ಮತ್ತೆ ಸತ್ಯವಾಯ್ತು ಬೆಂಕಿ ಬಬಲಾದಿ ಅಜ್ಜನ ಭವಿಷ್ಯ: ಜಗತ್ತಿನಲ್ಲಿ ಶುರುವಾಗಲಿದೆ ಕಲಿಪುರುಷನ ಅಸಲಿ ಆಟ..!

By Girish Goudar  |  First Published Mar 23, 2022, 11:10 AM IST

*  "ಭೂಕಾಂತಿ ನಡುಗಿತ" ಕಾರ್ಣಿಕ ಬೆನ್ನಲ್ಲೆ ಕಂಪಿಸಿದ ಭೂತಾಯಿ
*  ಹರಕೆ ಇಡೇರಿಸಿದ ಬಬಲಾದಿ ಮಠಕ್ಕೆ ಜ್ಯೋತಿ ತಂದ ಸೈನಿಕ
*  ಇಲ್ಲಿ ನುಡಿದ 2022ರ ಭವಿಷ್ಯದ ನುಡಿಗಳು ಇನ್ನು ಭಯಾನಕ 
 


ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವಿಜಯಪುರ

ವಿಜಯಪುರ(ಮಾ.23):  ವಿಜಯಪುರ(Vijayapura) ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಮಠಕ್ಕೆ(Babaladi Matha) ತನ್ನದೆಯಾದ ಪರಂಪರೆ ಇದೆ. ಸಿದ್ಧಿ ಪುರುಷರ ಮಠ ಎಂತಲು ಈ ಬಬಲಾದಿ ಮಠವನ್ನ ಕರೆಯಲಾಗುತ್ತೆ. ಇಲ್ಲಿ ಪ್ರತಿ ವರ್ಷ ಶಿವರಾತ್ರಿಯಂದು (Shivaratri) ನುಡಿಯುವ ಭವಿಷ್ಯವಾಣಿ (Prediction) ವರ್ಷದೊಳಗೆ ಸತ್ಯವಾಗುತ್ವೆ ಎನ್ನುವ ನಂಬಿಕೆ (Faith) ಜನರಲ್ಲಿದೆ.. ಹಾಗೇ ಇದೆ ಮಠದಲ್ಲಿ ಕಳೆದ ಶಿವರಾತ್ರಿಯ ದಿನ ನುಡಿದ ಭವಿಷ್ಯ ಒಂದೆ ತಿಂಗಳಲ್ಲಿ ಸತ್ಯವಾಗಿದೆ. ಭೂಕಾಂತಿ ನಡುಗಿದೆ.. ಮತ್ತೆ ಭೂಕಂಪನ  ಸಂಭವಿಸಿದೆ.. 

Tap to resize

Latest Videos

ಸತ್ಯವಾಯ್ತು ಬಬಲಾದಿ ಭವಿಷ್ಯ.. ಮತ್ತೆ ನಡುಗಿತು ಭೂಮಿ..!

