ನೇರ ಸ್ವಭಾವದ ಸಿಂಹ ರಾಶಿಯವರಿಗೆ ಸಂಗಾತಿ ಹೇಗಿರಬೇಕತ್ತಂತೆ ಗೊತ್ತಾ?

By Suvarna News  |  First Published Sep 23, 2021, 4:52 PM IST

ಸಿಂಹ ಜನ್ಮರಾಶಿಯ ವ್ಯಕ್ತಿಗಳು ನೇರ ಸ್ವಭಾವದವರು. ಸುತ್ತಿ ಬಳಸಿ ಏನನ್ನೂ ಮಾಡುವುದಿಲ್ಲ. ತಮ್ಮ ಸಂಗಾತಿಯ ಗುಣ ಕೂಡ ಹಾಗೇ ಇದ್ದರೆ ಇವರಿಗೆ ಇಷ್ಟ.


ಸೂರ್ಯ ರಾಶಿಚಕ್ರದ ಐದನೇ ರಾಶಿಗೆ ಅಧಿಪತಿ. ಈ ರಾಶಿಚಕ್ರವು ಸಿಂಹವನ್ನು ಪ್ರತಿನಿಧಿಸುತ್ತದೆ. ಈ ರಾಶಿ ಚಿಹ್ನೆಯಲ್ಲಿ ಜನಿಸಿದ ವ್ಯಕ್ತಿಯ ಮೇಲೆ ಸೂರ್ಯದೇವನ ಪರಿಣಾಮ ಹೆಚ್ಚು. ಸೂರ್ಯದೇವ ಸಿಂಹ ರಾಶಿಯ ಅಧಿಪತಿ ಮತ್ತು ನವಗ್ರಹಗಳ ರಾಜನೂ ಹೌದು. ಈ ರಾಶಿಯ ಜನರ ನಡವಳಿಕೆ, ಗುಣಲಕ್ಷಣದಲ್ಲಿ ತಮ್ಮದೇ ಆದ ವೈಶಿಷ್ಟ್ಯ ಹೊಂದಿದ್ದಾರೆ. ತಮ್ಮ ಸಮಸ್ಯೆಗಳನ್ನು ತಮ್ಮದೇ ಆದ ರೀತಿಯಲ್ಲಿ ಪರಿಹರಿಸುವಲ್ಲಿ ಪರಿಣತರಾಗಿರುತ್ತಾರೆ. ಈ ರಾಶಿಚಕ್ರದ ಜನರು ತುಂಬಾ ಧೈರ್ಯಶಾಲಿ ಮತ್ತು ಭಾವೋದ್ರಿಕ್ತರು. ಜೊತೆಗೆ ಸ್ನೇಹದ ವಿಷಯದಲ್ಲಿ ಬಹಳ ನಿಷ್ಠಾವಂತರು. ಸಂಗಾತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ.

ಸಿಂಹ ರಾಶಿಯಲ್ಲಿ ಜನಿಸಿದ ಜನರು ಯಾವುದೇ ಕೆಲಸವನ್ನು ಹೃದಯದಿಂದ ಮಾಡುತ್ತಾರೆ. ಈ ರಾಶಿಯ ಜನರು ಮಾತನಾಡಲು ಇಷ್ಟಪಡುತ್ತಾರೆ. ಇವರು ಸುತ್ತಿ ಬಳಸಿ ಏನನ್ನೂ ಹೇಳುವುದಿಲ್ಲ. ಅದು ಅವರಿಗೆ ಇಷ್ಟವಾಗುವುದಿಲ್ಲ ಕೂಡ. ಹಾಗಾಗಿ ಈ ರಾಶಿಯ ಜನರು ಈ ಸಂಬಂಧದಲ್ಲಿ ತೊಂದರೆಗೆ ಸಿಲುಕುತ್ತಾರೆ. ಈ ರಾಶಿಯ ಜನರು ಮೌನವಾಗಿರಲು ಇಷ್ಟಪಡುವುದಿಲ್ಲ. ಸಂಘಟನೆಯಲ್ಲಿ ಸಾಕಷ್ಟು ಶಕ್ತಿಯನ್ನು ವ್ಯಯಿಸುತ್ತಾರೆ.

