Tree Deities: ಈ ಮರಗಳ ಆರಾಧನೆಯಿಂದ ಬಯಕೆಗಳು ಈಡೇರಲಿವೆ..

By Suvarna NewsFirst Published Jan 19, 2022, 4:19 PM IST
Highlights

ಇತ್ತೀಚಿನ ದಿನಗಳಲ್ಲಿ ಮರ-ಗಿಡಗಳನ್ನು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ. ಜೀವನಕ್ಕೆ ಅತ್ಯಮೂಲ್ಯವಾದ ಮರಗಳ ನಾಶ ನಿರಂತರವಾಗಿ ನಡೆಯುತ್ತಿದೆ. ಪ್ರಕೃತಿಯಲ್ಲಿರುವ ಅನೇಕ ಮರಗಳು ನಮ್ಮ ಪ್ರಾಣ ಉಳಿಸುವ ಜೊತೆಗೆ ನಮ್ಮ ಅದೃಷ್ಟ ಬದಲಿಸುವ ಶಕ್ತಿ ಹೊಂದಿವೆ. 
 


ಹಿಂದೂ (Hindu )ಧರ್ಮದಲ್ಲಿ ಪ್ರಕೃತಿ (Nature)ಯನ್ನು ದೇವರೆಂದು ಪೂಜಿಸಲಾಗುತ್ತದೆ. ಪ್ರಕೃತಿಯಲ್ಲಿ ದೇವಾನುದೇವತೆಗಳು ನೆಲೆಸಿದ್ದಾರೆಂದು ಜನರು ನಂಬಿದ್ದಾರೆ. ಪುರಾತನ ಕಾಲದಿಂದಲೂ ಮೂರ್ತಿ ಪೂಜೆ ಜೊತೆಗೆ ಪರಿಸರದಲ್ಲಿರುವ ಅನೇಕ ಗಿಡ-ಮರಗಳ ಪೂಜೆ (Worship) ನಡೆಯುತ್ತ ಬಂದಿದೆ. ಭೂತಾಯಿ ಪೂಜೆಯನ್ನು ಭಕ್ತಿಯಿಂದ ಮಾಡಲಾಗುತ್ತದೆ. ಬೆಳೆಗಳ ಪೂಜೆ ನಡೆಯುತ್ತದೆ. ಹಾಗೆಯೇ ಮನೆ ಮುಂದೆ ಮತ್ತು ದೇವಸ್ಥಾನದಲ್ಲಿ ನೀವು ವಿಶೇಷ ಗಿಡಗಳನ್ನು ನೋಡಬಹುದು. ಆ ಗಿಡಗಳಿಗೆ ಪವಿತ್ರ ಸ್ಥಾನ ನೀಡಲಾಗಿದೆ. ಒಂದೊಂದು ಗಿಡದಲ್ಲಿ ಒಂದೊಂದು ದೇವರು ನೆಲೆಸಿದ್ದಾನೆಂದು ಜನರು ನಂಬಿದ್ದಾರೆ. ಹಾಗಾಗಿ ದೇವರ ಪೂಜೆ ಜೊತೆ ಗಿಡಗಳ ಪೂಜೆ ನಡೆಯುತ್ತದೆ. ಮರ-ಗಿಡಗಳು ಜೀವನ, ಫಲವತ್ತತೆ, ಸಮೃದ್ಧಿ, ಬೆಳವಣಿಗೆ, ಶುದ್ಧತೆ ಮತ್ತು ದೈವತ್ವದ ಸಂಕೇತವಾಗಿದೆ. ಹಿಂದೂ ಧರ್ಮದಲ್ಲಿ ಯಾವೆಲ್ಲ ಗಿಡ-ಮರಗಳಿಗೆ ಮಹತ್ವವಿದೆ ಹಾಗೂ ಯಾವ ಗಿಡದಲ್ಲಿ ಯಾವ ದೇವರು ನೆಲೆಸಿದ್ದಾರೆ ಎಂಬ ವಿವರ ಇಲ್ಲಿದೆ.