ಹೌದು, ಕಳೆದ ಶಿವರಾತ್ರಿಯ ಮೂರನೇ ದಿನ ಇಲ್ಲಿ ನುಡಿಯುವ ಕಾಲಜ್ಞಾನ ಭವಿಷ್ಯ ಒಂದೆ ತಿಂಗಳ ಅವಧಿಯಲ್ಲಿ ಸತ್ಯವಾಗಿದೆ. ಇದೆ ಮಠದಲ್ಲಿ ಸಿದ್ದು ಮುತ್ಯಾ ಹೊಳಿಮಠ "ಭೂಕಾಂತಿ ನಡುಗಿತ" ಎನ್ನುವ ಮೂಲಕ ಮತ್ತೆ ಭೂಕಂಪನ ಸಂಭವಿಸುವ ಸೂಚನೆ ನೀಡಿದ್ದರು. ಸಿದ್ದು ಮುತ್ಯಾರ ಬಾಯಲ್ಲಿ ಭವಿಷ್ಯ ಕೇಳಿದ್ದ ಭಕ್ತರು ಆತಂಕದಲ್ಲಿದ್ದರು. ಸಧ್ಯ ಜನರಲ್ಲಿದ್ದ ಆತಂಕ ಸತ್ಯವಾಗಿದೆ. ಬಬಲಾದಿ ಮಠದಲ್ಲಿ ನುಡಿದಂತೆ ಭೂಕಾಂತಿ ನಡುಗಿದೆ, ಮತ್ತೆ ಭೂಕಂಪನ (Earthquake) ಸಂಭವಿಸಿದೆ. ನಿನ್ನೆ ಬೆಳಿಗ್ಗೆ 11.21 ಕ್ಕೆ ಸರಿಯಾಗಿ ವಿಜಯಪುರ ನಗರದ (Vijayapur City) 15 ಕೀಲೋ ಮೀಟರ್‌ ವ್ಯಾಪ್ತಿಯಲ್ಲಿ ಭೂಕಂಪನ ಸಂಭವಿಸಿದೆ. ಭೂಮಿಯ ಆಳದಿಂದ ದೊಡ್ಡದಾದ ಶಬ್ಧದ ಜೊತೆಗೆ ಮನೆಯಲ್ಲಿನ ಪಾತ್ರೆ-ಪಗಡೆ, ತಗಡಿ ಮೇಲ್ಚಾವಣಿ ಅಲುಗಾಡಿವೆ.. ವಿಜಯಪುರ ನಗರದಲ್ಲಿನ ರೇಲ್ವೆಸ್ಟೇಷನ್ ಏರಿಯಾ, ಗೋಳಗುಮ್ಮಟ (Golagummat), ಕೀರ್ತಿ ನಗರ, ರಂಭಾಪೂರ (Rambapur Village), ಕವಲಗಿ (Kavalagi) ಜನರು ಹೆದರಿ ಹೊರಗೆ ಬಂದ ಘಟನೆಯು ನಡೆದಿದೆ ಭೂಕಂಪನವಾದ ಬಗ್ಗೆ ಅರ್ಥಕ್ವೀಕ್‌ ಮೊಬೈಲ್‌ ಆಫ್‌ ಗಳಲ್ಲು ತೀವ್ರತೆ ದಾಖಲಾಗಿದೆ. 3.5 ತೀವ್ರತೆಯಲ್ಲಿ ಇದೊಂದು ಭೂಕಂಪನ ಸಂಭವಿಸಿದೆ ಎಂದು ಆಫ್‌ ಗಳಲ್ಲಿ ಮಾಹಿತಿ ಲಭ್ಯವಾಗಿದೆ. ಹೀಗೆ ಬಬಲಾದಿ ಮಠದಲ್ಲಿ ನುಡಿದ ಭೂಕಂಪನದ ಭವಿಷ್ಯ ತಿಂಗಳಲ್ಲೆ ಸತ್ಯವಾಗಿದೆ..

Vijaypura: ಇಲ್ಲಿನ ದೇವರಿಗೆ ನೈವೇದ್ಯಕ್ಕೆ ಸಾರಾಯಿನೇ ಬೇಕು: ಎಣ್ಣೆ ಇಲ್ದೆ ಏನೂ ಇಲ್ಲ..!

ಇನ್ನು ಭಯಾನಕವಾಗಿದೆ 2022ರ ಬೆಂಕಿ ಭವಿಷ್ಯ..!

