗಿಯೇ ಉಳಿಸುವಂತಾಗುತ್ತದೆ.
ವೃಶ್ಚಿಕ (Scorpion):
ಇವರಿಗೋ ವಿಚಿತ್ರ ಖಯಾಲಿ ಇರುತ್ತೆ. ತಮಗೆ ಇಷ್ಟವಾದ ಹವ್ಯಾಸಗಳಿಗೆ ಹಿಂದೂ ಮುಂದು ನೋಡದೇ ಹಣ ಸುರಿಯುತ್ತಾರೆ. ಟ್ರಾವೆಲ್ಲಿಂಗ್ (Travelling) ಜೊತೆ ಕಾರಿನ ಹುಚ್ಚಿದೆ ಅಂದಿಟ್ಟುಕೊಳ್ಳಿ. ಮನೆಯಲ್ಲಿ ನಿಲ್ಲಿಸಲು ಜಾಗ ಇದೆಯೋ, ಇಲ್ಲವೋ? ಲಕ್ಷಾಂತರ ರೂ. ಬೆಲೆ ಬಾಳುವ ಕಾರು ಕೊಳ್ಳುತ್ತಾರೆ. ಕೊಂಡ ಮೇಲೆ ಹೀಗೆ ಮಾಡಿದ್ದು ವರ್ಥ್ ಆ ಎಂದು ಯೋಚಿಸುತ್ತಾರೆ. ಇವರ ಹತ್ತಿರ ಉತ್ತರ ಇರೋಲ್ಲ. ಸಂಗೀತ ಕೇಳುವ ಹುಚ್ಚಿದ್ದರೆ, ಎಲ್ಲಿಯೇ ಕಚೇರಿ ಆಗಲಿ ಹೋಗುತ್ತಾರೆ, ಇಲ್ಲವೇ ಆಲ್ಬಂಗಳಿಗೆ ವ್ಯಯಿಸುತ್ತಾರೆ. ಬರ್ಡ್ ವಾಚಿಂಗ್ ಹುಚ್ಚಿದೆ ಅಂದ್ರೆ ಸರಿ, ಕೈಯಲ್ಲೊಂದು ಕ್ಯಾಮೆರಾ ಹಿಡಿದು ದಕ್ಷಿಣ ಆಫ್ರಿಕಾಕ್ಕೂ ಹೋಗಿ, ಒಂದೆರಡು ಪಕ್ಷಿಗಳ ಫೋಟೋ ತೆಗೆದುಕೊಂಡು ಬರುತ್ತಾರೆ. ಅದೇ ದುಡ್ಡು ಉಳಿಸಿದರೆ ಕಷ್ಟಕ್ಕೆ ಆಗುತ್ತೆ ಅಂತ ಯೋಚಿಸುವ ವ್ಯವಧಾನವೇ ಇವರಿಗೆ ಇರೋಲ್ಲ. ದುಡ್ಡು ಚೆಲ್ಲುವ ವಿಷಯದಲ್ಲಿ ನಿಮ್ಮನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕಂದ್ರೆ, ರಿಸ್ಟ್ರಿಕ್ಷನ್ಸ್ ಹಾಕಿ ಕೊಳ್ಳಿ. ಶಿವನ ಪ್ರಾರ್ಥನೆ ಕಷ್ಟಗಳಿಂದ ಪಾರಾಗಲು ನೆರವಾಗುತ್ತೆ.
