ಈ ಎರಡು ರಾಶಿಗಳ ಕಾಂಬಿನೇಷನ್​ ಸೂಪರೋ ಸೂಪರ್​: ಈ ನಟರೇ ಸಾಕ್ಷಿ ನೋಡಿ!

Published : Apr 30, 2025, 05:48 PM ISTUpdated : May 02, 2025, 12:29 PM IST
ಈ ಎರಡು ರಾಶಿಗಳ ಕಾಂಬಿನೇಷನ್​ ಸೂಪರೋ ಸೂಪರ್​: ಈ ನಟರೇ ಸಾಕ್ಷಿ ನೋಡಿ!

ಸಾರಾಂಶ

ಜ್ಯೋತಿಷ್ಯದ ಪ್ರಕಾರ, ರಾಶಿಗಳ ಹೊಂದಾಣಿಕೆ ಮದುವೆ, ವ್ಯಾಪಾರ ಹಾಗೂ ಇತರ ಸಹಭಾಗಿತ್ವಗಳ ಯಶಸ್ಸಿಗೆ ಮುಖ್ಯ. ಮೇಷ-ಕುಂಭ, ವೃಷಭ-ವೃಶ್ಚಿಕ, ಮಿಥುನ-ತುಲಾ, ಕಟಕ-ವೃಶ್ಚಿಕ, ಸಿಂಹ-ಧನು, ಕನ್ಯಾ-ಮಕರ ರಾಶಿಗಳು ಪರಸ್ಪರ ಪೂರಕ ಗುಣಗಳಿಂದ ಸೂಕ್ತ ಜೋಡಿಗಳನ್ನು ರೂಪಿಸುತ್ತವೆ. ಚಿತ್ರರಂಗದ ಉದಾಹರಣೆಗಳೊಂದಿಗೆ ಈ ರಾಶಿಗಳ ಹೊಂದಾಣಿಕೆಯನ್ನು ವಿವರಿಸಲಾಗಿದೆ.

ಸ್ವರ್ಗದಲ್ಲಿಯೇ ಮದುವೆ ನಿಶ್ಚಯವಾಗಿದ್ದರೂ, ಒಂದೊಂದು ರಾಶಿಯ ಮಹಿಳೆಯರಿಗೆ ಒಂದೊಂದು ರಾಶಿಯ ಪುರುಷರು ಪರ್ಫೆಕ್ಟ್​ ಮ್ಯಾಚ್​ ಆಗುತ್ತಾರೆ ಎನ್ನುತ್ತದೆ ಜ್ಯೋತಿಷ ಶಾಸ್ತ್ರ. ಈ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ಸಲಹೆ ನೀಡಿದರೂ ಇಲ್ಲಿ ಸಾಮಾನ್ಯವಾಗಿ ಯಾವ ರಾಶಿಯ ಮಹಿಳೆ ಮತ್ತು ಪುರುಷರು ಮ್ಯಾಚ್​ ಆಗುತ್ತಾರೆ ಎಂಬ ಬಗ್ಗೆ ವಿವರಿಸಲಾಗಿದೆ. ಇದು ಮದುವೆಗೆ ಮಾತ್ರವಲ್ಲದೇ ಪಾರ್ಟನರ್​ಷಿಪ್​ನಲ್ಲಿ ವ್ಯಾಪಾರ- ವಹಿವಾಟು ನಡೆಸಲು, ಚಿತ್ರಗಳಲ್ಲಿ ಯಶಸ್ಸು ಸಾಧಿಸಲು ಹೀಗೆ ಹಲವಾರು ಕಡೆಗಳಲ್ಲಿ ಇಬ್ಬರಿಬ್ಬರ ಹೊಂದಾಣಿಕೆ ಸೂಕ್ತ ಎನ್ನಿಸುತ್ತದೆ ಹಾಗೂ ಯಶಸ್ಸು ಗಳಿಸುತ್ತದೆ. ಇದೇ ವೇಳೆ ಸಿನಿ ತಾರೆಯರು ಹಾಗೂ ಅವರು ನಟಿಸಿದ ಚಿತ್ರಗಳ ವಿವರಣೆಯನ್ನೂ ನೀಡಲಾಗಿದೆ. 

