Vijayapura: 5 ದಿನಗಳ ಕಾಲ ಬಸವೇಶ್ವರ ಜಾತ್ರಾ ಮಹೋತ್ಸವ

Published : Aug 15, 2022, 11:29 PM IST
Vijayapura: 5 ದಿನಗಳ ಕಾಲ ಬಸವೇಶ್ವರ ಜಾತ್ರಾ ಮಹೋತ್ಸವ

ಸಾರಾಂಶ

ಪಟ್ಟಣದ ಆರಾಧ್ಯದೈವ ಬಸವೇಶ್ವರ (ಮೂಲನಂದೀಶ್ವರ) ಜಾತ್ರಾಮಹೋತ್ಸವ ಆ.15 ರಿಂದ 19 ರವರೆಗೆ 5 ದಿನಗಳವರೆಗೆ ಸಡಗರ, ಸಂಭ್ರಮದಿಂದ ಜರುಗಲಿದೆ. ಕಳೆದೆರಡು ವರ್ಷ ಕೋವಿಡ್‌-19 ರೋಗದಿಂದಾಗಿ ಬಸವೇಶ್ವರ ಜಾತ್ರೆಯಲ್ಲಿ ಸಾಂಪ್ರದಾಯಿಕವಾಗಿ ಪಲ್ಲಕ್ಕಿ ಉತ್ಸವ ಮಾತ್ರ ಜರುಗಿತ್ತು.

ಬಸವರಾಜ ನಂದಿಹಾಳ

ಬಸವನಬಾಗೇವಾಡಿ (ಆ.15): ಪಟ್ಟಣದ ಆರಾಧ್ಯದೈವ ಬಸವೇಶ್ವರ (ಮೂಲನಂದೀಶ್ವರ) ಜಾತ್ರಾ ಮಹೋತ್ಸವ ಆ.15 ರಿಂದ 19 ರವರೆಗೆ 5 ದಿನಗಳವರೆಗೆ ಸಡಗರ, ಸಂಭ್ರಮದಿಂದ ಜರುಗಲಿದೆ. ಕಳೆದೆರಡು ವರ್ಷ ಕೋವಿಡ್‌-19 ರೋಗದಿಂದಾಗಿ ಬಸವೇಶ್ವರ ಜಾತ್ರೆಯಲ್ಲಿ ಸಾಂಪ್ರದಾಯಿಕವಾಗಿ ಪಲ್ಲಕ್ಕಿ ಉತ್ಸವ ಮಾತ್ರ ಜರುಗಿತ್ತು. ಈ ಸಲದ ಜಾತ್ರೆಯನ್ನು ಸಡಗರ, ಸಂಭ್ರಮದಿಂದ ಆಚರಣೆ ಮಾಡಲು ಕೂಡಲಸಂಗಮ ಅಭಿವೃದ್ಧಿ ಮಂಡಳಿ, ಜಾತ್ರಾ ಉತ್ಸವ ಸಮಿತಿ, ಸದ್ಭಕ್ತರು ನಿರ್ಧಾರ ಮಾಡಿರುವುದರಿಂದ ಜಾತ್ರೆಗೆ ಕ್ಷಣ ಗಣನೆಗೆ ಆರಂಭವಾಗಿದೆ. 

ಈಗಾಗಲೇ ಜಾತ್ರೆಯಂಗವಾಗಿ ಸ್ವಾಗತ ಕಮಾನು, ಸ್ವಾಗತ ಬ್ಯಾನರ್‌ ಕಟ್ಟಲಾಗಿದೆ. ಜಾತ್ರೆಯಂಗವಾಗಿ ನಡೆಯುವ ದಾಸೋಹಕ್ಕಾಗಿ ಅಪಾರ ಪ್ರಮಾಣದಲ್ಲಿ ಮಹಿಳೆಯರು ರೊಟ್ಟಿಯನ್ನು ನೀಡಿದ್ದಾರೆ. ದಾಸೋಹಕ್ಕೆ ಬೇಕಾದ ಸಕಲ ಸಿದ್ಧತೆ ನಡೆದಿದೆ. ಜಾತ್ರೆಯಂಗವಾಗಿ ಎರಡು ನಾಟಕ ಕಂಪನಿಗಳು, ವಿವಿಧ ಮನರಂಜನಾ ಆಟಗಳು, ವಿವಿಧ ಅಂಗಡಿ-ಮುಂಗಟ್ಟುಗಳನ್ನು ಹಾಕಲಾಗಿದೆ. ಶ್ರಾವಣ ಮಾಸದ ಆರಂಭವಾಗುತ್ತಿದ್ದಂತೆ ಬಸವೇಶ್ವರ ದೇವಸ್ಥಾನಕ್ಕೆ ಪ್ರತಿನಿತ್ಯ ಅಪಾರ ಪ್ರಮಾಣದ ಭಕ್ತರು ದೇವರ ದರ್ಶನಕ್ಕೆ ಆಗಮಿಸಿ ದೇವರಿಗೆ ರುದ್ರಾಭಿಷೇಕ, ವಿಶೇಷ ಪೂಜೆ ಮಾಡಿಸುತ್ತಿದ್ದಾರೆ. 