ಗಿಡ-ಮರಕ್ಕೆ ದೇವರ ನಂಟು 

ಬಿಲ್ವ ಪತ್ರೆ ಮರ : ಹಿಂದೂ ಧರ್ಮದಲ್ಲಿ ಇದಕ್ಕೆ ಪವಿತ್ರ ಸ್ಥಾನವಿದೆ. ಇದನ್ನು ಶಿವನಿಗೆ ಪ್ರಿಯವಾದ ಮರವೆಂದು ಹೇಳಲಾಗುತ್ತದೆ. ಇದರ ಎಲೆಗಳನ್ನು ಶಿವನಿಗೆ ಅರ್ಪಿಸಿದ್ರೆ ಆತ ಪ್ರಸನ್ನನಾಗ್ತಾನೆ ಎಂದು ನಂಬಲಾಗಿದೆ. ಬಿಲ್ವ ಪತ್ರೆಯ ಮೂರು ಎಲೆಗಳಿಗೆ ವಿಶೇಷ ಮಹತ್ವವಿದೆ. ಈ ಮೂರು ಎಲೆಗಳನ್ನು ಬ್ರಹ್ಮ, ವಿಷ್ಣು, ಮಹೇಶ್ವರನಿಗೆ ಹೋಲಿಕೆ ಮಾಡಲಾಗುತ್ತದೆ. ಈ ಮೂರು ಎಲೆಗಳನ್ನು ಶಿವನ ಮೂರು ಕಣ್ಣು ಎಂದೂ ಹೇಳಲಾಗುತ್ತದೆ. ಆಧ್ಯಾತ್ಮಿಕದ ಜೊತೆಗೆ ಈ ಮರದ ಎಲ್ಲ ಭಾಗಗಳೂ ಔಷಧಿ ಗುಣವನ್ನು ಹೊಂದಿವೆ. 

Vastu Tips: ಈ ವಿಗ್ರಹಗಳನ್ನು ಮನೆಯಲ್ಲಿಟ್ಟರೆ ಅದೃಷ್ಟ ಕುಲಾಯಿಸಲಿದೆ..

ಬಾಳೆ ಗಿಡ : ರುಚಿಯಾದ ಹಣ್ಣುಗಳನ್ನು ನೀಡುವ ಬಾಳೆ ಗಿಡದಲ್ಲಿ ವಿಷ್ಣು ಹಾಗೂ ಲಕ್ಷ್ಮಿ ನೆಲೆಸಿದ್ದಾರೆ.ಹಾಗಾಗಿ ಬಾಳೆ ಗಿಡ ಮಂಗಳಕರ. ಧಾರ್ಮಿಕ ಕಾರ್ಯಗಳಲ್ಲಿ ಬಾಳೆ ಗಿಡದ ಎಲೆಯನ್ನು ಬಳಸಲಾಗುತ್ತದೆ. ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಾಗ ಬಾಳೆ ಗಿಡದ ಪೂಜೆ ಮಾಡಬೇಕೆಂದು ಸಲಹೆ ನೀಡಲಾಗುತ್ತದೆ. ಬಾಳೆ ಎಲೆಗಳನ್ನು ಗಣೇಶನಿಗೆ ಅರ್ಪಿಸಿದ್ರೆ ಶುಭವಾಗುತ್ತದೆ. ಗುರುವಾರದಂದು ಬಾಳೆ ಗಿಡಕ್ಕೆ ಧೂಪ,ಹಣ್ಣು,ಹೂಗಳನ್ನು ಅರ್ಪಿಸಿ ಪೂಜೆ ಮಾಡಿದ್ರೆ ಕುಟುಂಬದ ಅಭಿವೃದ್ಧಿಯಾಗುತ್ತದೆ. 

ತುಳಸಿ : ತುಳಸಿ ಅತ್ಯಂತ ಪವಿತ್ರವಾದದ್ದು. ತುಳಸಿ ಎಲೆಗಳನ್ನು ಪ್ರತಿಯೊಂದು ಧಾರ್ಮಿಕ ಕಾರ್ಯದಲ್ಲಿ ಬಳಸಲಾಗುತ್ತದೆ. ಮನೆಯ ಅಂಗಳದಲ್ಲಿ ಈ ಗಿಡವನ್ನು ಬೆಳೆಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ತುಳಸಿ ಗಿಡವನ್ನು ಸ್ಪರ್ಶಿಸುವುದರಿಂದ ಪವಿತ್ರತೆ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ತುಳಸಿ ಮಣಿಗಳಿಂದ ಮಾಡಿದ ಹಾರವನ್ನು ಭಾರತದಲ್ಲಿ ಯೋಗಿಗಳು, ಸಂತರು, ಮನಸ್ಸು, ದೇಹ ಮತ್ತು ಭಾವನೆಗಳನ್ನು ಶುದ್ಧೀಕರಿಸಲು ಧರಿಸುತ್ತಾರೆ. ಪ್ರತಿ ದಿನ ಇದ್ರ ಪೂಜೆ ಮಾಡಬೇಕು. ತುಳಸಿಯಲ್ಲಿ ವಿಷ್ಣು ಹಾಗೂ ಲಕ್ಷ್ಮಿ ನೆಲೆಸಿದ್ದಾರೆಂದು ನಂಬಲಾಗಿದೆ. 