ಅಂದಹಾಗೆ, ಜ್ಯೋತಿಷ ಶಾಸ್ತ್ರವನ್ನು ಜ್ಯೋತಿಷ ವಿಜ್ಞಾನ ಎಂದೂ ಕರೆಯುವವರು. ಇದು ಕೂಡ ಒಂದು ರೀತಿಯ ವಿಜ್ಞಾನವೇ. ಆದರೆ ಇಂದು ನಕಲಿ ಜ್ಯೋತಿಷಿಗಳು ಹೆಚ್ಚಾಗಿರುವ ಕಾರಣದಿಂದ ಇದಕ್ಕೂ ಈಗ ಬೆಲೆ ಇಲ್ಲದಾಗಿದೆ. ಆದರೆ ಅಸಲಿಗೆ ಜ್ಯೋತಿಷಾಸ್ತ್ರದ ಪ್ರಕಾರ, ಒಂದೊಂದು ರಾಶಿ, ಆ ರಾಶಿಯಲ್ಲಿನ ನಕ್ಷತ್ರಗಳಿಗೆ ಅದರದ್ದೇ ಆದ ಭಿನ್ನ ರೀತಿಯ ಗುಣಗಳು ಇರುತ್ತವೆ. ರಾಶಿ ಒಂದೇ ಆದರೂ ಇಬ್ಬರು ವ್ಯಕ್ತಿಗಳಲ್ಲಿ ವಿಭಿನ್ನ ಗುಣ ಕಾಣಬಹುದು. ಅದು ಹೇಗೆ ಸಾಧ್ಯ ಎಂದು ಎನ್ನಿಸಲೂ ಬಹುದು. ಅದೇ ರೀತಿ ನಕ್ಷತ್ರ ಒಂದೇ ಆಗಿದ್ದರೂ ಕೆಲವೊಮ್ಮೆ ಇಬ್ಬರ ಸ್ವಭಾವ, ಇಷ್ಟಾನಿಷ್ಟಗಳಲ್ಲಿ ವ್ಯತ್ಯಾಸ ಇರುತ್ತದೆ.ಆ ಸಂದರ್ಭದಲ್ಲಿ ಅದು ಆ ನಕ್ಷತ್ರಗಳ ಪಾದಗಳ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಇಲ್ಲಿ ರಾಶಿಯ ಮೇಲೆ ಮ್ಯಾಚ್​ ಮೇಕಿಂಗ್​ ಬಗ್ಗೆ ವಿವರಿಸಲಾಗಿದೆ. ಇಲ್ಲಿ ಕೊಟ್ಟಿರುವ ಚಿತ್ರ ನಟ-ನಟಿಯರು ಒಟ್ಟಾಗಿ ನಟಿಸಿರುವ ಚಿತ್ರಗಳು ಸೂಪರ್​ಹಿಟ್​ ಆಗಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಈ 6 ನಕ್ಷತ್ರಗಳ ಯುವತಿಯರ ಮದ್ವೆಯಾದ್ರೆ ಯಶಸ್ಸು, ಸಂಪತ್ತು ವೃದ್ಧಿ ಕಟ್ಟಿಟ್ಟದ್ದೇ!

 
ಮೇಷ ರಾಶಿಯ ಮಹಿಳೆಗೆ ಕುಂಭ ರಾಶಿ ಪುರುಷ ( ಗೀತ್ ಮತ್ತು ಆದಿತ್ಯ – ಜಬ್ ವಿ ಮೆಟ್ ಚಿತ್ರ). ಈ ಎರಡು ರಾಶಿಯಗಳು ಸೇರಿದರೆ ಚಿಂತನಶೀಲರಾಗಿರುತ್ತಾರೆ ಹಾಗೂ ಇವರಿಬ್ಬರ ಸಂಯೋಜನೆ ಸೂಕ್ತವಾಗಿರುತ್ತದೆ. 
 
