Diseases and Planets: ಮತ್ತೆ ಮತ್ತೆ ಕಾಡುವ Acidityಗೆ ಈ ಗ್ರಹವೇ ಕಾರಣ!

By Suvarna NewsFirst Published Apr 10, 2022, 8:00 AM IST
Highlights

ಯಾವುದಾದರೂ ಕಾಯಿಲೆ ಬಿಟ್ಟೂ ಬಿಡದೆ ಕಾಡಿದರೆ, ಎಲ್ಲೀ ಗ್ರಹಚಾರ ಮಾರ್ರೆ ಎನ್ನುತ್ತೇವೆ. ಹೌದು, ಕಾಯಿಲೆಗಳು, ಯಾವುದೇ ಆರೋಗ್ಯ ಸಮಸ್ಯೆಗಳು ಕೂಡಾ ಗ್ರಹಚಾರವೇ. ಗ್ರಹಗಳ ಕಾರಣದಿಂದಲೇ ಅನಾರೋಗ್ಯಗಳು ಕಾಡುವುದು ಎನ್ನುತ್ತದೆ ಜ್ಯೋತಿಷ್ಯ. ಒಂದೊಂದು ಕಾಯಿಲೆಯೂ ಒಂದೊಂದು ಗ್ರಹಕ್ಕೆ ಸಂಬಂದಿಸಿದೆ. 

ಜಾತಕದಲ್ಲಿ (Horoscope) ಗ್ರಹಗಳ ಸ್ಥಿತಿಯು ವ್ಯಕ್ತಿಯ ಸುಖ ದುಃಖ ಎರಡಕ್ಕೂ ಕಾರಣವಾಗುತ್ತವೆ.  ಒಂಭತ್ತು ಗ್ರಹಗಳ (Planet) ಸ್ಥಾನ ಮತ್ತು ಸ್ಥಿತಿ ಉತ್ತಮವಾಗಿದ್ದರೆ ವ್ಯಕ್ತಿಯ ಜೀವನದಲ್ಲಿ ಶುಭ ಪರಿಣಾಮಗಳು (Effect) ಉಂಟಾಗುತ್ತವೆ. ಅದೇ ಗ್ರಹಗಳು ನೀಚ ಸ್ಥಾನದಲ್ಲಿ ಅಥವಾ ನೀಚ ಸ್ಥಿತಿಯಲ್ಲಿದ್ದರೆ ವ್ಯಕ್ತಿಯ ಜೀವನದಲ್ಲಿ ಅಶುಭ ಪರಿಣಾಮಗಳು ಉಂಟಾಗುತ್ತವೆ. ಹಾಗಾದರೆ ಯಾವ ಗ್ರಹಗಳ ಸ್ಥಿತಿ ಚೆನ್ನಾಗಿಲ್ಲವೆಂದಾದರೆ  ಯಾವ ರೋಗಗಳು (Diseases) ಬಾಧಿಸಬಹುದು ಎಂಬುದನ್ನು ತಿಳಿಯೋಣ....

ಗ್ರಹಚಾರ ಸರಿಯಿಲ್ಲವೆಂದರೆ ತೊಂದರೆಗಳ (Problem) ಮೇಲೆ ತೊಂದರೆಗಳು ಉಂಟಾಗುತ್ತವೆ.  ಮುಖ್ಯವಾಗಿ ಕಾಡುವ ಸಮಸ್ಯೆಯೆಂದರೆ ಅನಾರೋಗ್ಯ. ಆರೋಗ್ಯವೊಂದಿದ್ದರೆ (Health) ಬೆಲ್ಲ ಬೇಡಿ ತಿನ್ನಬಹುದು ಎಂಬ ಮಾತಿದೆ. ಹಾಗಾಗಿಯೇ ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷ ಮಾಡಬಾರದು. ವೈದ್ಯರ ಬಳಿ ಹೋದರೂ ಗುಣವಾಗಲಿಲ್ಲ ಎಂದಾದರೆ, ಅದು ಗ್ರಹಗಳಿಂದ ಬಂದ ತೊಂದರೆ ಆಗಿರುತ್ತದೆ. ಹಾಗಾಗಿ ಜಾತಕ ಮತ್ತು ಗ್ರಹಗತಿಗಳ ಬಗ್ಗೆ ತಿಳಿದವರಲ್ಲಿ ಆಗಾಗ ಪರೀಶಿಲಿಸಿಕೊಳ್ಳುತ್ತಿರಬೇಕು. ರೋಗಗಳ ಆಧಾರದ ಮೇಲೆ ಯಾವ ಗ್ರಹದಿಂದ ಬರುವ ತೊಂದರೆ ಎಂಬುದನ್ನು ತಿಳಿಯಬಹುದು. 

