Sex and Zodiac: ಈ ಜನ್ಮರಾಶಿಯವರು ಹಾಸಿಗೆಯಲ್ಲಿ ಮಹಾ ಸ್ವಾರ್ಥಿಗಳು!

Suvarna News   | Asianet News
Published : Jan 18, 2022, 04:30 PM IST
Sex and Zodiac: ಈ ಜನ್ಮರಾಶಿಯವರು ಹಾಸಿಗೆಯಲ್ಲಿ ಮಹಾ ಸ್ವಾರ್ಥಿಗಳು!

ಸಾರಾಂಶ

ಕೆಲವು ಜನ್ಮರಾಶಿಯಲ್ಲಿ ಜನಿಸಿದವರು ಲೈಂಗಿಕ ಆಟಗಳಲ್ಲಿ ಯಾವತ್ತೂ ಕೊಡುಕೊಳ್ಳುವವರು. ಇನ್ನು ಕೆಲವರು ಎಲ್ಲ ತಮಗೇ ಬೇಕು ಅನ್ನುವ ಸ್ವಾರ್ಥಿಗಳು. ಅಂಥವರ್ಯಾರು ಅನ್ನುವುದನ್ನು ನೋಡೋಣ ಬನ್ನಿ.   

ಸಂಭೋಗದ (Sex) ಸಮಯದಲ್ಲಿ ಹೆಚ್ಚು ಆನಂದವನ್ನು ಅನುಭವಿಸಲು ಬಯಸುವುದು ತಪ್ಪಲ್ಲ. ಆದರೆ ಆ ಸಂದರ್ಭದಲ್ಲಿ ನಿಮ್ಮ ಸಂಗಾತಿಯ (Spouse) ಬಗ್ಗೆ ಏನೂ ಕಾಳಜಿ ವಹಿಸದಿರುವುದು ಸಂಪೂರ್ಣವಾಗಿ ಸ್ವಾರ್ಥವೇ. ಲೈಂಗಿಕ ಚಟುವಟಿಕೆಯ ವೇಳೆ ನಿಮ್ಮ ಸಂಗಾತಿ ನಿಮ್ಮ ಸುಖದ ಬಗ್ಗೆ ಸ್ವಲ್ಪವೂ ಕಾಳಜಿ ವಹಿಸುವುದಿಲ್ಲ ಎಂಧು ಗೊತ್ತಾದರೆ ನಿಮಗೆ ಸಂತೋಷವಾಗುತ್ತದೆಯೇ? ಹಾಸಿಗೆಯಲ್ಲಿ ತುಂಬಾ ಸ್ವಾರ್ಥಿಯಾಗಿರುವ ಪಾಲುದಾರರನ್ನು ಹೊಂದಿರುವುದು ನಿಜವಾಗಿಯೂ ಮೋಜಿನ ಸಂಗತಿಯಲ್ಲ. ಇದು ಲೈಂಗಿಕ ಸಮಯದಲ್ಲಿ ಎಲ್ಲಾ ಉತ್ಸಾಹ ಮತ್ತು ಸಂತೋಷವನ್ನು ನಾಶಪಡಿಸುತ್ತದೆ. ಹಾಸಿಗೆಯಲ್ಲಿ ಸಾಕಷ್ಟು ಸ್ವಾರ್ಥಿಯಾಗಿರುವ ಕೆಲವು ರಾಶಿಚಕ್ರ ಚಿಹ್ನೆಗಳು ಇಲ್ಲಿವೆ.

ಧನು ರಾಶಿ (Sagittarius)
ಇವರು ನಿಜವಾಗಿಯೂ ಸಂಬಂಧಗಳಲ್ಲಿ ಬದ್ಧತೆ ಮತ್ತು ಕಾಮಸುಖದಲ್ಲಿ ಕೊಡುಕೊಳ್ಳುವಿಕೆ ಕಡೆಗೆ ಒಲವನ್ನು ಹೊಂದಿಲ್ಲ, ಆದ್ದರಿಂದ ಸಾಂದರ್ಭಿಕ ಸಂಬಂಧಗಳಿಂದಲೇ ಅತ್ಯುತ್ತಮವಾದದನ್ನು ಬಾಚಿಕೊಳ್ಳಲು ಬಯಸುತ್ತಾರೆ. ಹಾಸಿಗೆಯ ಚಟುವಟಿಕೆಯಲ್ಲಿ ಇರುವಾಗ ಅವರು ತುಂಬಾ ಅನಿರೀಕ್ಷಿತವಾಗಿರಬಹುದು ಮತ್ತು ಸಂಭೋಗದ ನಂತರ ಇವರು ತುಂಬಾ ಮೂಡಿ ಆಗಿರಬಹುದು.

Zodiac Signs: ನಿಮ್ಮ ಹುಡುಗನಿಗೆ ಸ್ವಲ್ಪವೂ ಸಹಿಸಲಾಗದ ವಿಷಯವಿದು..