ವೃಷಭ ರಾಶಿ ಮಹಿಳೆಗೆ ವೃಶ್ಚಿಕ ರಾಶಿಯ ಪುರುಷ (ಡಿಂಪಲ್ ಮತ್ತು ವಿಕ್ರಮ್ – ಶೇರ್ಷಾ). ಈ ಇಬ್ಬರ ಕಾಂಬಿನೇಷನ್​ ಇದ್ದರೆ ಅವರು  ಬಲವಾದ ಇಚ್ಛಾಶಕ್ತಿಯುಳ್ಳವರು, ಅಪಾರ  ಕಾಳಜಿಯುಳ್ಳವರು ಇರುತ್ತಾರೆ. ಹಾಗೂ ಪರಸ್ಪರ  ನಿಷ್ಠಾವಂತರು, ಪ್ರೀತಿಯಲ್ಲಿ ಸದಾ ಇರುವವರು ಆಗಿರುತ್ತಾರೆ. 

ಮಿಥುನ ಮಹಿಳೆ ಮತ್ತು ತುಲಾ ಪುರುಷ ( ತಿನ್ನಿ ಮತ್ತು ಮಿಕ್ಕಿ – ತೂ ಜೂಟಿ ಮೈ ಮಕ್ಕಾರ್​). ಈ ಜೋಡಿ ಸದಾ ಲವಲವಿಕೆಯಿಂದ ಇರುತ್ತದೆ. ಇವರು ಭಾವೋದ್ರಿಕ್ತರು, ಫ್ಲರ್ಟ್​ ಮಾಡುವವರು ಆಗಿದ್ದರೂ, ಸದಾ ಖುಷಿಯಾಗಿ ಇರುತ್ತಾರೆ.
 
ಕಟಕ ಮಹಿಳೆ ಮತ್ತು ವೃಶ್ಚಿಕ ಪುರುಷರು (ಪ್ರೀತಿ ಮತ್ತು ಕಬೀರ್ – ಕಬೀರ್ ಸಿಂಗ್). ಈ ಜೋಡಿ ಸಕತ್​ ಜಂಟಲ್​ಮನ್​ಗಳಾಗಿ ಇರುತ್ತಾರೆ. ಪ್ರೀತಿಯ ಬಿರುಗಾಳಿ ಜೋರಾಗಿಯೇ ಇರುತ್ತದೆ. 

ಸಿಂಹ ರಾಶಿಯ ಮಹಿಳೆ ಮತ್ತು ಧನು ರಾಶಿ ಪುರುಷ (ಮೀರಾ ಮತ್ತು ರಾಜ್ – ದಿಲ್​ವಾಲೆ); ಇವರಿಬ್ಬರು ನಿರ್ಭೀತಿಯಿಂದಲೂ ಇರುತ್ತಾರೆ.  ಆಳವಾದ ನಿಷ್ಠಾವಂತ ಪ್ರೀತಿಯನ್ನು ತೋರಿಸುತ್ತಾರೆ. 


ಕನ್ಯಾರಾಶಿ ಮಹಿಳೆ ಮತ್ತು  ಮಕರ ರಾಶಿ ಪುರುಷ (ಅಲಿಜೆ ಮತ್ತು ಅಯಾನ್ – ಏ ದಿಲ್ ಹೈ ಮುಷ್ಕಿಲ್); ಇವರಿಬ್ಬರು ಪ್ರಾಕ್ಟಿಕಲ್​ ಆಗಿರುತ್ತಾರೆ ಜೊತೆಗೆ ತಾಳ್ಮೆಯೂ ಹೆಚ್ಚು. ಪರಸ್ಪರ ಸಪೋರ್ಟಿವ್​ ಆಗಿದ್ದು, ಪ್ರೀತಿಯಲ್ಲಿ ಎಮೋಷನಲ್​ ಕೂಡ ಆಗಿರುತ್ತಾರೆ.

ಈ ದಿನಾಂಕದಂದು ಹುಟ್ಟಿದವರಿಗೆ ಎರಡು ಮದುವೆ ಇಲ್ಲವೇ ಮತ್ತೊಂದು ಸಂಬಂಧ ಹೆಚ್ಚು! ಯಾವುದದು ಸಂಖ್ಯೆ?

PREV
Read more Articles on
click me!

Recommended Stories

ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ
ವೃಶ್ಚಿಕ ರಾಶಿಯಲ್ಲಿ ಲಕ್ಷ್ಮಿ ಯೋಗ ಆರಂಭ, ಅದೃಷ್ಟ ಈ 6 ರಾಶಿಗೆ