Chanakya Neeti: ಸುಖ ದಾಂಪತ್ಯಕ್ಕೆ ಮುಳುವಾಗುವ ಮುಖ್ಯ ಕಾರಣಗಳು

By Suvarna News  |  First Published Mar 28, 2022, 6:10 PM IST

ವೈವಾಹಿಕ ಜೀವನ ಸುಖವಾಗಿರಲು ಪರಸ್ಪರ  ಹೊಂದಾಣಿಕೆ ಮುಖ್ಯ ಕಾರಣವಾಗಿರುತ್ತದೆ.  ಪರಸ್ಪರ ಹೊಂದಾಣಿಕೆ ವಿಶ್ವಾಸ ಮತ್ತು ನಂಬಿಕೆ ಇದ್ದಲ್ಲಿ ಸಾಮರಸ್ಯದ ಜೀವನಕ್ಕೆ ನಾಂದಿಯಾಗುತ್ತದೆ. ದಾಂಪತ್ಯ ಜೀವನದಲ್ಲಿ ವಿಚ್ಛೇದನಕ್ಕೆ ದಾರಿ ಮಾಡಿಕೊಡುವ ಅನೇಕ ಬೇರೆ ಕಾರಣಗಳನ್ನು ಚಾಣಕ್ಯ ಆಚಾರ್ಯರು ತಮ್ಮ ನೀತಿ ಸೂತ್ರದಲ್ಲಿ ತಿಳಿಸಿದ್ದಾರೆ. ಅವುಗಳ ಬಗ್ಗೆ ತಿಳಿಯೋಣ.....


ವ್ಯಕ್ತಿಯ ಜೀವನದಲ್ಲಿ (Life) ಮದುವೆಯೂ (Marriage) ಒಂದು ವಿಶೇಷ ಮತ್ತು ಪ್ರಮುಖವಾದ ಘಟ್ಟ ಆಗಿರುತ್ತದೆ. ಹೊಂದಾಣಿಕೆಯಿಂದ ಸಾಗಿದಾಗ ಅದು ಸುಖ (Happy) ದಾಂಪತ್ಯವೆಂದು ಹೆಸರು ಪಡೆದುಕೊಳ್ಳುತ್ತದೆ. ಪರಸ್ಪರ ಹೊಂದಾಣಿಕೆ (Adjustment), ವಿಷಯಗಳನ್ನು ಹಂಚಿಕೊಳ್ಳುವಿಕೆ ಮತ್ತು ಒಬ್ಬರ ಮೇಲೆ ಒಬ್ಬರಿಗೆ ವಿಶ್ವಾಸ, ಗೌರವ (Respect) ಮತ್ತು ನಂಬಿಕೆ ಸುಖ ದಾಂಪತ್ಯದ ಅಡಿಪಾಯಗಳಾಗಿರುತ್ತವೆ.  ಜೀವನದಲ್ಲಿ ಈ ವಿಷಯಗಳಲ್ಲಿ ಗಟ್ಟಿತನ ಇಲ್ಲದೆ ಇದ್ದಾಗ ಸಂಬಂಧದಲ್ಲಿನ ಬಾಂಧವ್ಯ ಸಡಿಲಗೊಳ್ಳುತ್ತದೆ. ಇದೇ ಮುಂದುವರಿದು ದಾಂಪತ್ಯದಲ್ಲಿ ಬಿರುಕು ಮೂಡಿ ವಿಚ್ಛೇದನದ (Divorce) ವರೆಗೂ ಸಾಗುತ್ತದೆ. ಆಚಾರ್ಯ ಚಾಣಕ್ಯರು ತಮ್ಮ ನೀತಿ ಸೂತ್ರದಲ್ಲಿ (Chanakya neeti) ಸುಖವಾಗಿದ್ದ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲು ಮುಖ್ಯ ಕಾರಣಗಳು ಯಾವುದು ಎಂದು ತಿಳಿಸಿದ್ದಾರೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ.

