Astrology tips: ಮಕ್ಕಳಾಗ್ತಿಲ್ವಾ? ಸಂತಾನ ಯೋಗ ಹೆಚ್ಚಿಸಲು ಹೀಗ್ಮಾಡಿ..

By Suvarna News  |  First Published Jan 20, 2022, 4:13 PM IST

ಸಂತಾನವನ್ನು ಪಡೆಯಲು ಪ್ರತಿ ಮಹಿಳೆಯೂ ಹಂಬಲಿಸ್ತಾಳೆ. ಸಮಯಕ್ಕೆ ಸರಿಯಾಗಿ ಆ ಯೋಗ ಒದಗಿ ಬಾರದೆ ಇದ್ದಾಗ ಅನೇಕ ರೀತಿಯ ಪೂಜೆ, ವ್ರತ, ವೈದ್ಯಕೀಯ ಸಲಹೆಗಳು ಇತ್ಯಾದಿಗಳ ಮೊರೆ ಹೋಗುತ್ತಾರೆ. ಸಂತಾನ ಪ್ರಾಪ್ತಿಗೆ ಜ್ಯೋತಿಷ್ಯ ಶಾಸ್ತ್ರದಲ್ಲೂ ಕೆಲವು ಸರಳ ಉಪಾಯಗಳನ್ನು ತಿಳಿಸಿದ್ದಾರೆ.


ಎಲ್ಲ ಮಹಿಳೆಯರಿಗೂ (Women) ತಾಯಿಯಾಗಬೇಕೆಂಬ (Mother) ಹಂಬಲವಿದ್ದೇ (Desire) ಇರುತ್ತದೆ. ಆದರೆ, ಮೊದಲು ಪ್ಲಾನಿಂಗ್ (Planning), ಸಮಯ (Time) ಬೇಕು, ಸ್ಪೇಸ್ ಬೇಕು ಹೀಗೆ ನಾನಾ ಕಾರಣಗಳನ್ನು (Reasons) ಕೊಟ್ಟುಕೊಂಡು ಮಗು (Child) ಮಾಡಿಕೊಳ್ಳುವುದನ್ನು ಮುಂದಕ್ಕೆ ಹಾಕುತ್ತಾ ಹೋಗುತ್ತಾರೆ. ಕೆಲವರು ಎಷ್ಟೇ ಪ್ರಯತ್ನಪಟ್ಟರೂ ಆಗುತ್ತಿರುವುದಿಲ್ಲ. ಇದಕ್ಕೆ ಹಲವು ಕಾರಣಗಳೂ ಇರುತ್ತವೆ. ದೋಷಗಳಿಂದ (Dosha) ಹೀಗೆ ಆಗುತ್ತಿರಬಹುದು. ನಿರಂತರ ಪ್ರಯತ್ನಪಟ್ಟರೂ (Effort) ಆಗದಿರುವ ಬಗ್ಗೆ ಹಲವರಿಗೆ ಬೇಸರವಿರುತ್ತದೆ. ಪೂಜಾ (Pooja) ಕಾರ್ಯಗಳನ್ನು ಮಾಡಿದರೂ ಕೈಗೂಡುತ್ತಿರುವುದಿಲ್ಲ. ವೈದ್ಯಕೀಯ (Medical) ತಪಾಸಣೆಗಳನ್ನು (Check up) ಮಾಡಿದರೂ ಸಹ ಪ್ರಯೋಜನವಾಗುತ್ತಿರುವುದಿಲ್ಲ. ಇದು ಬೇಸರ ಹಾಗೂ ಖಿನ್ನತೆಗೆ (Depression) ಕಾರಣವಾಗುತ್ತದೆ. ವಂಶ ಬೆಳಗಬೇಕು ಎಂಬ ಆಸೆ ಎಲ್ಲರಿಗೂ ಇರುವುದರಿಂದ ಏನು ಮಾಡಬಹುದು ಎಂಬ ನಿಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರ (Astrology) ಹಲವು ಸಲಹೆಗಳನ್ನು (Suggestion) ನೀಡುತ್ತದೆ.