ಮಕರ ರಾಶಿ (Capricorn)
ಹಾಸಿಗೆ ಸುಖ ಸೇರಿದಂತೆ ಜೀವನದ ಪ್ರತಿಯೊಂದು ಅಂಶದಲ್ಲೂ ಇವರು ಇತರರನ್ನು ತುಂಬಾ ನಿಯಂತ್ರಿಸುತ್ತಾರೆ. ತಮ್ಮ ಸಂಗಾತಿಯು ಅವರಿಗೆ ಶರಣಾದರೆ ಅವರು ಅದನ್ನು ಇಷ್ಟಪಡುತ್ತಾರೆ. ಇದರಿಂದಾಗಿ ಮಕರ ರಾಶಿಯವರು ಸಾಧ್ಯವಿರುವ ಎಲ್ಲ ರೀತಿಯಲ್ಲಿಯೂ ತಮ್ಮ ಪ್ರಾಬಲ್ಯವನ್ನು ಸಾಧಿಸುತ್ತಾರೆ. ಇವರು ಲೈಂಗಿಕ ಸಮಯದಲ್ಲಿ ಶ್ರೇಷ್ಠರಾಗಿರಲು ಇಷ್ಟಪಡುತ್ತಾರೆ. ಕೆಲವೊಮ್ಮೆ ಸಂಗಾತಿಯನ್ನು ನೋಯಿಸಲೂ ಮುಂದಾಗಬಹುದು.

ಮೇಷ ರಾಶಿ (Aries)
ಇವರು ತಮ್ಮ ಬಗ್ಗೆ ಕೊಚ್ಚಿಕೊಳ್ಳುತ್ತಾರೆ, ತಮ್ಮನ್ನು ತಾವು ಸಂತೋಷಪಡಿಸಿಕೊಳ್ಳಲು ಇಷ್ಟಪಡುತ್ತಾರೆ ಮತ್ತು ಬೇರೆಯವರ ಬಗ್ಗೆ ಯೋಚಿಸುವುದಿಲ್ಲ. ಇವರು ತಮ್ಮ ಸ್ವಂತದ ಬಗ್ಗೆ ಎಷ್ಟು ಗೀಳನ್ನು ಹೊಂದಿದ್ದಾರೆ ಎಂದರೆ, ತಮ್ಮ ಸಂಗಾತಿಯನ್ನು ಸಂತೃಪ್ತಿಪಡಿಸುವ ಬದಲು ಅವರಿಂದ ತಾವೇನು ಪಡೆಯಬಹುದು ಎಂಬುದರತ್ತಲೇ ಹೆಚ್ಚಿನ ಗಮನವನ್ನು ಇಟ್ಟಿರುತ್ತಾರೆ. 

Successful Zodiacs: ಈ ನಾಲ್ಕು ರಾಶಿಯವರು ಹುಟ್ಟಿರೋದೇ ಯಶಸ್ಸು ಕಾಣೋಕೆ!

ಕನ್ಯಾ ರಾಶಿ (Virgo)
ಇವರು ತಮ್ಮ ಸಾಮರ್ಥ್ಯಗಳ ಬಗ್ಗೆ ಹೆಚ್ಚು ಹೆಮ್ಮೆ ಪಡುತ್ತಾರೆ. ಮತ್ತು ಇದು ಹಾಸಿಗೆಯಲ್ಲಿ ಅವರ ಅನುಭವಗಳು ಮತ್ತು ಸಾಮರ್ಥ್ಯಗಳಿಗೆ ಸಂಬಂಧಿಸಿದ್ದರೆ, ಕನ್ಯಾ ರಾಶಿಯವರು ಇನ್ನಷ್ಟು ವಿಜೃಂಭಿಸುತ್ತಾರೆ. ಯಾರ ಮೇಲೆ ಹೇಗೆ ಆಳ್ವಿಕೆ ನಡೆಸಬೇಕೆಂದು ತಿಳಿದಿರುತ್ತಾರೆ. ಇವರು ತಮ್ಮ ಆನಂದವನ್ನು ತಾವೇ ನಿಯಂತ್ರಿಸಲು ಇಷ್ಟಪಡುತ್ತಾರೆ. ತಮ್ಮ ಆನಂದದ ಅತ್ಯುಚ್ಚ ಹಂತದಲ್ಲಿ ಇತರರು ಇದ್ದಾರೆ ಎಂಬುದನ್ನು ಮರೆತುಬಿಡುತ್ತಾರೆ. 

Strong Women: ರಾಮಾಯಣದ ಐದು ಅಸಾಧಾರಣ ಮಹಿಳಾಮಣಿಗಳಿವರು

ಸಿಂಹ ರಾಶಿ (Leo)
ಇವರು ದಯಾವಂತರು, ಇಂದ್ರಿಯಗ್ರಾಹಿ ಮತ್ತು ಪ್ರೀತಿಪಾತ್ರರು ಎಂದು ಭಾವಿಸಿದರೂ ಇವರು ಹಾಸಿಗೆಯಲ್ಲಿ ನಿಜವಾಗಿಯೂ ಸ್ವಾರ್ಥಿಯಾಗಬಹುದು. ಇವರು ತಮ್ಮ ಸಂಗಾತಿಯು ತಮಗೆ ಸಂತೋಷವನ್ನು ನೀಡಬೇಕೆಂದು ನಿರೀಕ್ಷಿಸುತ್ತಾರೆ. ಕೆಲವೊಮ್ಮೆ ಸಂತೋಷವನ್ನು ಹಂಚಿಕೊಳ್ಳುವುದರತ್ತಲೂ ಗಮನ ಹರಿಸಬಹುದು. 

 

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