ಏಕ ನಕ್ಷತ್ರ ವಿವಾಹಕ್ಕೆ ಯೋಗ್ಯವೇ?

Suvarna News   | Asianet News
Published : Sep 24, 2021, 12:16 PM ISTUpdated : Sep 24, 2021, 12:51 PM IST
ಏಕ ನಕ್ಷತ್ರ ವಿವಾಹಕ್ಕೆ ಯೋಗ್ಯವೇ?

ಸಾರಾಂಶ

ವಿವಾಹಕ್ಕೆ ವಧುವರರ ಜಾತಕ ಹೊಂದಾಣಿಕೆ ಪ್ರಮುಖ ಪಾತ್ರ ವಹಿಸುತ್ತದೆ. ರಾಶಿ, ನಕ್ಷತ್ರ, ಗ್ರಹ ಮೈತ್ರಿ ಕೂಟ, ಗಣ ಕೂಟ, ನಾಡಿ ದೋಷ ಸೇರಿದಂತೆ ನಾನಾ ವಿಷಯಗಳನ್ನು ಈ ವೇಳೆ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದರೆ ವಧು ಮತ್ತು ವರನ ರಾಶಿ ನಕ್ಷತ್ರಗಳು ಒಂದೇ ಆಗಿದ್ದರೆ ಹೇಗೆ? ವಿವಾಹಕ್ಕೆ ಯೋಗ್ಯವೇ ಎಂಬ ಪ್ರಶ್ನೆ ಸಹಜ. ಹಾಗಾದರೆ ಏನು..? ಎತ್ತ..? ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ...  

ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವಾಹಕ್ಕೆ ಪವಿತ್ರವಾದ ಸ್ಥಾನವಿದೆ. ವಿವಾಹ ಬಂಧ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಹಾಗಾಗಿ ಜಾತಕ ನೋಡುವುದು ಮತ್ತು ವಧುವರರ ಜಾತಕ ಹೊಂದಾಣಿಕೆ ಆದ ಮೇಲೆ ಮದುವೆ ಮಾಡುವುದು ಸಂಪ್ರದಾಯವಾಗಿದೆ.

ಜಾತಕ ನೋಡಿ ಮದುವೆ ಮಾಡುವುದರ ಹಿಂದೆ ಕನ್ಯೆ ಮತ್ತು ವರನ ಮುಂದಿನ ಭವಿಷ್ಯ ಅಡಗಿರುತ್ತದೆ. ಹಾಗೆ ಜಾತಕ ನೋಡುವಾಗ ಹೊಂದಾಣಿಕೆ ಮಾಡುವ ಗುಣಗಳ ಪೈಕಿ ನಕ್ಷತ್ರ ಸಾಮ್ಯತೆಯೂ ಒಂದು. ಕನ್ಯೆ ಮತ್ತು ವರನದ್ದು ಒಂದೇ ನಕ್ಷತ್ರವಾದರೆ ವಿವಾಹ ಆಗಬಹುದೇ ಇಲ್ಲವೇ ಎಂಬ ಗೊಂದಲವಿದೆ. ಅದಕ್ಕೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ ...

ವಧುವರರ ಜಾತಕ ಹೊಂದಾಣಿಕೆ ವಿವಾಹಕ್ಕೆ ಮುನ್ನ ಮಾಡುವ ಅಗತ್ಯ ಪ್ರಕ್ರಿಯೆಯಾಗಿದೆ. ಇಬ್ಬರ ಜಾತಕ ಹೊಂದಾಣಿಕೆಯಾಗಲು ಶಾಸ್ತ್ರದಲ್ಲಿ ತಿಳಿಸಿದಂತೆ ಗುಣಗಳ ಹೊಂದಾಣಿಕೆಯಾಗಬೇಕು. 

ಕನ್ಯೆ ಮತ್ತು ವರನ ಜಾತಕವನ್ನು ಹೊಂದಾಣಿಕೆ ಮಾಡುವಾಗ 36 ಗುಣಗಳಲ್ಲಿ ಕನಿಷ್ಠ 18 ಗುಣಗಳು ಕೂಡಿ ಬಂದರೆ ಮದುವೆಗೆ ಯೋಗ್ಯವೆಂದು ಹೇಳಲಾಗುತ್ತದೆ. ಸರಿಯಾದ ರೀತಿಯಲ್ಲಿ ಎಲ್ಲ ಗುಣಗಳ ಹೊಂದಾಣಿಕೆ ಮಾಡಿಯೇ ಜಾತಕ ಹೊಂದಾಣಿಕೆ ಆಗುವುದೋ ಇಲ್ಲವೋ ಎಂಬುದನ್ನು ಹೇಳಲಾಗುತ್ತದೆ. ಕೆಲವು ಗುಣಗಳನ್ನು ನೋಡಿ ಅಂತಿಮ ತೀರ್ಮಾನಕ್ಕೆ ಬರುವುದು ಸರಿಯಲ್ಲ, ಶಾಸ್ತ್ರ ಸಮ್ಮತವಲ್ಲ. 