ಎಕ್ಕದ ಬೇರು (Calotropis gigantea): 
ಮದುವೆಯಾಗಿ ಹಲವು ವರ್ಷಗಳು (Year) ಕಳೆದರೂ ಗರ್ಭಧಾರಣೆ (Pregnant ) ಸಾಧ್ಯವಾಗುತ್ತಿಲ್ಲ ಎಂದಾದರೆ, ಶುಕ್ರವಾರದಂದು ಎಕ್ಕದ ಬೇರನ್ನು (Root) ಕಿತ್ತು ಅದನ್ನು ಆ ಮಹಿಳೆಯ ಸೊಂಟಕ್ಕೆ (Waist) ಕಟ್ಟಿಸಬೇಕು. ಹೀಗೆ ಮಾಡುವುದರಿಂದ ಬೇಗ ಗರ್ಭಧಾರಣೆ ಸಾಧ್ಯವಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. 

ಗೋಮಾತೆಯ (Cow) ಸೇವೆ ಮಾಡುವುದು 
ಗೋವು ಮತ್ತು ಅದರ ಕರುವಿನ ಸೇವೆ ಮಾಡಿದಲ್ಲಿ ಸಂತಾನ ಫಲ ಸಿಗುತ್ತದೆ. ತಿನ್ನುವ ಆಹಾರದ (Food) ಅರ್ಧ ಭಾಗವನ್ನು ಗೋಮಾತೆಗೆ ನೀಡಿ, ಸಂತಾನವನ್ನು ಕರುಣಿಸುವಂತೆ ಬೇಡಿಕೊಳ್ಳಬೇಕು. ಇದರಿಂದ ಬಹುಬೇಗ ಶುಭ ಸುದ್ದಿ (Good news) ಕೇಳಿ ಬರುತ್ತದೆ. 

ಇದನ್ನು ಓದಿ: Personality Traits: ಈ ನಾಲ್ಕು ರಾಶಿಯವರು ಮಹಾ ಕೋಪಿಷ್ಠರು, ಹುಟ್ಟಾ ಜಗಳಗಂಟರು!

ಗೋಪಾಲ ಸಹಸ್ರನಾಮವನ್ನು ಪಠಿಸಿ
ತಾನಕ್ಕಾಗಿ ಹಂಬಲಿಸುತ್ತಿರುವವರು ಪ್ರತಿ ನಿತ್ಯ ಪ್ರಾತಃಕಾಲದಲ್ಲಿ ಸ್ನಾನ ಮಾಡಿ ಗೋಪಾಲ ಸಹಸ್ರನಾಮ(Gopala sahasranama)ವನ್ನು ಪಠಿಸಬೇಕು. ಇದರಿಂದ ಸಂತಾನ ಭಾಗ್ಯ ಪ್ರಾಪ್ತಿಯಾಗುವುದಲ್ಲದೆ ಧನ ಸಂಪತ್ತು ಸಹ ಲಭ್ಯವಾಗುತ್ತದೆ.

ಅರಳೀ ಮರಕ್ಕೆ ನೀರೆರೆಯಿರಿ
ಭಾನುವಾರವನ್ನು (Sunday) ಹೊರತುಪಡಿಸಿ ಉಳಿದೆಲ್ಲ ದಿನವೂ ಅರಳಿ ಮರ(peepal tree) ಕ್ಕೆ ನೀರೆರೆಯಬೇಕು. ಸಂತಾನ ಪ್ರಾಪ್ತಿಯಾಗಲೆಂದು ಬೇಡಿಕೊಳ್ಳಬೇಕು. ಹೀಗೆ ಮಾಡುವುದರಿಂದಲೂ ಸಂತಾನ ಭಾಗ್ಯವುಂಟಾಗುತ್ತದೆ.

