Mahashivratri 2022 : ಪೂಜೆಯಲ್ಲಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಶಿವನಿಗೆ ಅರ್ಪಿಸ್ಬೇಡಿ..

By Suvarna NewsFirst Published Mar 1, 2022, 10:44 AM IST
Highlights

ಶಿವ ಶಿವ ಎಂದರೆ ಭಯವಿಲ್ಲ ಎಂಬ ಮಾತಿದೆ. ಶಿವನ ಶಕ್ತಿ ಪ್ರತಿಯೊಬ್ಬ ಭಕ್ತರಿಗೂ ತಿಳಿದಿದೆ. ಆಯಸ್ಸು, ಆರೋಗ್ಯ, ಐಶ್ವರ್ಯಕ್ಕಾಗಿ ಪ್ರತಿಯೊಬ್ಬರೂ ಶಿವನ ಆರಾಧನೆ ಮಾಡ್ತಿದ್ದಾರೆ. ಆದ್ರೆ ತಿಳಿಯದೇ ಮಾಡುವ ಕೆಲ ತಪ್ಪಿನಿಂದ ಶಿವನ ಆಶೀರ್ವಾದದಿಂದ ವಂಚಿತರಾಗ್ತಿದ್ದಾರೆ. 

ಭಗವಂತ ಶಿವ (Shiva)ನನ್ನು ಮಹಾದೇವ (Mahadeva) ಎಂದು ಕರೆಯಲಾಗುತ್ತದೆ. ಇಂದು ಮುಕ್ಕಣ್ಣ ಈಶ್ವರದ ಆರಾಧನೆ ಎಲ್ಲೆಡೆ ನಡೆಯುತ್ತಿದೆ. ಶಿವರಾತ್ರಿ (Shivaratri)ಯ ಸಂಭ್ರಮ ಭಕ್ತರಲ್ಲಿ ಮನೆ ಮಾಡಿದೆ. ದೇವಸ್ಥಾನಗಳಲ್ಲಿ ಶಿವನ ಪೂಜೆ, ಆರಾಧನೆ ನಡೆಯುತ್ತಿದೆ. ಜಲಾಭಿಷೇಕ, ರುದ್ರಾಭಿಷೇಕ ಸೇರಿದಂತೆ ಶಿವನಿಗೆ ಇಷ್ಟವಾಗುವ ಪೂಜೆ, ಮಂತ್ರ ಪಠಣ ಮಾಡಲಾಗ್ತಿದೆ. ರುದ್ರ ಎಂದೇ ಹೆಸರು ಪಡೆದಿರುವ ಶಿವನನ್ನು ಒಲಿಸಿಕೊಳ್ಳುವುದು ಬಹಳ ಸುಲಭ. ಭಕ್ತರ ಇಚ್ಛೆಗಳನ್ನು ಶಿವ ಬಹುಬೇಗ ಈಡೇರಿಸುತ್ತಾನೆಂದು ನಂಬಲಾಗಿದೆ. ಇದೇ ಕಾರಣಕ್ಕೆ ಆತನನ್ನು ಭೋಲೇನಾಥ ಎಂದೂ ಕರೆಯಲಾಗುತ್ತದೆ. ಭಕ್ತಿಯಿಂದ ಪ್ರಾರ್ಥಿಸಿದ ಭಕ್ತ ಹೇಗೇ ಇರಲಿ, ಶಿವ ಆತನಿಗೆ ಬೇಡಿದ ವರ ನೀಡ್ತಾನೆ ಎಂಬುದು ನಂಬಿಕೆ.

