ವಿಶ್ವದ ಎತ್ತರದ ಪಂಚಮುಖಿ ಆಂಜನೇಯ ಮೂರ್ತಿ ಲೋಕಾರ್ಪಣೆ: ಸಿಎಂ ಬೊಮ್ಮಾಯಿ ಉದ್ಘಾಟನೆ

By Govindaraj S  |  First Published Apr 11, 2022, 10:37 AM IST

ಕುಣಿಗಲ್‌ ತಾಲೂಕಿನ ಬಿದನಗೆರೆಯಲ್ಲಿ ನಿರ್ಮಿಸಲಾಗಿರುವ 161 ಅಡಿ ಎತ್ತರದ ಪಂಚಮುಖಿ ಆಂಜನೇಯ ಮೂರ್ತಿಯನ್ನು ಭಾನು​ವಾರ ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ ಅವರು ಲೋಕಾ​ರ್ಪಣೆ ಮಾಡಿ​ದ​ರು.


ಕುಣಿ​ಗಲ್‌ (ಏ.11): ಕುಣಿಗಲ್‌ (Kunigal) ತಾಲೂಕಿನ ಬಿದನಗೆರೆಯಲ್ಲಿ (Bidanagere) ನಿರ್ಮಿಸಲಾಗಿರುವ 161 ಅಡಿ ಎತ್ತರದ ಪಂಚಮುಖಿ ಆಂಜನೇಯ ಮೂರ್ತಿಯನ್ನು (Panchamukhi Anjaneya Statue) ಭಾನು​ವಾರ ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ (Basavaraj Bommai) ಅವರು ಲೋಕಾ​ರ್ಪಣೆ ಮಾಡಿ​ದ​ರು. ಈ ಸಂದ​ರ್ಭ​ದಲ್ಲಿ ಮಾತ​ನಾ​ಡಿದ ಬೊಮ್ಮಾಯಿ, ಶ್ರೀರಾ​ಮ​ನ​ವಮಿಯ ಪವಿ​ತ್ರ ದಿನವೇ ವಿಶ್ವದ ಅತಿ ಎತ್ತ​ರದ ಪಂಚ​ಮುಖಿ ಆಂಜ​ನೇಯ ಮೂರ್ತಿ(ಲೋ​ಹ-ಸಿಮೆಂಟ್‌ ಮಿಶ್ರಿ​ತ​) ಲೋಕಾ​ರ್ಪಣೆ​ಗೊಂಡಿ​ರು​ವುದು ಸಂತ​ಸದ ವಿಷಯ ಎಂದು ಬಣ್ಣಿಸಿದರು.

ಪಂಚಮುಖಿ ಬಹಳ ಅಪರೂಪ. ರಾಮಾಯಣದ ವಿಶೇಷ ಸಂದರ್ಭದಲ್ಲಿ ಹನುಮನ ಅವತಾರ ಇದಾಗಿದೆ. ಲೋಕಕಲ್ಯಾಣಕ್ಕಾಗಿ ಹನುಮ ಈ ಅವತಾರ ಎತ್ತಿದ್ದ ಎನ್ನುವ ಪ್ರತೀತಿ ಇದೆ. ಬಿದನಗೆರೆಯ ಈ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಕ್ರಮ ನೋಡಿದರೆ ಕ್ಷೇತ್ರದ ಶಕ್ತಿ ಮತ್ತು ಭಕ್ತರ ದೊಡ್ಡ ಮನಸ್ಸು ಗೊತ್ತಾಗುತ್ತದೆ. ಪಂಚಮುಖಿ ಆಂಜನೇಯನ ಅವತಾರ ವಿಶೇಷವಾಗಿದೆ. ಹನುಮನ ಶಕ್ತಿಯಿಂದ ಈ ಮೂರ್ತಿ ತಲೆ ಎತ್ತಿದೆ. ಇದೊಂದು ಅದ್ಭುತ ಕಲಾಕೃತಿ ಎಂದರು.

