ನಿಮ್ಮ ರಾಶಿ ಮಂತ್ರ ಪಠಿಸಿರಿ, ಕಷ್ಟಗಳಿಂದ ಮುಕ್ತಿ ಹೊಂದಿರಿ!

By Suvarna NewsFirst Published May 17, 2020, 3:39 PM IST
Highlights

ಪರಿಶ್ರಮದ ಜೊತೆ ಜೊತೆಗೆ ದೇವರ ಅನುಗ್ರಹವು ಇದ್ದರೆ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ದೇವರ ಅನುಗ್ರಹಕ್ಕೆ ಜಪ, ತಪ, ಅನುಷ್ಠಾನಗಳನ್ನು ಮಾಡಲೇಬೇಕಾಗುತ್ತದೆ. ನಮ್ಮ ರಾಶಿ, ಗ್ರಹಗಳ ಬಲವು ಉಚ್ಛವಾಗಿದ್ದರೆ
ಕೆಲಸ ಕೈಗೂಡುತ್ತದೆ. ಹಾಗಾಗಿ ರಾಶಿಗೆ ಅನುಗುಣವಾದ ಮಂತ್ರವನ್ನು ಜಪಿಸಿದರೆ. ಜಾತಕದಲ್ಲಿರುವ ಗ್ರಹಗಳಿಗೆ ಬಲ ಬರುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.

ಆಸೆ ಮನುಷ್ಯ ಸಹಜ ಗುಣ. ಚೆನ್ನಾಗಿ ಬಾಳಬೇಕು ಎಂಬ ಹಂಬಲ ಎಲ್ಲರಿಗೂ ಇರುತ್ತದೆ. ಆದರೆ ಎಷ್ಟು ದುಡಿದರೂ ಕೈ ಹತ್ತುವುದಿಲ್ಲ. ಪರಿಶ್ರಮಕ್ಕೆ ಪೂರ್ಣ ಫಲ ಸಿಗುವುದಿಲ್ಲ. ಸಂಸಾರದ ಜವಾಬ್ದಾರಿ ಹೊತ್ತು, ಕೆಲಸ
ಮಾಡಿ ಎಷ್ಟು ದೊಡ್ಡ ಮೊತ್ತದ ಸಂಬಳ ತಂದರೂ ಅದು ಗೊತ್ತೇ ಆಗದ ಹಾಗೆ ಖರ್ಚಾಗಿ, ಕೆಲವೇ ದಿನದಲ್ಲಿ ಜೇಬು ಖಾಲಿಯಾಗಿರುತ್ತದೆ. ದೇವರಲ್ಲಿ ಭಕ್ತಿಯಿಂದ ಬೇಡಿದರೂ ಏನೂ ಪ್ರಯೋಜನವಿಲ್ಲ
ಎಂದುಕೊಳ್ಳುತ್ತಿದ್ದರೆ ಇದನ್ನೊಮ್ಮೆ ಓದಿ. ಪರಿಶ್ರಮದ ಜೊತೆಗೆ ಭಾಗ್ಯವು ನಿಮ್ಮ ಜೊತೆಯಾದರೆ ಅಂದುಕೊಂಡದ್ದು ಆಗುತ್ತದೆ.
ಪ್ರತಿ ರಾಶಿಗೂ ಅಧಿಪತಿಯಾಗಿ ಒಂದೊಂದು ಗ್ರಹವಿರುತ್ತದೆ. ಆ ಗ್ರಹದ ಬಲ ನಿಮ್ಮ ಮೇಲೆ ಇದ್ದರೆ, ಬರುವ ತೊಂದರೆಗಳು ಬೇಗ ನಿವಾರಣೆ ಆಗಿ ನೆಮ್ಮದಿ ಲಭಿಸುತ್ತದೆ. ನಿಮ್ಮ ರಾಶಿಗೆ ಅನುಗುಣವಾಗಿ ಈ
ಮಂತ್ರಗಳನ್ನು ಜಪಿಸಿದರೆ, ಕಷ್ಟಗಳು ದೂರಾಗಿ ಹಣ ನಿಮ್ಮ ಕೈ ಸೇರುತ್ತದೆ.

ಮೇಷ

ಈ ರಾಶಿಯ ಅಧಿಪತಿ ಮಂಗಳ(ಕುಜ) ಗ್ರಹ. ಹನುಮಂತನನ್ನು ಪ್ರಾರ್ಥಿಸಿ ಈ ಮಂತ್ರವನ್ನು ಪಠಿಸಿ. “ಓಂ ಹನುಮತೇ ನಮಃ” ಎಂದು ಜಪಿಸಿ.

ವೃಷಭ

ಈ ರಾಶಿಗೆ ಅಧಿಪತಿ ಶುಕ್ರ. ಆದ್ದರಿಂದ ದುರ್ಗಾ ದೇವಿಯನ್ನು ಆರಾಧಿಸಬೇಕು. “ಓಂ ದುರ್ಗಾದೇವ್ಯೈ ನಮಃ” ಎಂಬ ಮಂತ್ರವನ್ನು ಪಠಿಸಬೇಕು.

ಇದನ್ನು ಓದಿ; ಮಣಿಕಟ್ಟಿನ ರೇಖೆಯಿಂದ ತಿಳಿಬಹುದು ನಿಮ್ಮ ಆರೋಗ್ಯ, ಆಯಸ್ಸು ಮತ್ತು ಸಂಪತ್ತಿನ ರಹಸ್ಯ!...

ಮಿಥುನ

ಬುಧಗ್ರಹವು ಈ ರಾಶಿಗೆ ಅಧಿಪತಿ. ಬುಧನ ಆರಾಧನೆ ಎಂದರೆ ಗಣಪತಿಯನ್ನು ಪ್ರಾರ್ಥಿಸಬೇಕು. “ಓಂ ಗಂ ಗಣಪತಯೇ ನಮಃ” ಎಂಬ ಮಂತ್ರವನ್ನು ಪಠಿಸಬೇಕು.

