ಜಮ್ಮುಕಾಶ್ಮೀರದ ಶಂಕರಾಚಾರ್ಯ ದೇಗುಲದಲ್ಲಿ ಮಹಾಶಿವರಾತ್ರಿ ಆಚರಿಸಿದ ಭಕ್ತರು

By Anusha KbFirst Published Mar 1, 2022, 11:49 AM IST
Highlights
  • ಶ್ರೀನಗರದಲ್ಲಿರುವ ಶಂಕರಾಚಾರ್ಯ ದೇಗುಲದಲ್ಲಿ ಶಿವರಾತ್ರಿ
  • ಭಕ್ತರಿಂದ ಸಂಭ್ರಮದ ಆಚರಣೆ
  • 1,000 ಅಡಿ ಎತ್ತರದಲ್ಲಿರುವ ಶಿವನ ದೇಗುಲ

ದೇಶದೆಲ್ಲೆಡೆ ಮಹಾಶಿವರಾತ್ರಿ ಹಬ್ಬವನ್ನು ಶಿವನ ಭಕ್ತರು ಸೇರಿದಂತೆ ಇಡೀ ಹಿಂದೂ ಸಮುದಾಯ ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದೆ. ಜಮ್ಮುಕಾಶ್ಮೀರದ ಶ್ರೀನಗರದಲ್ಲಿರುವ ಶಂಕರಾಚಾರ್ಯ ದೇಗುಲದಲ್ಲಿಯೂ ಮಹಾಶಿವರಾತ್ರಿ ಸಂಭ್ರಮ ಜೋರಾಗಿದೆ. ಭಗವದ್‌ ಭಕ್ತರು 1,000 ಅಡಿ ಎತ್ತರದಲ್ಲಿರುವ ಈ ದೇಗುಲಕ್ಕೆ ಸಾಗಿ ಬಂದು ತಮ್ಮ ಭಕ್ತಿಯನ್ನು ಶಿವನಿಗೆ ಸಮರ್ಪಣೆ ಮಾಡುತ್ತಿದ್ದಾರೆ.

ಈ ಶಂಕರಾಚಾರ್ಯ ದೇಗುಲವನ್ನು ಜೇಷ್ಠೇಶ್ವರ ದೇಗುಲ (Jyeshteshwara Temple) ಎಂದು ಕೂಡ ಕರೆಯುತ್ತಾರೆ. ಇದು ಶ್ರೀನಗರದ ಝಬರ್ವಾನ್‌ ರೇಂಜ್‌ನಲ್ಲಿ (Zabarwan Range) ಇದೆ. ಸಾವಿರ ಅಡಿ ಎತ್ತರದಲ್ಲಿ ಇರುವುದರಿಂದ ಶ್ರೀನಗರಕ್ಕೆ ಈ ದೇಗುಲದ ವಿಹಾಂಗಮ ನೋಟ ಕಾಣ ಸಿಗುತ್ತದೆ.

Jammu & Kashmir | Devotees offer prayers at Shankaracharya temple in Srinagar on the occasion of pic.twitter.com/drhUsurakt

— ANI (@ANI)

ಇಲ್ಲಿನ ಜನ ಸ್ಥಳೀಯವಾಗಿ ಹೆರಾತ್ ಎಂದು ಕರೆಯುವ ಮಹಾಶಿವರಾತ್ರಿಯಂದು ಕಾಶ್ಮೀರಿ ಹಿಂದೂಗಳು ಇಲ್ಲಿಗೆ ಆಗಮಿಸಿ ಮಹಾದೇವನ ದರ್ಶನ ಪಡೆಯುತ್ತಾರೆ. ದೇವಾಲಯ ಮತ್ತು ಅದರ ಪಕ್ಕದ ಭೂಮಿ ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವಾಗಿದ್ದು, ಭಾರತೀಯ ಪುರಾತತ್ವ ಸಮೀಕ್ಷೆಯ ಅಡಿಯಲ್ಲಿ ಈ ದೇಗುಲವನ್ನು ಸಂರಕ್ಷಿಸಲಾಗಿದೆ. ಧರ್ಮಾರ್ಥ್ ಟ್ರಸ್ಟ್ 19 ನೇ ಶತಮಾನದಿಂದಲೂ ಈ ದೇವಾಲಯವನ್ನು ನಿರ್ವಹಿಸುತ್ತಿದೆ. ಕರಣ್ ಸಿಂಗ್ ಎಂಬುವವರು ಈ ದೇಗುಲದ ಟ್ರಸ್ಟ್‌ನ ಅಧ್ಯಕ್ಷರಾಗಿದ್ದಾರೆ.

