ಮಣಿಕಟ್ಟಿನ ರೇಖೆಯಿಂದ ತಿಳಿಬಹುದು ನಿಮ್ಮ ಆರೋಗ್ಯ, ಆಯಸ್ಸು ಮತ್ತು ಸಂಪತ್ತಿನ ರಹಸ್ಯ!

By Suvarna News  |  First Published May 16, 2020, 2:38 PM IST

ಶಾಸ್ತ್ರಗಳಲ್ಲಿ ವ್ಯಕ್ತಿಯ ಜೀವನದ ಆಗು-ಹೋಗುಗಳನ್ನು ತಿಳಿಯಲು, ಜಾತಕ, ಹಸ್ತರೇಖೆಗಳನ್ನು ನೋಡುತ್ತಾರೆ. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ರೇಖೆಗಳನ್ನು ನೋಡಿ ಭೂತ-ಭವಿಷ್ಯತ್‌ನ್ನು ಹೇಳುತ್ತಾರೆ. ಹಾಗೆಯೇ
ಮಣಿಕಟ್ಟಿನಲ್ಲಿರುವ ಒಂದೊಂದು ರೇಖೆಯು ಒಂದೊಂದು ವಿಷಯವನ್ನು ತಿಳಿಸುತ್ತದೆ. ರೇಖೆಗಳಲ್ಲಿ ಅಡಗಿರುವ ರಹಸ್ಯವನ್ನು ತಿಳಿಯೋಣ ಬನ್ನಿ.


ಮಣಿಕಟ್ಟಿನ ರೇಖೆಯನ್ನು  ಬಹಳಷ್ಟು ಮಂದಿ ಗಮನಿಸಿರುತ್ತೇವೆ. ಆದರೆ, ಅದರ ಹಿಂದಿನ ಭವಿಷ್ಯದ  ರಹಸ್ಯದ ಬಗ್ಗೆ ಗೊತ್ತೇ ಇರುವುದಿಲ್ಲ. ಹೇಗೆ ಹಸ್ತ ರೇಖೆಗಳು ಭವಿಷ್ಯವನ್ನು ಹೇಳುತ್ತವೆಯೋ ಹಾಗೆಯೇ ಮಣಿಕಟ್ಟಿನ
ಭಾಗದಲ್ಲಿರುವ ರೇಖೆ ನಿಮ್ಮ ಹಲವು ಕೌತುಕಗಳನ್ನು ಬಿಚ್ಚಿಡುತ್ತವೆ. ಹೌದು, ಅಲ್ಲಿರುವ ನಾಲ್ಕು ರೇಖೆಗಳು ಹತ್ತು ಹಲವು ಸಂಗತಿಗಳನ್ನು ಹೇಳುತ್ತವೆ. ನಿಮ್ಮ ಆರೋಗ್ಯ, ಆಯುಷ್ಯ, ಸಂಪತ್ತು ಹೀಗೆ ಹಲವಾರು
ಅಂಶಗಳು ಹೇಗಿದೆ? ಎಂಬುದನ್ನು ಅರಿತುಕೊಳ್ಳಬಹುದು. ಒಂದು ವೇಳೆ ಅರ್ಧ ರೇಖೆಗಳಿದ್ದರೆ ಏನು ಸಮಸ್ಯೆ ಎಂಬ ಬಗ್ಗೆ ತಿಳಿಯೋಣ.
ಜ್ಯೋತಿಷ್ಯ ಶಾಸ್ತ್ರದಿಂದ ಭವಿಷ್ಯವನ್ನು ತಿಳಿದುಕೊಳ್ಳಬಹುದು. ಹಾಗೆಯೇ ಹಸ್ತವನ್ನು ನೋಡಿಯು ಭವಿಷ್ಯದ ಬಗ್ಗೆ ಅರಿಯಬಹುದು. ಮಾನವನ ಶರೀರದ ಮೇಲಿರುವ ಹಲವು ಚಿಹ್ನೆಗಳು ಜೀವನದ ಹಲವು
ವಿಷಯವನ್ನು ತಿಳಿಸುತ್ತದೆ. ಪುರಾಣ ಮತ್ತು ಶಾಸ್ತ್ರಗಳಲ್ಲಿ ಉಲ್ಲೇಖವಿರುವಂತೆ ಶರೀರದ ಮೇಲಿರುವ ಚಿಹ್ನೆಗಳನ್ನು ಗಮನಿಸಿಯೇ ವ್ಯಕ್ತಿಯ ಭೂತ,ಭವಿಷ್ಯ ಮತ್ತು ವರ್ತಮಾನದ ಹಲವು ವಿಷಯಗಳನ್ನು
ತಿಳಿಯಬಹುದೆಂದು.ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಅಂಗೈ ಬಳಿಯ ಮಣಿಕಟ್ಟು (ಮಣಿಬಂಧ) ಸಹಜವಾಗಿ ಎಲ್ಲರಿಗೂ ಕುತೂಹಲವಿರುವ  ಆಯಸ್ಸು, ಆರೋಗ್ಯಗಳ ಬಗ್ಗೆ ಮಾಹಿತಿ ತಿಳಿಸುತ್ತೆ. ವ್ಯಕ್ತಿಯಿಂದ ವ್ಯಕ್ತಿಗೆ
ಈ ರೇಖೆಗಳು ಬೇರೆ ಬೇರೆಯಾಗಿರುತ್ತವೆ. ಎಷ್ಟು ರೇಖೆ ಹೊಂದಿದ್ದರೆ, ರೇಖೆಯು ನೇರವಾಗಿದ್ದರೆ, ವಕ್ರವಾಗಿದ್ದರೆ ಏನು ಎಂಬ ಬಗ್ಗೆ ಇಲ್ಲಿ ನೋಡೋಣ.