ಮಾನವ ಶರೀರದ ಅಧಿಪತ್ಯವನ್ನು ಒಂಭತ್ತೂ ಗ್ರಹಗಳು ಹೊಂದಿರುತ್ತವೆ. ಸೂರ್ಯ ಕಣ್ಣಿಗೆ, ಚಂದ್ರ ಮನಸ್ಸಿಗೆ, ಮಂಗಳ ರಕ್ತ ಸಂಚಾರಕ್ಕೆ, ಬುಧ ಹೃದಯಕ್ಕೆ, ಗುರು ಅಥವಾ ಬೃಹಸ್ಪತಿ ಬುದ್ಧಿಗೆ, ಶುಕ್ರವು ಪಿತ್ತ ವ್ಯಾದಿಗೆ ಹಾಗೂ ಶನಿ, ರಾಹು, ಕೇತು ಗ್ರಹಗಳು ಹೊಟ್ಟೆಗೆ ಸಂಬಂಧಿಸಿದ ರೋಗಗಳಿಗೆ ಕಾರಣವಾಗುತ್ತವೆ. ಇದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ...

ಸೂರ್ಯ (Sun)
ಸೂರ್ಯ ಗ್ರಹವು ನೀಚ ಸ್ಥಿತಿಯಲ್ಲಿದ್ದರೆ ಅಂತ ಸಂದರ್ಭದಲ್ಲಿ ಪಿತ್ತರಸ ಆ್ಯಸಿಡಿಟಿ (Acidity), ಉದರ ಸಂಬಂಧಿತ ಕಾಯಿಲೆಗಳು, ಮೂಳೆಗಳಿಗೆ ಸಂಬಂಧಿಸಿದ, ರೋಗ ನಿರೋಧಕ ಶಕ್ತಿಯ ಕೊರತೆ, ಕಣ್ಣಿನ (Eye) ಕಾಯಿಲೆಗಳು, ಹೃದಯಕ್ಕೆ ಸಂಬಂಧಿತ ರೋಗಗಳು ಬಾಧಿಸುತ್ತವೆ.

ಚಂದ್ರ ಗ್ರಹ (Moon)
ಚಂದ್ರ ಗ್ರಹದ ಸ್ಥಿತಿ  ಚೆನ್ನಾಗಿಲ್ಲದಿದ್ದರೆ  ಮಾನಸಿಕ ಅಸ್ವಸ್ಥತೆ (Mental problem), ಎದೆಗೆ ಸಂಬಂಧಿತ ಕಾಯಿಲೆಗಳು, ಪುರುಷರ ಎಡಗಣ್ಣು, ಹಾಗೂ ಮಹಿಳೆಯರ ಬಲಗಣ್ಣು ಸಮಸ್ಯೆ, ಶ್ವಾಸಕೋಶ, ರಕ್ತ ಹೀನತೆ, ಬಾಯಿಗೆ ಸಂಬಂಧಪಟ್ಟ ಕಾಯಿಲೆಗಳು, ರಕ್ತಸ್ರಾವ, ಗರ್ಭಾಶಯ, ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ, ಚರ್ಮ ಸಂಬಂಧಿತ ಕಾಯಿಲೆಗಳು ತೊಂದರೆಯನ್ನುಂಟು ಮಾಡುತ್ತವೆ. ಅಷ್ಟೇ ಅಲ್ಲದೆ ಸದಾ ಕಾಯಿಲೆಗಳು ಬಾಧಿಸುತ್ತಲೇ ಇರುತ್ತವೆ.

ಇದನ್ನು ಓದಿ: ಈ ಸಂಕೇತಗಳು ಸಿಕ್ಕಿದ್ರೆ ಶುಭದ ಸೂಚನೆ ಎಂದು ತಿಳಿಯಿರಿ!

ಮಂಗಳ ಗ್ರಹ (Mars)
ಮಂಗಳ ಗ್ರಹ ಸ್ಥಿತಿ ನೀಚವಾಗಿದ್ದರೆ ಪಿತ್ತ ಜ್ವರ, ಬಾಯಾರಿಕೆ, ಪ್ರಾಣಿಗಳಿಂದ ಕಡಿತ, ಅಪಘಾತ, ರಕ್ತದೊತ್ತಡ, ಗರ್ಭಪಾತ, ರಕ್ತಸ್ರಾವ, ಮಾನಸಿಕ ವಿಕೋಪ, ಮಲಬದ್ಧತೆ, ತುರಿಕೆ, ಗಡ್ಡೆ ಬೆಳೆಯುವಿಕೆ, ಪಾರ್ಶ್ವವಾಯು (Stroke), ನೋವುಗಳು  ಮುಂತಾದ ಅನೇಕ ಸಮಸ್ಯೆಗಳು ಕಾಡುತ್ತವೆ.

