
ನೂರಾರು ವರ್ಷಗಳ ಹಿಂದೆ ಬಾಬಾ ವಂಗಾ ಎಂಬ ಭವಿಷ್ಯಗಾರ್ತಿ ನೀಡಿದ ಕಟು ಎಚ್ಚರಿಕೆ ಈಗ ಮತ್ತೊಮ್ಮೆ ಸಾರ್ವಜನಿಕರ ಗಮನಕ್ಕೆ ಬರುತ್ತಿದೆ. ಈಕೆ ಕಣ್ಣುಗಳು ಕಾಣದಿದ್ದರೂ ಅತೀಂದ್ರಿಯ ದೃಷ್ಟಿ ಹೊಂದಿದ್ದ ಬಲ್ಗೇರಿಯನ್ ಭವಿಷ್ಯವಾದಿ. 9/11 ಮತ್ತು COVID-19 ಸಾಂಕ್ರಾಮಿಕ ರೋಗದಂತಹ ಜಾಗತಿಕ ಘಟನೆಗಳನ್ನು ಮೊದಲೇ ಊಹಿಸಿದ್ದ ಈಕೆ ಭಾರತ- ಪಾಕಿಸ್ತಾನ ಯುದ್ಧವನ್ನೂ ಸೂಚಿಸಿದಂತೆ ಇದೆ. ಅದು ಹೇಗೆ ಎಂದು ನೋಡೋಣ.
ಈಕೆ ಹೇಳಿದಂತೆ 2025ರಲ್ಲಿ ಒಂದು ಮಹಾ ಯುದ್ಧ ನಡೆಯಲಿದೆ. ಅದು ಎರಡು ಖಂಡಗಳ ಜನಸಂಖ್ಯೆಯನ್ನು ಧ್ವಂಸಗೊಳಿಸುತ್ತದೆ ಎಂದಿದ್ದಾಳೆ. ಅದು ಬಹುಶಃ ಏಷ್ಯಾ ಹಾಗೂ ಯುರೋಪ್ ಖಂಡಗಳಿರಬಹುದು. ಇವುಗಳ ಅಡಿಪಾಯವನ್ನೇ ಅಲುಗಾಡಿಸುವ ಸಂಘರ್ಷದ ಬಗ್ಗೆ ವಂಗಾ ಎಚ್ಚರಿಸಿದ್ದಾರೆ. ಅದು ಯಾವ ದೇಶಗಳ ನಡುವೆ ಎಂಬುದು ಅಸ್ಪಷ್ಟವಾಗಿದೆ. ರಷ್ಯಾ- ಉಕ್ರೇನ್ ನಡುವಿನ ಯುದ್ಧ ಉಲ್ಬಣಿಸಲೂಬಹುದು. ಆದರೆ ಪ್ರಸ್ತುತ ಯುದ್ಧಭೀತಿ ಉಂಟಾಗಿರುವುದು ಭಾರತ- ಪಾಕಿಸ್ತಾನ ನಡುವೆ. ಇಸ್ಲಾಮಿಕ್ ಉಗ್ರಗಾಮಿಗಳು ಪಾಕ್ ನೆರವಿನಿಂದಾಗಿ ಹೆಚ್ಚಿಕೊಂಡಿದ್ದಾರೆ. ಇಸ್ಲಾಮಿಕ್ ಉಗ್ರರ ಕೈಗೆ ಅಣುಬಾಂಬ್ ಸಿಕ್ಕಿದರೆ ಜಗತ್ತಿನ ಕತೆ ಮುಗಿದಂತೆ. ಇವರಿಗೆ ಅಣುಬಾಂಬ್ ಸಿಗುವುದು ಹೇಗೆ? ಸದ್ಯ ಅಣುಬಾಂಬ್ ಹೊಂದಿರುವ ಇಸ್ಲಾಮಿಕ್ ದೇಶ ಎಂದರೆ ಪಾಕಿಸ್ತಾನ. ಅಂದರೆ ಅದು ಪಾಕ್ ಮೂಲಕವೇ ಸಿಗಬೇಕು. ಪಾಕಿಸ್ತಾನ- ಭಾರತ ನಡುವಿನ ಉದ್ವಿಗ್ನತೆಯಿಂದಾಗಿ ಯುದ್ಧ ಅದರೆ ಆಶ್ಚರ್ಯವೇನೂ ಅಲ್ಲ.
