ಒಳಾಂಗಣ ಸಸ್ಯಗಳು ಮನೆಯ ಸೌಂದರ್ಯ ಹೆಚ್ಚಿಸುವುದಷ್ಟೇ ಅಲ್ಲ, ಅವು ಉಸಿರಾಡುವ ಗಾಳಿಯನ್ನು ಶುದ್ಧೀಕರಿಸುತ್ತವೆ. ಜೊತೆಗೆ, ಮನೆಗೆ ಪಾಸಿಟಿವಿಟಿ ತಂದು ಸಂಪತ್ತು, ಅದೃಷ್ಟ, ಆರೋಗ್ಯವನ್ನು ಆಕರ್ಷಿಸುತ್ತವೆ.
ಮರಗಳು ಮತ್ತು ಸಸ್ಯಗಳು ನಮ್ಮ ಸುತ್ತಮುತ್ತಲಿನ ಪರಿಸರಕ್ಕೆ ಸಕಾರಾತ್ಮಕತೆ ಮತ್ತು ಸೌಂದರ್ಯವನ್ನು ಸೇರಿಸುತ್ತವೆ. ವಾಸ್ತು ಶಾಸ್ತ್ರವು ಸಸ್ಯಗಳ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಂಡಿದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಅನೇಕ ಸಸ್ಯಗಳಿರಬೇಕು, ಅವು ನಾವು ಉಸಿರಾಡುವ ಗಾಳಿಯನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ ಇನ್ನೂ ಹಲವಷ್ಟು ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ.
ಸಸ್ಯಗಳು ನಿಮ್ಮ ಮನೆಯನ್ನು ಸುಂದರಗೊಳಿಸುವುದು ಮಾತ್ರವಲ್ಲದೆ ನೆಡಲು ಸುಲಭವಾಗಿದೆ. ವಾಸ್ತು ಪ್ರಕಾರ, ಮರಗಳನ್ನು ನೆಡುವುದು ಮನೆಯಲ್ಲಿ ಸಮೃದ್ಧಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅನೇಕ ಜನರು ಹಣಕಾಸಿನ ಸಮಸ್ಯೆಗಳನ್ನು ತೊಡೆದುಹಾಕಲು ಸಸ್ಯಗಳನ್ನು ನೆಡುತ್ತಾರೆ, ಮನೆಯಲ್ಲಿ ಸಸ್ಯವನ್ನು ಇಡುವುದು ಸಮೃದ್ಧಿ ಮತ್ತು ಸಂಪತ್ತನ್ನು ಪಡೆಯಲು ಸಹಾಯ ಮಾಡುತ್ತದೆ. ನಿಮ್ಮ ಮನೆಯ ಸುತ್ತಲಿನ ಮರಗಳು ನಿಮ್ಮ ಮನೆಯ ಧನಾತ್ಮಕತೆಯನ್ನು ಹೆಚ್ಚಿಸುತ್ತವೆ. ಆದರೆ ವಾಸ್ತು ಶಾಸ್ತ್ರದಲ್ಲಿ ಹೇಳಿದ ಈ ಕೆಲವು ಒಳಾಂಗಣ ಸಸ್ಯಗಳು ಮತ್ತು ಮರಗಳು ಸುತ್ತಮುತ್ತಲಿನ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವಲ್ಲಿ ಬಹಳ ಶಕ್ತವಾಗಿವೆ.
ಮನಿ ಪ್ಲಾಂಟ್(Money plant)
ಮನಿ ಪ್ಲಾಂಟ್ ಮನೆಯ ಹೊರಗೆ ಬೆಳೆಯದೆ ಮನೆಯೊಳಗೆ ಬೆಳೆದಾಗ ಗರಿಷ್ಠ ಪ್ರಯೋಜನಗಳನ್ನು ನೀಡುತ್ತದೆ. ಇದನ್ನು ಯಾವುದೇ ಬಾಟಲಿ ಅಥವಾ ಮಿನಿ ಜಾರ್‌ನಲ್ಲಿ ಬೆಳೆಸಬಹುದು. ಮನಿ ಪ್ಲಾಂಟ್ ಅನ್ನು ಮನೆಯ ಹೊರಗೆ ಇರಿಸಿದರೆ, ನೇರವಾಗಿ ಸೂರ್ಯನ ಬೆಳಕು ಬೀಳದಂತೆ ನೋಡಿಕೊಳ್ಳಬೇಕು. ವಾಸ್ತು ಪ್ರಕಾರ, ನೆಟ್ಟ ಮನಿ ಪ್ಲಾಂಟ್ ಹಸಿರಾದಷ್ಟೂ ನಿಮ್ಮ ಮನೆಗೆ ಹಣ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬುದು ನಂಬಿಕೆ. ಮನಿ ಪ್ಲ್ಯಾಂಟನ್ನು ನಿಮ್ಮ ಮನೆಯ ಎದುರಿನ ಬಾಗಿಲ ಬಳಿ ಅಥವಾ ನಿಮ್ಮ ಫ್ಲಾಟ್‌ನ ಬಾಲ್ಕನಿಯಲ್ಲಿ ಇರಿಸಿ. ಮನಿ ಪ್ಲಾಂಟ್ ಒಂದು ಒಳಾಂಗಣ ಸಸ್ಯವಾಗಿದೆ. ಇದನ್ನು ಹೊರಗೆ ಇಡಬಾರದು. ಮನಿ ಪ್ಲಾಂಟ್ ಅನ್ನು ಹೆಚ್ಚಾಗಿ ಮನೆ ಅಥವಾ ಕಚೇರಿಯಲ್ಲಿ ಜನರು ನೆಡುತ್ತಾರೆ, ಈ ಸಸ್ಯಕ್ಕೆ ಹೆಚ್ಚಿನ ಕಾಳಜಿ ಅಗತ್ಯವಿಲ್ಲ.
