ರಾಶಿಚಕ್ರದಲ್ಲಿ ನಾಲ್ಕನೇ ಮನೆಯಾದ ಕಟಕ ಜನ್ಮರಾಶಿಯವರು ತಮ್ಮ ಭಾವಿ ಜೀವನ ಸಂಗಾತಿ ಹೇಗಿರಬೇಕು ಎಂದು ಬಯಸುತ್ತಾರೆ? ನಿಮಗೆ ಗೊತ್ತೆ?
ರಾಶಿಚಕ್ರದಲ್ಲಿ ನಾಲ್ಕನೇ ರಾಶಿಚಕ್ರ ಚಿಹ್ನೆ ಕಟಕ ರಾಶಿ. ಈ ರಾಶಿಯವರು ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಮನೆ ಮತ್ತು ಕುಟುಂಬವನ್ನು ಪ್ರೀತಿಸುತ್ತಾರೆ. ಈ ರಾಶಿಯವರು ಬಲವಾದ ಅರ್ಥಮಾಡಿಕೊಳ್ಳುವ ಶಕ್ತಿ ಮತ್ತು ಮಾನಸಿಕ ಶಕ್ತಿಯನ್ನು ಉಳ್ಳವರು. ಹಾಗಾಗಿ ಜನರನ್ನು ಚೆನ್ನಾಗಿಯೇ ಅರ್ಥ ಮಾಡಿಕೊಳ್ಳುತ್ತಾರೆ. ಕೆಲವರು ಹೊರಗೆ ಒರಟರಂತೆ ಕಂಡರೂ ಇವರ ಮನಸ್ಸು ಮೃದುವಾಗಿರುತ್ತದೆ. ಇವರು ನಿಷ್ಠೆ, ಅತೀ ಭಾವುಕತೆ ಹಾಗೂ ಕಾಳಜಿಗೆ ಹೆಸರುವಾಸಿ. ಇನ್ನೊಂದು ಕಡೆ ಆಗಾಗ ಬದಲಾಗಬಲ್ಲ, ಭಾವುಕ ಮತ್ತು ಅತಿಯಾಗಿ ಒಬ್ಬರನ್ನು ಹಚ್ಚಿಕೊಳ್ಳುವ ವ್ಯಕ್ತಿ. ಈ ರಾಶಿಯವರು ತಮ್ಮ ಬೆಟರ್ ಹಾಫ್ ವ್ಯಕ್ತಿಯಲ್ಲಿ ಏನನ್ನು ಇರಬೇಕು ಎಂದು ಬಯಸುತ್ತಾರೆ...
ಸಕಾರಾತ್ಮಕ ಗುಣಗಳು
ಕಟಕ ರಾಶಿಯವರು ಅಗಾಧ ಕಲ್ಪನೆಗಳಿಂದ ಕೂಡಿದವರು, ಆದ್ದರಿಂದ ಇವರನ್ನು ಸೃಜನಶೀಲ ವ್ಯಕ್ತಿಗಳೆಂದು ಕರೆಯುವುದು ತಪ್ಪಲ್ಲ. ತಮ್ಮ ಸಂಗಾತಿ ಕೂಡ ಬರಹ ಅಥವಾ ಚಿತ್ರ ಅಥವಾ ಫೋಟೋಗ್ರಫಿ ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವವರು ಆಗಿದ್ದರೆ ತುಂಬಾ ಸಂತೋಷಪಡುತ್ತಾರೆ. ಸೃಜನಶೀಲ ಮತ್ತು ಕಲಾತ್ಮಕ ರೀತಿಯಲ್ಲಿ ತಮ್ಮನ್ನು ಪ್ರಸ್ತುತ ಪಡಿಸಿಕೊಳ್ಳುವವರು ಎಂದರೆ ಇವರಿಗೆ ತುಂಬಾ ಪ್ರೀತಿ.
ಭಾವುಕ ಮನಸ್ಥಿತಿಯವರು
ಕಟಕ ರಾಶಿಯವರು ನಿಷ್ಠಾವಂತರು ಹಾಗೂ ಭಾವುಕರು. ತಮ್ಮ ಸಂಗಾತಿ, ಮನೆಯವರು ಕೂಡ ಇತರರ ಬಗ್ಗೆ ಕಾಳಜಿಯನ್ನು ಹೊಂದಿರಬೇಕು ಎಂದು ಬಯಸುತ್ತಾರೆ. ಕುಟುಂಬದವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವವರು, ಸಹಾನುಭೂತಿ ಹೊಂದಿದವರು, ಆತ್ಮೀಯರೊಂದಿಗೆ ಹೆಚ್ಚು ಆಳವಾದ ಭಾವನೆಯನ್ನು ಹೊಂದಿರುವವರು, ಇತರರ ನೋವುಗಳ ಬಗ್ಗೆ ಅನುಭೂತಿಯನ್ನು ಹೊಂದಿದವರು ಇವರಿಗೆ ಇಷ್ಟ.
ನಿಷ್ಠಾವಂತರು
ಕಟಕ ರಾಶಿಯವರು ತಮ್ಮ ಸಂಬಂಧಗಳ ಮೇಲೆ ಹೆಚ್ಚು ಕಾಳಜಿ ತೋರಿಸುತ್ತಾರೆ ಹಾಗೂ ಭದ್ರತೆಯ ಭಾವನೆಯನ್ನು ಹೊಂದಿರುತ್ತಾರೆ. ಮನೆ ಮತ್ತು ಕುಟುಂಬದವರನ್ನು ಪ್ರೀತಿಸುವವರು, ಆಳವಾದ ಭಾವನಾತ್ಮಕ ಸಂಬಂಧಗಳನ್ನೊ ಹೊಂದಿರುವವರು, ಸಂಗಾತಿಗೆ ನಿಷ್ಠಾವಂತರಾಗಿರುವವರು, ತಮಗಾಗಿ ಸಾಯಲೂ ಸಿದ್ಧವಾಗಿರುವವರು, ಪ್ರೀತಿಯಲ್ಲಿ ಕುರುಡರಂತಾಡುವವರು ಎಂದರೆ ತುಂಬಾ ಸಂತೋಷಡುತ್ತಾರೆ.
