Aries Trait: ಮೇಷ ರಾಶಿಯ ಈ ಹೆಸರುಗಳ ಹುಡುಗರು ಸಖತ್ ಡಾಮಿನೇಟಿಂಗ್

By Suvarna News  |  First Published Jan 6, 2022, 1:47 PM IST

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಶಿಯನ್ನು ಆಧರಿಸಿ ಹೆಸರನ್ನು ಇಡುವ ಪರಂಪರೆ ಹಿಂದಿನಿಂದಲೂ ರೂಢಿಯಲ್ಲಿದೆ. ಹಾಗಾಗಿ ಹೆಸರಿನ ಮೊದಲ ಅಕ್ಷರದಿಂದ ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದಾಗಿದೆ. ಮೇಷ ರಾಶಿ ಅಥವಾ ಲಗ್ನದಲ್ಲಿ ಜನಿಸಿದ ಎ ಎಲ್ ಮತ್ತು ಸಿ ಅಕ್ಷರಗಳಿಂದ ಆರಂಭವಾಗುವ ಹೆಸರಿನ ಹುಡುಗರ ಬಗ್ಗೆ ತಿಳಿಯೋಣ...


ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ರಾಶಿಗೂ (Zodiac sign) ಮತ್ತು ಇಡುವ ಹೆಸರಿಗೂ ಅವಿನಾಭಾವ ಸಂಬಂಧವಿರುತ್ತದೆ. ಶಾಸ್ತ್ರದ ಪ್ರಕಾರ ರಾಶಿಗೆ ಆಧರಿಸಿದ ಅಕ್ಷರಗಳಿಂದಲೇ ಹೆಸರನ್ನು ಇಡಲಾಗುತ್ತಿತ್ತು. ಹಾಗಾಗಿ ಹೆಸರಿನ ಮೊದಲಿನ ಅಕ್ಷರದಿಂದಲೇ (Starting letter) ವ್ಯಕ್ತಿತ್ವವನ್ನು ತಿಳಿಯಬಹುದಾಗಿರುತ್ತದೆ. ಕೆಲವು ಅಕ್ಷರಗಳು (Letter ) ತುಂಬಾ ಅದೃಷ್ಟವನ್ನು ತರುತ್ತದೆ (Luck). ಹಿಂದೂ ಧರ್ಮದ ಪ್ರಕಾರ ಹೆಸರಿಗೆ ಅದರದ್ದೇ ಆದ ಮಹತ್ವವಿದೆ. ಕಾರಣ ಆ ಹೆಸರು (Name) ಆ ವ್ಯಕ್ತಿಯ ಜೀವನದುದ್ದಕ್ಕೂ (Life) ಬಳಸಲ್ಪಡುವುದರಿಂದ ಅವರ ವ್ಯಕ್ತಿತ್ವವನ್ನು ಹಾಗೂ ಪಾಸಿಟಿವ್ ಎನರ್ಜಿಯನ್ನೂ ರೂಪಿಸಲು ಸಹಾಯಕವಾಗುತ್ತದೆ.

ಆದರೆ, ಕೆಲವು ಹೆಸರುಗಳು ವ್ಯಕ್ತಿಗಳನ್ನು ನೆಗೆಟಿವ್ ಚಿಂತನೆಗೊಳಪಡಿಸುವ ಅಪಾಯವನ್ನೂ ತಂದಿಡಬಲ್ಲದು. ಹೀಗಾಗಿ ಹೆಸರನ್ನು ಇಡುವ ಸಂದರ್ಭದಲ್ಲಿ ಹುಟ್ಟಿದ ನಕ್ಷತ್ರ, ರಾಶಿ, ಸಮಯಗಳ ಆಧಾರದ ಮೇಲೆ ಯಾವ ಹೆಸರನ್ನು ಇಡಬಹುದು ಎಂಬ ಅಂಶವನ್ನು ಜ್ಯೋತಿಷ್ಯಶಾಸ್ತ್ರದ ಅನುಸಾರ ತಿಳಿಯಲಾಗುತ್ತದೆ. ಅದರ ಅನುಸಾರ ಹೆಸರುಗಳನ್ನು ಇಟ್ಟರೆ ಆ ವ್ಯಕ್ತಿಯ ಜೀವನ ಸುಖಮಯವಾಗಿಯೂ, ಸಮೃದ್ಧಮಯವಾಗಿಯೂ ಇರಲಿದೆ. 

