Toe Ring : ಪತಿಯ ಅನಾರೋಗ್ಯಕ್ಕೆ ನಿಮ್ಮ ಕಾಲುಂಗುರ ಕಾರಣವಾಗಿರಬಹುದು!

By Suvarna NewsFirst Published Jan 18, 2022, 4:43 PM IST
Highlights

ಹಿಂದೆ ಕಡ್ಡಾಯವಾಗಿದ್ದ ಸಂಪ್ರದಾಯಗಳು ಈಗ ಆಯ್ಕೆಯಾಗಿವೆ. ಅದಕ್ಕೆ ಫ್ಯಾಷನ್ ಹೆಸರು ನೀಡಿ ಜನರು ತಮಗೆ ಬೇಕಾದಂತೆ ಬಳಸ್ತಾರೆ. ಇದ್ರಲ್ಲಿ ಕಾಲುಂಗುರವೂ ಸೇರಿದೆ. ಕಾಲಿನ ಸೌಂದರ್ಯ ಹೆಚ್ಚಿಸುವ ಕಾಲುಂಗುರದ ಬಗ್ಗೆ ತಿಳಿಯದ ಅನೇಕರು ನಷ್ಟ ತಂದುಕೊಳ್ತಿದ್ದಾರೆ. 
 

ಹಿಂದೂ (Hindu )ಧರ್ಮದಲ್ಲಿ ಸುಮಂಗಲಿಯನ್ನು ದೇವತೆಗೆ ಹೋಲಿಕೆ ಮಾಡಲಾಗುತ್ತದೆ. ವಿವಾಹಿತ (Married) ಮಹಿಳೆ (Woman) ಹಣೆಗೆ ಸಿಂಧೂರವಿಡುವುದು, ಕುತ್ತಿಗೆಗೆ ಮಂಗಳಸೂತ್ರ ಧರಿಸುವುದು,ಕೈಗಳಿಗೆ ಹಸಿರು ಗಾಜಿನ ಬಳೆಗಳನ್ನು ಧರಿಸುವುದು ಹಾಗೂ ಕಾಲಿಗೆ ಉಂಗುರ ಧರಿಸುವುದು ಸಂಪ್ರದಾಯವಾಗಿದೆ. ಇದ್ರ ಹಿಂದೆ ಕೆಲ ವೈಜ್ಞಾನಿಕ ಕಾರಣಗಳಿದ್ದರೆ ಮತ್ತೆ ಕೆಲ ಜ್ಯೋತಿಷ್ಯದ ಕಾರಣಗಳನ್ನು ಹೇಳಲಾಗುತ್ತದೆ.

