ಟೆರೇಸ್ ಗಾರ್ಡನ್ ಇತ್ತೀಚಿನ ದಿನಗಳಲ್ಲಿ ಪ್ರಸಿದ್ಧಿ ಪಡೆಯುತ್ತಿದೆ. ಜನರು ಅನೇಕ ಗಿಡಗಳನ್ನು ತಾರಸಿ ಮೇಲೆ ಬೆಳೆಸ್ತಾರೆ. ಆದ್ರೆ ಅದ್ರಲ್ಲಿ ಯಾವುದು ವಾಸ್ತುದೋಷವನ್ನುಂಟು ಮಾಡುತ್ತೆ ಎಂಬುದು ಅನೇಕರಿಗೆ ತಿಳಿದಿಲ್ಲ.
ನಮ್ಮ ಜೀವನದಲ್ಲಿ ವಾಸ್ತು ಶಾಸ್ತ್ರ (Architecture) ಕ್ಕೆ ವಿಶೇಷ ಮಹತ್ವವಿದೆ. ಮನೆ (Home ) ನಿರ್ಮಾಣದಿಂದ ಹಿಡುದು ಮನೆಯಲ್ಲಿರುವ ವಸ್ತುಗಳವರೆಗೆ ಎಲ್ಲವೂ ವಾಸ್ತು ಶಾಸ್ತ್ರದ ಜೊತೆ ಸಂಬಂಧ ಹೊಂದಿದೆ. ಸಣ್ಣಪುಟ್ಟ ಸಮಸ್ಯೆಗೂ ವಾಸ್ತುದೋಷ ಕಾರಣವಾಗಿರುತ್ತದೆ. ಅದು ಅನೇಕರಿಗೆ ತಿಳಿದಿರುವುದಿಲ್ಲ. ತಿಳಿಯದೆ ಮಾಡುವ ತಪ್ಪುಗಳಿಂದ ದೀರ್ಘಕಾಲದವರೆಗೆ ಸಮಸ್ಯೆ ಅನುಭವಿಸಬೇಕಾಗುತ್ತದೆ. ಆರೋಗ್ಯ ಸಮಸ್ಯೆ ಮಾತ್ರವಲ್ಲ ಹಣಕಾಸಿನ ನಷ್ಟಕ್ಕೂ ವಾಸ್ತುದೋಷವೇ ಕಾರಣವಾಗಿರುತ್ತದೆ. ಪ್ರತಿಯೊಬ್ಬರ ಮನೆ ಮುಂದೆ ತುಳಸಿ ಗಿಡವಿರುತ್ತದೆ. ತುಳಸಿ (Basil ) ಯನ್ನು ಲಕ್ಷ್ಮಿ (Laxmi)ಗೆ ಹೋಲಿಕೆ ಮಾಡಲಾಗುತ್ತದೆ.
