ರಾಶಿ ಪ್ರಕಾರ ನೀವು ಈ ಸ್ವಭಾವ ಬದಲಿಸ್ಕೊಂಡ್ರೆ ಹೆಚ್ಚುತ್ತೆ ದಾಂಪತ್ಯಸುಖ!

Published : Apr 19, 2022, 05:14 PM IST
ರಾಶಿ ಪ್ರಕಾರ ನೀವು ಈ ಸ್ವಭಾವ ಬದಲಿಸ್ಕೊಂಡ್ರೆ ಹೆಚ್ಚುತ್ತೆ ದಾಂಪತ್ಯಸುಖ!

ಸಾರಾಂಶ

ಸಂಬಂಧವನ್ನು ಸಂಭಾಳಿಸುವುದು ಕಷ್ಟ. ಅನೇಕ ಬಾರಿ ನಮ್ಮ ಸ್ವಭಾವವೇ ಸಂಬಂಧವನ್ನು ಹಾಳು ಮಾಡುತ್ತದೆ. ಅದ್ರಲ್ಲೂ ದಾಂಪತ್ಯ ಜೀವನದಲ್ಲಿ ಪ್ರತಿ ಹೆಜ್ಜೆಯನ್ನು ಒಟ್ಟಿಗೆ ಇಡಬೇಕು. ಆಗ ಪರಸ್ಪರ ಒಬ್ಬರ ಬಗ್ಗೆ ಒಬ್ಬರಿಗೆ ತಿಳಿದಿರಬೇಕು. ರಾಶಿಗನುಗುಣವಾಗಿ ಯಾರು ಯಾವ ಸ್ವಭಾವ ಬಿಟ್ಟರೆ ಜೀವನ ಸುಖಮಯ ಎಂಬುದು ಇಲ್ಲಿದೆ.   

ಆದರ್ಶ ದಂಪತಿ (Couple) ಯಾಗಲು ಎಲ್ಲರೂ ಇಷ್ಟಪಡ್ತಾರೆ. ಪತಿ – ಪತ್ನಿ ಮಧ್ಯೆ ಉತ್ತಮ ಹೊಂದಾಣಿಕೆ, ಗೌರವ (Respect), ನಂಬಿಕೆ, ಪ್ರೀತಿ (Love) ಇವೆಲ್ಲವೂ ಇದ್ದಾಗ ಮಾತ್ರ ಆದರ್ಶ ಪತಿ –ಪತ್ನಿಯಾಗಲು ಸಾಧ್ಯ. ತಕ್ಕಡಿ ಏರುಪೇರಾದ್ರೆ ಸಂಬಂಧ (Relationship)ಮುರಿದು ಬೀಳುತ್ತದೆ. ಉತ್ತಮ ದಾಂಪತ್ಯಕ್ಕೆ ಏನೆಲ್ಲ ಮಾಡ್ಬೇಕು ಎಂಬುದರ ಬಗ್ಗೆ ನಾವು ಕೇಳಿರ್ತೇವೆ, ಓದಿರ್ತೇವೆ. ಆದ್ರೆ ತಿಳಿದೂ ಅನೇಕ ಬಾರಿ ತಪ್ಪುಗಳಾಗ್ತವೆ. ಮತ್ತೆ ಕೆಲವೊಮ್ಮೆ ನಮ್ಮ ದಾಂಪತ್ಯ ಮುರಿದು ಬೀಳಲು ಗ್ರಹಗತಿಗಳು ಕಾರಣವಾಗುತ್ತದೆ. ಗ್ರಹಗಳು ನಮ್ಮ ರಾಶಿ ಮೇಲೆ ಪರಿಣಾಮ ಬೀರಿದಾಗ ಸಂಬಂಧ ಹಾಳಾಗುತ್ತದೆ. ನಮ್ಮ ಜೀವನದ ಪ್ರತಿಯೊಂದು ಘಟನೆಗೂ ರಾಶಿಗೂ ಸಂಬಂಧವಿದೆ. ರಾಶಿಯಲ್ಲಾದ ಬದಲಾವಣೆ ನಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಎಲ್ಲ ರಾಶಿಯವರಿಗೂ ಎಲ್ಲ ವಿಧಾನ ಅನ್ವಯವಾಗುವುದಿಲ್ಲ. ಬೇರೆ ಬೇರೆ ರಾಶಿವರು ದಾಂಪತ್ಯ ಸುಖಕರವಾಗಿರಲು ಬೇರೆ ಬೇರೆ ಉಪಾಯಗಳನ್ನು ಮಾಡಬೇಕಾಗುತ್ತದೆ. ಇಂದು ಯಾವ ರಾಶಿಯವರು ಯಾವ ಕೆಲಸ ಮಾಡಿದ್ರೆ ಸಂಗಾತಿ ಜೊತೆ ಉತ್ತಮ ಸಂಬಂಧ ಹೊಂದಬಹುದು ಎಂಬುದನ್ನು ಹೇಳ್ತೇವೆ.