ಹಣೆಗೆ ಕುಂಕುಮ ಹಚ್ಚುವುದ್ರಿಂದ  ಗಂಡನ ಆಯುಷ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಗಂಡನನ್ನು ದುಷ್ಟ ಶಕ್ತಿಗಳಿಂದ ರಕ್ಷಿಸಲು ಕುತ್ತಿಗೆಗೆ ಮಂಗಳಸೂತ್ರವನ್ನು ಧರಿಸಲಾಗುತ್ತದೆ. ಹಾಗೆಯೇ ಎರಡು ಪಾದಗಳ ಮಧ್ಯದ ಮೂರು ಬೆರಳುಗಳಿಗೆ ಉಂಗುರವನ್ನು ಧರಿಸುವುದು ವಾಡಿಕೆ. ಕುತ್ತಿಗೆಗೆ ಬಂಗಾರದ ಆಭರಣ ಧರಿಸುವ ಮಹಿಳೆಯರು ಕಾಲಿಗೆ ಬೆಳ್ಳಿ ಆಭರಣ ಹಾಕುತ್ತಾರೆ. ಇದಕ್ಕೆ ಸೂರ್ಯ ಹಾಗೂ ಚಂದ್ರರ ಉದಾಹರಣೆ ನೀಡಲಾಗುತ್ತದೆ. ಗ್ರಹಗಳು ಮಾತ್ರ ಇದಕ್ಕೆ ಕಾರಣವಲ್ಲ. ಕಾಲುಂಗುರ ಪತಿಯ ಬಡತನಕ್ಕೂ ಕಾರಣವಾಗಬಹುದು. ಕಾಲುಂಗುರದ ಮಹತ್ವ ಹಾಗೂ ಅದು ಪತಿಯ ಅಭಿವೃದ್ಧಿಗೆ ಹೇಗೆ ಕಾರಣ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಕಾಲುಂಗುರ ಧರಿಸುವುದ್ರಿಂದ ಅನೇಕ ಆರೋಗ್ಯ ಸಮಸ್ಯೆ ದೂರವಾಗುತ್ತದೆ. ಇದು ಅನೇಕರಿಗೆ ತಿಳಿದಿರುವ ಸಂಗತಿ. ಇತ್ತೀಚಿನ ದಿನಗಳಲ್ಲಿ ಕಾಲುಂಗುರ ಒಂದು ಫ್ಯಾಷನ್. ವಿವಾಹಿತ ಮಹಿಳೆಯರು ಕಾಲುಂಗುರ ಧರಿಸಲು ಇಚ್ಛಿಸುವುದಿಲ್ಲ. ವರ್ಜಿನ್ ಹುಡುಗಿಯರು ಫ್ಯಾಷನ್ ಹೆಸರಿನಲ್ಲಿ ಕಾಲುಂಗುರ ಧರಿಸುತ್ತಾರೆ. ಶಾಸ್ತ್ರದಲ್ಲಿ ಕಾಲುಂಗುರದ ಬಗ್ಗೆ ಅನೇಕ ಸಂಗತಿಗಳನ್ನು ಹೇಳಲಾಗಿದೆ. ಯಾವುದೇ ಕಾರಣಕ್ಕೂ ಕನ್ಯೆ ಕಾಲುಂಗುರವನ್ನು ಧರಿಸಬಾರದು. ಕಾಲುಂಗುರವನ್ನು ತಪ್ಪಾಗಿ ಧರಿಸಿದ್ರೂ ಪತಿಗೆ ಆಪತ್ತು ತಂದಂತೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. 

ಕಾಲುಂಗುರ ಕಳೆದ್ರೆ ಪತಿಗೆ ಕಷ್ಟ: ಕಾಲಿಗೆ ಹಾಕುವ ಉಂಗುರಕ್ಕೂ ಚಂದ್ರನಿಗೂ ನಂಟಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.  ಪತಿ-ಪತ್ನಿಗೆ ಸೂರ್ಯ ಹಾಗೂ ಚಂದ್ರರ ಆಶೀರ್ವಾದ ಬೇಕು. ಬೆಳ್ಳಿಯ ಕಾಲುಂಗುರ ಧರಿಸುವುದರಿಂದ ಚಂದ್ರ ಐಶ್ವರ್ಯ ನೀಡುತ್ತಾನೆ ಎಂದು ನಂಬಲಾಗಿದೆ. ಇದೇ ವೇಳೆ ಕಾಲುಂಗುರ ಕಳೆದರೆ ಅದು ಶುಭವಲ್ಲ. ಕಾಲುಂಗುರ ಕಳೆದರೆ ಪತಿ ಅನಾರೋಗ್ಯಕ್ಕೆ ಒಳಗಾಗಬಹುದು ಎನ್ನಲಾಗುತ್ತದೆ. ಹಾಗಾಗಿ ಎಂದೂ ಕಾಲುಂಗುರ ಕಳೆಯದಂತೆ ನೋಡಿಕೊಳ್ಳಿ.  

ಬಂಗಾರದ ಕಾಲುಂಗುರದಿಂದ ದೂರವಿರಿ : ಅನೇಕರು ಬಂಗಾರದ ಕಾಲುಂಗುರ ಧರಿಸುತ್ತಾರೆ. ಇದು ಮಂಗಳಕರವಲ್ಲ. ಚಿನ್ನದ ಕಾಲುಂಗುರ ದೊಡ್ಡ ಹಾನಿಗೆ ಕಾರಣವಾಗುತ್ತದೆ. ಫ್ಯಾಷನ್ ಹೆಸರಿನಲ್ಲಿ ಬೆಳ್ಳಿ ಹೊರತುಪಡಿಸಿ ಬೇರೆ ಲೋಹದ ಕಾಲುಂಗುರ ಧರಿಸುತ್ತಾರೆ. ಇದು ಕೂಡ ಒಳ್ಳೆಯದಲ್ಲ. ಇದ್ರ ಜೊತೆ ಕಾಲ್ಬೆರಳುಗಳಿಂದ ಉಂಗುರ ಕಳಚಿ ಬರುವಷ್ಟು ಸಡಿಲವಾಗಿರದಂತೆ ನೋಡಿಕೊಳ್ಳಿ. ಕಾಲ್ಬೆರಳಿಗೆ ಸರಿ ಹೊಂದುವ ಉಂಗುರವನ್ನು ಖರೀದಿ ಮಾಡಿ.   