ಸುಳ್ಳು ಹೇಳುವುದು (Lie) : ಪತಿ ಪತ್ನಿಯರ (Husband and wife ) ನಡುವೆ ಯಾವುದೇ ಮುಚ್ಚುಮರೆ ಇರಬಾರದು. ಯಾವುದೋ ಒಂದು ವಿಷಯವನ್ನು ಮುಚ್ಚಿಡಲು ಹತ್ತಾರು ಸುಳ್ಳುಗಳನ್ನು ಹೇಳುವುದು ಅನುಮಾನಕ್ಕೆ ದಾರಿ ಮಾಡಿಕೊಡುತ್ತದೆ. ದಾಂಪತ್ಯದಲ್ಲಿ ಅನುಮಾನ ಹೊಕ್ಕಾಗ ಸಾಮರಸ್ಯ ಕಡಿಮೆಯಾಗುತ್ತದೆ. ಅನುಮಾನವೇ ದೊಡ್ಡದಾಗಿ ವಿಚ್ಛೇದನಕ್ಕೆ ಕಾರಣವಾಗುತ್ತದೆ.

ಸಿಟ್ಟು (Anger): ಜೀವನದಲ್ಲಿ ಶಿಸ್ತು ಅತ್ಯಂತ ಅಪಾಯಕಾರಿ ಗುಣ. ಸಿಟ್ಟು ಎಂತಹದೆ ಸಂಬಂಧವನ್ನು ಹಾಳು ಮಾಡಲು ಮುಖ್ಯ ಕಾರಣವಾಗುತ್ತದೆ. ನಿಯಂತ್ರಣಕ್ಕೆ ತೆಗೆದುಕೊಳ್ಳಲಾರದಷ್ಟು ಸಿಟ್ಟು ಬರುವ ವ್ಯಕ್ತಿಗಳು, ಆ ಸಿಟ್ಟನ್ನು ಸಂಗಾತಿಯ ಮೇಲೆ ಹೊರಹಾಕುತ್ತಾರೆ. ಇದರಿಂದ ಬಾಂಧವ್ಯ ಕೆಡುತ್ತದೆ. ಅಷ್ಟೇ ಅಲ್ಲದೆ ಸಂಗಾತಿ ನಡುವಿನ ವಿಶ್ವಾಸ,ನಂಬಿಕೆ ಮತ್ತು ಪ್ರೀತಿ ಕಡಿಮೆಯಾಗುತ್ತದೆ  ಕಡಿಮೆಯಾಗುತ್ತದೆ. ಹಾಗಾಗಿ ಸಿಟ್ಟನ್ನು ಎಲ್ಲರೂ ಸಹಿಸಿಕೊಳ್ಳುವುದಿಲ್ಲ. ಇದು ನಂತರದಲ್ಲಿ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ.

Tap to resize

Latest Videos

ನನಗಿಂತ ಕಡಿಮೆ (Ego): ಪತಿ ಅಥವಾ ಪತ್ನಿ ತಮ್ಮ ಸಂಗಾತಿಯನ್ನು ಅವರಿಗಿಂತ ಕಡಿಮೆ ಎಂದು ಭಾವಿಸಿದರೆ ಮತ್ತು ಗೌರವವನ್ನು ಕೊಡದಿದ್ದರೆ ಅಂಥವರು ಸ್ವತಃ ತಮ್ಮ ಗೌರವವನ್ನೇ ಕಳೆದುಕೊಳ್ಳುತ್ತಾರೆ. ಯಾವ ಸಂಬಂಧದಲ್ಲಿ ಗೌರವ ಮತ್ತು ವಿಶ್ವಾಸಕ್ಕೆ ಬೆಲೆ ಇರುವುದಿಲ್ಲವೋ ಅಂತಹ ಸಂಬಂಧ ಹೆಚ್ಚು ದಿನಗಳವರೆಗೆ ಸಾಗುವುದಿಲ್ಲ.  ಅಹಂಕಾರ ಸ್ವಭಾವ ಸಂಬಂಧವನ್ನು ಹಾಳು ಮಾಡುತ್ತದೆ. ಇದೇ ಮುಂದುವರಿದು ನಂತರದಲ್ಲಿ ಈ ಸಂಬಂಧಗಳೇ ಭಾರವಾಗಲು ಪ್ರಾರಂಭವಾಗುತ್ತದೆ. ಹಾಗಾಗಿ ಪತಿ ಪತ್ನಿಯರ ನಡುವೆ ಗೌರವ ಮತ್ತು ವಿಶ್ವಾಸ ಹೆಚ್ಚು ಅವಶ್ಯಕವಾದದ್ದು. 