Tap to resize

Latest Videos

ರಕ್ಷಣೆ ನೀಡಬಲ್ಲವರು
ಇವರು ಕುಟುಂಬದ ಸುರಕ್ಷತೆಗೆ ಬದ್ಧರಾಗಿರುತ್ತಾರೆ. ಇವರನ್ನು ಜೀವನ ಸಂಗಾತಿಯಾಗಿ ಪಡೆಯುವ ಸಂಗಾತಿ ಅದೃಷ್ಟವಂತರು. ಇವರು ಎಂದಿಗೂ ಇತರರ ಯಶಸ್ಸಿನ ಬಗ್ಗೆ ಅಸೂಯೆ ಪಡುವುದಿಲ್ಲ, ಯಾವಾಗಲೂ ಸಹಾಯಕ್ಕಾಗಿ ಮುಂದಾಗುತ್ತಾರೆ. ಹಾಗೇ ಸಹಾಯಕ್ಕಾಗಿ ಮುಂದಾಗುವ ಸಂಗಾತಿಗಳನ್ನು ಇಷ್ಟಪಡುತ್ತಾರೆ. ತಮಾಷೆಯ ಸ್ವಭಾವದವರಾಗಿರಲಿ ಎಂದು ಬಯಸುತ್ತಾರೆ. ಬೇರೆಯವರೊಂದಿಗೆ ಸುಲಭವಾಗಿ ಬೆರೆಯುವವರು, ಗುರಿ ಮುಟ್ಟುವ ಆತ್ಮವಿಶ್ವಾಸ ಮತ್ತು ವೇಗ ಇರುವವರು, ತಮ್ಮ ಭವಿಷ್ಯದ ಬಗ್ಗೆ ಸ್ಪಷ್ಟ ಚಿತ್ರಣ ಇರುವವರು, ತಮ್ಮ ಕುಟುಂಬಕ್ಕೆ ಸಂಪೂರ್ಣವಾಗಿ ಬದ್ಧವಾಗಿರುವವರು ಎಂದರೆ ಇಷ್ಟ.
 

ಮಕ್ಕಳನ್ನು ಪ್ರೀತಿಸಬೇಕು
ಇವರು ವೈವಾಹಿಕ ಜೀವನದ ಬಗ್ಗೆ ತುಂಬಾ ಗಂಭೀರವಾಗಿರುತ್ತಾರೆ. ಮಕ್ಕಳನ್ನು ತುಂಬಾ ಪ್ರೀತಿಸುವವರನ್ನು ಪತಿ/ಪತ್ನಿಯಾಗಿ ಪಡೆಯಲು ಬಯಸುತ್ತಾರೆ. ಸಂಗಾತಿಯ ಬಗೆಗೆ ಬಹಳ ಉದಾರರಾಗಿರುತ್ತಾರೆ. ತಮ್ಮ ಪೋಷಕರು ಮತ್ತು ಒಡಹುಟ್ಟಿದವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವ ಸಂಗಾತಿ ಎಂದರೆ ಇಷ್ಟ. ಇವರ ಪ್ರತಿಯೊಂದು ಅಗತ್ಯವನ್ನು ಪೂರೈಸಲು ನಿರಂತರವಾಗಿ ಶ್ರಮ ಪಡುವವರು ಇವರಿಗೆ ಬೇಕು. ಇವರ ಆಕಾಂಕ್ಷೆಗಳು ಬಹಳ ದೊಡ್ಡದು.

ಆಕ್ರಮಣಕಾರಿ ಸ್ವಭಾವ
ಈ ರಾಶಿಯ ಜನರು ತುಂಬಾ ಆಕ್ರಮಣಕಾರಿ ಆಗುತ್ತಾರೆ. ಬೇಗನೆ ಕೋಪಗೊಳ್ಳುತ್ತಾರೆ. ಹೀಗಾಗಿ ಇವರದೇ ಸ್ವಭಾವದ ಸಂಗಾತಿ ಸಿಕ್ಕಿದರೆ ಮನೆ ಸದಾ ರಣರಂಗವಾಗಿರುತ್ತದೆ. ಸೌಮ್ಯ ಸ್ವಭಾವದ ಸಂಗಾತಿಯಾಗಿದ್ದರೆ ಸದಾ ಇವರ ದಬ್ಬಾಳಿಕೆಯನ್ನೂ ಅನುಭವಿಸಬೇಕಾದೀತು. ಧಾರ್ಮಿಕ ಕಾರ್ಯಗಳಲ್ಲಿ ಮನಸ್ಸನ್ನು ನೆಟ್ಟ ಸಂಗಾತಿಯೆಂದರೆ ಇಷ್ಟ. ಸಂಪೂರ್ಣವಾಗಿ ದೇವರ ಬಗ್ಗೆ ಭಕ್ತಿಯಿಂದ ಇರುವವರನ್ನು, ಧರ್ಮದ ವಿಷಯದಲ್ಲಿ ಸಾಂಪ್ರದಾಯಿಕ ತತ್ವಗಳನ್ನು ಅನುಸರಿಸುವವರನ್ನು ಇಷ್ಟಪಡುತ್ತಾರೆ.