Mahashivratri 2022: ಶಿವನಿಗೆ ಇಷ್ಟದ ವಸ್ತುಗಳನ್ನು ಅರ್ಪಿಸಿ, ನಿಮ್ಮ ಇಷ್ಟಾರ್ಥ ಈಡೇರಿಸಿಕೊಳ್ಳಿ
 

ಈ ದೇಗುಲದ ರಚನೆಯಿಂದಾಗಿ ಇದನ್ನು ಐತಿಹಾಸಿಕವಾಗಿ ಮತ್ತು ಸಾಂಪ್ರದಾಯಿಕವಾಗಿ ಕಾಶ್ಮೀರದ ಅತ್ಯಂತ ಹಳೆಯ ದೇವಾಲಯವೆಂದು ಪರಿಗಣಿಸಲಾಗಿದೆ. ಇದು ಬೆಟ್ಟದ ಮೇಲೆ ನೆಲೆಗೊಂಡಿರುವುದರಿಂದ ಇದನ್ನು ಪೆರ್ಮಿಯನ್ ಯುಗದಲ್ಲಿ ಜ್ವಾಲಾಮುಖಿಯಿಂದ ರೂಪುಗೊಂಡಿದೆ ಎನ್ನಲಾಗುತ್ತಿದೆ ಆದರೆ ಇದರ ನಿರ್ಮಾಣದ ಬಗ್ಗೆ ನಿಖರವಾದ ದಿನಾಂಕಕ್ಕೆ ಸಂಬಂಧಿಸಿದಂತೆ ಯಾವುದೇ  ದಾಖಲೆಗಳಿಲ್ಲ.

Maha shivratri 2022: ಶಿವರಾತ್ರಿ ಆಚರಣೆ ಸಂಭ್ರಮ ಎಲ್ಲೆಲ್ಲಿ ಹೇಗೆಲ್ಲ ನಡೆಯುತ್ತೆ ಕಣ್ತುಂಬಿಕೊಳ್ಳೋಣ ಬನ್ನಿ..   

ಶಿವ ಮುಕ್ಕೋಟಿ ದೇವರಲ್ಲಿ ಅತಿ ಪ್ರಮುಖನಾದವ. ಆತನಿಗೆ ಭಾರತದಾದ್ಯಂತ ಬಹಳಷ್ಟು ಭಕ್ತರಿದ್ದಾರೆ. ಹಾಗೇ ದೊಡ್ಡ ಸಂಖ್ಯೆಯ ದೇವಾಲಯಗಳು ಆತನಿಗಾಗಿ ಮೀಸಲಾಗಿವೆ. ಕರ್ನಾಟಕದಲ್ಲೂ ಶಿವನ ಬಹಳಷ್ಟು ದೇವಾಲಯಗಳು ಪ್ರಖ್ಯಾತವಾಗಿವೆ. ಶಿವರಾತ್ರಿಯ ದಿನ ಈ ದೇವಾಲಯಗಳಿಗೆ ಭೇಟಿ ನೀಡಿ ಪುನೀತರಾಗಿ. 