ಇದನ್ನು ಓದಿ : Eyebrows ನೋಡಿ ವ್ಯಕ್ತಿತ್ವ ಹೇಳ್ಬೋದು!

ನಂಬಿಕೆ ಮತ್ತು ವಿಶ್ವಾಸ (Belief) : ವೈವಾಹಿಕ ಜೀವನವು ನಂಬಿಕೆ ಮತ್ತು ವಿಶ್ವಾಸದ ತಳಹದಿಯ ಮೇಲೆ ನೆಲೆಗೊಂಡಿರುತ್ತದೆ. ಅಂತಹ ಸಂದರ್ಭದಲ್ಲಿ ಪತಿ ಅಥವಾ ಪತ್ನಿ ತನ್ನ ಸಂಗಾತಿಗೆ ಮೋಸ ಮಾಡುವುದರಿಂದ ತಮ್ಮ ವಿಶ್ವಾಸವನ್ನೇ ಕಳೆದುಕೊಳ್ಳುತ್ತಾರೆ. ಯಾವ ಸಂಬಂಧಕ್ಕೆ ಅಡಿಪಾಯವೇ ಗಟ್ಟಿ ಇರುವುದಿಲ್ಲವೋ ಅಂತಹ ಸಂಬಂಧ ಹೆಚ್ಚು ದಿನ ಗಟ್ಟಿಯಾಗಿ ಉಳಿಯುವುದಿಲ್ಲ.

ಇದನ್ನು ಓದಿ : Gemology: ಪರ್ಲ್ ಧರಿಸಿದರೆ ಹಣಕಾಸಿನ ಸಮಸ್ಯೆ ಇರಲ್ಲ

ಪರಸ್ಪರ ಹೊಂದಾಣಿಕೆ (Adjustment) : ಪತಿ ಪತ್ನಿಯರ ಜೀವನವು ಪರಸ್ಪರ  ಹೊಂದಾಣಿಕೆಯ ಮೇಲೆ ನಿಂತಿರುತ್ತದೆ. ಹಾಗಾಗಿ ಪತಿ ಮತ್ತು ಪತ್ನಿಯರು ತಮ್ಮ ಜೀವನದಲ್ಲಿ ಯಾವುದೇ ರೀತಿಯ ಘಟನೆಗಳು ಸಂಭವಿಸಿದರೂ ತನ್ನ ಸಂಗಾತಿಯಿಂದ ಮುಚ್ಚಿಡದೇ ಎಲ್ಲವನ್ನು ಹೇಳಿಕೊಳ್ಳಬೇಕು. ಹೀಗೆ ಹೇಳಿಕೊಳ್ಳದೆ ಶಿಯಾಗಳನ್ನು ಮುಚ್ಚಿಡುತ್ತಾ ಬಂದರೆ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಯಾವುದೇ ವಿಷಯವನ್ನೂ ಮುಚ್ಚಿಡದೇ ಮುಕ್ತವಾಗಿ ಪರಸ್ಪರ ಮಾತನಾಡಿಕೊಂಡರೆ ಎಲ್ಲವೂ ಪರಿಹಾರವಾಗುತ್ತದೆ. ವಿಷಯಗಳನ್ನು ಮಚ್ಚೆಟ್ಟು ಗುಟ್ಟು ಮಾಡಿದರೆ ಇದರಿಂದ ಬಾಂಧವ್ಯ ಹಾಡಾಗುತ್ತದೆ ಸಂಬಂಧದಲ್ಲಿ ನಿಧಾನವಾಗಿ ಬಿರುಕು ಮೂಡಲು ಪ್ರಾರಂಭವಾಗುತ್ತದೆ. ವಿಷಯಗಳನ್ನು ಪರಸ್ಪರ ಚರ್ಚಿಸಿ ನಿರ್ಧಾರಗಳನ್ನು ತೆಗೆದುಕೊಂಡ ಒಬ್ಬರಿಗೆ ಒಬ್ಬರು ಬೆಂಬಲ ಸಿಗುತ್ತದೆ. ಇದರಿಂದ ದಾಂಪತ್ಯ ಜೀವನ ಚೆನ್ನಾಗಿರುತ್ತದೆ ವಿಚ್ಚೇದನದ ಬಗ್ಗೆ ಯೋಚಿಸುವ ಅವಶ್ಯಕತೆಯೂ ಇರುವುದಿಲ್ಲ.

click me!