ಮೇಷ : ಮೇಷ ರಾಶಿಯವರು ಪ್ರೀತಿಗಾಗಿ ಫ್ಯಾಷನ್ ಬಿಡಬೇಕಾದ ಅನಿವಾರ್ಯತೆಯಿದೆ. ಹಾಗೆ ಯಾವಾಗ್ಲೂ ತರಾತುರಿಯಲ್ಲಿರ್ತೀರಿ. ಈ ನಿಮ್ಮ ಹಠಾತ್ ಕೆಲಸ ನಿಮ್ಮ ಸಂಗಾತಿಯನ್ನು ನಿರ್ಲಕ್ಷಿಸುವಂತೆ ಮಾಡುತ್ತದೆ. ಇದು ನಿಮ್ಮಿಬ್ಬರ ಜಗಳಕ್ಕೆ ಕಾರಣವಾಗುತ್ತದೆ. ಹಾಗಾಗಿ ನೀವು ಆತುರವಿಲ್ಲದೆ ನಿಧಾನವಾಗಿ ಸಂಗಾತಿ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಿ. ಇದು ನಿಜವಾಗಿಯೂ ನಿಮ್ಮ ಸಂಬಂಧವನ್ನು ಆರೋಗ್ಯಕರ, ಉತ್ತಮ ಮತ್ತು ಹೆಚ್ಚು ನಿಕಟವಾಗಿರಲು ಸಹಾಯ ಮಾಡುತ್ತದೆ.

ASTRO TIPS: ಗುಲಾಬಿಯ ಧನಲಾಭದ ದಾರಿ..!

ವೃಷಭ: ವೃಷಭ ರಾಶಿಯ ಜನರು ಅನ್ಯೋನ್ಯತೆಯ ಭಯವನ್ನು ತೆಗೆದು ಹಾಕುವುದು ಒಳ್ಳೆಯದು. ಪ್ರೀತಿಗಾಗಿ ನೀವು ಇದನ್ನ ಮಾಡ್ಲೇಬೇಕು. ಭೂತಕಾಲದ ನೆನಪಿನಲ್ಲಿರುವುದಕ್ಕಿಂತ ವರ್ತಮಾನದ ಬಗ್ಗೆ ಆಲೋಚನೆ ಮಾಡುವುದು ಸೂಕ್ತ. ಸ್ನೇಹಿತರ ಜೊತೆ ಹೇಗೆ ಆರಾಮವಾಗಿ ಇರುತ್ತೀರೋ ಅದೇ ರೀತಿ ಸಂಗಾತಿ ಜೊತೆ ಇರಬೇಕು. ಅವರನ್ನು ಬೇರೆಯವರಂತೆ ನೋಡಬಾರದು.  

ಮಿಥುನ : ಮಿಥುನ ರಾಶಿಯವರು ಮುಂದೂಡುವ ಅಭ್ಯಾಸವನ್ನು ಬಿಡುವುದು ಒಳ್ಳೆಯದು. ಇದು ನಿಮ್ಮ ಸಂಗಾತಿಗೆ ಕಿರಿಕಿರಿಯುಂಟು ಮಾಡುತ್ತದೆ. ಹಾಗಾಗಿ ಅಗತ್ಯವಿದೆ ಎಂಬ ಸಂದರ್ಭದಲ್ಲಿ ಆ ಕೆಲಸವನ್ನು ಮಾಡಿ ಮುಗಿಸಿ. ಈ ರಾಶಿಯವರು ಸಾಹಸಿ ಹಾಗೂ ಬಹಿರ್ಮುಖಿಯಾಗಿದ್ದರೂ ಸಂಗಾತಿ ಜೊತೆ ಸ್ವಲ್ಪ ಭಿನ್ನವಾಗಿ ನಡೆದುಕೊಳ್ತಾರೆ. ನನ್ನ ನಡವಳಿಕೆ ಬಗ್ಗೆ ಸಂಗಾತಿ ಏನು ತಿಳಿಯುತ್ತಾಳೆಂದು ಪರಿಶೀಲಿಸುತ್ತಾರೆ. ನಿಮ್ಮ ಆಯ್ಕೆಯಲ್ಲಿ ನೀವು ಮಾಸ್ಟರ್ ಆಗಿರುವಾಗ ಸಂಗಾತಿ ಬಗ್ಗೆ ಪ್ರತ್ಯೇಕವಾಗಿ ಆಲೋಚಿಸುವ ಅಗತ್ಯವಿರುವುದಿಲ್ಲ.