ಸಿದ್ದು ಮುತ್ಯಾ ನುಡಿದ ಇನ್ನೊಂದು ಭಯಾಕನ ಭವಿಷ್ಯ ಸುನಾಮಿಯಂತೆ ಅಪ್ಪಳಿಸಿದೆ.. 2022 ರಲ್ಲಿ ಸುನಾಮಿ (Tsunami) , ಸುಂಟರಗಾಳಿ (Tornado) ಸಂಭವಿಸುವ ಮುನ್ಸುಚನೆಯನ್ನ ಭವಿಷ್ಯದಲ್ಲಿ (Future) ನುಡಿಯಲಾಗಿದೆ.. ಗಾಳಿ-ಸುನಾಮಿ ಆದೀತು.. ಎನ್ನುವ ಮೂಲಕ ಸುನಾಮಿ ಆರ್ಭಟ ಪಕ್ಕಾ.. ಮತ್ತೆ ಭೂಕಂಪನ ಮಿಸ್ಸೆ ಇಲ್ಲಾ ಎಂದಿದ್ದಾರೆ.. "ಕೈ ಬಳೆ ಒಡೆದಾವು ಕಣ್ಣೀರು ಉದರ್ಯಾವೋ..." ಎಂದು ಗೂಡಾರ್ಥದ ಮೂಲಕ ಭವಿಷ್ಯ ನುಡಿಯಾಲಾಗಿದ್ದು,  ಇದು ದೇಶದ ಜನರಿಗೆ ಮತ್ತೆ ಗಂಡಾಂತರ, ಸಂಕಷ್ಟಗಳು ಎದುರಾಗುವ ಸೂಚನೆ ಎನ್ನಲಾಗ್ತಿದೆ.. ಕೈ ಬಳೆ ಒಡೆದಾವು ಅಂದ್ರೆ ದೇಶದ ಹೆಣ್ಣುಮಕ್ಕಳು (Women) ಕಣ್ಣೀರು ಹಾಕುವಂತ ಪರಿಸ್ಥಿತಿಗಳು ನಿರ್ಮಾಣವಾಗಲಿವೆ ಎನ್ನಲಾಗ್ತಿದೆ. ಜೊತೆಗೆ ಯುದ್ಧಗಳಲ್ಲಿ ಸಾವು ನೋವು ಹೆಚ್ಚಾಗಿ ಕಣ್ಣೀರಿಡುವ ಪ್ರಸಂಗಗಳು ಬರಲಿವೆ ಎನ್ನಲಾಗ್ತಿದೆ..

ಏಪ್ರಿಲ್‌ನಿಂದ ಅಗಷ್ಟ ನಡುವೆ ಹೆಚ್ಚಲಿದೆಯಂತೆ ಪಾಪಕೂಟ..!

ಇನ್ನು ಬರುವ ಏಪ್ರೀಲ್‌ (April) ತಿಂಗಳಿನಿಂದ ಅಗಷ್ಟ (August) ವರೆಗೆ ಪಾಪ ಕೈಮೀರಲಿದೆಯಂತೆ.. ಪಾಪ ಕೃತ್ಯಗಳು ಹೆಚ್ಚಲಿವೆ ಇದರಿಂದ  ದೇಶದಲ್ಲಿ ಅಶಾಂತಿ, ಅಸೂಯೇ ಹೆಚ್ಚಾಗಲಿದೆ. ಇದರಿಂದ  ಜನರು ಕಷ್ಟ, ನಷ್ಟಗಳನ್ನ ಅನುಭವಿಸಲಿದ್ದಾರೆ ಎಂದು ಸಿದ್ದು ಮುತ್ಯಾ ಭವಿಷ್ಯ ನುಡಿದಿದ್ದಾರೆ. ಹೀಗೆ ಜಗತ್ತಿನಲ್ಲಿ ಪಾಪ ಹೆಚ್ಚಾಗಿ ಕಲಿಪುರುಷನ ಅಸಲಿ ಆಟ ಶುರುವಾಗಲಿದೆ ಎನ್ನುವ ಎಚ್ಚರಿಕೆಯನ್ನು ಸಿದ್ದು ಮುತ್ಯಾ ತಮ್ಮ ಭವಿಷ್ಯದ ಮೂಲಕ ಹೇಳಿದ್ದಾರೆ. ಇನ್ನು ಪಾಪ ಮಾಡಿದವರು ಅದರ ಫಲ ಅನುಭವಿಸಲಿದ್ದಾರೆ ಎನ್ನುವ ಮೂಲಕ ಉಕ್ರೇನ್‌ (Ukrain) ಮೇಲೆ ಯುದ್ಧ (War) ಸಾರಿ ಸಾಕಷ್ಟು ಜೀವ ಹಾನಿ, ನಷ್ಟ ಉಂಟು ಮಾಡಿರುವ ರಷ್ಯಾ ಪಾಠ ಕಲಿಯಲಿದೆ ಎಂದು ಭವಿಷ್ಯವನ್ನ ವಿಶ್ಲೇಷಿಸಲಾಗ್ತಿದೆ.. 

