Mistakes In Daily Pooja: ದೇವರ ಪೂಜೆಯಲ್ಲಿ ನೀವು ಮಾಡುತ್ತಿರಬಹುದಾದ 12 ತಪ್ಪುಗಳು..

By Suvarna NewsFirst Published Jan 12, 2022, 5:56 PM IST
Highlights

ಪೂಜೆ ಮಾಡುವಾಗ ದೇವರ ಅನುಗ್ರಹಕ್ಕೆ ಪಾತ್ರವಾಗುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ, ಪೂಜೆ ಮಾಡುವಾಗ ಆಗಬಹುದಾದ ತಪ್ಪುಗಳಿಂದ ಅಶುಭಗಳಾಗಬಹುದು. ನೀವು ಕೂಡಾ ಇಂಥ ತಪ್ಪನ್ನು ಮಾಡುತ್ತಿದ್ದೀರಾ ನೋಡಿ.

ಪ್ರತಿ ದಿನ ಎಲ್ಲರ ಮನೆಯಲ್ಲೂ ಪೂಜೆ(puja)ಗಳನ್ನು ಮಾಡುತ್ತೇವೆ. ಆದರೆ, ಬಹುತೇಕರು ಹೆಚ್ಚು ತಲೆ ಕೆಡಿಸಿಕೊಳ್ಳದೆ ಬಂದ ಮಂತ್ರ ಹೇಳಿ, ಹೂವೇರಿಸಿ, ಊದುಬತ್ತಿ ಹಚ್ಚಿ ಆರತಿ ಬೆಳಗಿ ಪೂಜೆ ಮುಗಿಸುತ್ತಾರೆ. ಪೂಜೆಗೂ ಸಿಕ್ಕಾಪಟ್ಟೆ ನಿಯಮಗಳಿವೆ. ಕೇವಲ ಪೂಜೆಗಲ್ಲ, ಒಬ್ಬೊಬ್ಬ ದೇವರಿಗೆ ಒಂದೊಂದು ರೀತಿ ನಡೆದುಕೊಳ್ಳಬೇಕು, ಒಂದೊಂದು ರೀತಿ ಪೂಜಿಸಬೇಕು. ಅದು ಗೊತ್ತಿಲ್ಲದೆ, ನಾವು ಮಾಡುತ್ತಿರಬಹುದಾದ ತಪ್ಪುಗಳಿಂದ ದೇವರನ್ನು ಒಲಿಸಿಕೊಳ್ಳುವ ಬದಲು ಅವರ ಅವಕೃಪೆಗೆ ಪಾತ್ರರಾಗುತ್ತಿರಬಹುದು. ಹಾಗಾಗಿ, ಪೂಜಾ ಸಂದರ್ಭದಲ್ಲಿ ಮಾಡಬಾರದ ತಪ್ಪುಗಳು ಯಾವುದೆಲ್ಲ ನೋಡೋಣ. 

1. ಊದುಬತ್ತಿ 

ಬಹುತೇಕ ಎಲ್ಲರೂ ಊದುಬತ್ತಿ ಹಚ್ಚುತ್ತಾರೆ. ಆದರೆ, ದೇವರಿಗೆ ಊದುಬತ್ತಿ ಹಚ್ಚುವುದು ಒಳ್ಳೆಯದಲ್ಲ. ಶಾಸ್ತ್ರಗಳಲ್ಲಿ ಧೂಪದ ಬಳಕೆ ಬಗ್ಗೆ ಹೇಳಲಾಗಿದೆಯೇ ಹೊರತು ಅಗರ್‌ಬತ್ತಿಯ ಬಗ್ಗೆಯಲ್ಲ. ಹಾಗಾಗಿ, ಧೂಪವನ್ನು ಹಚ್ಚಬೇಕು. ಸಾಮಾನ್ಯವಾಗಿ ಬಿದಿರಿನಿಂದ ಅಗರ್‌ಬತ್ತಿ ಕಡ್ಡಿ ತಯಾರಿಸಲಾಗುತ್ತದೆ. ಬಿದಿರು ಪೂಜೆಗೆ ಅಶುಭ ಎನ್ನುತ್ತದೆ ಶಾಸ್ತ್ರ. 