ಕರ್ಕಾಟಕ :  ವ್ಯಕ್ತಿಯ ಬಗ್ಗೆ ನೀವೇನು ಅಂದುಕೊಂಡಿದ್ದೀರೋ ಅದೇ ಸತ್ಯವೆಂದು ಭಾವಿಸುತ್ತೀರಿ. ಆದ್ರೆ ಇದು ತಪ್ಪು. ಈ ಸ್ವಭಾವವನ್ನು ನೀವು ಬಿಡುವ ಅಗತ್ಯವಿದೆ. 

ಸಿಂಹ : ಸಿಂಹ ರಾಶಿಯವರು ಸಂಗಾತಿ ಬಗ್ಗೆ ಗಮನ ನೀಡುವ ಅಗತ್ಯವಿದೆ. ನೀವು ಮುದ್ದು ಮಾಡುವುದನ್ನು ಎಷ್ಟು ಇಷ್ಟಪಡುತ್ತೀರೋ, ನಿಮ್ಮ ಸಂಗಾತಿಯೂ ಅದನ್ನೇ ಬಯಸುತ್ತಿರಬಹುದು. ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದ ಸ್ವಲ್ಪ ಸಮಯವನ್ನು ಸಂಗಾತಿಗೆ ಮೀಸಲಿಡಿ. 

ಜನಪ್ರಿಯತೆ ಬೇಕೇ? ಇಲ್ಲಿವೆ Vastu Remedies

ಕನ್ಯಾ : ಕನ್ಯಾರಾಶಿಯ ಜನರು ನಿಮ್ಮ ಜೀವನದ ಪ್ರತಿಯೊಂದು ಸಣ್ಣ ವಿವರಗಳ ಬಗ್ಗೆ   ನಿರ್ದಿಷ್ಟವಾಗಿರುತ್ತಾರೆ. ಸಣ್ಣ ತಪ್ಪುಗಳನ್ನು ಮಾಡಿದ್ರೂ ಬೇರೆಯವರನ್ನು ಹೆಚ್ಚು ಟೀಕಿಸುತ್ತಾರೆ. ಇದು ಸಂಗಾತಿ ಮುಂದೆ ಸಮಸ್ಯೆಯಾಗುತ್ತದೆ. ನೀವು ನಿರಾಳವಾಗಿರುವುದು ಮಾತ್ರವಲ್ಲದೆ ನಿಮ್ಮ ಸಂಗಾತಿಗೆ ವಿಶ್ರಾಂತಿಯನ್ನು ನೀಡುವುದು ಸಹ ಅಗತ್ಯವಾಗಿದೆ.  

ತುಲಾ : ಸಂಬಂಧಗಳ ವಿಷಯಕ್ಕೆ ಬಂದಾಗ ತುಲಾ ರಾಶಿಯವರು ಅತ್ಯಂತ ಸಮರ್ಪಿತರಾಗಿದ್ದೀರಿ ಮತ್ತು ನಿಮ್ಮ ಸಂಗಾತಿಯನ್ನು ಹೇಗೆ ಮೆಚ್ಚಿಸಲು ಬಯಸುತ್ತೀರಿ.  ಆದ್ರೆ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹಿಂದುಳಿದಿರುವಿರಿ. ಜೀವನದಲ್ಲಿ ನಿಮ್ಮ ಆಯ್ಕೆಗಳಿಗೆ ಆದ್ಯತೆ ನೀಡಲು ಸಾಧ್ಯವಾಗ್ತಿಲ್ಲ. ಇದು ನಿಮ್ಮ ಸಂಗಾತಿಗೆ ಸಾಕಷ್ಟು ಕಿರಿಕಿರಿ ಉಂಟುಮಾಡುತ್ತದೆ. ಹಾಗಾಗಿ ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ.

ವೃಶ್ಚಿಕ : ಪ್ರೀತಿಯನ್ನು ಸ್ವೀಕರಿಸುವ ಸ್ವಭಾವ ಕಲಿಯಬೇಕಿದೆ. ಈ ರಾಶಿಯ ಜನರು ಪ್ರೀತಿಯನ್ನು ಒಪ್ಪಿಕೊಳ್ಳಲು ಹಿಂದೆ –ಮುಂದೆ ನೋಡ್ತಾರೆ. ಅದನ್ನು ಬಿಡಬೇಕಿದೆ.  ಆತ್ಮವಿಶ್ವಾಸ ದುರಹಂಕಾರದಂತೆ ಕಾಣುತ್ತದೆ. ಅದನ್ನು ಬದಲಿಸಿಕೊಳ್ಳಿ. ಸಂಗಾತಿಯನ್ನು  ಗೌರವಿಸುವುದು ಮತ್ತು ನಂಬಿಕೆ ಮತ್ತು ತಿಳುವಳಿಕೆಯ ಬಂಧವನ್ನು ನಿರ್ಮಿಸುವುದು ಮುಖ್ಯವಾಗಿದೆ.  