Navagraha And Health: ಆರೋಗ್ಯಕ್ಕೂ ನವಗ್ರಹಗಳಿಗೂ ಉಂಟು ಬಾದರಾಯಣ ಸಂಬಂಧ!

ಬೇರೆ ಮಹಿಳೆಯರಿಗೆ ನಿಮ್ಮ ಕಾಲುಂಗುರ ನೀಡಬೇಡಿ : ಕೆಲ ಮಹಿಳೆಯರು ತಮ್ಮ ಆಭರಣಗಳನ್ನು ಹಂಚಿಕೊಳ್ತಾರೆ. ಆದ್ರೆ ವಿವಾಹಿತ ಮಹಿಳೆ ತನ್ನ ಕಾಲುಂಗುರವನ್ನು ಬೇರೆ ಮಹಿಳೆಗೆ ನೀಡುವುದು ಅಶುಭ. ಇದ್ರಿಂದ ದಾಂಪತ್ಯದಲ್ಲಿ ಬಿರುಕು ಮೂಡುವ ಸಾಧ್ಯತೆಯಿರುತ್ತದೆ. ಹಾಗಾಗಿ ಅಪ್ಪಿತಪ್ಪಿಯೂ ನಿಮ್ಮ ಕಾಲುಂಗುರವನ್ನು ನೀವು ಬೇರೆಯವರಿಗೆ ನೀಡಬೇಡಿ. ಉಂಗುರ ಸವೆಯುವುದು ಮಾಮೂಲಿ. ಎಂದಿಗೂ ಸವೆದ ಕಾಲುಂಗುರವನ್ನು ಧರಿಸಬೇಡಿ. ಕಾಲುಂಗುರು ಕಟ್ ಆಗುವಂತಿದ್ದರೆ ಅದನ್ನು ತಕ್ಷಣ ಬದಲಿಸಿ. 

Past Life: ಕನಸಿನ ಈ ಸೂಚನೆಗಳು ನಿಮ್ಮ ಪೂರ್ವ ಜನ್ಮದ ನೆನಪುಗಳಿರಬಹುದು..!

ಯಾವ ಬೆರಳಿಗೆ ಕಾಲುಂಗುರ : ಶಾಸ್ತ್ರಗಳ ಪ್ರಕಾರ, ವಿವಾಹಿತ ಮಹಿಳೆ ಬಲ ಮತ್ತು ಎಡ ಪಾದದ ಎರಡನೇ ಬೆರಳಿಗೆ ಉಂಗುರ ಧರಿಸುವುದು ಮಂಗಳಕರ. ಬೆಳ್ಳಿಯ ಕಾಲುಂಗುರವನ್ನು ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗಿದೆ. ಇದು ಆರೋಗ್ಯವನ್ನು ವೃದ್ಧಿಸುತ್ತದೆ. ಮಹಿಳೆಯರ ಪಾದದ ಎರಡನೇ ಬೆರಳಿನ ನರವು ಗರ್ಭಾಶಯಕ್ಕೆ ನೇರವಾಗಿ ಸಂಬಂಧಿಸಿದೆ.ಇದು ಹೃದಯದ ಮೂಲಕ ಹಾದು ಹೋಗುತ್ತದೆ. ಈ ಕಾರಣಕ್ಕಾಗಿ ಬಲ ಮತ್ತು ಎಡ ಪಾದದ ಎರಡನೇ ಬೆರಳಿನಲ್ಲಿ ಅವುಗಳನ್ನು ಧರಿಸಿದ್ರೆ ಗರ್ಭಾಶಯದ ಆರೋಗ್ಯ ಉತ್ತಮವಾಗಿರುವುದಲ್ಲದೆ, ರಕ್ತದೊತ್ತಡ ಸರಿಯಾಗಿರುತ್ತದೆ.
 

click me!