ಭಾರತೀಯ ಸಂಸ್ಕೃತಿಯಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ವಸ್ತ್ರ, ದೀಪ, ಅನ್ನ, ಹಾಲು ಸೇರಿದಂತೆ ವಿವಿಧ ವಸ್ತುಗಳನ್ನು ದಾನ ಮಾಡುವುದರಿಂದ ಸಿಗುವ ಫಲಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಹಾಲಿನ ದಾನದಿಂದ ರೋಗಮುಕ್ತ ಜೀವನ: ಯಾವ ದಾನದಿಂದ ಏನು ಫಲ ಇಲ್ಲಿದೆ ಮಾಹಿತಿ
ದಾನಕ್ಕೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಮಹತ್ವವಿದೆ. ಹಾಗೆಯೇ ಪ್ರಪಂಚದ ವಿವಿಧ ಮತ ಧರ್ಮಗಳು ಕೂಡ ದಾನಕ್ಕೆ ಬಹಳ ಮಹತ್ವ ನೀಡುತ್ತವೆ. ಮುಸಲ್ಮಾನರು ಪವಿತ್ರ ಮಾಸ ರಂಜಾನ್‌ನಲ್ಲಿ ಹಲವು ವಸ್ತುಗಳನ್ನು ದಾನ ಮಾಡುತ್ತಾರೆ ಹಾಗೆಯೇ ಹಿಂದೂಗಳು ಪೂಜೆ ಮದುವೆ ಇನ್ನಿತರ ಶುಭ ಸಮಾರಂಭಗಳಲ್ಲಿ ವಸ್ತ್ರ, ಹಣ್ಣು ಹಂಪಲು, ತುಪ್ಪ, ಅಕ್ಕಿ, ಹೀಗೆ ಹಲವು ವಿಧಗಳ ದಾನ ಮಾಡುತ್ತಾರೆ. ಪ್ರತಿಯೊಂದು ದಾನಕ್ಕು ಅದರದ್ದೇ ಆದ ಮಹತ್ವವಿದೆ. ಹಾಗಿದ್ರೆ ಯಾವ ವಸ್ತುಗಳನ್ನು ದಾನ ಮಾಡುವುದರಿಂದ ಯಾವ ಫಲ ದಾನ ಮಾಡಿದವನಿಗೆ ಸಿಗುವುದು ಎಂಬುದರ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳೋಣ.
ಮೊದಲಿಗೆ ವಸ್ತ್ರದಾನ:
ವಸ್ತ್ರದಾನ ಮಾಡುವುದರಿಂದ ದಾನ ಮಾಡುವ ವ್ಯಕ್ತಿಯ ವಯಸ್ಸು ಅಥವಾ ಆಯಸ್ಸು ಹೆಚ್ಚಾಗುತ್ತದೆ.
ದೀಪದಾನ:
ದೀಪ ದಾನ ಮಾಡುವುದರಿಂದ ಮನುಷ್ಯನ ಕಣ್ಣಿನ ದೃಷ್ಟಿ ಹೆಚ್ಚುತ್ತದೆ.
ಅನ್ನದಾನ:
ಒಬ್ಬ ವ್ಯಕ್ತಿ ಅನ್ನವನ್ನು ದಾನ ಮಾಡುವುದರಿಂದ ಆತ ಎಲ್ಲಿ ಬೇಕಾದರೂ ಸಂತೋಷವಾಗಿರಬಹುದು.
ವರ್ಷದ ಈ 5 ದಿನಗಳಲ್ಲಿ ದಾನ ಮಾಡಬೇಡಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ನಷ್ಟ ಪಕ್ಕಾ
ಹಾಲುದಾನ:
ಹಾಲನ್ನು ದಾನ ಮಾಡುವುದರಿಂದ ಒಬ್ಬ ವ್ಯಕ್ತಿಗೆ ರೋಗಮುಕ್ತವಾದ ಜೀವನ ಸಿಗುತ್ತದೆ.