ಧರ್ಮಸ್ಥಳದ ಮಂಜುನಾಥ ಅತಿ ಕಾರಣಿಕ ಕ್ಷೇತ್ರ. ಮಾತಿಗೆ ಮಂಜುನಾಥ ಎಂದೇ ಹೆಸರಾಗಿರುವ ಈ ಕ್ಷೇತ್ರದ ಹೆಸರೇಳಿ ಯಾರೂ ಸುಳ್ಳಾಡಲಾರರು. ಇಲ್ಲಿ ಜೈನರ ಆಡಳಿತದಲ್ಲಿ ಶೈವ ದೇವಾಲಯ ನಡೆಯುತ್ತಿರುವುದು ವಿಶೇಷ. ಕರ್ನಾಟಕದ ಅತಿ ಪ್ರಸಿದ್ಧ ಶಿವ ದೇವಾಲಯ ಇದಾಗಿದೆ. ಹಾಗೆಯೇ ಕೋಲಾರ ಜಿಲ್ಲೆಯ ಕಮ್ಮಸಂದ್ರದಲ್ಲಿನ ಈ ದೇವಾಲಯದ ವಿಶೇಷವೆಂದರೆ ಇಲ್ಲಿ ಜಗತ್ತಿನಲ್ಲೇ ಒಂದೆಡೆ ಅತಿ ಹೆಚ್ಚು ಶಿವ ಲಿಂಗಗಳನ್ನು ಕಾಣಬಹುದು. ದೇವಾಲಯದಲ್ಲಿ 108 ದೊಡ್ಡ ಲಿಂಗಗಳಿದ್ದು, 35 ಎತ್ತರದ ನಂದಿ ವಿಗ್ರಹಗಳಿವೆ. ಗೋಕರ್ಣದಲ್ಲಿರುವ ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿರುವ ಮಹಾಬಲೇಶ್ವರ ದೇವಾಲಯ ಕೂಡ ಶಿವಭಕ್ತರ ನೆಚ್ಚಿನ ತಾಣ. ಕಾರವಾರದ ಅರೇಬಿಯನ್ ಸಮುದ್ರಕ್ಕೆ ಮುಖ ಮಾಡಿ ನಿಂತಿರುವ ಈ ದೇವಾಲಯದಲ್ಲಿ ಶಿವನ ಆತ್ಮಲಿಂಗವಿದೆ ಎಂಬ ಕಾರಣಕ್ಕೆ ಇದೊಂದು ಮುಕ್ತಿ ಕ್ಷೇತ್ರ ಎಂದು ಹೆಚ್ಚು ಪ್ರಸಿದ್ಧಿ ಪಡೆದಿದೆ. 

ಜಗತ್ತಿನ ಎರಡನೇ ಅತೀ ಎತ್ತರದ ಶಿವನ ಪ್ರತಿಮೆ ಹೊಂದಿರುವ ಸ್ಥಳ ಶ್ರೀ ಮುರುಡೇಶ್ವರ(Murudeshwar) ಕ್ಷೇತ್ರ. ಭಟ್ಕಳದಲ್ಲಿರುವ ಈ ದೇವಾಲಯವು ಮೂರು ದಿಕ್ಕಿನಲ್ಲಿ ಸಮುದ್ರದಿಂದ ಆವೃತವಾಗಿದ್ದು, ಒಂದು ಕಡೆ ಕಂದುಕ ಬೆಟ್ಟವಿದೆ. ಅತಿ ವಿಹಂಗಮ ನೋಟ ಕೊಡುವ ಈ ದೇವಾಲಯದ ಶಿವ ಮಹಿಮೆಯೂ ಅಪಾರವಾಗಿದೆ. ಹಾಗೆಯೇ ಭಾರತದ ಅತಿ ಎತ್ತರದ ಶಿವಲಿಂಗಗಳಲ್ಲಿ ಒಂದು ಹಂಪಿಯ ಬಡವಿಲಿಂಗ. 15ನೇ ಶತಮಾನದಲ್ಲಿ ಒಬ್ಬ ರೈತ ಮಹಿಳೆ ಇಲ್ಲಿ ಲಿಂಗವನ್ನು ಸ್ಥಾಪಿಸಿದ್ದಾಳೆ. ಹಾಗಾಗಿ, ಈ ಲಿಂಗಕ್ಕೆ ಬಡವಿ ಲಿಂಗ ಎಂದೇ ಹೆಸರು ಬಂದಿದೆ. ಇಲ್ಲಿಗೆ ಹೋದವರು ಮಹಾಶಿವರಾತ್ರಿಯಂದು ಹಂಪಿಯ ವಿರೂಪಾಕ್ಷ ದೇವಾಲಯಕ್ಕೆ ಭೇಟಿ ನೀಡುವುದನ್ನೂ ಮರೆಯಬೇಡಿ. ತುಂಗಭದ್ರಾ ತಟದಲ್ಲಿರುವ ಈ ವಿರೂಪಾಕ್ಷ ದೇವಾಲಯವನ್ನು ವಿಜಯನಗರ ಅರಸರು ನಿರ್ಮಿಸಿದ್ದಾರೆ. 


 

click me!