ಪ್ರತಿ ದಿನ ತುಳಸಿ ಪೂಜೆ ಮಾಡಿದ್ರೆ ಧನ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ತುಳಸಿಯನ್ನು ಔಷಧಿಗೂ ಬಳಸಲಾಗುತ್ತದೆ. ಅನೇಕರು ಮನೆ ಮುಂದೆ ಮಾತ್ರವಲ್ಲ ತಾರಸಿಯ ಮೇಲೂ ತುಳಸಿ ಗಿಡವನ್ನು ಬೆಳೆಸುತ್ತಾರೆ. ಇತ್ತೀಚಿನ ದಿನಗಳಲ್ಲಿ ತಾರಸಿ ಗಾರ್ಡನ್ ಪ್ರಸಿದ್ಧಿ ಪಡೆಯುತ್ತಿದೆ. ಟೆರೇಸ್ ಮೇಲೆ ಅನೇಕ ಗಿಡಗಳನ್ನು ನೆಡಲಾಗುತ್ತದೆ. ಆದ್ರೆ ವಾಸ್ತು ಶಾಸ್ತ್ರದ ಪ್ರಕಾರ ತಾರಸಿ ಮೇಲೆ ತುಳಸಿ ಗಿಡ ಬೆಳೆಸುವುದು ಒಳ್ಳೆಯದಲ್ಲ. ಹಾಗೆ ತುಳಸಿ ಗಿಡವನ್ನು ಕೊಳಕು ಕೈಗಳಿಂದ ಮುಟ್ಟುವುದನ್ನು ಸಹ ನಿಷೇಧಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ ಸಸ್ಯವನ್ನು ಸಂತೋಷದ ಜೀವನ ಮತ್ತು ಯೋಗಕ್ಷೇಮದ ಸಂಕೇತವೆಂದು ಪರಿಗಣಿಸಲಾಗುತ್ತದೆ. ವೈಜ್ಞಾನಿಕ ದೃಷ್ಟಿಕೋನದಿಂದ ಕೂಡ ತುಳಸಿ ಸಸ್ಯವು ಅನೇಕ ರೋಗಗಳನ್ನು ಗುಣಪಡಿಸುತ್ತದೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುವಲ್ಲಿ ತುಳಸಿ ಗಿಡದ ಪಾತ್ರ ದೊಡ್ಡದು. ತುಳಸಿ ಗಿಡಕ್ಕೆ ಸಂಬಂಧಿಸಿದ ಕೆಲವು ವಾಸ್ತು ಪರಿಹಾರಗಳನ್ನು ತಿಳಿಯೋಣ.
ತುಳಸಿ ಬಗ್ಗೆ ವಾಸ್ತುಶಾಸ್ತ್ರ ಹೇಳೋದೇನು?
ಧನ ಹಾನಿ : ಟೆರೇಸ್ ಮೇಲೆ ತುಳಸಿ ಗಿಡ ನೆಟ್ಟಿದ್ದರೆ ಇಂದೇ ಅದನ್ನು ತೆಗೆಯಿರಿ. ಟೆರೇಸ್ ಮೇಲಿಟ್ಟ ತುಳಸಿ ಗಿಡ ವಾಸ್ತುಶಾಸ್ತ್ರದ ಪ್ರಕಾರ ಧನ ಹಾನಿಗೆ ಕಾರಣವಾಗುತ್ತದೆ.
Vastu Tips: ಯಶಸ್ಸು - ಹಣಕ್ಕಾಗಿ ಈ ದಿಕ್ಕಲ್ಲಿ ನಿದ್ರಿಸಿ
ರೋಗದಿಂದ ದೂರ : ಕೆಲಸಕ್ಕಾಗಿ ಮನೆಯಿಂದ ಹೊರಡುವಾಗ, ಮೊಸರಿಗೆ ತುಳಸಿ ಎಲೆಗಳನ್ನು ಹಾಕಬೇಕು. ಹೀಗೆ ಮಾಡಿದ್ರೆ ಎಲ್ಲಾ ರೋಗಗಳು ದೂರವಾಗುತ್ತವೆ ಮತ್ತು ಧನಾತ್ಮಕ ಶಕ್ತಿಯ ವೃದ್ಧಿಯಾಗುತ್ತದೆ.
ಕಲಹ ಪರಿಹಾರ : ಸದಾ ಮನೆಯಲ್ಲಿ ಗಲಾಟೆ – ಜಗಳವಾಗುತ್ತದೆ ಎನ್ನುವವರು ಪ್ರತಿದಿನ ತುಳಸಿ ಗಿಡಕ್ಕೆ ಪೂಜೆ ಸಲ್ಲಿಸಬೇಕು, ಹೀಗೆ ಮಾಡಿದ್ರೆ ಮನೆಯಲ್ಲಿ ಸದಸ್ಯರ ನಡುವೆ ಯಾವುದೇ ಜಗಳವಿರುವುದಿಲ್ಲ. ಮನೆಯ ಎಲ್ಲ ಸದಸ್ಯರು ಒಂದಾಗಿ ಬಾಳ್ವೆ ನಡೆಸಲು ಸಹಾಯವಾಗುತ್ತದೆ.
