ಹಾಲು, ಮನಿ ಪ್ಲ್ಯಾಂಟ್ ಜೊತೆಯಾಗಿ ನಿಮ್ಮನ್ನು ಶ್ರೀಮಂತರ ಪಟ್ಟಿಗೆ ತಳ್ಳಬಲ್ಲವು. ಹೌದು, ಈ ಎರಡನ್ನು ಸರಿಯಾಗಿ ಬಳಸಿದರೆ ಲಕ್ಷ್ಮೀ ಒಲಿಯುವುದು ಪಕ್ಕಾ.
ಇಂದಿನ ಬದುಕಿಗೆ ಹಣ ಅತ್ಯಗತ್ಯವಾಗಿದೆ. ನಾವೆಲ್ಲರೂ ಹಗಲಿರುಳೂ ಕಷ್ಟ ಪಟ್ಟು ದುಡಿಯುವುದೇ ಹಣಕ್ಕಾಗಿ. ಹಣದ ಬಲವಿದ್ದಾಗ ಅಂದುಕೊಂಡಂತೆ ಜೀವನ ಸಾಧಿಸಲು ಸಾಧ್ಯವಾಗುತ್ತದೆ. ಕೊಂಚ ಹೆಚ್ಚಿನ ಹಣಕ್ಕಾಗಿ ಸಾಕಷ್ಟು ಜನ ತಮ್ಮ ಕುಟುಂಬದಿಂದ ಬಹಳಷ್ಟು ದೂರ ಹೋಗುತ್ತಾರೆ. ಒಟ್ನಲ್ಲಿ ಲಕ್ಷ್ಮೀದೇವಿಯನ್ನು ಮನೆಗೆ ಆಹ್ವಾನ ಮಾಡಲು ನಾನಾ ತರದ ಸರ್ಕಸ್ ಮಾಡುತ್ತೇವೆ. ಆದರೆ, ಎಲ್ಲ ಪ್ರಯತ್ನಗಳೂ ಫಲ ಕೊಡುವುದಿಲ್ಲ. ಅದೃಷ್ಟವೂ ಜೊತೆಗೂಡಬೇಕಾಗುತ್ತದೆ. ಆದರೆ, ಪ್ರಯತ್ನವಂತೂ ಮುಂದುವರಿಯಬೇಕಲ್ಲ..
ಹಾಲನ್ನು ಲಕ್ಷ್ಮಿ ದೇವಿ(Goddess Lakshmi)ಗೆ ಅಮೃತ ಎಂದು ಕರೆಯಲಾಗುತ್ತದೆ. ಅದೃಷ್ಟದ ದೇವತೆ ಎಂದೇ ಹೆಸರಾಗಿರುವ ಸಂಪತ್ತಿನ ಲಕ್ಷ್ಮಿಗೆ ಹಾಲು(Milk) ಮತ್ತು ಹಾಲಿನ ಉತ್ಪನ್ನಗಳನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ ಈ ಮನಿ ಪ್ಲ್ಯಾಂಟ್(money plant)ಗೂ ಲಕ್ಷ್ಮೀಗೂ ಏನು ಸಂಬಂಧ ಬಲ್ಲಿರಾ? ಇಷ್ಟಕ್ಕೂ ಮನಿ ಪ್ಲಾಂಟ್ ಮತ್ತು ಹಾಲಿನ ನಡುವೆ ಎಂಥ ರಿಲೇಶನ್‌ಶಿಪ್ ಇದೆ ಗೊತ್ತಾ?
ಮನಿ ಪ್ಲ್ಯಾಂಟ್ ಹೆಸರೇ ಹೇಳುವ ಹಾಗೆ ಅದು ದುಡ್ಡಿನ ಗಿಡ. ವಾಸ್ತು ಶಾಸ್ತ್ರ ಹಾಗೂ ಫೆಂಗ್ ಶೂಯ್ ಪ್ರಕಾರ ಅದು ಮನೆಗೆ ಧನಾತ್ಮಕ ಶಕ್ತಿ(positive energy) ತಂದು ಸಂಪತ್ತಿನ ಹರಿವು ಹೆಚ್ಚಾಗುವಂತೆ ಮಾಡುತ್ತದೆ. ಮನಿ ಪ್ಲಾಂಟ್ ಮನೆಯಲ್ಲಿ ಸಂಪತ್ತಿನ ದಾರಿಯನ್ನು ತೆರೆಯುತ್ತದೆ ಎಂದು ನಂಬಲಾಗಿದೆ. ಅದರ ಎಲೆಗಳು ಮೇಲಕ್ಕೆ ಚಲಿಸುತ್ತಿದ್ದಂತೆ, ಕುಟುಂಬದ ಸದಸ್ಯರ ಅದೃಷ್ಟವು ಬೆಳಗಲು ಪ್ರಾರಂಭಿಸುತ್ತದೆ. ಇದು ಮನೆಯಲ್ಲಿ ಸಂಪತ್ತಿನ ಹೆಚ್ಚಳವನ್ನು ಸಂಕೇತಿಸುತ್ತದೆ.
ಹೀಗಾಗಿ ಧನದ ಕಾರಣದಿಂದ ಮನಿ ಪ್ಲ್ಯಾಂಟ್ ಲಕ್ಷ್ಮೀಗೆ ಸಂಬಂಧಿಸಿದೆ. ಹಾಲು ಕೂಡಾ ಲಕ್ಷ್ಮೀಗೆ ಇಷ್ಟವಾದದ್ದಾಗಿರುವುದರಿಂದ ಇವೆರಡನ್ನು ಸರಿಯಾಗಿ ಬಳಸಿದರೆ ಲಕ್ಷ್ಮೀದೇವಿಯ ಅನುಗ್ರಹ ಬಹಳವಾಗಿ ದೊರಕುತ್ತದೆ.