ಹೊಸ ಸಂಗತಿಗಳು ಇಷ್ಟ
ಸಿಂಹ ರಾಶಿಯ ಜನರು ಬೇರೆಯವರನ್ನೂ ಮುನ್ನಡೆಸಲು ಇಷ್ಟಪಡುತ್ತಾರೆ. ಇವರು ಹೊಸ ಸಂಗತಿಗಳನ್ನು ಪಡೆಯಲು ಹಾತೊರೆಯುತ್ತಿರುತ್ತಾರೆ. ತಂತ್ರಜ್ಞಾನದ ಪ್ರಪಂಚದ ಬಗ್ಗೆ ಸಾಕಷ್ಟು ಪ್ರೀತಿಯನ್ನು ಹೊಂದಿದ್ದಾರೆ. ಸಂಗಾತಿಯು ಸದಾ ಅನ್ವೇಷಣೆ ಅಥವಾ ಅಡ್ವೆಂಚರ್ ಸ್ವಭಾವದವರಾದರೆ ಇವರಿಗೆ ತುಂಬ ಇಷ್ಟವಾಗುತ್ತದೆ. ಸಿಂಹ ರಾಶಿಯವರು ಸರಿಯಾದ ವೃತ್ತಿಜೀವನವನ್ನು ಆರಿಸಿಕೊಳ್ಳುತ್ತಾರೆ. ತಮ್ಮ ಸಂಗಾತಿ ಕೂಡ ಉದ್ಯೋಗದ ವಿಷಯದಲ್ಲಿ ಸಾಕಷ್ಟು ಲೆಕ್ಕಾಚಾರ ಹಾಗೂ ಎಚ್ಚರದಿಂದ ನಡೆದುಕೊಳ್ಳಬೇಕು ಎಂದು ಬಯಸುತ್ತಾರೆ. ಆದರೂ ಆರಾಮದಾಯಕ ಜೀವನ ಇವರಿಗೆ ಇಷ್ಟ.

ಮಿಥುನ ರಾಶಿಯವರು ತಮ್ಮ ಲೈಫ್ ಪಾರ್ಟ್‌ನರ್ ಹೇಗಿರ್ಬೇಕು ಅಂತ ಬಯಸ್ತಾರೆ ಗೊತ್ತಾ?

ಗುರಿಗೆ ಅಡ್ಡಿಯಾಗಬಾರದು
ಈ ಜನರು ತಮ್ಮನ್ನು ಜನ ಹೊಗಳಬೇಕೆಂದು ಬಯಸುತ್ತಾರೆ. ಇವರು ಎಲ್ಲೇ ಹೋದರೂ ಪ್ರಾಬಲ್ಯ ಸಾಧಿಸಲು ಇಷ್ಟಪಡುತ್ತಾರೆ. ಇವರ ಉದಾರ ಹೃದಯದಿಂದಾಗಿ, ಸಂಸಾರದ ಎಲ್ಲರೂ ಸಂತೋಷವಾಗಿ ಇರಬೇಕೆಂದು ಇವರು ಬಯಸುತ್ತಾರೆ. ಸಂಗಾತಿಯು ದುಃಖಿಯಾಗಿದ್ದರೆ ಇವರು ಸಹಿಸುವುದಿಲ್ಲ. ಜೀವನದ ಅತ್ಯುನ್ನತ ಶಿಖರವನ್ನು ತಲುಪಲು ಯಾವಾಗಲೂ ಉತ್ಸುಕರಾಗಿರುವುದರಿಂದ, ಸಂಗಾಥಿ ತಮ್ಮ ಗುರಿಗೆ ಅಡ್ಡಿಯಾದರೆ ಇವರು ಸಿಟ್ಟಿಗೇಳುತ್ತಾರೆ.

ನಿಷ್ಠಾವಂತರು
ತಮ್ಮ ಸಮಸ್ಯೆಗಳನ್ನು ತಮ್ಮದೇ ಆದ ರೀತಿಯಲ್ಲಿ ಪರಿಹರಿಸುವ ಸಂಗಾತಿಗಳೆಂದರೆ ಇಷ್ಟ. ನಿಷ್ಠಾವಂತರು ಸಂಗಾತಿಗಳಾಗಿರಲಿ ಎನ್ನುತ್ತಾರೆ. ಸಂಗಾತಿ ಮಾತನಾಡಲಿ ಎಂದು ಇಷ್ಟಪಡುತ್ತಾರೆ. ನೇರವಾಗಿ ಮಾತನಾಡುವುದರಿಂದ ಸಂಬಂಧದಲ್ಲಿ ತೊಂದರೆಗೆ ಸಿಲುಕಿದರೂ ತಲೆ ಕೆಡಿಸಿಕೊಳ್ಳೂವುದಿಲ್ಲ. ಇತರರ ಯಶಸ್ಸಿನ ಬಗ್ಗೆ ಅಸೂಯೆ ಪಡುವವರನ್ನು ಇಷ್ಟಪಡುವುದಿಲ್ಲ. ಕುಟುಂಬದ ಸುರಕ್ಷತೆಗೆ ಬದ್ಧರಾಗಿರುವ ಸಂಗಾತಿ ಸಿಕ್ಕಿದರೆ ಹಾಯಾಗಿರುತ್ತಾರೆ. ತಮ್ಮನ್ನು ಸಂಗಾತಿ ಹೊಗಳಬೇಕೆಂದು ಇಷ್ಟಪಡುತ್ತಾರೆ. ಟೀಕಿಸಿದರೆ ಅತ್ಮವಿಮರ್ಶೆ ಮಾಡಿಕೊಳ್ಳುವುದಿಲ್ಲ.

ಕಟಕ ರಾಶಿಯವರು ತಮ್ಮ ಸಂಗಾತಿಯಲ್ಲಿ ಈ ಗುಣಗಳನ್ನು ನಿರೀಕ್ಷಿಸುತ್ತಾರೆ!

 

click me!