ಪ್ರಾಣಿ (Animal) ಪಕ್ಷಿಗಳಿಗೆ (Bird) ಆಹಾರ ನೀಡಿ
ಪ್ರತಿನಿತ್ಯ ಪ್ರಾಣಿ ಪಕ್ಷಿಗಳಿಗೆ ಆಹಾರವನ್ನು (Food) ನೀಡಬೇಕು. ಈ ರೀತಿ ಪ್ರಾಣಿ, ಪಕ್ಷಿಗಳಿಗೆ ಸೇವೆ ಮಾಡುವುದರಿಂದ ಸಂತಾನ ಯೋಗ ಪ್ರಾಪ್ತಿಯಾಗುತ್ತದೆ ಎಂದು ಉಲ್ಲೇಖ ಮಾಡಲಾಗಿದೆ. 

ಗೋಗ್ರಾಸ ನೀಡಿ
ಪ್ರತಿನಿತ್ಯ ಊಟಕ್ಕಿಂತ ಮೊದಲು ಗೋವಿಗೆ ಗೋಗ್ರಾಸ ನೀಡುವುದರಿಂದ ಬಯಸಿದ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಗೋಗ್ರಾಸಕ್ಕೆ ಅಕ್ಕಿ (Rice) ಮತ್ತು ಬೆಲ್ಲವನ್ನು (Jaggery) ಹಾಕಬೇಕು. ಗೋವಿಗೆ ನೀಡುವಾಗ ಅರಿಶಿಣ, ಕುಂಕುಮ ಹಚ್ಚಿ ಗೋವಿಗೆ ನಮಸ್ಕರಿಸಿ ಸಂತಾನ ಪ್ರಾಪ್ತಿಯಾಗಲೆಂದು ಪ್ರಾರ್ಥಿಸಿಕೊಂಡು ಗೋಗ್ರಾಸವನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಶೀಘ್ರ ಸಂತಾನ ಪ್ರಾಪ್ತಿ ಆಗುತ್ತದೆ.

ಭಿಕ್ಷುಕರಿಗೆ ಬೆಲ್ಲವನ್ನು ದಾನ ನೀಡುವುದು: 
ಪ್ರತಿ ಗುರುವಾರ ಭಿಕ್ಷುಕರಿಗೆ ಅಥವಾ ಅಗತ್ಯವಿರುವವರಿಗೆ ಬೆಲ್ಲವನ್ನು ದಾನವಾಗಿ ನೀಡುವುದರಿಂದ ಸಂತಾನ ಯೋಗ ಕೂಡಿ ಬರುತ್ತದೆ ಎಂದು ಹೇಳಲಾಗುತ್ತದೆ. 

ಇದನ್ನು ಓದಿ : Numerology: ಪಾದಾಂಕ 2ರಲ್ಲಿ ಜನಿಸಿದ ವ್ಯಕ್ತಿಗಳ ವರ್ಷ ಭವಿಷ್ಯ ತಿಳಿಯಿರಿ

ಶ್ವಾನಕ್ಕೆ ಆಹಾರ: 
ನಿತ್ಯ ತಿನ್ನುವ ಆಹಾರದಲ್ಲಿ 3 ತುತ್ತು ಶ್ವಾನಕ್ಕೆ ನೀಡುವುದರಿಂದ ಸಂತಾನ ಯೋಗ ಕೂಡಿ ಬರುತ್ತದೆ ಎಂದು ಉಲ್ಲೇಖ ಮಾಡಲಾಗಿದೆ. 

ಗುರುವಾರ ಉಪವಾಸ: 
ಸಂತಾನಕ್ಕಾಗಿ ಬಯಸುವ ದಂಪತಿಗಳು ಪ್ರತಿ ಗುರುವಾರ ಉಪವಾಸ ವ್ರತವನ್ನು ಆಚರಿಸಬೇಕು. ಅಲ್ಲದೆ, ಹಳದಿ ವಸ್ತ್ರವನ್ನು ನಿರ್ಗತಿಕರಿಗೆ ದಾನ ಮಾಡುವುದರಿಂದ ಸಂತಾನ ಯೋಗ ಪ್ರಾಪ್ತವಾಗುತ್ತದೆ. 

click me!