ಯುದ್ಧದ ಎಚ್ಚರಿಕೆಯ ಜೊತೆಗೆ, ವಂಗಾ 2025 ರಲ್ಲಿ ವಿಶ್ವಾದ್ಯಂತ ಆರ್ಥಿಕ ವಿಪತ್ತನ್ನು ಮುನ್ಸೂಚಿಸಿದರು. ಅವರ ದೃಷ್ಟಿಕೋನಗಳ ಪ್ರಕಾರ, ಹಣಕಾಸು ವ್ಯವಸ್ಥೆಗಳು ಅವ್ಯವಸ್ಥೆಯಾಗುತ್ತವೆ. ಇದು ಪ್ರಪಂಚದಾದ್ಯಂತ ರಾಷ್ಟ್ರಗಳ ಮೇಲೆ ಪರಿಣಾಮ ಬೀರುತ್ತದೆ. ಇತ್ತೀಚಿನ ಘಟನೆಗಳು ಇದನ್ನು ಸಾಬೀತುಪಡಿಸಿವೆ. ಏಪ್ರಿಲ್ 9 ರಂದು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಹೊಸ ಸುಂಕಗಳಿಂದ ಮಾರುಕಟ್ಟೆಗಳು ತತ್ತರಿಸಿದವು. ಹಲವಾರು ರಾಷ್ಟ್ರಗಳ ಮೇಲೆ ಶೇಕಡಾ 10 ರಿಂದ 50 ರಷ್ಟು ಸುಂಕವಿದ್ದು, ಚೀನಾ ಶೇ 145 ರಷ್ಟು ಸುಂಕ ವಿಧಿಸಿದೆ. ಇದರ ಈ ಆಘಾತಕಾರಿ ಅಲೆಗಳು ಜಾಗತಿಕ ಮಟ್ಟದಲ್ಲಿವೆ. ಬಾಬಾ ವಂಗಾ ಅವರ ಮುನ್ಸೂಚನೆಗೆ ಅನುಗುಣವಾಗಿ, ಅನೇಕ ಅರ್ಥಶಾಸ್ತ್ರಜ್ಞರು ಈಗ ಮುಂಬರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಎಚ್ಚರಿಸಿದ್ದಾರೆ.
ಏತನ್ಮಧ್ಯೆ, ಅವರು ಊಹಿಸಿದ ನೈಸರ್ಗಿಕ ವಿಕೋಪಗಳು ಈಗಾಗಲೇ ಜಾರಿಯಲ್ಲಿವೆ. ಅವರು ಭೂಕಂಪಗಳ ಬಗ್ಗೆ ನುಡಿದಿದ್ದರು. ಮಾರ್ಚ್ 28 ರಂದು ಮ್ಯಾನ್ಮಾರ್‌ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, 1,700 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ದೇಶದ ಮಿಲಿಟರಿ ನೇತೃತ್ವದ ಸರ್ಕಾರ ತಿಳಿಸಿದೆ. ನೆರೆಯ ಥೈಲ್ಯಾಂಡ್‌ನಲ್ಲಿ, ಹಲವಾರು ನಿರ್ಮಾಣ ಸ್ಥಳಗಳಲ್ಲಿ ಕನಿಷ್ಠ 10 ಸಾವುಗಳು ಮತ್ತು 100 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. ದ್ವೀಪ ರಾಷ್ಟ್ರವಾದ ಟೋಂಗಾದಲ್ಲಿ 7.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ. ಈ ಘಟನೆಗಳು ವಂಗಾ ಅವರ ಕರಾಳ ಕಾಲಜ್ಞಾನಕ್ಕೆ ಅರ್ಥ ತಂದಿವೆ.