ಕಟಕ

ಕಟಕ ರಾಶಿಗೆ ಅಧಿಪತಿ ಚಂದ್ರ. ಶಿವನ ಶಿರದ ಮೇಲೆ ಕುಳಿತಿರುವ ಚಂದ್ರನ ಕೃಪೆ ಬೇಕೆಂದರೆ ಶಿವನನ್ನು ಆರಾಧಿಸ ಬೇಕು.“ಓಂ ನಮಃ ಶಿವಾಯ” ಜಪವನ್ನು ಮಾಡಬೇಕು.

ಸಿಂಹ

ರಾಶಿಯ ಅಧಿಪತಿ ಸೂರ್ಯದೇವ. ಸಿಂಹ ರಾಶಿಯವರು ಸೂರ್ಯನನ್ನು ಪ್ರಸನ್ನಗೊಳಿಸ ಬೇಕೆಂದರೆ “ಓಂ ಸೂರ್ಯಾಯ ನಮಃ” ಮಂತ್ರದ ಜಪವನ್ನು ಮಾಡಬೇಕು.

ಕನ್ಯಾ

ಈ ರಾಶಿಯ ಅಧಿಪತಿ ಗ್ರಹ ಬುಧ. ಇವರ ಜಾತಕದ ದೋಷಗಳು ನಿವಾರಣೆಯಾಗಿ ಒಳಿತಾಗಬೇಕೆಂದರೆ ಗಣಪತಿಯನ್ನು ಆರಾಧಿಸಬೇಕು “ಓಂ ಗಂ ಗಣಪತಯೇ ನಮಃ” ಮಂತ್ರವನ್ನು ಪಠಿಸಬೇಕು.

ಇದನ್ನು ಓದಿ; ಮಂಗಳಾರತಿ ಈ ಕ್ರಮದಲ್ಲಿ ಬೆಳಗಿ, ನಿಮ್ಮ ಆಶಯ ಆಗುವುದು ಪೂರ್ತಿ!...

ತುಲಾ

ಶುಕ್ರ ಗ್ರಹವು ಈ ರಾಶಿಯ ಅಧಿಪತಿ. ಧನಲಕ್ಷ್ಮೀಯನ್ನು ಆರಾಧಿಸಬೇಕು. ಕಷ್ಟಗಳನ್ನು ಕಳೆಯಲು ಲಕ್ಷ್ಮೀ ಮಂತ್ರವಾದ “ಓಂ ಮಹಾಲಕ್ಷ್ಮ್ಯೈ ನಮಃ” ಜಪವನ್ನು ಮಾಡಬೇಕು.

ವೃಶ್ಚಿಕ

ಮಂಗಳನ ಅಧಿಪತ್ಯದಲ್ಲಿರುವ ಈ ರಾಶಿಯವರು ಆಂಜನೇಯನನ್ನು ಆರಾಧಿಸಬೇಕು. ಕಷ್ಟಗಳ ನಿವಾರಣೆ ಮಾಡುವ ಹನಮಂತನನ್ನು “ಓಂ ಹನುಮತೇ ನಮಃ” ಎಂದು ಜಪಿಸಿ ಆರಾಧಿಸಬೇಕು.

ಧನು

ಈ ರಾಶಿಯ ಅಧಿಪತಿ ಗುರುಗ್ರಹ. ಈ ರಾಶಿಯವರು ಶ್ರೀ ವಿಷ್ಣುವನ್ನು ಆರಾಧಿಸಬೇಕು. “ಓಂ ಶ್ರೀ ವಿಷ್ಣವೇ ನಮಃ” ಜಪವನ್ನು ಮಾಡಬೇಕು.

ಮಕರ

ರಾಶಿಯ ಅಧಿಪತಿ ಶನಿಗ್ರಹ. ಶನಿದೇವರ ಜೊತೆ ಹನುಮಂತನನ್ನು ಆರಾಧಿಸಿದರೆ ಒಳಿತಾಗುತ್ತದೆ. “ಓಂ ಶನಿಶ್ವರಾಯೇ ನಮಃ” ಮಂತ್ರವನ್ನು ಪಠಿಸಬೇಕು.

ಇದನ್ನು ಓದಿ; ಶನಿ ದೇವರ ಕೃಪೆಗೆ ಹೀಗೆ ಮಾಡಿ, ವಕ್ರದೃಷ್ಟಿಯಿಂದ ಬಚಾವಾಗಿ!...

ಕುಂಭ

ಕುಂಭರಾಶಿಗೂ ಅಧಿಪತಿ ಶನಿದೇವ. ಶನಿದೇವರ ಕೃಪೆಗೆ ಅವನ ಗುರು ಮಹಾದೇವನನ್ನು ಪೂಜಿಸಬೇಕು. “ಓಂ ಮಹಾಮೃತ್ಯುಂಜಯಾಯ ನಮಃ” ಮಂತ್ರವನ್ನು ಪಠಿಸಬೇಕು.

ಮೀನ

ಈ ರಾಶಿಯ ಅಧಿಪತಿ ಗ್ರಹ ಬೃಹಸ್ಪತಿ. ವಿಷ್ಣುವಿನ ಕೃಪೆಗೆ ಪ್ರಾರ್ಥಿಸಬೇಕು. “ಓಂ ನಾರಾಯಣಾಯ ನಮಃ” ಅಥವಾ “ಓಂ ಗುರವೇ ನಮಃ” ಮಂತ್ರವನ್ನು ಪಠಿಸಿ ಕೃಪೆ ಪಡೆಯಬೇಕು.

click me!