ಆಲದ ಮರ: ಅನೇಕ ಪ್ರಾಚೀನ ಭಾರತೀಯ ಗ್ರಂಥಗಳಲ್ಲಿ ಆಲದ ಮರದ ಉಲ್ಲೇಖವಿದೆ. ಇದು ದೀರ್ಘಾಯುಷ್ಯವನ್ನು ಸಂಕೇತಿಸುತ್ತದೆ. ಮರದ ಪೂಜೆ ಮಾಡಿದ್ರೆ ಇಷ್ಟಾರ್ಥಗಳು ನೆರವೇರುತ್ತವೆ. ಮರವು ಫಲವತ್ತತೆಯ ಸಂಕೇತವಾಗಿದೆ. ಮಕ್ಕಳಿಲ್ಲದ ದಂಪತಿ ಇದ್ರ ಪೂಜೆ ಮಾಡಬೇಕೆಂದು ಹೇಳಲಾಗುತ್ತದೆ. ಈ ಮರವನ್ನು ಕತ್ತರಿಸುವುದು ಅತ್ಯಂತ ಅಶುಭವೆಂದು ಪರಿಗಣಿಸಲಾಗಿದೆ. ಇದರಲ್ಲಿ ಶಿವ ನೆಲೆಸಿದ್ದಾನೆ. 

ಅಶ್ವತ್ಥ ಮರ : ದೇವಸ್ಥಾನದ ಮುಂದೆ ಈ ಮರವನ್ನು ಕಾಣಬಹುದು. ಈ ಮರವನ್ನು ಎಲ್ಲಾ ಶನಿವಾರದಂದು ವಿಶೇಷವಾಗಿ ಪೂಜಿಸಲಾಗುತ್ತದೆ. ಏಕೆಂದರೆ ಈ ದಿನ ಲಕ್ಷ್ಮಿ ಅದರ ಕೆಳಗೆ ಕುಳಿತುಕೊಳ್ಳುತ್ತಾಳೆ ಎಂದು ನಂಬಲಾಗಿದೆ. ಅಶ್ವತ್ಥ ಮರಕ್ಕೆ ನೀರು ಹಾಕುವುದ್ರಿಂದ ಶುಭ ಫಲ ಸಿಗಲಿದೆ. ಉತ್ತಮ ಆರೋಗ್ಯಕ್ಕಾಗಿ ಹಾಗೂ ಬಯಸಿದ್ದನ್ನು ಪಡೆಯಲು ಮಹಿಳೆ ಪ್ರತಿ ದಿನ ಅಶ್ವತ್ಥ ಮರದ ಪ್ರದಕ್ಷಣೆ ಹಾಕಬೇಕು. 

ನೆಲ್ಲಿ ಗಿಡ: ನೆಲ್ಲಿ ಗಿಡದಲ್ಲೂ ದೇವರು ನೆಲೆಸಿದ್ದಾನೆ. ಭಗವಂತ ವಿಷ್ಣು ಇದರಲ್ಲಿ ವಾಸವಾಗಿದ್ದಾನೆ ಎಂಬ ನಂಬಿಕೆಯಿದೆ. ಏಕಾದಶಿಯಂದು ನೆಲ್ಲಿ ಗಿಡದ ಪೂಜೆ ಮಾಡಿದ್ರೆ ವಿಶೇಷ ಫಲ ಪ್ರಾಪ್ತಿಯಾಗುತ್ತದೆ. 

Valentine Day : ಪ್ರೇಮಿಗಳ ದಿನದಂದು ಈ ರಾಶಿಯವರಿಗೆ ಒಲಿದು ಬರಲಿದೆ ಅದೃಷ್ಟ

ಶಮಿ ಮರ : ಶನಿ ದೇವನು ಶಮಿ ವೃಕ್ಷದಲ್ಲಿ ನೆಲೆಸಿದ್ದಾನೆ.  ಶನಿವಾರದಂದು ಶಮಿ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸುವುದರಿಂದ, ಶನಿದೇವನು ಎಲ್ಲಾ ತೊಂದರೆಗಳನ್ನು ನಿವಾರಿಸುತ್ತಾನೆ ಎನ್ನಲಾಗುತ್ತದೆ.

ದೂರ್ವೆ: ದೂರ್ವೆ ಗಣಪತಿಗೆ ಪ್ರಿಯವಾದ್ದದ್ದು. ಬುಧವಾರ ಗಣಪತಿಗೆ ದೂರ್ವೆ ಅರ್ಪಿಸಿದ್ರೆ ಎಲ್ಲ ಸಮಸ್ಯೆ ದೂರವಾಗುತ್ತದೆ. ಇದ್ರಲ್ಲಿ ಔಷಧಿ ಗುಣಗಳಿರುವುದ್ರಿಂದ ಆಯುರ್ವೇದದ ಔಷಧಿಗೂ ಇದನ್ನು ಬಳಸಲಾಗುತ್ತದೆ.
 

click me!