ಧನು : ಧನು ರಾಶಿಯವರು ನೇರ ಮತ್ತು ಮೊಂಡುತನವನ್ನು ಬಿಡಬೇಕು.  ಇದು ಕೆಲವೊಮ್ಮೆ ನಿಮ್ಮ ಸಂಗಾತಿಗೆ ನೋವುಂಟು ಮಾಡುತ್ತದೆ. ಮಾತುಗಳಲ್ಲಿ ಸ್ವಲ್ಪ ಮೃದು ಮತ್ತು ಹೆಚ್ಚು ಸಹಾನುಭೂತಿ ಹೊಂದುವ ಜೊತೆಗೆ ನಿಮ್ಮ ಸಂಗಾತಿ ಭಾವನೆಗಳಿಗೆ ಬೆಲೆ ನೀಡಬೇಕಿದೆ. 

ಮಕರ : ಸಂಗಾತಿಗೆ ಸಮಯ ನೀಡುವುದನ್ನು ಮರೆಯಬೇಡಿ. ಹಾಗೆಯೇ ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಅಗತ್ಯವಿದೆ. ಒತ್ತಡ ಕಡಿಮೆಯಾಗಿ ರಿಲ್ಯಾಕ್ಸ್ ಆದಾಗ ನೀವು ಸಂಗಾತಿ ಜೊತೆ ಆರಾಮವಾಗಿ ಸಮಯ ಕಳೆಯಬಹುದು.

ಮನಸ್ತಾಪಗಳ ಬೇಗ ಮರೆಯುವ ಮುದ್ದು ಮನಸಿನ ರಾಶಿಗಳಿವು

ಕುಂಭ : ಕುಂಭ ರಾಶಿಯವರು ಸರಿಯಾದ ನಿದ್ರೆ ಹಾಗೂ ವಿಶ್ರಾಂತಿ ಪಡೆಯುವ ಅಗತ್ಯವಿದೆ. ಎಷ್ಟೇ ಸ್ವತಂತ್ರವಾಗಿ ಬದುಕುತ್ತೇನೆಂದ್ರೂ ಮದುವೆ ನಂತ್ರ ಸಂಗಾತಿ ಜೊತೆ ಸಮಯ ಕಳೆಯಬೇಕು. ಇಡೀ ದಿನ ಅಂಟಿಕೊಳ್ಳಬೇಕೆಂದೇನಲ್ಲ. ಆದ್ರೆ ಒಟ್ಟಿಗೆ ಸಣ್ಣ ಸುತ್ತಾಟದ ಅಗತ್ಯತೆಯಿದೆ. 

ಮೀನ : ನೀವು ನಿಮ್ಮ ಚಟಗಳನ್ನು ಬಿಡುವ ಅಗತ್ಯವಿದೆ. ಹಾಗೆ ಎಲ್ಲ ಸಮಯದಲ್ಲೂ ಒಂದೇ ಎನರ್ಜಿಯಲ್ಲಿ ಕೆಲಸ ಸಾಧ್ಯವಿಲ್ಲ ಎಂಬುದನ್ನು ಅರಿತಿರಬೇಕು. ನಿಮ್ಮ ಭಾವನೆ ಕೆಲವೊಮ್ಮೆ ಅನರ್ಹವಾಗಿರಬಹುದು. ನಿರೀಕ್ಷೆಗಳನ್ನು ಪೂರೈಸಲು ಅವರಿಗೆ ಕಷ್ಟವಾಗಬಹುದು. ಅದನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ.

PREV
Read more Articles on
click me!

Recommended Stories

ಜನವರಿಯಲ್ಲಿ 7 ರಾಶಿಗೆ ಅದೃಷ್ಟ ಬಾಗಿಲು ಓಪನ್, ಸಂಪತ್ತು ಪಕ್ಕಾ
ಇಂದು ರಾತ್ರಿ ಚಂದ್ರ ರಾಶಿ ಬದಲು, ಈ 3 ರಾಶಿಗೆ ಸಂಪತ್ತಿನಿಂದ ಶ್ರೀಮಂತಿಕೆ ಯೋಗ, 3 ಶಕ್ತಿಶಾಲಿ ರಾಜಯೋಗ