1911ರಲ್ಲಿ ಜನಿಸಿದ ಬಾಬಾ ವಂಗಾ 12ನೇ ವಯಸ್ಸಿನಲ್ಲಿ ಚಂಡಮಾರುತದ ಸಮಯದಲ್ಲಿ ದೃಷ್ಟಿ ಕಳೆದುಕೊಂಡರು. ಈ ಘಟನೆಯು ಭವಿಷ್ಯವನ್ನು ನೋಡುವ ತನ್ನ ಸಾಮರ್ಥ್ಯವನ್ನು ಸೃಷ್ಟಿಸಿದೆ ಎಂದು ಅವರು ನಂತರ ಹೇಳಿಕೊಂಡರು. ಅವರ ಭವಿಷ್ಯವಾಣಿಗಳು ಅವರಿಗೆ ಅನುಯಾಯಿಗಳನ್ನು ಗಳಿಸಿದವು. ಅವರ ಅನೇಕ ಮುನ್ನೋಟಗಳು ನಿಖರವಾಗಿ ಸಾಬೀತಾಗಿವೆ.
ನಿಜವಾದ ಭವಿಷ್ಯವಾಣಿಗಳು
ಯುಎಸ್‌ನಲ್ಲಿ 9/11 ಭಯೋತ್ಪಾದಕ ದಾಳಿಗಳು
1997 ರಲ್ಲಿ ರಾಜಕುಮಾರಿ ಡಯಾನಾ ಸಾವು
COVID-19 ಸಾಂಕ್ರಾಮಿಕ
ಜಾಗತಿಕ ಸೂಪರ್ ಪವರ್ ಆಗಿ ಚೀನಾದ ಏರಿಕೆ
ಪಾಕಿಸ್ತಾನದ ಮೇಲೆ ಭಾರತ ಯುದ್ಧ: ಕೋಡಿಶ್ರೀ ಹೇಳಿದ್ದೇನು?
ಇನ್ನು ಮುಂದಿನ ಭವಿಷ್ಯವಾಣಿಗಳು
2028: ಮಾನವರು ಹೊಸ ಶಕ್ತಿ ಮೂಲವಾಗಿ ಶುಕ್ರವನ್ನು ಅನ್ವೇಷಿಸಲು ಪ್ರಾರಂಭಿಸುತ್ತಾರೆ.
2033: ಧ್ರುವೀಯ ಮಂಜುಗಡ್ಡೆಗಳು ಕರಗುತ್ತವೆ, ಇದರಿಂದಾಗಿ ಸಮುದ್ರ ಮಟ್ಟ ತೀವ್ರವಾಗಿ ಏರುತ್ತದೆ.
2076: ಕಮ್ಯುನಿಸಂ ಜಾಗತಿಕವಾಗಿ ಹರಡುತ್ತದೆ.
2130: ಮಾನವರು ಅನ್ಯಲೋಕದವರೊಂದಿಗೆ ಸಂಪರ್ಕಕ್ಕೆ ಬರುತ್ತಾರೆ.
2170: ಜಾಗತಿಕ ಬರಗಾಲವು ಜನಸಂಖ್ಯೆಯನ್ನು ಧ್ವಂಸಗೊಳಿಸುತ್ತದೆ.
3005: ಭೂಮಿಯು ಮಂಗಳ ನಾಗರಿಕತೆಯೊಂದಿಗೆ ಯುದ್ಧಕ್ಕೆ ಹೋಗುತ್ತದೆ.
5079: ಜಗತ್ತು ಕೊನೆಗೊಳ್ಳುತ್ತದೆ.
Chanakya Niti: ಅಕಾಲ ವೃದ್ಧಾಪ್ಯಕ್ಕೆ ಚಾಣಕ್ಯನ ಪ್ರಕಾರ ಇದೇ ಕಾರಣಗಳು!