ಪ್ರೀತಿಸುವ ಆಕರ್ಷಕ ವ್ಯಕ್ತಿತ್ವ
ಎಲ್ಲರನ್ನೂ ಪ್ರೀತಿಸುವ, ಕಾಳಜಿ ತೋರುವ ಇವರು ಎಲ್ಲವನ್ನೂ ಮನಸ್ಸಿನಿಂದ ಹೃದಯದಿಂದ ಮಾಡುತ್ತಾರೆ. ಈ ಕಾರಣದಿಂದಾಗಿ ಪ್ರೀತಿಯಲ್ಲಿ ಬಿದ್ದಾಗ ಅತ್ಯಂತ ಸೂಕ್ಷ್ಮಜೀವಿಗಳನ್ನೇ ಇಷ್ಟಪಡುತ್ತಾರೆ. ತಮಾಷೆ, ಭಾವೋದ್ರಿಕ್ತತೆ, ಸಾಹಸಮಯ ಜೀವನ ಹಾಗೂ ಆಡಂಬರ ಇಷ್ಟಪಡದವರು ಇವರಿಗಿಷ್ಟ. ಸಮಯವನ್ನು ಸದುಪಯೋಗ ಮಾಡುವವರನ್ನು ಹುಡುಕಿ ಆತ್ಮೀಯರಾಗಿ ಮಾಡಿಕೊಳ್ಳುತ್ತಾರೆ. ಇತರರ ಭಾವನೆಯನ್ನು ಸುಲಭವಾಗಿ ಗ್ರಹಿಸುವ ಇವರು ಇತರರ ಭಾವನೆಗಳಿಗೆ ಹೆಚ್ಚು ಸಂವೇದನಾಶೀಲರಾಗಿರುವವರನ್ನು ಅನುಸರಿಸುತ್ತಾರೆ.
ಜೀವನ ಸಂಗಾತಿ ಹೇಗಿರಬೇಕು? ವೃಷಭ ರಾಶಿಯವರ ಅಪೇಕ್ಷೆ ಹೀಗಿರುತ್ತೆ...
ಅರ್ಥಗರ್ಭಿತ ಸ್ವಭಾವ
ಇವರು ಅಲೌಕಿಕ ಪ್ರಜ್ಞೆಯನ್ನು ಹೊಂದಿರುವವರು. ಇತರರ ಮನಸ್ಸಿನಲ್ಲಿ ಏನಿದೆ ಎಂದು ಚೆನ್ನಾಗಿ ಅರ್ಥಮಾಡಿಕೊಳ್ಳುವವರು. ಇವರನ್ನು ಮೋಸಗೊಳಿಸುವುದು ಹಾಗೂ ಜಾಣತನದಿಂದ ನಿರ್ವಹಿಸುವುದು ಸ್ವಲ್ಪ ಕಷ್ಟ. ರಹಸ್ಯಗಳನ್ನು ಹೊರಹಾಕುವ ಇವರ ಸಹಜ ಸಾಮರ್ಥ್ಯದಿಂದ ಅಂಥವರನ್ನೇ ಇಷ್ಟಪಡುತ್ತಾರೆ. ಅದರೆ ರಹಸ್ಯಗಳನ್ನು ಯಾರಾದರೂ ಇಟ್ಟುಕೊಳ್ಳುವುದನ್ನು ಇಷ್ಟಪಡುವುದಿಲ್ಲ.
ಮೂಡಿ ಸ್ವಭಾವ
ಕಟಕ ರಾಶಿಯವರು ಮೂಡಿ ಸ್ವಭಾವವನ್ನು ಹೊಂದಿರುವವರು. ಸಾಮಾನ್ಯವಾಗಿ ಇವರು ಧೈರ್ಯಶಾಲಿಗಳು ಹಾಗೂ ರಕ್ಷಣೆಗೆ ಬದ್ಧವಾಗಿರುವವರನ್ನು ಇಷ್ಟಪಡುತ್ತಾರೆ. ಭಾವನೆಗಳು ಆಗಾಗ ಏರಿಳಿತ ಕಾಣುತ್ತಿರುವುದರಿಂದ, ಇವರಂತೆಯೇ ಇರವ ಸಂಗಾತಿ ಸಿಕ್ಕಿದರೆ ಸದಾ ಜಗಳ ಆಗಬಹುದು. ಆದ್ದರಿಂದ ಸ್ವಲ್ಪ ಸ್ಥಿರಚಿತ್ತರಾದವರು ಇವರಿಗೆ ತಕ್ಕ ಸಂಗಾತಿಯಾಗುತ್ತಾರೆ. ಅಥವರನ್ನೇ ಇವರು ಹುಡುಕುತ್ತಾರೆ.
ಮಿಥುನ ರಾಶಿಯವರು ತಮ್ಮ ಲೈಫ್ ಪಾರ್ಟ್‌ನರ್ ಹೇಗಿರ್ಬೇಕು ಅಂತ ಬಯಸ್ತಾರೆ ಗೊತ್ತಾ?