ಹರಕೆ ಇಡೇರಿಸಲು ಬಬಲಾದಿ ಮಠಕ್ಕೆ ಜ್ಯೋತಿ ತಂದ ಸೈನಿಕ..!

ಇನ್ನು ಈ ಬಬಲಾದಿ ಮಠದಲ್ಲಿ ಭಕ್ತರು ಏನೇ ಬೇಡಿಕೊಂಡರು ಅದು ಸತ್ಯವಾಗುತ್ತೆ ಅನ್ನೋ ಮಾತಿದೆ. ಕಳೆದ ವರ್ಷ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹೊನಕಟ್ಟಿ ಗ್ರಾಮದ ಬಸವರಾಜ್‌ ವಿಠ್ಠಲ ಹೆಗಡೆ ಎನ್ನುವ ಯುವಕ ಕಳೆದ ವರ್ಷ ಸೈನಿಕನನ್ನಾಗಿ ಮಾಡುವಂತೆ ಸದಾಶಿವ ಅಜ್ಜನ ಗದ್ದುಗೆ ಬಳಿ ಬೇಡಿಕೊಂಡಿದ್ದ. ವರ್ಷದಲ್ಲೆ ಸೈನಿಕನಾಗುವ ಆಸೆ ಇಡೇರಿದೆ. ಹೀಗಾಗಿ ಸೈನಿಕ (Soldier) ಬಸವರಾಜ್‌ ಹೆಗಡೆ ಬೆಳಗಾವಿ ಜಿಲ್ಲೆಯ ಹೊನಕಟ್ಟಿಯಿಂದ ಜ್ಯೋತಿ ಹಿಡಿದು 100 ಕೀ.ಮೀ ನಡಿಗೆ ಮೂಲಕ ಬಬಲಾದಿ ಮಠಕ್ಕೆ ಬಂದು ಹರಕೆ ತೀರಿಸಿದ್ದಾನೆ.. 

ಜಗತ್ತು ಯುದ್ಧಭೂಮಿಯಾಗುತ್ತೆ ಎಂದು ಬಾಂಬ್ ಸಿಡಿಸಿದ ಬಬಲಾದಿ ಭವಿಷ್ಯ!

ಈ ಪವಾಡಗಳಿಗೆ ಕಾರಣ ಸಿದ್ಧಿ ಪುರುಷ ಸದಾಶಿವ ಅಜ್ಜ..!

ಬಬಲಾದಿ ಮಠದಲ್ಲಿ ನಡೆಯುತ್ತಿರುವ ಇಷ್ಟೆಲ್ಲ ಪವಾಡ, ಭವಿಷ್ಯವಾಣಿಗಳಿಗೆ ಕಾರಣಿಕರ್ತರೇ ಸಿದ್ದಿ ಪುರುಷ ಸದಾಶಿವ ಅಜ್ಜನವರು. ಸರಿಸುಮಾರು 300 ವರ್ಷಗಳ ಹಿಂದೆ ಬಬಲಾದಿಯಲ್ಲಿ ನೆಲೆನಿಂತಿದ್ದ ಅವರು ಹಲವಾರು ಪವಾಡಗಳನ್ನ ಮಾಡಿದ್ದಾರೆ. ಸಿದ್ಧಿ ಪುರುಷರು, ಜ್ಞಾನಿಗಳು, ಪವಾಡಪುರುಷರು ಆಗಿದ್ದ ಸದಾಶಿವ ಅಜ್ಜ ಆಗ ಕಾಲಜ್ಞಾನ ನುಡಿದಿದ್ದರು. ಸದಾಶಿವ ಅಜ್ಜನವರು ನುಡಿದ ಕಾಲಜ್ಞಾನವನ್ನ ಚಿಕ್ಕಯ್ಯಪ್ಪನವರು ಮುಂಡಗಿ ಪದಗಳಾಗಿ ಬರೆದಿಟ್ಟಿದ್ದಾರೆ. 12 ಪೇಜ್‌ ಗಳಲ್ಲಿ ಬರೆದಿಟ್ಟಿರುವ ಇಲ್ಲಿನ ಕಾಲಜ್ಞಾನವನ್ನ ಪ್ರತಿ ವರ್ಷ ಶಿವರಾತ್ರಿಯಂದು ಸಿದ್ದು ಮುತ್ಯಾ ಓದುತ್ತಾರೆ. ಅದು ಮುಂದಿನ ಶಿವರಾತ್ರಿ ಒಳಗೆ ಸತ್ಯವಾಗುತ್ವೆ ಎನ್ನುವ ನಿದರ್ಶನಗಳಿವೆ..