2. ಬಾಯಿ
ತಿಂಡಿ ತಿಂದು ಪೂಜೆ ಮಾಡುತ್ತಿರುತ್ತೀರಿ ಎಂದುಕೊಳ್ಳೋಣ. ಈರುಳ್ಳಿ, ಬೆಳ್ಳುಳ್ಳಿ ಮತ್ತಿತರೆ ಆಹಾರದಿಂದ ಬಾಯಿ ವಾಸನೆ ಬರುತ್ತಿರಬಹುದು. ಇಲ್ಲವೇ ತಂಬಾಕು ಅಗಿದು ಗಲೀಜಾಗಿರಬಹುದು. ಬಾಯಿ ವಾಸನೆ(foul-smelling mouth) ಇಟ್ಟುಕೊಂಡು ಮಂತ್ರ ಹೇಳಬಾರದು. ಯಾವಾಗಲೂ ಸ್ನಾನವಾದ ಕೂಡಲೇ ತಿಂಡಿಗೇ ಮೊದಲೇ ದೇವರಿಗೆ ಪೂಜೆ ಮಾಡಬೇಕು. ಬಾಯಿ ಸ್ವಚ್ಛವಾಗಿರಬೇಕು. 

3. ಬಟ್ಟೆ(cloth)
ಪೂಜೆ ಮಾಡುವಾಗ ಎಂದಿಗೂ ಹರಿದ ಅಥವಾ ಸ್ವಚ್ಛವಿಲ್ಲದ ಬಟ್ಟೆ ಧರಿಸಿರಕೂಡದು. ಹರಿದ ಬಟ್ಟೆ ಧರಿಸಿ ಪೂಜೆ ಮಾಡಿದರೆ ಬಡತನ ಬರುತ್ತದೆ. ಸ್ವಚ್ಛವಾದ ಹರಿಯದ ಬಟ್ಟೆ ಧರಿಸಬೇಕು. 

4. ತುಳಸಿ(Tulsi leaves)

ತುಳಸಿ ಪೂಜೆಗೆ ಬಹಳ ಒಳ್ಳೆಯದು ಎಂದು ಪ್ರತಿದಿನ ಅದನ್ನು ಹೂವಿನ ಬುಟ್ಟಿಯಲ್ಲಿ ತುಂಬಿಸಿ ತರುವುದೇನೋ ನಿಜ. ಆದರೆ ಗಣಪತಿಗೆ ನೀವದನ್ನು ಏರಿಸುತ್ತಿದ್ದರೆ ಮಾತ್ರ ಬಹಳ ತಪ್ಪು ಮಾಡುತ್ತಿದ್ದೀರಿ. ಏಕೆಂದರೆ, ತನ್ನ ಪೂಜೆಗೆ ತುಳಸಿಯನ್ನು ಕರೆ ತರಕೂಡದು ಎಂದು ಗಣಪತಿ ಆಕೆಗೆ ಶಾಪ ಕೊಟ್ಟಿದ್ದ. ಅಲ್ಲದೆ, ಭೈರವನಿಗೆ ಕೂಡಾ ತುಳಸಿ ಆಗಿ ಬರೋಲ್ಲ. 

5. ತುಳಸಿಗೂ ನಿಯಮ
ತುಳಸಿ ಎಲೆಯನ್ನು ಸ್ನಾನ ಮಾಡದೇ ಗಿಡದಿಂದ ಕೊಯ್ಯುವಂತಿಲ್ಲ. ಇದರಿಂದ ತುಳಸಿ ದೇವಿ ಮುನಿಯುವುದಷ್ಟೇ ಅಲ್ಲ, ಬೇರಾವ ದೇವರೂ ಆ ಎಲೆಯನ್ನು ಒಪ್ಪಿಕೊಳ್ಳುವುದಿಲ್ಲ. ಅಲ್ಲದೆ, ಭಾನುವಾರ(Sunday) ತುಳಸಿ ಗಿಡಕ್ಕೆ ನೀರು ಹಾಕಕೂಡದು. ಭಾನುವಾರ ತುಳಸಿ ಹಾಗೂ ದೂರ್ವೆಯನ್ನು ಕೀಳಲೂ ಬಾರದು. 

Makar Sankranti 2022: ಸೂರ್ಯನ ಚಲನೆಯಿಂದ ಈ ರಾಶಿಗಳು ಸಂಕಷ್ಟಕ್ಕೀಡಾಗಲಿವೆ..