Chandra Grahan 2022: ಈ ವರ್ಷದಲ್ಲೆಷ್ಟು ಬಾರಿ ಚಂದ್ರಗ್ರಹಣ?
ಹೌದು, ಮನಿ ಪ್ಲಾಂಟ್ ಮತ್ತು ಹಾಲಿನ ನಡುವೆ ವಿಶೇಷ ಮತ್ತು ಫಲಪ್ರದ ಸಂಪರ್ಕವಿದೆ. ಅದು ನಿಮಗೆ ಆರ್ಥಿಕ ಲಾಭವನ್ನು ತರುತ್ತದೆ. ಮನಿ ಪ್ಲಾಂಟ್‌ಗೆ ನೀರು ನೀಡುವಾಗ ಜೊತೆಗೆ ಕೆಲವು ಹನಿ ಹಾಲನ್ನು ಸೇರಿಸಿದರೆ, ಅದೃಷ್ಟವು ನಿಮ್ಮದಾಗುತ್ತದೆ. ಹೌದು, ಮನಿ ಪ್ಲಾಂಟ್‌ಗೆ ಹಾಲನ್ನು ಅರ್ಪಿಸುವುದರಿಂದ ಅದು ವೇಗವಾಗಿ ಬೆಳೆಯುತ್ತದೆ ಮತ್ತು ಅದೃಷ್ಟ(luck)ವೂ ವೇಗವಾಗಿ ಹೊಳೆಯುತ್ತದೆ. ಅಂಥ ಮನೆಯಲ್ಲಿ ಲಕ್ಷ್ಮಿ ದೇವಿಯು ಯಾವಾಗಲೂ ನೆಲೆಸುತ್ತಾಳೆ. ಹೀಗೆ ಹಾಲು ಹಾಕುವಾಗ ಹಸಿ ಹಾಲನ್ನೇ ನೀಡಬೇಕು ಎಂಬ ಎಚ್ಚರ ಪಾಲಿಸಿ.
Arava Ganapathi Temple: ಗೋವಾದಿಂದ ಕಾರವಾರಕ್ಕೆ ಬಂದ ಗಣಪಗೆ ಮಾಜಿ ಯೋಧರ ಸೇವೆ
ಹಾಗಂಥ ಹಾಲು ಸುರಿಯುವಾಗ ನೀವು ಜಾಗರೂಕರಾಗಿರಬೇಕು. ಮನಿ ಪ್ಲಾಂಟ್‌ಗೆ ಹಾಲನ್ನು ಸಂಪೂರ್ಣವಾಗಿ ಸುರಿಯಬಾರದು. ನೀವು ಈ ಗಿಡಕ್ಕೆ ನೀರು ಹಾಕುವಾಗ ಜೊತೆಗೆ ಕೆಲವು ಹನಿ ಹಸಿ ಹಾಲನ್ನು ಹಾಕಿ. ಕೆಲವು ಹನಿ ಹಸಿ ಹಾಲನ್ನು ನೀರಿನಲ್ಲಿ ಹಾಕಿ ಚಿಮುಕಿಸಬೇಕು. ಇದರೊಂದಿಗೆ, ಮನಿ ಪ್ಲಾಂಟ್‌ನ ಬೆಳವಣಿಗೆಯೂ ಉತ್ತಮವಾಗಿರುತ್ತದೆ ಮತ್ತು ಕುಟುಂಬದ ಅದೃಷ್ಟವನ್ನು ಸಹ ಹೆಚ್ಚುತ್ತದೆ.
ಇಷ್ಟಕ್ಕೂ ಮನಿ ಪ್ಲಾಂಟ್ ನೆಡುವಾಗ ಮನೆಯ ಯಾವ ದಿಕ್ಕು ಉತ್ತಮ ಎಂಬುದೂ ತಿಳಿದಿರಬೇಕು. ಜೊತೆಗೆ ಮತ್ತೊಂದಿಷ್ಟು ವಿಷಯಗಳ ಬಗ್ಗೆ ಜಾಗರೂಕರಾಗಿರಬೇಕು. ಇಲ್ಲದಿದ್ದಲ್ಲಿ ನಿಮ್ಮ ಪ್ರಯತ್ನಗಳೆಲ್ಲ ವ್ಯರ್ಥವಾದೀತು. ಮನಿ ಪ್ಲಾಂಟ್ ಯಾವಾಗಲೂ ಮನೆಯ ಈಶಾನ್ಯ ಇಲ್ಲವೇ ಆಗ್ನೇಯ ದಿಕ್ಕಿನಲ್ಲಿರಬೇಕು. ಜೊತೆಗೆ, ನಿಮ್ಮ ಮನೆಯ ಮನಿ ಪ್ಲ್ಯಾಂಟ್ ಮುರಿದು ಮತ್ತೊಬ್ಬರಿಗೆ ಗಿಡವಾಗಿಸಲು ಕೊಡಕೂಡದು. ಮನಿ ಪ್ಲ್ಯಾಂಟ್ ಇರುವ ಪಾಟ್‌ನಲ್ಲಿ ಬೇರಾವುದೇ ಗಿಡಗಳನ್ನೂ ಹಾಕಬಾರದು.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.