ಇಲ್ಲಿ ವರೆಗೆ ಸತ್ಯವಾದ ಭವಿಷ್ಯಗಳು ಯಾವ ಯಾವವು..?

ಬಬಲಾದಿ ಮಠದಲ್ಲಿ ನುಡಿದ ಹಲವಾರು ಭವಿಷ್ಯವಾಣಿಗಳು ಸತ್ಯಾವಾಗಿರುವ ನಿದರ್ಶನಗಳಿವೆ. ಚಹಾ ಮಾರುವ ವ್ಯಕ್ತಿ ದೇಶದ ಚುಕ್ಕಾಣಿ ಹಿಡಿಯುತ್ತಾನೆ ಎಂದು ಇದೆ ಮಠದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗುವ ಭವಿಷ್ಯ ನುಡಿಯಲಾಗಿತ್ತು. ಬಾಯಿಗೆ ಬಾಯಿ ಜಾಳಿಗೆ ಬರಲಿವೆ ಎನ್ನುವ ಮೂಲಕ ಕೊರೊನಾ ಹೆಮ್ಮಾರಿ ಬರುತ್ತೆ ಎಲ್ಲರು ಮಾಸ್ಕ್‌ ಹಾಕಬೇಕಾದ ಟೈಂ ಬರಲಿದೆ ಎಂದು 300 ವರ್ಷಗಳ ಹಿಂದೆಯೇ ಇಲ್ಲಿ ಬರೆದಿಡಲಾಗಿತ್ತು. ಭಾರತದ ಸರ್ಜಿಕಲ್‌ ಸ್ಟ್ರೈಕ್ (Surgical Strike), ಚೀನಾ (China) ಯುದ್ಧ ಭೀತಿ, ಮಂಗಳೂರು (Mangaluru), ಡಿಜೆ-ಕೆಜೆ (DJ-KG halli) ಹಳ್ಳಿಗಳ ಕೋಮು ಗಲಭೆಯ ಬಗ್ಗೆ ವರ್ಷಕ್ಕು ಮೊದಲೇ ಇಲ್ಲಿ ಭವಿಷ್ಯ ನುಡಿಯಲಾಗಿತ್ತು. ಕೊರೊನಾ ಹೆಮ್ಮಾರಿ ಮತ್ತೆ ರಿಫಿಟ್‌ ಆಗಲಿದೆ ಹೆಣಗಳ ರಾಶಿ ಬೀಳಲಿವೆ, ನ್ಯಾಯದಿಂದ ನಡೆಯಿರಿ ಎಂದು ಜನರಿಗೆ ಇದೆ ಮಠದಲ್ಲಿ ಎಚ್ಚರಿಕೆಯನ್ನು ನೀಡಲಾಗಿತ್ತು.. ಇಲ್ಲಿ‌‌ನುಡಿದ ಇಂಥಹ ನೂರಾರು ಭವಿಷ್ಯಗಳು ಸತ್ಯವಾಗಿವೆ.
 

click me!