ಅದರಲ್ಲೂ ಶಿವರಾತ್ರಿಯಂದು ಉಪವಾಸ ಮಾಡಿ, ಶಿವನ ಪೂಜೆ ಮಾಡಿದವರ ಎಲ್ಲ ಇಷ್ಟಾರ್ಥಗಳು ಈಡೇರುತ್ತವೆ. ಪ್ರತಿಯೊಂದು ದೇವರಿಗೂ ಅವರ ಪ್ರಿಯವಾದ ವಸ್ತುಗಳಿವೆ. ಹಾಗೆಯೇ ಅಪ್ರಿಯವಾದ ವಸ್ತುಗಳೂ ಇವೆ. ಭಕ್ತರು ಇದನ್ನು ತಿಳಿದಿರಬೇಕು. ಎಷ್ಟೇ ಪ್ರೀತಿಯಿಂದ ಪೂಜೆ ಮಾಡಲಿ, ಅಪ್ರಿಯ ವಸ್ತುಗಳನ್ನು ದೇವರಿಗೆ ಅರ್ಪಿಸಿದಾಗ ದೇವರಿಗೆ ಕೋಪ ಬರುವುದು ಸಹಜ. ಇದ್ರಿಂದ ಯಶಸ್ಸು, ಫಲ ಪ್ರಾಪ್ತಿಯಾಗುವುದಿಲ್ಲ. ಹಾಗೆಯೇ ಶಿವ ಅಥವಾ ಶಿವಲಿಂಗಕ್ಕೆ ಅಪ್ರಿಯವಾದ ವಸ್ತುಗಳೂ ಇವೆ. ಎಂದಿಗೂ ಶಿವಲಿಂಗ ಅಥವಾ ಶಿವನಿಗೆ ಆ ವಸ್ತುಗಳನ್ನು ಅರ್ಪಿಸಬಾರದು. ಶಿವನಿಗೆ ಕೆಲವು ವಸ್ತುಗಳನ್ನು ಅರ್ಪಿಸಿದರೆ ಕೋಪ ಬರುತ್ತದೆ ಎಂದು ಹೇಳಲಾಗುತ್ತದೆ. ಶಿವನಿಗೆ ಯಾವ ವಸ್ತುಗಳನ್ನು ಅರ್ಪಿಸಬಾರದು ಮತ್ತು ಏಕೆ ಎಂದು ಇವತ್ತು ಹೇಳ್ತೇವೆ.

Latest Videos

ಶಿವನಿಗೆ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಅರ್ಪಿಸಬೇಡಿ

ಅರಿಶಿನ : ಪೂಜೆ ಅಂದ್ಮೇಲೆ ಅರಿಶಿನ ಇರಲೇಬೇಕು. ಪೂಜೆ ವೇಳೆ ಅರಿಶಿನವನ್ನು ಅರ್ಪಿಸಲಾಗುತ್ತದೆ. ಆದ್ರೆ ಶಿವನಿಗೆ ಇದನ್ನು ಅರ್ಪಿಸಬಾರದು. ವಾಸ್ತವವಾಗಿ, ಅರಿಶಿನವನ್ನು ಸೌಂದರ್ಯ ವರ್ಧಕವಾಗಿ ಬಳಸಲಾಗುತ್ತದೆ ಮತ್ತು ಭೋಲೆನಾಥ ಲೌಕಿಕ ಸಂತೋಷದಿಂದ ದೂರವಿರುವ ಒಬ್ಬ ಸಂತ ಎಂದು ಹೇಳಲಾಗುತ್ತದೆ. ಹಾಗಾಗಿ ಶಿವನಿಗೆ ಅರಿಶಿನ ಅರ್ಪಿಸಿದ್ರೆ ಆತನ ಭಕ್ತರ ಮೇಲೆ ಕೋಪಗೊಳ್ತಾನೆ. ಶಿವರ ಪೂಜೆ ವೇಳೆ ಎಂದಿಗೂ ಅರಿಶಿನ ಬಳಸಬೇಡಿ. 

ಕುಂಕುಮ ಅಥವಾ ಸಿಂಧೂರ : ಭಕ್ತರು ಪಾರ್ವತಿ ದೇವಿ ಮತ್ತು ಗಣೇಶನ ವಿಗ್ರಹ ಸೇರಿದಂತೆ ಅನೇಕ ದೇವರಿಗೆ ಕುಂಕುಮವನ್ನು ಅರ್ಪಿಸುತ್ತಾರೆ. ಆದರೆ ಅದನ್ನು ಶಿವನಿಗೆ ಅರ್ಪಿಸಬಾರದು.  ಕಾರಣವೇನೆಂದರೆ, ಭಗವಂತ ಶಿವನು ವೈರಾಗಿ. ವೈರಾಗಿ ಜನರು ತಮ್ಮ ಹಣೆಯ ಮೇಲೆ ಭಸ್ಮವನ್ನು ಹಚ್ಚಿಕೊಳ್ತಾರೆ, ಕುಂಕುಮವಲ್ಲ. ಅಲ್ಲದೆ, ಕುಂಕುಮವನ್ನು ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಬಳಸುತ್ತಾರೆ. ಹಾಗಾಗಿ ಕುಂಕುಮವನ್ನೂ ಶಿವನ ಪೂಜೆಗೆ ಬಳಸಬೇಡಿ.