ಕಟಕ (Cancer)
ಇವರು ಮಾತ್ರ ಭವಿಷ್ಯದ ಎಲ್ಲ ಖರ್ಚು ವೆಚ್ಚಗಳನ್ನೂ ಕೂಡಿ, ಕಳೆದರೂ ಕೈಯಲ್ಲಿ ಸ್ವಲ್ಪ ಹಣ ಇರುವಂತೆ ನೋಡಿಕೊಳ್ಳುತ್ತಾರೆ. ಆದರೆ, ಮುಂಜಾಗೃತಾ ಕ್ರಮದಿಂದಲೋ ಏನೋ, ಇವರಿಗೆ ಅಂಥ ಕಷ್ಟದ ಸಮಯವೇ ಬರೋಲ್ಲ. ಅನಗತ್ಯ ವಸ್ತುಗಳನ್ನು ಕೊಳ್ಳುವಾಗ ಯೋಚಿಸಿ ಸಾಕು. ಅದು ಬಿಟ್ಟು ಹೆಂಡತಿ (Wife) ಆಸೆಯಿಂದ ಏನೋ ಒಂದು ಸೀರೆ (Saree) ಕೊಳ್ಳುತ್ತೇನೆ ಅಂದರೂ ಸೇವಿಂಗ್ಸ್ (Savings)ನ ಮಹತ್ವದ ಭಾಷಣ ಮಾಡೋ ಅಗತ್ಯವಿಲ್ಲ ಎನ್ನುವುದನ್ನು ನೆನಪಿನಲ್ಲಿಡಿ. ಕೆಲವೊಮ್ಮೆ ಸಿಕ್ಕಾಪಟ್ಟೆ ಶಾಪಿಂಗ್ (Shopping) ಮಾಡೋ ಅಭ್ಯಾಸವೂ ಇವರಿಗಿರುತ್ತೆ. ಆದರೆ, ಕೈಯಲ್ಲಿ ದುಡ್ಡು ಕಡಿಮೆಯಾಗುತ್ತಿದ್ದಂತೆ, ಸಿಕ್ಕಾಪಟ್ಟೆ ಟೆನ್ಷನ್ (Tension) ಮಾಡಿಕೊಳ್ಳುತ್ತಾರೆ. ಯಾಕಾದರೂ ಅಷ್ಟು ದುಡ್ಡು ಖಾಲಿ ಮಾಡಿದ್ನೋ ಎಂದು ಹಲಬುವ ಸ್ವಭಾವ ಇವರಿಗೆ ಇರುತ್ತೆ. ಒಟ್ಟಿನಲ್ಲಿ ಸುಖಾ ಸುಮ್ನೆ ದುಡ್ಡಿನ ವಿಷಯದಲ್ಲಿ ನೆಮ್ಮದಿ ಹಾಳು ಮಾಡಿಕೊಳ್ಳುವ ಗುಣ ಇವರದ್ದು. ದೇವಿ ಸ್ತುತಿಯಿಂದ ಹಣ ಉಳಿಸಬಹುದು. ನಿಮ್ಮ ಚಂಚಲ ಬುದ್ಧಿಯನ್ನು ಹಿಡಿತದಲ್ಲಿಡಿಲು ಆ ದೇವಿಗೆ ಮಾತ್ರ ಸಾಧ್ಯ.
ರಾಶಿಗೆ ಅನುಗುಣವಾಗಿ ಸಾವು ಪೂರ್ವ ನಿಯೋಜಿತವೇ?
ಕನ್ಯಾ (Virgo):
ಇವರೋ ಸ್ವಲ್ಪ ಬಾಹ್ಯ ಸೌಂದರ್ಯ (Physical Beauty) ಆರಾಧಕರು. ಎಲ್ಲವೂ ಪರ್ಫೆಕ್ಟ್ (Perfect) ಆಗಿರಬೇಕು ಅಂತ ಬಯಸುತ್ತಾರೆ. ಹಾಕುವ ಒಳ ಉಡುಪಿನಿಂದ (Inner Wear) ಹಿಡಿದು, ಬಟ್ಟೆ, ಚಪ್ಪಲಿಯೂ ಬ್ರಾಂಡೆಂಡ್ ಬೇಕು ಅಂತ ಆಶಿಸುತ್ತಾರೆ. ಅದಕ್ಕೆ ಎಷ್ಟೇ ದುಡ್ಡಾದರೂ ಸರಿ, ವ್ಯಯಿಸುತ್ತಾರೆ. ಇದರಿಂದಾನೇ ದುಡ್ಡಿನ ಕೊರತೆ ಈ ರಾಶಿಯವನ್ನು ಕಾಡುತ್ತೆ. ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಇವರಿಗೆ ಆಗಿ ಬರೋಲ್ಲ. ಈ ಗುಣದಿಂದಲೇ ಸಂಕಷ್ಟಕ್ಕೆ ಸಿಲುಕಿ ಕೊಳ್ಳುತ್ತಾರೆ. ಅನಂತ ಪದ್ಮನಾಭನ ಧ್ಯಾನದಿಂದ ದುಬಾರಿ ವೆಚ್ಚಕ್ಕೊಂದು ಕಡಿವಾಣ ಬೀಳುವ ಸಾಧ್ಯತೆ ಇರುತ್ತೆ.