ಈ ತಾರೀಖಿನಲ್ಲಿ ಜನಿಸಿದವರು ಆಸ್ತಿ-ಜಮೀನಿನ ವಿಷಯದಲ್ಲಿ ತುಂಬಾ ಲಕ್ಕಿ..!

By Suvarna News  |  First Published Jul 9, 2021, 10:44 AM IST

ಜನಿಸಿದ ದಿನಾಂಕವನ್ನು ಆಧರಿಸಿ ಪಾದಾಂಕವನ್ನು ಕಂಡುಹಿಡಿಯುತ್ತಾರೆ. ಆ ಪಾದಾಂಕದ ಆಧಾರದಿಂದ ಭವಿಷ್ಯದ ಆಗು-ಹೋಗುಗಳನ್ನು ಮತ್ತು ವ್ಯಕ್ತಿಯ ಗುಣ-ಸ್ವಭಾವಗಳನ್ನು ತಿಳಿದುಕೊಳ್ಳಬಹುದಾಗಿದೆ. ಪಾದಾಂಕ 9ರ ವ್ಯಕ್ತಿಗಳು ಸ್ವಲ್ಪ ಸಿಟ್ಟಿನ ಸ್ವಭಾವವನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಅನೇಕ ವಿಶೇಷ ಗುಣಗಳನ್ನು ಹೊಂದಿರುವ ಈ ಪಾದಾಂಕದ ವ್ಯಕ್ತಿಗಳ ಬಗ್ಗೆ ತಿಳಿಯೋಣ..


ಸಂಖ್ಯಾಶಾಸ್ತ್ರವು ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗವೆಂದು ಹೇಳಲಾಗುತ್ತದೆ. ಪುರಾಣಗಳ ಕಾಲದಿಂದಲೂ ಸಂಖ್ಯೆಗಳ ಆಧಾರದ ಮೇಲೆ ಅನೇಕ ವಿಚಾರಗಳನ್ನು ತಿಳಿಯುತ್ತಿದ್ದ ಬಗ್ಗೆ ಉಲ್ಲೇಖವಿದೆ. ಭವಿಷ್ಯದ ವಿಚಾರಗಳನ್ನು ಸಂಖ್ಯೆಗಳ ಮೂಲಕವೇ ಘಳಿಗೆ, ಘಟಿ ಹೀಗೆ ಲೆಕ್ಕಾಚಾರ ಹಾಕಿ ತಿಳಿಯುತ್ತಿದ್ದರು.

ಜೀವನದಲ್ಲಿ ಅಂಕಗಳ ಮಹತ್ವ ಅಧಿಕ. ಸಂಖ್ಯಾಶಾಸ್ತ್ರದಲ್ಲಿ ಸಂಖ್ಯೆಗಳಿಂದ ಭವಿಷ್ಯವನ್ನು ನಿರ್ಧರಿಸಬಹುದಾಗಿದೆ. ಭವಿಷ್ಯದಲ್ಲಿ ನಡೆಯುವ ಹಲವಾರು ವಿಚಾರಗಳನ್ನು ಸಂಖ್ಯೆಗಳಿಂದ ಅಂದರೆ ಹುಟ್ಟಿದ ದಿನಾಂಕದಿಂದ ತಿಳಿಯಬಹುದೆಂದು ಸಂಖ್ಯಾಶಾಸ್ತ್ರ ತಿಳಿಸುತ್ತದೆ.

Tap to resize

Latest Videos

undefined

ಜನಿಸಿದ ದಿನಾಂಕದಿಂದ ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಯುವುದಲ್ಲದೆ, ಅದರ ಗುಣದಿಂದ ಭವಿಷ್ಯದಲ್ಲಿ ನಡೆಯಬಹುದಾದದ್ದನ್ನು ಸಹ ತಿಳಿಯಬಹುದಾಗಿರುತ್ತದೆ. ಹಾಗಾಗಿ ಯಾವುದೇ ತಿಂಗಳ 9, 18 ಮತ್ತು 27ರಂದು ಜನಿಸಿದವರ ಪಾದಾಂಕ 9 ಆಗುತ್ತದೆ. ಪಾದಾಂಕದ ಆಧಾರದ ಮೇಲೆ ಸ್ವಭಾವ-ಗುಣಗಳನ್ನು ತಿಳಿಯಬಹುದು. ಹಾಗಾದರೆ ಪಾದಾಂಕ 9ರ ವ್ಯಕ್ತಿಗಳ ಬಗ್ಗೆ ತಿಳಿಯೋಣ..