ಇದನ್ನು ಓದಿ: January Born: ಜನವರಿಯಲ್ಲಿ ಹುಟ್ಟಿದವರು ಹೇಗೆ ಗೊತ್ತಾ?

ಈಗ ಜನ್ಮ ರಾಶಿ ಮೇಷ (Aries) ಆಗಿರುವ ಎ(A), ಎಲ್(L) ಮತ್ತು ಸಿ(C) ಅಕ್ಷರಗಳಿಂದ ಆರಂಭವಾಗುವ ಹೆಸರಿನ ಹುಡುಗರ (Boys) ಗುಣ, ಸ್ವಭಾವಗಳು ಏನು..? ಅವರ ಭವಿಷ್ಯ ಹೇಗಿರುತ್ತದೆ? ಅದೃಷ್ಟವಂತರೇ..? ಎಂಬಿತ್ಯಾದಿ ಮಾಹಿತಗಳ ಬಗ್ಗೆ ತಿಳಿಯೋಣ.

ರಾಶಿಗೆ ಅನುಸರಿಸಿ ಹೆಸರಿಡುವುದರಿಂದ ಅದೃಷ್ಟ (Fortune) ವೃದ್ಧಿಸುತ್ತದೆ ಎಂದು ಸಹ ಹೇಳಲಾಗುತ್ತದೆ. ಈ ಅಕ್ಷರಗಳಿಂದ ಆರಂಭವಾಗುವ ಹೆಸರಿನ ಹುಡುಗರು ಅತ್ಯಂತ ಸ್ವಚ್ಛ ಹೃದಯದವರು (Clean hearted) ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಇವರು ಮನಸ್ಸಿನಲ್ಲಿ ಯಾವುದೇ ವಿಚಾರವನ್ನು ಮುಚ್ಚಿಟ್ಟುಕೊಳ್ಳದೆ ಪಾರದರ್ಶಕವಾಗಿರುತ್ತಾರೆ (Transparent). ಈ ಹುಡುಗರ ವ್ಯಕ್ತಿತ್ವ ಅತ್ಯಂತ ಆಕರ್ಷಕವಾಗಿರುತ್ತದೆ (Attractive) ಮತ್ತು ಆ ಎಲ್ಲರನ್ನು ಸೆಳೆಯುತ್ತದೆ. ಇವರ ಸೆನ್ಸ್ ಆಫ್ ಹ್ಯೂಮರ್ (Sense of humour) ಸಹ ಚೆನ್ನಾಗಿರುತ್ತದೆ. 

ಈ ವ್ಯಕ್ತಿಗಳು ಎಲ್ಲವೂ ತಮ್ಮ ಇಷ್ಟದಂತೆ ನಡೆಯಬೇಕೆಂದು ಬಯಸುತ್ತಾರೆ. ಹಾಗಾಗಿ ಹೆಚ್ಚಾಗಿ ಇವರ ಇಷ್ಟಗಳೇ ನಡೆಯುತ್ತವೆ. ಈ ವ್ಯಕ್ತಿಗಳು ಹೆಂಡತಿ (Wife) ಅಥವಾ ಸಂಗಾತಿಯನ್ನು (Partner) ತಮ್ಮಿಷ್ಟದಂತೆ ನಡೆಸಿಕೊಳ್ಳುತ್ತಾರೆ. ಈ ವ್ಯಕ್ತಿಗಳು ಹೆಚ್ಚು ತಮ್ಮ ಪಾರ್ಟ್ನರ್ ಅನ್ನು ಡಾಮಿನೇಟ್ (Dominate) ಮಾಡುವವರಾಗಿತ್ತಾರೆ. 