ಈ ನಕ್ಷತ್ರದವರು ವಿವಾಹವಾಗಬಹುದೇ ಎಂಬುದರ ಬಗ್ಗೆ ಶಾಸ್ತ್ರ ಹೀಗೆ ಹೇಳುತ್ತದೆ..

- ರೋಹಿಣಿ, ಆರಿದ್ರಾ, ಪುಷ್ಯ, ಮಘಾ, ವಿಶಾಖಾ, ಶ್ರವಣ, ಉತ್ತರ ಭಾದ್ರ ಮತ್ತು ರೇವತಿ ಈ ನಕ್ಷತ್ರಗಳು ವಧು ಮತ್ತು ವರನ ಒಂದೇ ಆಗಿದ್ದರೆ ಮದುವೆಗೆ ಯೋಗ್ಯವೆಂದು ಹೇಳಲಾಗುತ್ತದೆ.

- ವಧು-ವರರದ್ದು ಏಕನಕ್ಷತ್ರ ಅಂದರೆ, ಅಶ್ವಿನಿ, ಕೃತಿಕಾ, ಮೃಗಶಿರಾ, ಪುನರ್ವಸು ಚಿತ್ರಾ, ಅನುರಾಧ ಮತ್ತು ಪೂರ್ವಭಾದ್ರ ನಕ್ಷತ್ರಗಳಲ್ಲಿ ಆಯಾ ನಕ್ಷತ್ರವು ಇಬ್ಬರದ್ದೂ ಆಗಿದ್ದರೆ ಮಧ್ಯಮ ಯೋಗ್ಯವೆಂದು ಹೇಳಲಾಗುತ್ತದೆ. 

ಇದನ್ನು ಓದಿ: ಪಿತೃಪಕ್ಷದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ…

- ಉಳಿದ ನಕ್ಷತ್ರಗಳು ವಧು - ವರರದ್ದು ಒಂದೇ ನಕ್ಷತ್ರವಾದರೆ ವಿವಾಹಕ್ಕೆ ಅಶುಭವೆಂದು ಹೇಳಲಾಗುತ್ತದೆ. 

- ವಧು -ವರರ ನಕ್ಷತ್ರಗಳು ಒಂದೇ ಆಗಿ ಪಾದ ಬೇರೆಯಾಗಿದ್ದರೆ ಶುಭ ಎಂದೇ ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಮುಖ್ಯವಾಗಿ ವರನ ನಕ್ಷತ್ರ ಪಾದವು ವಧುವಿನ ನಕ್ಷತ್ರ ಪಾದಕ್ಕಿಂತ ಮುಂಚಿನದ್ದಾದರೆ ವಿವಾಹಕ್ಕೆ ಯೋಗ್ಯ ಮತ್ತು ಅತ್ಯಂತ ಶುಭವೆಂದು ಹೇಳಲಾಗುತ್ತದೆ.

- ವಧುವಿನ ನಕ್ಷತ್ರವು ಅಶ್ವಿನಿ, ಕೃತಿಕಾ, ರೋಹಿಣಿ, ಮೃಗಶಿರಾ, ಆರ್ದ್ರಾ, ಪುಷ್ಯ, ಮಘಾ, ಹಸ್ತಾ, ಸ್ವಾತಿ, ವಿಶಾಖಾ, ಪೂರ್ವಾಷಾಢ ಮತ್ತು ಶತಭಿಷಾ ನಕ್ಷತ್ರವಾಗಿದ್ದು , ವರನ ನಕ್ಷತ್ರಕ್ಕಿಂತ ಮುಂಚಿನದ್ದಾದರೆ ಶುಭವೆಂದು ಹೇಳಲಾಗುತ್ತದೆ. 
 



- ವಧು- ವರರ ರಾಶಿ ಒಂದೇ ಆಗಿದ್ದು, ನಕ್ಷತ್ರ ಬೇರೆಯಾಗಿದ್ದ ಸಂದರ್ಭದಲ್ಲಿ ನಾಡಿ ದೋಷ ಮತ್ತು ಗಣ ದೋಷವನ್ನು ಗಣನೆಗೆ ತೆಗೆದುಕೊಳ್ಳುವ ಅಗತ್ಯವಿರುವುದಿಲ್ಲ. 

- ನಕ್ಷತ್ರ ಒಂದೇ ಆಗಿದ್ದು ಪಾದಗಳು ಬೇರೆ ಬೇರೆಯಾಗಿದ್ದಲ್ಲಿ ವಿವಾಹಕ್ಕೆ ಯೋಗ್ಯವಾಗಿರುತ್ತದೆ. ಮತ್ತು ಇದಕ್ಕೆ ಯಾವುದೇ ದೋಷವಿರುವುದಿಲ್ಲ.

- ವಧು- ವರರದ್ದು ಒಂದೇ ಜನ್ಮರಾಶಿಯಾಗಿದ್ದು, ಬೇರೆಬೇರೆ ನಕ್ಷತ್ರವಾಗಿದ್ದಲ್ಲಿ ಯಾವುದೇ ನಾಡಿ ದೋಷ ಇರುವುದಿಲ್ಲ. 