ಇದನ್ನು ಓದಿ; ಮಂಗಳಾರತಿ ಈ ಕ್ರಮದಲ್ಲಿ ಬೆಳಗಿ, ನಿಮ್ಮ ಆಶಯ ಆಗುವುದು ಪೂರ್ತಿ!...

ರೇಖೆಯಿಂದ ಆಯುಷ್ಯ ವರ್ಷ :
ಮಣಿಕಟ್ಟಿನಲ್ಲಿ ಎಷ್ಟು ರೇಖೆಗಳಿವೆ ಎಂಬ ಆಧಾರದ ಮೇಲೆ ವ್ಯಕ್ತಿಯ ಆಯುಷ್ಯವನ್ನು ಹೇಳಲಾಗುತ್ತದೆ. ಕೆಲವರಿಗೆ ಮಣಿಕಟ್ಟಿನಲ್ಲಿ ಒಂದೇ ರೇಖೆ ಇದ್ದರೆ ಇನ್ನು ಕೆಲವರಿಗೆ ಎರಡು, ಮೂರು, ನಾಲ್ಕು ಹೀಗೆ ರೇಖೆಗಳಿರುತ್ತವೆ. ಕೆಲವು ರೇಖೆಗಳು ಕಾಣುವಂತೆ ಸ್ಪಷ್ಟವಾಗಿದ್ದರೆ, ಕೆಲವು ಬಾರಿ ಅಸ್ಪಷ್ಟವಾಗಿರುತ್ತವೆ. ಹೆಚ್ಚು ರೇಖೆಗಳಿದ್ದರೆ ಜೀವಿತಾವಧಿ ಹೆಚ್ಚಿದೆ ಮತ್ತು ಕಡಿಮೆ ರೇಖೆ ಇದ್ದರೆ ಅಲ್ಪಾಯು ಎಂದು ಹೇಳಲಾಗುತ್ತದೆ. ವರ್ಷಗಳಲ್ಲಿ ಹೇಳಬೇಕೆಂದರೆ ಮಣಿಕಟ್ಟಿನಲ್ಲಿ ಒಂದು ರೇಖೆ ಇದ್ದರೆ ಸುಮಾರು 30 ವರ್ಷ, ಎರಡು ರೇಖೆ ಇದ್ದರೆ 55-60 ವರ್ಷ, ಮೂರು ರೇಖೆಗಳು 75-80 ವರ್ಷ ಮತ್ತು ನಾಲ್ಕು ರೇಖೆ ಇದ್ದರೆ ಶತಾಯುಷಿ ಎಂದು ವಿಂಗಡಿಸಲಾಗಿದೆ. ಈ ವಿಚಾರದ ಜೊತೆಗೆ ರೇಖೆಗಳ ಸ್ಪಷ್ಟತೆಯನ್ನು ಪರಿಗಣಿಸಲಾಗುತ್ತದೆ.

Tap to resize

Latest Videos

ಮೊದಲನೆ ರೇಖೆಯಿಂದ ತಿಳಿಯುತ್ತೆ ಆರೋಗ್ಯ ಸಮಸ್ಯೆ:
ಮಣಿಕಟ್ಟಿನ ಮೊದಲ ಗೆರೆಯು ತುಂಬಾ ಮುಖ್ಯವಾದದ್ದು. ಈ ರೇಖೆಯು ಸ್ಪಷ್ಟವಾಗಿದ್ದು, ಎಲ್ಲೂ ತುಂಡಾಗದೇ ಸರಿಯಾಗಿದ್ದರೆ ಇಂಥವರು ಆರೋಗ್ಯಕರ ಜೀವನವನ್ನು ನಡೆಸುತ್ತಾರೆ. ದೈಹಿಕ ಮತ್ತು ಮಾನಸಿಕ ಶಕ್ತಿ
ಇವರಲ್ಲಿ ಚೆನ್ನಾಗಿರುತ್ತದೆ. ಈ ರೇಖೆ ಅಸ್ಪಷ್ಟವಾಗಿದ್ದು,ತುಂಡಾಗಿ ಸರಿಯಾಗಿ ಗೆರೆ ಇಲ್ಲದಿದ್ದರೆ ಇಂಥವರು ದುರ್ಬಲರಾಗಿರುತ್ತಾರೆ.

