Adipurush: ರಾಮಾಯಣದಲ್ಲಿ ಲಕ್ಷ್ಮಣನಿಗೆ ಶ್ರೀರಾಮನೇ ಮರಣದಂಡನೆ ವಿಧಿಸಿದನೇ?

Published : Jun 17, 2023, 09:29 AM ISTUpdated : Jun 17, 2023, 09:30 AM IST
Adipurush: ರಾಮಾಯಣದಲ್ಲಿ ಲಕ್ಷ್ಮಣನಿಗೆ ಶ್ರೀರಾಮನೇ ಮರಣದಂಡನೆ ವಿಧಿಸಿದನೇ?

ಸಾರಾಂಶ

ಬಾಲಿವುಡ್‌ನ ನಿರೀಕ್ಷಿತ ಚಿತ್ರ ಆದಿಪುರುಷ ಜೂನ್ 16ರಂದು ದೇಶಾದ್ಯಂತ ಬಿಡುಗಡೆಯಾಗಿದೆ. ಚಿತ್ರದಲ್ಲಿ ಲಕ್ಷ್ಮಣನ ಪಾತ್ರದಲ್ಲಿ ನಟ ಸನ್ನಿ ಸಿಂಗ್ ನಟಿಸಿದ್ದಾರೆ. ರಾಮಾಯಣದಲ್ಲಿ ಲಕ್ಷ್ಮಣನ ದೇಹ ತ್ಯಾಗದ ಕಥೆ ಬಹಳಷ್ಟು ಜನರಿಗೆ ತಿಳಿದಿಲ್ಲ.

ಬಾಲಿವುಡ್‌ನ ನಿರೀಕ್ಷಿತ ಚಿತ್ರ ಆದಿಪುರುಷ ಜೂನ್ 16ರಂದು ದೇಶಾದ್ಯಂತ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಹಲವು ನಟರು ಪೌರಾಣಿಕ ಪಾತ್ರಗಳಲ್ಲಿ ಕಾಣಿಸಿಕೊಂದ್ದಾರೆ. ಚಿತ್ರದಲ್ಲಿ ಲಕ್ಷ್ಮಣ್ ಪಾತ್ರದಲ್ಲಿ ನಟ ಸನ್ನಿ ಸಿಂಗ್ ನಟಿಸಿದ್ದಾರೆ.

ರಾಮಾಯಣದಲ್ಲಿ ಭಗವಾನ್ ಶ್ರೀರಾಮನ ಹೊರತಾಗಿ ಅನೇಕ ಪ್ರಮುಖ ಪಾತ್ರಗಳಿವೆ, ಅವರಲ್ಲಿ ಲಕ್ಷ್ಮಣನೂ ಒಬ್ಬ. ಶ್ರೀರಾಮನ ಕಿರಿಯ ಸಹೋದರ ಲಕ್ಷ್ಮಣನ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಅವನು ತನ್ನ ದೇಹವನ್ನು ಹೇಗೆ ಮತ್ತು ಏಕೆ ತೊರೆದನು ಎಂಬ ಬಗ್ಗೆ ಮಾತ್ರ ಕೆಲವೇ ಜನರಿಗೆ ತಿಳಿದಿದೆ. ಲಕ್ಷ್ಮಣನ ದೇಹ ತ್ಯಾಗದ ಕಥೆಯನ್ನು ಇಂದು ತಿಳಿಯೋಣ.