ಸಾವಿನ ಸಂದರ್ಭದಲ್ಲಿ ಮಾತ್ರ ಗರುಡ ಪುರಾಣ ಪಠಣ ಮಾಡುವುದೇಕೆ?
ಬಿದಿರು ಸಸ್ಯ(Bamboo plant)
ವಾಸ್ತು ಪ್ರಕಾರ, ಬಿದಿರು ನಿಮ್ಮ ಮನೆಗೆ ಸಂತೋಷ, ಅದೃಷ್ಟ, ಖ್ಯಾತಿ, ಶಾಂತಿ ಮತ್ತು ಸಂಪತ್ತನ್ನು ತರುತ್ತದೆ. ಇದು ಮನೆ ಅಥವಾ ಕೆಲಸದ ಸ್ಥಳಕ್ಕೆ ಅದ್ಭುತವಾದ ಸೇರ್ಪಡೆಯಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಉಡುಗೊರೆಯಾಗಿ ನೀಡಬೇಕಾದ ಮಂಗಳಕರ ಸಸ್ಯವೆಂದು ಪರಿಗಣಿಸಲಾಗಿದೆ. ಆಗ್ನೇಯ ಏಷ್ಯಾದಲ್ಲಿ ಹುಟ್ಟಿಕೊಂಡ ಬಿದಿರು, ಫೆಂಗ್ ಶೂಯಿ ಮತ್ತು ವಾಸ್ತು ಶಾಸ್ತ್ರ ಎರಡರಲ್ಲೂ ಪ್ರಾಮುಖ್ಯತೆಯನ್ನು ಹೊಂದಿರುವ ಮನೆಯ ಆರೈಕೆಗೆ ಸುಲಭವಾದ ಸಸ್ಯವಾಗಿದೆ. ಕಡಿಮೆ ಬೆಳಕು ಇರುವ ಕಡೆಗಳಲ್ಲಿ ಬಿದಿರು ಗಿಡಗಳನ್ನು ಬೆಳೆಸಬಹುದು. ಅದೃಷ್ಟದ ಬಿದಿರಿನ ಸಸ್ಯವು ಮನೆಯ ಶಕ್ತಿ ಮತ್ತು ಭದ್ರತೆಯನ್ನು ಹೆಚ್ಚಿಸುತ್ತದೆ.
ಬೇವಿನ ಮರ(Neem tree)
ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯಲ್ಲಿ ಬೇವು ಇಡುವುದು ಅದೃಷ್ಟದ ಅಂಶವೆಂದು ಪರಿಗಣಿಸಲಾಗುತ್ತದೆ. ಇದನ್ನು ನಿಮ್ಮ ಮನೆಯ ಕಾರಿಡಾರ್‌ನಲ್ಲಿ ಬೆಳೆಸಬಹುದು. ಮನೆಯಲ್ಲಿರುವ ಬೇವಿನ ಮರವು ಉತ್ತಮ ಶಕ್ತಿಯನ್ನು ಉತ್ತೇಜಿಸುತ್ತದೆ ಮತ್ತು ಅನಾರೋಗ್ಯ-ಗುಣಪಡಿಸುವ ಗುಣಲಕ್ಷಣಗಳಿಗೆ ಬಹಳ ಜನಪ್ರಿಯವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯ ಈಶಾನ್ಯದಲ್ಲಿ ಬೇವಿನ ಮರವನ್ನು ನೆಡಬೇಕು.
ಈ ನಾಲ್ಕು ರಾಶಿಗಳದು ಪ್ರೇಮವಿವಾಹವಾಗುವುದೇ ಹೆಚ್ಚು!
ಆರ್ಕಿಡ್‌ಗಳು(Orchids)
ಆರ್ಕಿಡ್ ಅನ್ನು ಯಶಸ್ಸು ಮತ್ತು ವಿಜಯದ ಸಂಕೇತವೆಂದು ಪರಿಗಣಿಸಲಾಗುತ್ತದೆ, ಇದು ಮನೆಗಯಲ್ಲಿ ಬೆಳೆಸುವ ಉತ್ತಮವಾದ ವಾಸ್ತು ಸಸ್ಯಗಳಲ್ಲಿ ಒಂದಾಗಿದೆ. ಏಕೆಂದರೆ ಇದು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ಇಡೀ ಕುಟುಂಬದ ಬೆಳವಣಿಗೆಯ ಸಂಕೇತವಾಗಿದೆ. ಸಂಪತ್ತು ಮತ್ತು ಶಾಂತಿಯನ್ನು ಆಕರ್ಷಿಸುತ್ತದೆ. ಇದರೊಂದಿಗೆ, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.