ಶಿಕ್ಷಣ ದಾನ:
ಶಿಕ್ಷಣ ಯಾರು ಕದಿಯಲಾಗದ ಆಸ್ತಿ, ನಿಮಗೆ ತಿಳಿದಿರುವ ವಿದ್ಯೆ ಅಥವಾ ಶಿಕ್ಷಣವನ್ನು ಬೇರೆಯವರಿಗೆ ದಾನ ಮಾಡುವುದರಿಂದ ನಿಮ್ಮ ಮಕ್ಕಳು ಚೆನ್ನಾಗಿ ಬದುಕುತ್ತಾರೆ.
ಎಣ್ಣೆಯ ದಾನ:
ಎಣ್ಣೆಯನ್ನು ದಾನ ಮಾಡುವುದರಿಂದ ಮನುಷ್ಯನ ಸಾಲ ಕಡಿಮೆ ಆಗುತ್ತದೆ.
ತರಕಾರಿ ದಾನ:
ತರಕಾರಿ ದಾನ ಮಾಡುವುದರಿಂದ ಪಿತೃ ದೋಷಗಳು ನಿವಾರಣೆಯಾಗುತ್ತದೆ.
ಪಾದರಕ್ಷೆ ದಾನ:
ಪಾದರಕ್ಷೆ ದಾನ ಮಾಡುವುದರಿಂದ ನೀವು ತೀರ್ಥಯಾತ್ರೆಗೆ ಹೋಗುವ ಯೋಗವನ್ನು ಪಡೆಯುವಿರಿ.
ನೀರಿನ ದಾನ:
ಜೀವಾಮೃತವಾದ ನೀರನ್ನು ದಾನ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ತುಪ್ಪದ ದಾನ:
ತುಪ್ಪದ ದಾನ ಮಾಡುವುದರಿಂದ ನಿಮಗೆ ಮನೆ ಕಟ್ಟುವ ಯೋಗ ಬರುವುದು.
ತೆಂಗಿನಕಾಯಿ ದಾನ:
ತೆಂಗಿನಕಾಯಿ ದಾನ ಮಾಡುವುದರಿಂದ ನೀವು ಬಯಸಿದ ಕೆಲಸದಲ್ಲಿ ಯಶಸ್ಸು ಪಡೆಯುವಿರಿ.
ಚಿನ್ನದ ದಾನ:
ಚಿನ್ನದ ದಾನ ಮಾಡುವುದರಿಂದ ಕೋಟಿ ವರವನ್ನು ಪಡೆದ ಪುಣ್ಯ ಬರುವುದು.
ಗೋವಿನ ದಾನ:
ಹಿಂದೂ ಸಂಪ್ರದಾಯದಲ್ಲಿ ಗೋದಾನಕ್ಕೆ ಬಹಳ ಮಹತ್ವವಿದೆ. ಇದು ಮನುಷ್ಯನ ಪಾಪಗಳನ್ನು ನಿವಾರಿಸಿ ಮುಕ್ತಿ ಅಥವಾ ಮೋಕ್ಷ ನೀಡುವುದು ಎಂಬ ನಂಬಿಕೆ ಇದೆ. ದಾನ ಮಾಡಿದವನರ ಕುಟುಂಬಕ್ಕೆ ಸಮೃದ್ಧಿ ಮತ್ತು ಅದೃಷ್ಟವನ್ನು ತರುವುದು, ಅಪಾರ ಆಧ್ಯಾತ್ಮಿಕ ಮತ್ತು ಲೌಕಿಕ ಪ್ರಯೋಜನಗಳನ್ನು ನೀಡುವುದು.
ಮೇಲೆ ನೀಡಲಾಗಿರುವ ಮಾಹಿತಿ ಇಂಟರ್‌ನೆಟ್‌ನಲ್ಲಿ ಇರುವ ಮಾಹಿತಿ ಯಾಗಿದ್ದು, ಏಷ್ಯಾನೆಟ್ ಸುವರ್ಣನ್ಯೂಸ್ ಇದನ್ನು ಪುಷ್ಟೀಕರಿಸುವುದಿಲ್ಲ.
ಜೀವಿತಾವಧಿಯಲ್ಲಿ ಈ 5 ರೀತಿಯ ದಾನ ಮಾಡಿದರೆ ಮೋಕ್ಷ ಪ್ರಾಪ್ತಿ