ಕಾಲನು ಶ್ರೀರಾಮನನ್ನು ಭೇಟಿಯಾಗಲು ಬಂದಾಗ
ವಾಲ್ಮೀಕಿ ರಾಮಾಯಣದ ಉತ್ತರ ಕಾಂಡದ ಪ್ರಕಾರ, ಅಯೋಧ್ಯೆಯನ್ನು ಶ್ರೀರಾಮನು ನೈತಿಕವಾಗಿ ಆಳುತ್ತಿದ್ದಾಗ, ಕಾಲನು (ಯಮ) ತಪಸ್ವಿಯ ರೂಪದಲ್ಲಿ ಅಯೋಧ್ಯೆಗೆ ಬಂದನು. ಕಾಲನನ್ನು ಭೇಟಿಯಾಗಲು ಶ್ರೀ ರಾಮ ಒಪ್ಪಿದಾಗ, 'ನಾವು ಮಾತನಾಡುವುದನ್ನು ಯಾರಾದರೂ ನೋಡಿದರೆ, ನೀವು ಅವನಿಗೆ ಮರಣದಂಡನೆ ವಿಧಿಸಬೇಕು' ಎಂದು ಷರತ್ತು ಹಾಕಿದನು. ಶ್ರೀರಾಮನು ಕಾಲನ ಈ ಶರತ್ತಿಗೆ ಒಪ್ಪಿಕೊಂಡನು.

ಡಾಕ್ಟರ್‌ ಮಕ್ಕಳು ಡಾಕ್ಟರ್ರೇ ಆಗೋಕೆ ಇಷ್ಟಪಡ್ತಾರಾ? ಪಾಲಕರ ಹಾದೀಲಿ ಸಾಗೋ ರಾಶಿಗಳಿವು!

ಲಕ್ಷ್ಮಣನೇ ಕಾವಲುಗಾರ
ಕಾಲನೊಂದಿಗೆ ಮಾತನಾಡುವಾಗ ಬೇರೆ ಯಾರೂ ಕೋಣೆಯೊಳಗೆ ಬರದಂತೆ, ಶ್ರೀರಾಮನು ತನ್ನ ಕಿರಿಯ ಸಹೋದರ ಲಕ್ಷ್ಮಣನನ್ನು ಕಾವಲುಗಾರನಾಗಿ ನೇಮಿಸಿದನು ಮತ್ತು ಕಾಲನಿಗೆ ನೀಡಿದ ಭರವಸೆಯ ಬಗ್ಗೆ ಹೇಳಿದನು. ಕಾಲನು ಶ್ರೀರಾಮನೊಂದಿಗೆ ಮಾತನಾಡುತ್ತಿದ್ದಾಗ, ಮಹರ್ಷಿ ದೂರ್ವಾಸರು ಅಲ್ಲಿಗೆ ಬಂದರು. ಶ್ರೀರಾಮನನ್ನು ಭೇಟಿಯಾಗುವ ಇಚ್ಛೆಯನ್ನೂ ವ್ಯಕ್ತಪಡಿಸಿದರು. ಲಕ್ಷ್ಮಣ ಅವರನ್ನು ಸ್ವಲ್ಪ ಸಮಯ ಕಾಯಲು ಹೇಳಿದನು.

ಲಕ್ಷ್ಮಣ ಈ ಕಠಿಣ ನಿರ್ಧಾರ ತೆಗೆದುಕೊಂಡಾಗ..
ಇದು ಅವರಿಗೆ ಅವಮಾನಕಾರಿಯಾಗಿ ಕಾಣಿಸಿತು. ಲಕ್ಷ್ಮಣನು ಮಹರ್ಷಿ ದೂರ್ವಾಸರನ್ನು ಕಾಯಲು ಕೇಳಿದಾಗ, ಅವರು ಕೋಪಗೊಂಡು ತನ್ನನ್ನು ಕಾಯಿಸಿದರೆ ಅಯೋಧ್ಯೆಯನ್ನು ನಾಶ ಮಾಡುವುದಾಗಿ ಹೇಳಿದರು. ಆಗ ಲಕ್ಷ್ಮಣನು ನಾನು ಸತ್ತರೂ ಅಯೋಧ್ಯೆಗೆ ಏನೂ ಆಗಬಾರದು ಎಂದುಕೊಂಡನು. ಹೀಗೆ ಯೋಚಿಸುತ್ತಾ ಲಕ್ಷ್ಮಣನು ಒಳಗೆ ಹೋಗಿ ದೂರ್ವಾಸ ಮುನಿಯ ಆಗಮನವನ್ನು ಶ್ರೀರಾಮನಿಗೆ ತಿಳಿಸಿದನು.