ಇದನ್ನು ಓದಿ; ಶನಿ ದೇವರ ಕೃಪೆಗೆ ಹೀಗೆ ಮಾಡಿ, ವಕ್ರದೃಷ್ಟಿಯಿಂದ ಬಚಾವಾಗಿ!...

ಆರೋಗ್ಯದ ಸಮಸ್ಯೆಯನ್ನು ತಿಳಿಯಿರಿ ಈ ರೇಖೆಯಿಂದ:

undefined

ಈ ರೇಖೆಯು ಮಹಿಳೆಯರಿಗೆ ಮತ್ತು ಪುರುಷರಿಗೆ ಯಾವ ಆರೋಗ್ಯ ಸಮಸ್ಯೆ ಬರಬಹುದೆಂಬುದನ್ನು ಹೇಳುತ್ತದೆ. ಮಹಿಳೆಯರಿಗೆ ಮಣಿಕಟ್ಟಿನ ಮೊದಲನೆ ರೇಖೆಯು ತುಂಡಾಗಿದ್ದರೆ ಅಥವಾ ವಕ್ರವಾಗಿದ್ದರೆ ಸಂತಾನೋತ್ಪತ್ತಿ ಸಮಸ್ಯೆ, ಪ್ರಸವದ ಸಮಯದಲ್ಲಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಪುರುಷರಿಗೆ ಮೂತ್ರ ಸಂಬಂಧಿತ ಸಮಸ್ಯೆಯು ಕಾಡುತ್ತದೆ.

ಹಣಕಾಸು ಮತ್ತು ಸಂಪತ್ತಿಗೆ ಎರಡನೇ ರೇಖೆ :

ಎರಡನೇ ಮಣಿಕಟ್ಟಿನ ರೇಖೆಯು ವ್ಯಕ್ತಿಯ ಹಣಕಾಸು ಮತ್ತು ಸಂಪತ್ತಿನ ರಹಸ್ಯವನ್ನು ತಿಳಿಸುತ್ತೆ. ರೇಖೆಯು ನೇರವಾಗಿ ಸ್ಪಷ್ಟವಾಗಿದ್ದರೆ ಹಣಸಂಪತ್ತು ಚೆನ್ನಾಗಿರುತ್ತದೆ. ಮತ್ತು ಪ್ರೀತಿಪಾತ್ರರು ಆರ್ಥಿಕವಾಗಿ  
ಸಹಕಾರವನ್ನು ನೀಡುತ್ತಾರೆ.

ಇದನ್ನು ಓದಿ; ನಿಮ್ಮ ಜಾತಕದ ಲಗ್ನ ಇದಾಗಿದ್ದರೆ ಏನೇನು ಲಾಭ ಅಂತ ಗೊತ್ತೇ?...

ಹೆಸರು, ಪ್ರಖ್ಯಾತಿ, ಅಧಿಕಾರದ ಬಗ್ಗೆ ತಿಳಿಯಲು ಮೂರನೇ ರೇಖೆ :

ಮೂರನೇ ರೇಖೆಯು ಸ್ಪಷ್ಟ ಮತ್ತು ದಪ್ಪವಾಗಿದ್ದು, ನೇರವಾಗಿದ್ದರೆ ಇಂಥವರು ಹೆಚ್ಚು ಪ್ರಖ್ಯಾತಿಯನ್ನು ಪಡೆಯುತ್ತಾರೆ. ಪ್ರಭಾವಶಾಲಿಯಾಗಿರುತ್ತಾರೆ.

ನಾಲ್ಕನೇ ರೇಖೆ ಸಮೃದ್ಧಿ ಮತ್ತು ಧೀರ್ಘಾಯುಷ್ಯದ ಸಂಕೇತ :

ಮಣಿಕಟ್ಟಿನಲ್ಲಿ ನಾಲ್ಕು ರೇಖೆಗಳಿರುವುದು ತುಂಬಾ ವಿರಳ. ಕೆಲವು ಬಾರಿ ಮೂರನೇ ರೇಖೆಯ ಜೊತೆಯಲ್ಲೇ ನೇರವಾಗಿ ಇರುತ್ತದೆ. ಮೂರನೇ ರೇಖೆಯು ಹೇಳುವ ಲಾಭಗಳನ್ನು ದುಪ್ಪಟ್ಟು ಮಾಡುತ್ತದೆ ಈ ನಾಲ್ಕನೇ
ರೇಖೆ. 

click me!