ಸಾವಿನ ಸಂದರ್ಭದಲ್ಲಿ ಮಾತ್ರ ಗರುಡ ಪುರಾಣ ಪಠಣ ಮಾಡುವುದೇಕೆ?
ಅಡುಗೆ ಮನೆ ಬಳಿ ತುಳಸಿ ಗಿಡ : ತುಳಸಿ ಗಿಡ ಅಡುಗೆ ಮನೆಯ ಬಳಿ ಇದ್ದರೆ ಕುಟುಂಬದ ಸದಸ್ಯರ ನಡುವೆ ಪರಸ್ಪರ ಸೌಹಾರ್ದತೆ ಹೆಚ್ಚುತ್ತದೆ. ಕುಟುಂಬ ಸದಸ್ಯರಲ್ಲಿ ಸಂತೋಷ ಮನೆ ಮಾಡಿರುತ್ತದೆ.
ಗಿಡವನ್ನು ಅಲ್ಲಾಡಿಸಿ : ತುಳಸಿ ಎಲೆಯನ್ನು ಕಿತ್ತುಕೊಳ್ಳುವ ಮೊದಲು ಗಿಡವನ್ನು ನಿಧಾನವಾಗಿ ಅಲ್ಲಾಡಿಸಿ.
ಒಣಗಲು ಬಿಡಬೇಡಿ : ತುಳಸಿ ಗಿಡವು ಶುಭ ಸಂಕೇತವಾಗಿದೆ. ತುಳಸಿ ಸಮೃದ್ಧಿಯನ್ನು ನೀಡುತ್ತದೆ. ಹಾಗಾಗಿ ಎಂದೂ ತುಳಸಿ ಗಿಡವನ್ನು ಒಣಗಲು ಬಿಡಬೇಡಿ.
ಈ ದಿನ ತುಳಸಿ ಗಿಡ ಮುಟ್ಟಬೇಡಿ : ಸಮೃದ್ಧಿ, ಸಂತೋಷಬೇಕೆನ್ನುವವರು ಭಾನುವಾರ ಮತ್ತು ಮಂಗಳವಾರ ತುಳಸಿ ಎಲೆಗಳನ್ನು ಕೀಳಬೇಡಿ. ಸೂರ್ಯಗ್ರಹಣ, ಚಂದ್ರಗ್ರಹಣ, ಏಕಾದಶಿ, ಸಂಕ್ರಾಂತಿ, ದ್ವಾದಶಿ ಮತ್ತು ಸಂಜೆ ಸಮಯದಲ್ಲಿ ತುಳಸಿ ಎಲೆಗಳನ್ನು ಕೀಳಬಾರದು.
ನೆನಪಿನ ಶಕ್ತಿ ವೃದ್ಧಿ : ಸ್ನಾನ ಮಾಡದೆ ತುಳಸಿ ಎಲೆಗಳನ್ನು ಕೀಳುವುದು ನಿಷಿದ್ಧ. ತುಳಸಿ ಗಿಡವನ್ನು ಮನೆಯಲ್ಲಿಟ್ಟರೆ ಕುಟುಂಬದ ಸದಸ್ಯರ ನೆನಪಿನ ಶಕ್ತಿ ಹೆಚ್ಚುತ್ತದೆ.
ದೀಪ ಬೆಳಗಿ : ಸಂಜೆ ತುಳಸಿ ಗಿಡದ ಬಳಿ ದೀಪವನ್ನು ಹಚ್ಚುವುದರಿಂದ ಸಂತೋಷ ಮತ್ತು ಸಮೃದ್ಧಿ ದೊರೆಯುತ್ತದೆ.