ಕಾಂಗ್ರೆಸ್‌ನವರು ಸಾಚಾ ಇದ್ದಾರಾ?: ಬಸನಗೌಡ ಪಾಟೀಲ ಯತ್ನಾಳ

ಶ್ರಾವಣ ಮಾಸದ ಸೋಮವಾರವಂತೂ ಹೆಚ್ಚು ಭಕ್ತರು ಕಂಡುಬರುತ್ತಾರೆ. ಪ್ರತಿನಿತ್ಯ ಭಕ್ತರು ದೇವಸ್ಥಾನದಲ್ಲಿ ದೀಡ್‌ ನಮಸ್ಕಾರ ಸೇರಿದಂತೆ ವಿವಿಧ ಹರಕೆಗಳನ್ನು ಸಲ್ಲಿಸುತ್ತಾರೆ. ಈಗಾಗಲೇ ಜಾತ್ರೆಯ ಹಿನ್ನೆಲೆಯಲ್ಲಿ ಬಸವೇಶ್ವರ ದೇವಸ್ಥಾನ, ಬಸವೇಶ್ವರ ವೃತ್ತ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನವು ಕೇಸರಿ, ಬಿಳಿ, ಹಸಿರು ಬಣ್ಣಗಳ ವಿದ್ಯುತ್‌ ದೀಪದಂಲಕಾರದಲ್ಲಿ ಕಂಗೊಳಿಸುತ್ತಿದೆ.

ಆ.15 ರಂದು ಬೆಳಗ್ಗೆ ಮೂಲನಂದೀಶ್ವನಿಗೆ ವಿಶೇಷ ಪೂಜೆ ನೆರವೇರಿದ ನಂತರ 9.30 ಗಂಟೆಗೆ ಬಸವೇಶ್ವರ ದೇವಾಲಯದಿಂದ ಸಕಲ ವಾದ್ಯವೈಭವಗಳಿಂದ ವಿರಕ್ತಮಠಕ್ಕೆ ತೆರಳಿ ಪೂಜ್ಯರಾದ ಮುರುಗೇಂದ್ರ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ ಅವರನ್ನು ದೇವಾಲಯಕ್ಕೆ ಬರಮಾಡಿಕೊಳ್ಳವುದು. 10 ಗಂಟೆಗೆ ಸರ್ವ ಅಲಂಕೃತ ಉತ್ಸವ ನಂದಿ ಮೂರ್ತಿಯನ್ನು ನೂತನ ಬೆಳ್ಳಿ ಪಲ್ಲಕ್ಕಿಯೊಂದಿಗೆ ದೇವಾಲಯದಿಂದ ಸಕಲ ವಾದ್ಯವೈಭವಗಳೊಂದಿಗೆ ಭವ್ಯ ಮೆರವಣಿಗೆಯೊಂದಿಗೆ ಐತಿಹಾಸಿಕ ಹೋರಿಮಟ್ಟಿಗುಡ್ಡಕ್ಕೆ ದರ್ಶನ ನೀಡಿ ಈ ವರ್ಷದ ನುಡಿ ಹೇಳುವ ಕಾರ್ಯಕ್ರಮ ಜರುಗಲಿದೆ. 

ಗುಮ್ಮಟ ನಗರಿಯಲ್ಲಿ ತಿರಂಗಾ ರಂಗು: ಎತ್ತೆತ್ತ ನೋಡಿದರೆತ್ತ ತ್ರಿವರ್ಣ ಧ್ವಜದ ಹಾರಾಟ

ಸಂಜೆ 7 ಗಂಟೆಗೆ ಕಂಬಿ ಕಟ್ಟಿಗೆ ಆಗಮಿಸಿದ ಪಲ್ಲಕ್ಕಿಯನ್ನು ಸಕಲ ವಾದ್ಯವೈಭವದ ಆನೆ ಅಂಬಾರಿ ವೈಭವದೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಗುವದು. ಬಸವೇಶ್ವರ ದೇವಾಲಯ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಆಕರ್ಷಕ ಮನಮೋಹಕ ಸಿಡ್ಡಿಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10 ಗಂಟೆಯಿಂದ ದೇವಾಲಯದ ಆವರಣದಲ್ಲಿ ಪಲ್ಲಕ್ಕಿ ಉತ್ಸವ ಜರುಗಲಿದೆ. ಆ.16 ರಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ, ಕಸರತ್ತಿನ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