ಮುರಿದ ಅಕ್ಕಿ : ಶಾಸ್ತ್ರಗಳ ಪ್ರಕಾರ, ಅಕ್ಷತೆ ಅಥವಾ ಸಂಪೂರ್ಣ ಅಕ್ಕಿಯನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಆದಾಗ್ಯೂ, ಒಡೆದ ಅಕ್ಕಿಯನ್ನು ಅಪೂರ್ಣ ಮತ್ತು ಅಶುದ್ಧವೆಂದು ಪರಿಗಣಿಸಲಾಗುತ್ತದೆ,. ಆದ್ದರಿಂದ ಶಿವಲಿಂಗದ ಮೇಲೆ ನುಚ್ಚು ಅಕ್ಕಿಯನ್ನು ಅರ್ಪಿಸಬೇಡಿ.

ಎಳೆ ನೀರು: ಶಿವನಿಗೆ ತೆಂಗಿನಕಾಯಿಯನ್ನು ಅರ್ಪಿಸಬಹುದು. ಆದರೆ ಎಳನೀರಿನ ಅಭಿಷೇಕ ಅಥವಾ ಪೂಜೆಯನ್ನು ಮಾಡಬಾರದು.

ಶಂಖ : ಶಿವನು ಶಂಖಚೂಡ ಎಂಬ ರಾಕ್ಷಸನನ್ನು ಕೊಂದನು. ಶಂಖವನ್ನು ಅದೇ ರಾಕ್ಷಸನ ಸಂಕೇತವೆಂದು ಪರಿಗಣಿಸಲಾಗಿದೆ. ಆದ್ದರಿಂದ ಇದನ್ನು ಶಿವನ ಪೂಜೆಯಲ್ಲಿ ಬಳಸಲಾಗುವುದಿಲ್ಲ.

MAHASHIVRATRI 2022: ಶಿವನ ಕೃಪೆಗೆ ರಾಶಿಯನುಸಾರ ಮಾಡಿ ರುದ್ರಾಭಿಷೇಕ

ತುಳಸಿ ಎಲೆ : ಹಿಂದೂ ಧರ್ಮದಲ್ಲಿ ತುಳಸಿಗೆ ಪವಿತ್ರ ಸ್ಥಾನವಿದೆ. ತುಳಸಿಯನ್ನು ಪೂಜೆಗೆ ಬಳಸಲಾಗುತ್ತದೆ. ಆದ್ರೆ ಶಿವಲಿಂಗಕ್ಕೆ ಎಂದೂ ತುಳಸಿ ಎಲೆಯನ್ನು ಹಾಕಿ ಪೂಜೆ ಮಾಡಬೇಡಿ.

ತುಂಡಾದ ಬಿಲ್ವಪತ್ರೆ : ಎಲ್ಲರಿಗೂ ತಿಳಿದಿರುವಂತೆ ಬಿಲ್ವಪತ್ರೆ ಶಿವನಿಗೆ ಪ್ರಿಯ. ಹಾಗಂತ ಎಲ್ಲ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಬಾರದು. ತುಂಡಾದ,ಅರ್ಧ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಬೇಡಿ. 

Mahashivratri 2022: ಶಿವ ಪೂಜೆಯ ವಿಷಯದಲ್ಲಿ ನೆನಪಿಟ್ಟುಕೊಳ್ಳಲೇಬೇಕಾದ 18 ನಿಯಮಗಳಿವು..

ಹಾಲು : ಶಿವಲಿಂಗಕ್ಕೆ ಹಾಲನ್ನು ಅರ್ಪಿಸುವಾಗ್ಲೂ ಎಚ್ಚರಿಕೆ ವಹಿಸಬೇಕು. ಪಾಶ್ಚರೀಕರಿಸಿದ ಅಥವಾ ಪ್ಯಾಕೆಟ್ ಹಾಲನ್ನು ಅರ್ಪಿಸಬಾರದು. ಹಾಗೆಯೇ ಅಭಿಷೇಕದ ವೇಳೆ ಸ್ಟೀಲ್ ಪಾತ್ರೆಯನ್ನು ಬಳಸಬಾರದು.

 

click me!