ಶ್ರೀರಾಮ ಲಕ್ಷ್ಮಣನನ್ನು ತ್ಯಜಿಸಿದಾಗ..
ಮಹರ್ಷಿ ದೂರ್ವಾಸರನ್ನು ಭೇಟಿಯಾದ ನಂತರ ಶ್ರೀರಾಮನು ತನ್ನ ಭರವಸೆಯನ್ನು ನೆನಪಿಸಿಕೊಂಡನು. ಆಗ ಲಕ್ಷ್ಮಣನು 'ನೀನು ಚಿಂತಿಸದೆ ನನಗೆ ಮರಣದಂಡನೆ ನೀಡು, ನಿನ್ನ ಪ್ರತಿಜ್ಞೆಯು ಭಂಗವಾಗದಿರಲಿ' ಎಂದನು. 
ಶ್ರೀರಾಮನು ಈ ವಿಷಯವನ್ನು ಭಾರವಾದ ಹೃದಯದಿಂದ ಮಹರ್ಷಿ ವಸಿಷ್ಠರಿಗೆ ತಿಳಿಸಿದಾಗ ಅವರು,  'ನೀನು ಲಕ್ಷ್ಮಣನನ್ನು ಬಿಟ್ಟು ಹೋಗಬೇಕು. ಆತ್ಮೀಯ ವ್ಯಕ್ತಿಯ ತ್ಯಾಗ ಮತ್ತು ಹತ್ಯೆ ಎರಡೂ ಒಂದೇ.' ಶ್ರೀರಾಮನು ಹಾಗೆಯೇ ಮಾಡಿದನು. ದುಃಖಿತನಾದ ಲಕ್ಷ್ಮಣನು ಅಣ್ಣನ ಮಾತನ್ನು ನೆರವೇರಿಸುವ ಸಲುವಾಗಿ ನೇರವಾಗಿ ಸರಯೂ ನದಿಯ ದಡವನ್ನು ತಲುಪಿದನು ಮತ್ತು ನದಿಯಲ್ಲಿ ಮುಳುಗುತ್ತಾ ಯೋಗ ಕ್ರಿಯೆಯಿಂದ ತನ್ನ ದೇಹವನ್ನು ತೊರೆದನು.

ಅಂದು ಕೃಷ್ಣ ನನ್ನ ಕೈಹಿಡಿದ : ಹಿಂದೂ ಧರ್ಮ ಸ್ವೀಕರಿಸಿದ ಪಾಕಿಸ್ತಾನದ ಶಯನ್ ಅಲಿ ಹೇಳಿದಿಷ್ಟು!

ಲಕ್ಷ್ಮಣನು ಶೇಷನಾಗನ ಅವತಾರವಾಗಿದ್ದು, ಅವನ ಮೇಲೆ ವಿಷ್ಣುವು ನೆಲೆಸಿದ್ದಾನೆ. ಹಾಗಾಗಿ, ರಾಮನಿಗಿಂತ ಮೊದಲು ಲಕ್ಷ್ಮಣನು ಸಾಯುವುದು ಅತ್ಯಗತ್ಯವಾಗಿತ್ತು. ಆದ್ದರಿಂದ ರಾಮನು ತನ್ನ ಪ್ರಾಣವನ್ನು ತ್ಯಜಿಸಿ ವಿಷ್ಣುವಾಗಿ ವೈಕುಂಠಕ್ಕೆ ಹಿಂದಿರುಗುವಾಗ, ಅವನ ಆಸನವು ಸಿದ್ಧವಾಗಿರಬೇಕಿತ್ತು. ಈ ಕಾರಣದಿಂದ ಲಕ್ಷ್ಮಣನ ಅಂತ್ಯ ರಾಮನಿಗಿಂತ ಮೊದಲೇ ಆಯಿತು. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
click me!

Recommended Stories

ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!
ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