Tap to resize

Latest Videos

ಇಬ್ಬರು ಸ್ವಾಮೀಜಿಗಳು ಈ ಅದ್ಭುತ ಮೂರ್ತಿಗೆ ಜೀವ ತುಂಬುವ ಕೆಲಸ ಮಾಡಿದ್ದಾರೆ. ಇದು ಇಡೀ ವಿಶ್ವದಲ್ಲೇ ಅಪರೂಪದ ಮೂರ್ತಿ. ಈ ಕ್ಷೇತ್ರದ ಮಹಿಮೆ ಜಗತ್ತಿಗೆ ಹರಡಲಿದೆ. ಕ್ಷೇತ್ರಕ್ಕೆ ಲಕ್ಷಗಟ್ಟಲೆ ಭಕ್ತಾದಿಗಳು ಆಗಮಿಸಿ ಆಶೀರ್ವಾದ ಪಡೆಯುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ನಾಡಿಗೆ ಆಶೀರ್ವಾದ ಸಿಗಲಿದೆ. ಇಂತಹ ಅದ್ಭುತ ಕಾರ್ಯವನ್ನು ಧನಂಜಯ ಗುರೂಜಿ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿ, ಶ್ರೀಕ್ಷೇತ್ರಕ್ಕೆ ಮತ್ತು ಭಕ್ತರಿಗೆ ಶುಭವಾಗಲಿ ಎಂದರು.

Mangaluru: ಜನಾರ್ದನ ಪೂಜಾರಿ ಪುತ್ರನಿಗೆ ಕಾಂಗ್ರೆಸ್ ಮಣೆ: ಮಹತ್ವದ ಹುದ್ಡೆ ನೀಡಿದ್ರೂ ಒಪ್ಪದ ದೀಪಕ್?

ಚಿತ್ರ ನಟಿ ತಾರಾ ಅನುರಾಧ ಮಾತನಾಡಿ, ಧನಂಜಯ ಗುರೂಜಿ ಪ್ರೀತಿ ಗೌರವದಿಂದ ಕಟ್ಟಿದ ಶ್ರೀ ಕ್ಷೇತ್ರ ಇದಾಗಿದ್ದು, ಇಂದು ಇಡೀ ವಿಶ್ವದಲ್ಲೇ ಅತಿ ಎತ್ತರದ ಪಂಚಮುಖಿ ಆಂಜನೇ ವಿಗ್ರಹ ಲೋಕಾರ್ಪಣೆಯಾಗಿರುವುದು ಸಂತೋಷ ತಂದಿದೆ. ಹನುಮಂತನ ಶಕ್ತಿ ಒಳ್ಳೆಯ ತನದ ಪ್ರತೀಕವಾಗಿದೆ. ರಾಜ್ಯದ ಜನತೆಗೆ ಸ್ವಾಮಿಯ ಆಶೀರ್ವಾದ ದೊರೆಯುತ್ತದೆ. ಕಳೆದ 8 ವರ್ಷದಿಂದ ಗುರೂಜಿಯವರ ಶ್ರಮ ಸಾರ್ಥಕಗೊಂಡಿದೆ ಎಂದರು.

ಧನಂಜಯ ಗುರೂಜಿ ಮಾತನಾಡಿ, ಕ್ಷೇತ್ರದ ನೆಲದ ಮಹಿಮೆಯಿಂದ ಇಂದು ಬೃಹದಾಕಾರವಾಗಿ ಈ ಕ್ಷೇತ್ರವು ಬೆಳವಣಿಗೆ ಆಗುತ್ತಾ ಬಂದಿದೆ. ಒಬ್ಬ ಸಾಮಾನ್ಯ ವ್ಯಕ್ತಿ ಈ ದೇಶದ ಪ್ರಧಾನ ಮಂತ್ರಿಯನ್ನು ಭೇಟಿ ಮಾಡಲು ಅವಕಾಶ ಲಭಿಸಿದ್ದು ಕ್ಷೇತ್ರದ ಮಹಿಮೆಯಾಗಿದೆ ಎಂದು ತಿಳಿಸಿದರು. ಮಾಜಿ ಸಂಸದ ಎಸ್‌.ಪಿ. ಮುದ್ದಹನುಮೇಗೌಡ, ನಟಿ ತಾರಾ ಅನುರಾಧ, ಪಟ್ಟನಾಯಕನಹಳ್ಳಿ ಕ್ಷೇತ್ರದ ನಂಜಾವಧೂತ ಸ್ವಾಮೀಜಿ, ಹರಿ​ಹರ ಪೀಠದ ವಚನಾನಂದ ಸ್ವಾಮೀಜಿ, ಸಚಿವ ಡಾ.ಸಿ.ಎನ್‌.ಅಶ್ವತ್‌ ನಾರಾಯಣ್‌, ಸಂಸದ ಮುನಿಸ್ವಾಮಿ, ಶಾಸಕ ಡಾ. ರಂಗನಾಥ್‌, ಮಾಜಿ ಸಚಿವ ಡಿ. ನಾಗರಾಜಯ್ಯ, ಡಿ. ಕೃಷ್ಣಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ಮೋದಿ ಉದ್ಘಾ​ಟಿ​ಸ​ಲಿಲ್ಲ: ವಿಶ್ವ​ದಲ್ಲೇ ಅತೀ ಎತ್ತ​ರದ ಈ 161 ಅಡಿಯ ಮೂರ್ತಿ​ಯನ್ನು ವರ್ಚು​ವಲ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ ಉದ್ಘಾ​ಟಿ​ಸ​ಬೇ​ಕಾ​ಗಿತ್ತು. ಆದರೆ ಕಾರ​ಣಾಂತ​ರ​ಗ​ಳಿಂದ ಅದು ಸಾಧ್ಯ​ವಾ​ಗ​ಲಿ​ಲ್ಲ.