- ವಧು -ವರರದ್ದು ಒಂದೇ ನಕ್ಷತ್ರವಾಗಿದ್ದು ಬೇರೆಬೇರೆ ರಾಶಿಯಾಗಿದ್ದಲ್ಲಿ ಸಹ ನಾಡಿ ದೋಷ ಇರುವುದಿಲ್ಲ.

- ವಧು -ವರರದ್ದು ಒಂದೇ ನಕ್ಷತ್ರವಾಗಿದ್ದು ಪಾದ ಅಥವಾ ಚರಣ ಬೇರೆ ಬೇರೆಯಾಗಿದ್ದ ಸಂದರ್ಭದಲ್ಲಿ ಸಹ ನಾಡಿ ದೋಷ ಇರುವುದಿಲ್ಲ.   

- ವಧುವಿನ ನಕ್ಷತ್ರದ ನಂತರದ ನಕ್ಷತ್ರವೇ ವರನದ್ದಾಗಿದ್ದರೆ ಅಂತಹ ಜಾತಕ ವಿವಾಹಕ್ಕೆ ಯೋಗ್ಯವಲ್ಲವೆಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ ಹುಡುಗಿಯದ್ದು ಅನುರಾಧ ನಕ್ಷತ್ರವಾಗಿದ್ದು ಹುಡುಗನದ್ದು ಜ್ಯೇಷ್ಠಾ ನಕ್ಷತ್ರವಾಗಿದ್ದರೆ ಅಂತಹ ಜಾತಕ ವಿವಾಹಕ್ಕೆ ಯೋಗ್ಯವಲ್ಲವೆಂದು ಶಾಸ್ತ್ರ ಹೇಳುತ್ತದೆ. 

ಇದನ್ನು ಓದಿ: ಹಸ್ತಾ, ಚಿತ್ತಾ, ಸ್ವಾತಿ, ವಿಶಾಖಾ ಮತ್ತು ಅನುರಾಧ ನಕ್ಷತ್ರದಲ್ಲಿ ಜನಿಸಿದವರ ಗುಣ ಹೇಗಿರುತ್ತೆ?

ಜಾತಕ ಹೊಂದಾಣಿಕೆ ಮಾಡುವಾಗ ನಾಡಿ ದೋಷದ ವಿಚಾರ ಅತ್ಯಂತ ಪ್ರಮುಖವಾಗುತ್ತದೆ. ಇದು ವಿವಾಹ ನಂತರದಲ್ಲಿ ವಧುವರರ ಆರೋಗ್ಯ ಆಯಸ್ಸು ಮತ್ತು ಸಂತೋಷದ ವಿಚಾರಗಳನ್ನು ನಾಡಿ ಗುಣದಿಂದ ತಿಳಿದುಕೊಳ್ಳುಬಹುದಾಗಿರುತ್ತದೆ. 

ಹಾಗಾಗಿ ವಧು ವರರದ್ದು ಒಂದೇ ನಾಡಿ ಆಗಿದ್ದರೆ ದೋಷ ಉಂಟಾಗುತ್ತದೆ. ಇದರಿಂದ ವಧು - ವರರ ಆಯುಷ್ಯದ ಮೇಲೆ ಪರಿಣಾಮ ಬೀರುತ್ತದೆ. 

ನಾಡಿ ದೋಷ ಪರಿಹಾರಾರ್ಥವಾಗಿ ಮಹಾ ಮೃತ್ಯುಂಜಯ ಜಪ ಅಥವಾ ಹೋಮವನ್ನು ಮಾಡಿಸುವುದರಿಂದ ನಾಡಿದೋಷದ ಪ್ರಭಾವ ತಗ್ಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. 

ಇದನ್ನು ಓದಿ: ಈ ನಾಲ್ಕು ರಾಶಿಯವರು ಮಿತವ್ಯಯಿಗಳು..

ಶಿವನ ದೇವಸ್ಥಾನದಲ್ಲಿ ಮಹಾ ಮೃತ್ಯುಂಜಯ ಜಪ ಅಥವಾ ಹೋಮವನ್ನು ಯಾವುದಾದರೂ ಸೋಮವಾರ ಮಾಡಿಸುವುದರಿಂದ ನಾಡಿ ದೋಷ ಪರಿಹಾರವಾಗುತ್ತದೆ ಎನ್ನಲಾಗುತ್ತದೆ.

ಈ ಮೇಲಿನ ನಾಡಿ ದೋಷ ನಿಯಮಗಳನ್ನು ಜಾತಕ ಹೊಂದಾಣಿಕೆ ಮಾಡುವಾಗ ಪರಿಗಣಿಸಿ ಏಕ ನಕ್ಷತ್ರದವರು ವಿವಾಹ ಆಗಬಹುದೇ - ಇಲ್ಲವೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. 

PREV
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