ಬುಧ ಗ್ರಹ (Mercury)
ಬುಧಗ್ರಹವು ಬುದ್ಧಿವಂತಿಕೆಯ ಕಾರಕ ಗ್ರಹವಾಗಿದೆ ಈ ಗ್ರಹದ ಸ್ಥಿತಿ ಉತ್ತಮವಾಗಿಲ್ಲವಾದರೆ, ಅತಿಯಾಗಿ ಬೆವರುವುದು, ನರದೌರ್ಬಲ್ಯ, ಕಿವುಡುತನ, ದುರ್ಬಲತೆ, ನಾಲಿಗೆ-ಬಾಯಿ-ಗಂಟಲು ಮತ್ತು ಮೂಗಿಗೆ ಸಂಬಂಧಿಸಿದ ಕಾಯಿಲೆಗಳು, ಚರ್ಮರೋಗ (Skin problem), ಮೆದುಳು ಮತ್ತು ನರ ಅಸ್ವಸ್ಥತೆ, ಅಸ್ತಮಾ, ಉಸಿರಾಟದಲ್ಲಿ ತೊಂದರೆ ಮುಂತಾದ ಸಮಸ್ಯೆಗಳು ಹೆಚ್ಚಾಗಿ ಬಾಧಿಸುತ್ತವೆ.

ಗುರು ಗ್ರಹ (Jupiter)
ಗುರು ಗ್ರಹವು ಅಶುಭ ಸ್ಥಿತಿಯಲ್ಲಿದ್ದರೆ ಅತಿಸಾರ, ನೆನಪಿನ ಶಕ್ತಿ ಕುಂದುವಿಕೆ, ಹಲ್ಲು ನೋವು, ಜ್ವರ (Fever), ಕಾಮಾಲೆ, ಯಕೃತ್ತಿನ ಕಾಯಿಲೆ, ಪಿತ್ತಕೋಶದ ತೊಂದರೆ, ರಕ್ತಹೀನತೆ, ನಿದ್ರಾಹೀನತೆ ಮುಂತಾದ ರೋಗಗಳಿಂದ ಬಳಲುವಂತಾಗುತ್ತದೆ.

ಶುಕ್ರ ಗ್ರಹ (Venus)
ಶುಕ್ರ ಗ್ರಹವು ಅಶುಭ ಸ್ಥಾನ ಮತ್ತು ಸ್ಥಿತಿಯಲ್ಲಿದ್ದರೆ ಮಧುಮೇಹ, ಪಿತ್ತಕೋಶ ಅಥವಾ ಮೂತ್ರಪಿಂಡದ ಕಲ್ಲುಗಳು (Kidney stone), ಮೂತ್ರನಾಳದಲ್ಲಿ ತೊಂದರೆ, ಕಣ್ಣಿನ ಪೊರೆಯಂಥ ಸಮಸ್ಯೆಗಳು ಕಂಡುಬರುತ್ತವೆ.

ಇದನ್ನು ಓದಿ: Chanakya Neeti: ಹೊರಗಿನವರಿಗೆ ಈ ವಿಷಯಗಳ ಬಾಯಿ ಬಿಟ್ಟರೆ ಕೆಟ್ಟಂತೆ!

ಶನಿ ಗ್ರಹ (Saturn)
ಕರ್ಮಕ್ಕೆ ತಕ್ಕ ಫಲ ನೀಡುವ ಶನಿ ಗ್ರಹದ  ಕೆಟ್ಟಕಣ್ಣು ಬಿದ್ದರೆ ಕಾಲು ನೋವು, ಕುಷ್ಠರೋಗ, ಪಾರ್ಶ್ವವಾಯು, ಸಂದಿವಾತ, ಅಸ್ತಮಾ, ಕ್ಷಯ, ಹುಚ್ಚುತನ, ಶೀತಪ್ರಕೃತಿ (Cold), ಆ್ಯಸಿಡಿಟಿ, ಕಿರಿಕಿರಿ, ದೀರ್ಘಕಾಲೀನ ರೋಗಗಳು ತೊಂದರೆಯನ್ನುಂಟು ಮಾಡುತ್ತವೆ.

ರಾಹು-ಕೇತು (Rahu - Ketu)
ರಾಹು ಮತ್ತು ಕೇತುವಿನ ಅಶುಭ ಪ್ರಭಾವದಿಂದ ಬಿಪಿ, ಅಶಾಂತಿ ಭಾವ, ಕೃತಕ ವಿಷದ ಭಯ, ಕಾಲು ನೋವು (Leg pain), ಅಶುಭ ಬುದ್ಧಿ, ಕುಷ್ಠರೋಗ, ಹಾವು ಕಡಿಯುವ ಭಯ ಉಂಟಾಗುತ್ತದೆ.

click me!