ಸಂಗಾತಿ ಜೊತೆ ಸುತ್ತಾಡುವುದು ಇವರಿಗಿಷ್ಟ: 
ಈ ಅಕ್ಷರಗಳ ಹುಡುಗರು ಸಂಗಾತಿ ಅಥವಾ ಪತ್ನಿಯ ಬಗ್ಗೆ ಹೆಚ್ಚು ಪೊಸೆಸಿವ್ (Possessive) ಆಗಿರುತ್ತಾರೆ. ಈ ವ್ಯಕ್ತಿಗಳು ತಮ್ಮ ಸಂಗಾತಿಯ ಮೇಲೆ ಸದಾ ಕಣ್ಣಿಟ್ಟಿರುತ್ತಾರೆ. ಈ ವ್ಯಕ್ತಿಗಳು ತಮ್ಮ ಸಂಗಾತಿ ಹೆಚ್ಚು ಸಮಯ ತಮ್ಮೊಂದಿಗೆ ಕಳೆಯಬೇಕೆಂದು ಬಯಸುತ್ತಾರೆ. ಇವರು ಸಂಬಂಧದಲ್ಲಿ ಅಂತರ ಏರ್ಪಡಲು ಎಡೆಗೊಡುವುದಿಲ್ಲ. ಹೀಗಾಗಿ ಆಗಾಗ ಸಂಗಾತಿಯೊಂದಿಗೆ ಸುತ್ತಾಡುವುದು, ಅವರೊಂದಿಗೆ ಹೆಚ್ಚಿನ ಸಮಯ ಕಳೆಯುವುದು ಇವರಿಗೆ ತುಂಬಾ ಇಷ್ಟ. ಪತ್ನಿ ಅಥವಾ ಸಂಗಾತಿಯ ಇಷ್ಟಗಳನ್ನು ಪೂರೈಸಲು ಸದಾ ಸಿದ್ಧರಿರುತ್ತಾರೆ (Ready). 

ಇದನ್ನು ಓದಿ: Personality Trait: ಬುಧವಾರ ಹುಟ್ಟಿದವರು ಹೀಗಿರ್ತಾರೆ..

ಸಾಹಸಿಗಳು (Adventurous) ಮತ್ತು ಧೈರ್ಯವಂತರು (Brave) :
ಈ ವ್ಯಕ್ತಿಗಳು ಸಾಹಸಿಗಳು ಮತ್ತು ಧೈರ್ಯವಂತರಾಗಿರುವುದಲ್ಲದೆ, ಪರಿಶ್ರಮಿಗಳೂ ಆಗಿರುತ್ತಾರೆ. ಜೀವನದಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಧೈರ್ಯದಿಂದ ಎದುರಿಸುತ್ತಾರೆ. ಈ ವ್ಯಕ್ತಿಗಳು ಸಿಟ್ಟಿನ (Anger) ಸ್ವಭಾವವನ್ನು ಹೊಂದಿರುತ್ತಾರೆ. ಇವರ ಸಿಟ್ಟನ್ನು ನಿಯಂತ್ರಿಸುವುದು (Control) ಇತರರಿಗೆ ಬಹು ಕಷ್ಟದ ವಿಷಯವಾಗಿರುತ್ತದೆ. ತಮ್ಮ ಸಿಟ್ಟನ್ನು ತಾವೇ ನಿಯಂತ್ರಿಸಿಕೊಳ್ಳುವ ಶಕ್ತಿಯನ್ನು ಸಹ ಇವರು ಹೊಂದಿರುತ್ತಾರೆ. ಸುಖಾಸುಮ್ಮನೆ ಯಾರ ತಂಟೆಗೂ ಹೋಗದ ಇವರು, ತಮ್ಮ ತಂಟೆಗೆ ಯಾರಾದರೂ ಬಂದರೆಂದರೆ ಸುಮ್ಮನೆ ಬಿಡುವ ಸ್ವಭಾವದವರಲ್ಲ. ನಾನಾ...? ನೀನಾ..? ಎಂದು ನೋಡಿಬಿಡುವ ವ್ಯಕ್ತಿತ್ವನ್ನು ಹೊಂದಿದವರಾಗಿದ್ದಾರೆ.

click me!