6. ಕೇದಗೆ(Ketaki flower)
ಕೇದಕೆ ಹೂವನ್ನು ಎಂದಿಗೂ ಶಿವನಿಗೆ ಏರಿಸಬಾರದು. ಬದಲಿಗೆ ಕಾರ್ತಿಕ ಮಾಸದಲ್ಲಿ ಈ ಹೂವನ್ನು ವಿಷ್ಣುವಿಗೆ ಏರಿಸುವುದು ಒಳ್ಳೆಯದು. 

7. ಸಾಲಿಗ್ರಾಮ
ಸಾಲಿಗ್ರಾಮಕ್ಕೆ ಆವಾಹನೆ ಹಾಗೂ ವಿಸರ್ಜನೆ ಮಾಡುವಂತಿಲ್ಲ. ಅಷ್ಟೇ ಅಲ್ಲ, ಅಕ್ಷತೆಯನ್ನೂ ಹಾಕುವಂತಿಲ್ಲ. ಕುಂಕುಮ(vermilion)ದಲ್ಲಿ ಬೆರೆಸಿದ ಅಕ್ಕಿಯನ್ನು ಸಾಲಿಗ್ರಾಮಕ್ಕೆ ಹಾಕಬಹುದು. 

Astro Tips : ಕಂಕಣ ಭಾಗ್ಯ ಕೂಡಿ ಬರಲು ಕಾಡಿಗೆಯ ಈ ಉಪಾಯ ಅನುಸರಿಸಿ

8. ತುಪ್ಪ(ghee)
ಪೂಜೆಯಲ್ಲಿ ತುಪ್ಪ ಬಳಸುವುದು ಬಹಳ ಸಾಮಾನ್ಯ. ಆದರೆ ಘನೀಕರಿಸದ, ನೀರಾದ ತುಪ್ಪವನ್ನು ದೇವರಿಗೆ ನೈವೇದ್ಯ ಮಾಡಬಾರದು. ನೀರಾದ ಗಂಧವನ್ನು ಕೂಡಾ ಹಚ್ಚಬಾರದು. ಇವೆರಡೂ ಗಟ್ಟಿಯಾಗಿರಬೇಕು. 
 
9. ದೀಪ

ಒಂದು ದೀಪದಿಂದ ಮತ್ತೊಂದು ದೀಪವನ್ನು ಎಂದಿಗೂ ಹಚ್ಚಬಾರದು. ಇದರಿಂದ ಅನಾರೋಗ್ಯ ಹಾಗೂ ಬಡತನಕ್ಕೆ ಆಹ್ವಾನ ಕೊಟ್ಟಂತಾಗುತ್ತದೆ. ದೀಪವನ್ನು ದಕ್ಷಿಣ ದಿಕ್ಕಿ(South direction)ಗೆ ಮುಖ ಮಾಡಿ ಇಡಕೂಡದು. 

10. ಸ್ನಾನ
ದೇವರ ಮೂರ್ತಿಗಳನ್ನು ತೊಳೆಯುವಾಗ, ಹೆಬ್ಬೆರಳಲ್ಲಿ ತಿಕ್ಕಬಾರದು. ಇದರಿಂದ ದೇವರಿಗೆ ಕೋಪ ಬರುತ್ತದೆ. 

11. ಲಕ್ಷ್ಮೀ ಪೂಜೆ(Lakshmi Puja)

ಕೃಷ್ಣ ಪಕ್ಷದಲ್ಲಿ, ಶ್ರಾವಣ ನಕ್ಷತ್ರದಲ್ಲಿ ಹಾಗೂ ರಿತಿಕ ತಿಥಿಯಲ್ಲಿ ಎಂದಿಗೂ ಲಕ್ಷ್ಮೀ ಪೂಜೆ ಮಾಡಬಾರದು. 

12. ಗೌರವಾನ್ವಿತ
ಪೂಜೆ ನಡೆಯುವಾಗ ಗೌರವಾನ್ವಿತ ವ್ಯಕ್ತಿಯು ಬಂದರೆ, ಅವರನ್ನು ಕಡೆಗಣಿಸಕೂಡದು. ಅವರಿಗೆ ಅಭಿನಂದಿಸಿಯೇ ಪೂಜೆ ಮುಂದುವರಿಸಬೇಕು. 

click me!