ಇದನ್ನು ಓದಿ: ಮನೆಯಲ್ಲಿ ಮನಿಪ್ಲಾಂಟ್ ಇದ್ದರೆ ಈ ನಿಯಮ ಪಾಲಿಸಿ – ಅದೃಷ್ಟ ನಿಮ್ಮದಾಗಲಿದೆ..!! 

ಮೂಲಾಂಕವನ್ನು ತಿಳಿಯುವುದು ಹೇಗೆ?

ಹುಟ್ಟಿದ ದಿನಾಂಕವನ್ನು ಕೂಡುವುದು ಅದರಿಂದ ಬಂದ ಸಂಖ್ಯೆಯನ್ನು ಪಾದಾಂಕವೆಂದು ಕರೆಯುತ್ತಾರೆ. ಹುಟ್ಟಿದ ದಿನಾಂಕ 3 ಎಂದಾದರೆ ಪಾದಾಂಕ 3 ಆಗುತ್ತದೆ. ಅದೇ ಜನಿಸಿದ ದಿನಾಂಕವು 13 ಆಗಿದ್ದರೆ ಒಂದು ಮತ್ತು ಮೂರನ್ನು ಕೂಡಿದಾಗ ಬರುವ ಸಂಖ್ಯೆ ನಾಲ್ಕು (1 + 3 = 4) ಇದು ಪಾದಾಂಕವಾಗಿರುತ್ತದೆ. ಪಾದಾಂಕದಿಂದ ವ್ಯಕ್ತಿ ಬಗೆಗಿನ ವಿಚಾರಗಳನ್ನು ತಿಳಿಯಬಹುದೆಂದು ಸಂಖ್ಯಾಶಾಸ್ತ್ರ ಹೇಳುತ್ತದೆ.  

ಪಾದಾಂಕ 9ರ ವ್ಯಕ್ತಿಗಳ ಬಗ್ಗೆ ಇಲ್ಲಿವೆ ವಿಶೇಷ ಮಾಹಿತಿ:

ಸಿರಿ ಸಂಪತ್ತನ್ನು ಹೊಂದಿರುವ ವ್ಯಕ್ತಿಗಳು ಇವರಾಗಿರುತ್ತಾರೆ. ಇಲ್ಲವೇ ಭೂಮಿಯನ್ನು, ಹೆಚ್ಚಿನ ಆಸ್ತಿಯನ್ನು ಜೀವಮಾನದಲ್ಲಿ ಹೊಂದುತ್ತಾರೆ. ಹಿರಿಯರಿಂದ ಬಳುವಳಿಯಾಗಿ ಈ ವ್ಯಕ್ತಿಗಳಿಗೆ ಆಸ್ತಿ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಪಾದಾಂಕ 9ರ ವ್ಯಕ್ತಿಗಳು ಅತ್ಯಂತ ಉತ್ಸಾಹಿ ಸ್ವಭಾವವನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಯಾವುದೇ ಕೆಲಸಕ್ಕೂ ಸೈ ಎಂಬಂತೆ ನಾಜೂಕಾಗಿ ಬುದ್ಧಿ ಮತ್ತು ಶಕ್ತಿಯನ್ನು ಬಳಸಿ ಎಲ್ಲ ಕೆಲಸಗಳನ್ನು ಮಾಡುವವರು ಇವರಾಗಿರುತ್ತಾರೆ.

ಇದನ್ನು ಓದಿ: ಈ ನಕ್ಷತ್ರದಲ್ಲಿ ಜನಿಸಿದವರು ಬುದ್ಧಿವಂತರು – ಸರ್ಕಾರಿ ಉದ್ಯೋಗ ಸಿಗುವ ಸಂಭವ ಹೆಚ್ಚು...! 

ನಗಿಸುವ ಕಲೆಯುಳ್ಳವರು

ದೈಹಿಕ ಶ್ರಮ ಹಾಕಿ ಕಠಿಣವಾದ ಕಾರ್ಯಗಳನ್ನು ಮಾಡುವ ಚೈತನ್ಯವನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಇತರರನ್ನು  ನಗಿಸುವ ಕಲೆಯನ್ನು ಹುಟ್ಟಿನಿಂದಲೇ ವರದಾನವಾಗಿ ಪಡೆದಿರುತ್ತಾರೆ. ಹೆಚ್ಚು ಸ್ನೇಹಿತರನ್ನು ಹೊಂದಿರುತ್ತಾರೆ. ಸ್ನೇಹಿತರ ನೆರವಿಗೆ ಸದಾ ಸಿದ್ಧರಾಗಿರುತ್ತಾರೆ. ಹಾಗಾಗಿ ಸ್ನೇಹಿತರ ಸಮಸ್ಯೆಗಳಿಗೆ ಪರಿಹಾರ ಹುಡುಕುವುದರಲ್ಲಿ ಈ ವ್ಯಕ್ತಿಗಳು ಹೆಸರುವಾಸಿ ಆಗಿರುತ್ತಾರೆ. 