10 ಕೋಟಿ ವೆಚ್ಚ: ಈ 161 ಅಡಿ ಎತ್ತ​ರ​ದ ಪಂಚಮುಖಿ ಆಂಜನೇಯ ಮೂರ್ತಿಯನ್ನು ಲೋಹ ಹಾಗೂ ಸಿಮೆಂಟ್‌ ಬಳಸಿ ನಿರ್ಮಿ​ಸ​ಲಾ​ಗಿದೆ. 2014ರಲ್ಲಿ 50 ಜನ ತಮಿಳುನಾಡಿನ ಕುಂಬಕೋಣಂನ ಶಿಲ್ಪಿಗಳಿಂದ ಈ ವಿಗ್ರಹದ ಕಾಮಗಾರಿ ಆರಂಭವಾಗಿ 2022ಕ್ಕೆ ಮುಗಿದಿದೆ. ವಿಗ್ರಹದ ಅಗಲ 108 ಅಡಿ, ವಿಗ್ರಹಕ್ಕೆ ಸುಮಾರು 85 ಸಾವಿರ ಬ್ಯಾಗ್‌ ಸಿಮೆಂಟ್‌, 308 ಟನ್‌ ಕಬ್ಬಿಣ, 500 ಲಾರಿ ಎಂ.ಸ್ಯಾಂಡ್‌ ಜಲ್ಲಿ, 5,800 ಲೀಟರ್‌ಗಳಷ್ಟುಬಣ್ಣ ಬಳಸಲಾಗಿದೆ. ವಿಗ್ರಹದ ತಳಭಾಗದಿಂದ ಮೇಲಿನ ಭಾಗದವರೆಗೆ 4800 ಕೆ.ಜಿ. ತಾಮ್ರ ಉಪ​ಯೋ​ಗಿ​ಸ​ಲಾ​ಗಿ​ದೆ. ಕಿರೀಟಕ್ಕೆ ಚಿನ್ನ, ಬೆಳ್ಳಿ, ತಾಮ್ರವನ್ನು ಬಳ​ಸ​ಲಾ​ಗಿ​ದೆ.

PSI Recruitment Scam: ಪಿಎಸ್‌ಐ ನೇಮಕ ಪರೀಕ್ಷೆ ಅಕ್ರಮ ಸಿಐಡಿಗೆ: ಆರಗ ಜ್ಞಾನೇಂದ್ರ

ಕ್ಷೇತ್ರದ ಮಹಿಮೆ ಜಗತ್ತಿಗೆ ಹರಡಲಿದೆ: ಇಬ್ಬರು ಸ್ವಾಮೀಜಿಗಳು ಈ ಅದ್ಭುತ ಮೂರ್ತಿಗೆ ಜೀವ ತುಂಬುವ ಕೆಲಸ ಮಾಡಿದ್ದಾರೆ. ಇದು ಇಡೀ ವಿಶ್ವದಲ್ಲೇ ಅಪರೂಪದ ಮೂರ್ತಿ ನಿರ್ಮಾಣವಾಗಿದೆ. ಈ ಕ್ಷೇತ್ರದ ಮಹಿಮೆ ಜಗತ್ತಿಗೆ ಹರಡಲಿದೆ. ಕ್ಷೇತ್ರಕ್ಕೆ ಲಕ್ಷಗಟ್ಟಲೆ ಭಕ್ತಾದಿಗಳು ಆಗಮಿಸಿ ಆಶೀರ್ವಾದ ಪಡೆಯುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ನಾಡಿಗೆ ಆಶೀರ್ವಾದ ಸಿಗಲಿದೆ. ಇಂತಹ ಅದ್ಭುತ ಕಾರ್ಯವನ್ನು ಧನಂಜಯ ಗುರೂಜಿ ಮಾಡಿದ್ದಾರೆ. ಕ್ಷೇತ್ರಕ್ಕೆ ಮತ್ತು ಭಕ್ತರಿಗೆ ಶುಭವಾಗಲಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.

click me!