ಸಿಟ್ಟಿನ ವ್ಯಕ್ತಿಗಳು

9ರ ಪಾದಾಂಕದವರು ನಿಯಮಗಳನ್ನು ಮೀರಿ ನಡೆಯಲು ಇಚ್ಛಿಸುವುದಿಲ್ಲ. ಸದಾ ನಿಯಮ ಪಾಲನೆಯಲ್ಲಿ ಬದ್ಧತೆಯನ್ನು ತೋರುವ ಮನಸ್ಥಿತಿ ಇವರದ್ದಾಗಿರುತ್ತದೆ. ಈ ವ್ಯಕ್ತಿಗಳು ಆರಂಭದಿಂದಲೇ ಜೀವನದಲ್ಲಿ ಅನೇಕ ಸಂಕಟಗಳನ್ನು ಮತ್ತು ಸಂಘರ್ಷಗಳನ್ನು ಎದುರಿಸುತ್ತಾ ಬಂದಿರುತ್ತಾರೆ. ಸಂಘರ್ಷವೇ ಜೀವನವೆಂದು ಅದರಂತೆಯೇ ಬದುಕಲು ಸಿದ್ಧರಾಗಿರುತ್ತಾರೆ. ಹಾಗಾಗಿ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾ ಹೋಗುತ್ತಾರೆ. ಸ್ವಭಾವದಲ್ಲಿ ಹೆಚ್ಚು ಸಿಟ್ಟನ್ನು ಹೊಂದಿರುವ ವ್ಯಕ್ತಿಗಳು ಇವರಾಗಿರುತ್ತಾರೆ. ಸಣ್ಣ ವಿಷಯಗಳಾದರೂ ಸರಿ, ದೊಡ್ಡ ವಿಷಯಗಳಾದರೂ ಸರಿ ಬಹುಬೇಗ ಕೋಪಗೊಳ್ಳುವ ಗುಣ ಮೂಲಾಂಕ 9ರ ವ್ಯಕ್ತಿಗಳದ್ದು.

ಇದನ್ನು ಓದಿ: ಪತ್ನಿಯ ರಾಶಿ ಇದಾಗಿದ್ದರೆ ಪತಿಗೆ ಅದೃಷ್ಟ – ಮನೆಯಲ್ಲಿ ಧನ-ಧಾನ್ಯ ವೃದ್ಧಿ..! 

ಮರ್ಯಾದೆಗಿಂತ ಮಿಗಿಲು ಇನ್ನೊಂದಿಲ್ಲ

ಈ ವ್ಯಕ್ತಿಗಳು ಹೆಚ್ಚು ಮರ್ಯಾದೆಯಿಂದ ಜೀವನ ನಡೆಸುವುದನ್ನು ನಿಯಮದಂತೆ ಪಾಲಿಸುತ್ತಾರೆ. ಹಾಗಾಗಿ ಮರ್ಯಾದೆ ಮತ್ತು ಗೌರವದಿಂದ ಬಾಳುತ್ತಾರೆ. ತಮ್ಮ ಮರ್ಯಾದೆಗೆ ಯಾವುದೇ ರೀತಿಯಲ್ಲಿ ಕರಿ ಛಾಯೆ ಸೋಕದಂತೆ ನೋಡಿಕೊಳ್ಳುತ್ತಾರೆ. ಈ ವ್ಯಕ್ತಿಗಳು ಇಚ್ಛಾ ಶಕ್ತಿಯಿಂದ ಅನೇಕ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ಮಹಿಳೆಯರಿಗೆ ಗಂಡನ ಮನೆಯ ಕಡೆಯಿಂದ ಹಣ ದೊರಕುವ ಸಂಭವವಿರುತ್ತದೆ. ಆರ್ಥಿಕವಾಗಿ ಉತ್ತಮ ಸ್ಥಿತಿಯನ್ನು ಇವರು ಹೊಂದಿರುತ್ತಾರೆ. ಹಿರಿಯರ ಆಸ್ತಿಯನ್ನು ಹೊಂದಿರುವ ಇವರು ಮನೆಯಲ್ಲಿ ನೆಮ್ಮದಿ ಮತ್ತು ಸಮೃದ್ಧತೆಯನ್ನು ಹೊಂದಿರುತ್ತಾರೆ. ಜಮೀನು ಮತ್ತು ಆಸ್ತಿಗೆ ಸಂಬಂಧಿಸಿದಂತೆ ಅನೇಕ ವಿವಾದಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬರುತ್ತದೆ.

click me!